Tag: Manipur violence

  • ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯೋಧ

    ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯೋಧ

    ಇಂಫಾಲ್: ಅಸ್ಸಾಂ ರೈಫಲ್ಸ್‌ನ (Assam Rifles) ಸೈನಿಕನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಮಣಿಪುರದಲ್ಲಿ (Manipur) ನಡೆದಿದೆ. ಘಟನೆಯಲ್ಲಿ ಆರು ಯೋಧರಿಗೆ ಗಾಯಗಳಾಗಿದ್ದು, ಅವರನ್ನು ಚುರಾಚಂದ್‍ಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಎಆರ್ ಬೆಟಾಲಿಯನ್ ಆವರಣದಲ್ಲಿ ಈ ಘಟನೆ ನಡೆದಿದೆ. ಗುಂಡು ಹಾರಿಸಿದ್ದು ಕಲಹ ಪೀಡಿತ ಮಣಿಪುರದ ಚುರಾಚಂದ್‍ಪುರ ಮೂಲದ ಯೋಧ ಎಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಮೇಲೆ‌ ಅಸ್ಸಾಂನಲ್ಲಿ ಎಫ್‌ಐಆರ್- ಅಮಿತ್‌ ಶಾಗೆ ಖರ್ಗೆ ಪತ್ರ

    ಈ ಬಗ್ಗೆ ಸೇನೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಇದೊಂದು ದುರದೃಷ್ಟಕರ ಘಟನೆಯಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ವಿಚಾರವಾಗಿ ಯೋಧರು ಯಾವುದೇ ಸಂಬಂಧವನ್ನು ಹೊಂದಿರಬಾರದು. ಎಲ್ಲಾ ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಮಣಿಪುರದ ವಿವಿಧ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಿಬ್ಬಂದಿ ಒಟ್ಟಿಗೆ ಉಳಿದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.

    ಮಣಿಪುರದಲ್ಲಿ ಕಳೆದ ಮೇ ತಿಂಗಳಿನಿಂದ ಮೇಥಿ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ (Manipur violence) ನಡೆಯುತ್ತಿದೆ. ಹಿಂಸಾಚಾರದಲ್ಲಿ ಕನಿಷ್ಠ 207 ಇಲ್ಲಿಯವರೆಗೆ ಸಾವಿಗೀಡಾಗಿದ್ದಾರೆ. ಅಲ್ಲದೇ ಸುಮಾರು 50,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

  • ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    – ದಾಳಿಯಲ್ಲಿ ಹಲವರಿಗೆ ಗಾಯ, ಮರ‍್ನಾಲ್ಕು ಜಿಲ್ಲೆಗಳಲ್ಲಿ ಕರ್ಫ್ಯೂ

    ಇಂಫಾಲ: ಮಣಿಪುರದಲ್ಲಿ 2024ರ ನೂತನ ವರ್ಷದ ಮೊದಲ ದಿನವೇ ಮತ್ತೆ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಘಟನೆಯಲ್ಲಿ ಗುಂಡು ಹಾರಿಸಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸಾಚಾರದಿಂದಾಗಿ ಕಣಿವೆ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ (Curfew) ಹೇರಿರುವುದಾಗಿ ಮೂಲಗಳು ತಿಳಿಸಿವೆ.

    ಹಿಂಸಾಚಾರದ ವೇಳೆ ಅಪರಿಚಿತರ ಗುಂಪೊಂದು ಸುಲಿಗೆಗಾಗಿ ಆಟೊಮೆಟಿಕ್ ವೆಪನ್ಸ್‌ಗಳೊಂದಿಗೆ (ಸ್ವಯಂಚಾಲಿತ ಶಸ್ತ್ರಾಸ್ತ್ರ) (Automatic Weapons) ದಾಳಿ ಮಾಡಿತು ಎಂದು ತೌಬಲ್ ಜಿಲ್ಲೆಯ ಸ್ಥಳೀಯರು ಹೇಳಿದ್ದಾರೆ. ಈ ಹಿಂಸಾಚಾರವನ್ನು ಸಿಎಂ ಎನ್.ಬಿರೇನ್ ಸಿಂಗ್ ಅವರು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಅಮಾಯಕ ಜನರ ಹತ್ಯೆಯಿಂದ ಅಪಾರ ದುಃಖವಾಗಿದೆ. ನಾವು ಆರೋಪಿಗಳನ್ನು ಹಿಡಿಯಲು ವಿಶೇಷ ಪೊಲೀಸ್ ಪಡೆಗಳನ್ನ ಸಜ್ಜುಗೊಳಿಸಿದ್ದೇವೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾರ್ವಜನಿಕರು ಸಹ ಸಹಕಾರ ನೀಡಬೇಕೆಂದು ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

    ಅಲ್ಲದೇ 2024ರ ಹೊಸ ವರ್ಷದ ಮೊದಲ ದಿನವೇ ನಡೆದಿರುವ ಹಿಂಸಾಚಾರವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದೆ. ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಆಡಳಿತ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರ ತುರ್ತು ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಕೆಲ ಜಲ್ಲೆಗಳಲ್ಲಿ ಕರ್ಫ್ಯೂ: ಹೊಸ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಣಿಪುರದ ಕಣಿವೆ ಪ್ರದೇಶಗಳಾದ ತೌಬಲ್, ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2023ರ ವರ್ಷದಲ್ಲಿ ಮೇ 3ರಂದು ದೊಡ್ಡ ಪ್ರಮಾಣದಲ್ಲಿ ಜನಾಂಗೀಯ ಸಂಘರ್ಷ ಏರ್ಪಟ್ಟಿತ್ತು. ಈ ಘಟನೆ ಬಳಿಕ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿತ್ತು. ಈ ಸಂಘರ್ಷದ ಪರಿಣಾಮ 180ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಸುಮಾರು 60,000 ಜನ ನಿರಾಶ್ರಿತರಾದರು. ಇಷ್ಟಾದರೂ ಮಣಿಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವರ್ಷಾರಂಭದ ಮೊದಲ ದಿನವೇ ನಾಲ್ವರು ಗುಂಡಿನ ದಾಳಿಗೆ ಬಲಿಯಾಗಿರುವುದು ಸ್ಥಳೀಯಲ್ಲಿ ಆತಂಕ ಹೆಚ್ಚಿಸಿದೆ.

  • ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ

    ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ

    ಇಂಫಾಲ್: ಮಣಿಪುರದ ಕಾಂಗ್‍ಪೊಕ್ಪಿ ಜಿಲ್ಲೆಯ ಹರಾಥೆಲ್ ಮತ್ತು ಕೊಬ್ಶಾ ಗ್ರಾಮಗಳ ಮತ್ತೆ ಹಿಂಸಾಚಾರ (Manipur Violence) ಆರಂಭಗೊಂಡಿದೆ. ಕಿಡಿಗೇಡಿಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಓರ್ವ ಇಂಡಿಯಾ ರಿಸರ್ವ್ ಬೆಟಾಲಿಯನ್ (India Reserve Batallion) ಸಿಬ್ಬಂದಿ ಮತ್ತು ಚಾಲಕ ಹುತಾತ್ಮರಾಗಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

    ಕುಕಿ-ಜೋ ಸಮುದಾಯದ ಮೇಲಿನ ಪ್ರಚೋದಿತ ದಾಳಿಯನ್ನು ಖಂಡಿಸಿ ಕಾಂಗ್‍ಪೋಕ್ಪಿ ಮೂಲದ ಬುಡಕಟ್ಟು ಐಕ್ಯತೆಯ ಸಮಿತಿ ಪ್ರತಿಭಟನೆ ನಡೆಸಿದೆ. ಬಳಿಕ ದಾಳಿಯ ನಂತರ ಕರೆದ ಸಭೆಯಲ್ಲಿ ಮಣಿಪುರದಲ್ಲಿ ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಆಡಳಿತ ಮಂಡಳಿಯನ್ನು ಸ್ಥಾಪಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. ಇದನ್ನೂ ಓದಿ: 30 ವರ್ಷದ ಇತಿಹಾಸ ಮುರಿದ ಕಾಂಗ್ರೆಸ್: ಸ್ವಕ್ಷೇತ್ರದಲ್ಲೇ ವಿಜಯೇಂದ್ರಗೆ ಹಿನ್ನಡೆ

    ದಾಳಿ ನಡೆದ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ.

    ಪರಿಶಿಷ್ಟ ಪಂಗಡದ (ಎಸ್‍ಟಿ) ಸ್ಥಾನಮಾನಕ್ಕಾಗಿ ಮೇಥಿ ಬುಡಕಟ್ಟು ಜನಾಂಗ ಮೆರವಣಿಗೆ ನಡೆಸಿತ್ತು. ಇದು ಮೇ 3 ರಂದು ಎರಡು ಬುಡಕಟ್ಟು ಗುಂಪುಗಳಾದ ಕುಕಿ ಮತ್ತು ಮೇಥಿ ನಡುವೆ ನಡೆದ ಜನಾಂಗೀಯ ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಪುಟ್ಗೋಸಿ ಕರೆಂಟ್‍ಗೆ ಸಿಎಂ, ಡಿಸಿಎಂ ಕಾಂಪಿಟೇಷನ್ ಮೇಲೆ ಅಧಿಕಾರಿಗಳನ್ನು ಕಳುಹಿಸಿದ್ರು: ಹೆಚ್‍ಡಿಕೆ

  • ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಇಂಫಾಲ್: ಜುಲೈನಲ್ಲಿ ಮಣಿಪುರದಲ್ಲಿ (Manipur) ನಡೆದ ಇಬ್ಬರು ವಿದ್ಯಾರ್ಥಿಗಳ (Manipur Students) ಭೀಕರ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ನಾಲ್ವರನ್ನು ಬಂಧಿಸಿದೆ. ಅಲ್ಲದೇ ಇಬ್ಬರನ್ನು ವಶಕ್ಕೆ ಪಡೆದಿದ್ದು, ಅವರ ಫೋಟೋ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

    ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ಬಂಧನಕ್ಕೊಳಗಾದ ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ. ವಶಕ್ಕೆ ಪಡೆಯಲಾಗಿರುವ ಇಬ್ಬರು ಹುಡುಗಿಯರು ಎನ್ನಲಾಗಿದೆ. ಬಂಧಿತ ನಾಲ್ವರನ್ನು ಅಸ್ಸಾಂನ (Assam) ಗುವಾಹಟಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಬೂದಿ ಮುಚ್ಚಿದ ಕೆಂಡದಂತಾದ ಮಣಿಪುರ – ಇಬ್ಬರು ವಿದ್ಯಾರ್ಥಿಗಳ ಶವದ ಫೋಟೋ ವೈರಲ್‌

    ಆರೋಪಿಗಳನ್ನು ಪಾವೊಮಿನ್ಲುನ್ ಹಾಕಿಪ್, ಮಲ್ಸಾವ್ನ್ ಹಾಕಿಪ್, ಲಿಂಗ್ನಿಚಾಂಗ್ ಬೈಟ್ ಮತ್ತು ತಿನ್ನೆಖೋಲ್ ಎಂದು ಗುರುತಿಸಲಾಗಿದೆ. ಲಿಂಗ್ನೀಚಾಂಗ್ ಬೈಟ್ ಕೊಲೆಯಾದ ವಿದ್ಯಾರ್ಥಿನಿಯ ಸ್ನೇಹಿತ. ಶಂಕಿತರಲ್ಲಿ ಒಬ್ಬಾಕೆ ಚುರಾಚಂದ್‌ಪುರ ಮೂಲದ ದಂಗೆಕೋರ ಗುಂಪಿನ ವ್ಯಕ್ತಿಯೊಬ್ಬನ ಪತ್ನಿ ಎಂದು ಹೇಳಲಾಗಿದೆ. ಮಣಿಪುರ ಪೋಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಕ್ರ್ಯಾಕ್ ಘಟಕವು ಶಂಕಿತರನ್ನು ಇಂಫಾಲ್‌ನಿಂದ 51 ಕಿಮೀ ದೂರದಲ್ಲಿರುವ ಬೆಟ್ಟದ ಜಿಲ್ಲೆ ಚುರಚಂದ್‌ಪುರದಿಂದ ಸೆರೆಹಿಡಿದಿದೆ.

    ಪ್ರಕರಣ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು, ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪರಾಧಿಗಳನ್ನು ಬಂಧಿಸಲಾಗಿದೆ. ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಚುರಚಂದ್‌ಪುರದಿಂದ ಬಂಧಿಸಿರುವುದು ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಜುಲೈ 6 ರಂದು ಇಬ್ಬರು ಮಣಿಪುರಿ ಯುವಕರು ನಾಪತ್ತೆಯಾಗಿದ್ದರು. ಸೆಪ್ಟೆಂಬರ್ 25 ರಂದು ಈಶಾನ್ಯ ರಾಜ್ಯದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದವು. ಕಾಣೆಯಾಗಿದ್ದ ಫಿಜಾಮ್ ಹೇಮಾನ್‌ಜಿತ್ ಮತ್ತು ಹಿಜಾಮ್ ಲಿಂಥೋಯಿಂಗಂಬಿ ಅವರ ಪಾರ್ಥಿವ ಶರೀರವನ್ನು ತೋರಿಸುವ ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಇದರಿಂದ ಮಣಿಪುರದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಇಂಫಾಲ್: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮೂಲದ ಭಯೋತ್ಪಾದಕ ಸಂಘಟನೆಗಳು (Terrorist Group) ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ (Manipur Violence) ಬಳಸಿಕೊಂಡು ಭಾರತದ ವಿರುದ್ಧವೇ ಯುದ್ಧ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಮಣಿಪುರದ ಬೆಟ್ಟದ ಜಿಲ್ಲೆ ಚುರಾಚಂದ್‌ಪುರದಲ್ಲಿ ಶಂಕಿತನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಶಂಕಿತ ಉಗ್ರನ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗಿದೆ.

    ಮಣಿಪುರದಲ್ಲಿ ಜನಾಂಗೀಯ ದ್ವೇಷದಿಂದ ಉಂಟಾದ ಹಿಂಸಾಚಾರವನ್ನ ಬಳಸಿಕೊಂಡು ಭಾರತದ ವಿರುದ್ಧವೇ ಕೃತ್ಯ ಎಸಗಲು ಎರಡೂ ದೇಶಗಳ ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿದ್ದವು ಎಂದು ರಾಷ್ಟ್ರೀಯ ತನಿಖಾ ದಳ (NIA) ತಿಳಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಆಫ್ಸ್ಪಾ ಜಾರಿ – ಈ ಕಾಯ್ದೆಯ ವಿಶೇಷತೆ ಏನು?

    ಈ ಕುರಿತು ಟ್ವಿಟ್ಟರ್ (X) ಖಾತೆಯಲ್ಲಿ ಪತ್ರಿಕಾ ಪ್ರಕಟಣೆ ಹಂಚಿಕೊಂಡಿರುವ NIA, ಆರೋಪಿಯನ್ನು ಸೆಮಿನ್‌ಲುನ್ ಗ್ಯಾಂಗ್ಟೆ ಎಂದು ಹೆಸರಿಸಿದೆ. ಈತ ಮಣಿಪುರದಲ್ಲಿ ಅಶಾಂತಿ ಮತ್ತು ಜನಾಂಗೀಯ ದ್ವೇಷವನ್ನ ಬಳಸಿಕೊಂಡು ಭಾರತದ ವಿರುದ್ಧ ಯುದ್ಧ ರೂಪಿಸಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಿದ್ದ. ಸಂಘಟನೆಗಳ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿಸಿದೆ. ಇದನ್ನೂ ಓದಿ: ತಾಯಿ, ಸಹೋದರಿಯರಿಗೆ ಅವಮಾನ – ದೇಶವೇ ಮಣಿಪುರದೊಂದಿಗೆ ನಿಂತಿದೆ: ಮೋದಿ

    ಆರೋಪಿ ಸೆಮಿನ್‌ಲುನ್ ಗ್ಯಾಂಗ್ಟೆ (Seiminlun Gangte) ಕಳೆದ ಜೂನ್ 22 ರಂದು ಮಣಿಪುರದ ಕ್ವಾಕ್ಟಾದಲ್ಲಿ ಕಾರ್‌ಬಾಂಬ್ ಸ್ಫೋಟದಲ್ಲಿ ವ್ಯಕ್ತಿಯೊಬ್ಬನ ಹತ್ಯೆಗೆ ಕಾರಣವಾಗಿದ್ದ ಎಂಬುದು ಪೊಲೀಸರಿಂದ ತಿಳಿದುಬಂದಿದೆ. ಅಂದು ಸಣ್ಣ ಸೇತುವೆಯ ಮೇಲೆ ನಿಂತಿದ್ದ ಕಾರು ಸ್ಫೋಟಗೊಂಡ ನಂತರ ಮಣಿಪುರದಲ್ಲಿ ಹಿಂಸಾಚಾರ ಮತ್ತಷ್ಟು ತೀವ್ರಗೊಂಡಿತ್ತು. ಇದು ತರಬೇತಿ ಪಡೆದ ಭಯೋತ್ಪಾದಕ ಕೈಗಳಿಂದ ನಡೆದ ದಾಳಿಯಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿತ್ತು.

    ಇದೀಗ ಗ್ಯಾಂಗ್ಟೆಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದ್ರೆ ಈತ ಯಾವ ಭಯೋತ್ಪಾದಕ ಗುಂಪಿಗೆ ಸೇರಿದವನೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಎನ್‌ಐಎ ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೂದಿ ಮುಚ್ಚಿದ ಕೆಂಡದಂತಾದ ಮಣಿಪುರ – ಇಬ್ಬರು ವಿದ್ಯಾರ್ಥಿಗಳ ಶವದ ಫೋಟೋ ವೈರಲ್‌

    ಬೂದಿ ಮುಚ್ಚಿದ ಕೆಂಡದಂತಾದ ಮಣಿಪುರ – ಇಬ್ಬರು ವಿದ್ಯಾರ್ಥಿಗಳ ಶವದ ಫೋಟೋ ವೈರಲ್‌

    ನವದೆಹಲಿ: ಮಣಿಪುರ ಹಿಂಸಾಚಾರ (Manipur Violence) ಬೂದಿ ಮುಚ್ಚಿದ ಕೆಂಡದಂತಿದೆ. ಆಗಾಗ ಹಿಂಸಾಚಾರ, ಹತ್ಯೆಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವ ತೋರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಚಲನ ಮೂಡಿಸಿದೆ.

    ಇಬ್ಬರು ವಿದ್ಯಾರ್ಥಿಗಳ ಶವಗಳಿರುವ ಫೋಟೋ ವೈರಲ್‌ ಆಗಿದೆ. ಇಬ್ಬರ ಪೈಕಿ ಒಬ್ಬಾಕೆ ಅಪ್ರಾಪ್ತೆ. ಶವಗಳು ಪತ್ತೆಯಾಗಿಲ್ಲ. ಹತ್ಯೆಗೂ ಮುನ್ನ ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಸಂಬಂಧ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ

    ವೈರಲ್‌ ಆದ ಫೋಟೋದಲ್ಲಿ 17 ವರ್ಷದ ಹುಡುಗಿ ಮತ್ತು 20 ವರ್ಷದ ಯುವಕ ಇದ್ದಾರೆ. ಶಸ್ತ್ರ ಸಜ್ಜಿತ ಗುಂಪು ಇವರಿಬ್ಬರ ಹಿಂದೆ ನಿಂತಿದೆ. ಹುಡುಗಿ ಬಿಳಿ ಟಿ-ಶರ್ಟ್‌ನಲ್ಲಿದ್ದಾಳೆ. ಯುವಕ ಚೆಕ್ಡ್ ಶರ್ಟ್‌ನಲ್ಲಿದ್ದಾನೆ. ಅವರ ಹಿಂದೆ ಬಂದೂಕುಗಳನ್ನು ಹಿಡಿದ ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ.

    ಮತ್ತೊಂದು ಫೋಟೋದಲ್ಲಿ ಅವರ ಮೃತದೇಹಗಳು ನೆಲದ ಮೇಲೆ ಬಿದ್ದಿವೆ. ಚುರಚಂದಪುರದಿಂದ 35 ಕಿ.ಮೀ ದೂರದಲ್ಲಿರುವ ಬಿಷ್ಣುಪುರ ಜಿಲ್ಲೆಯಲ್ಲಿ ಇವರಿಬ್ಬರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಎರಡು ಜಿಲ್ಲೆಗಳ ನಡುವಿನ ಪ್ರದೇಶದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಅಪಹರಿಸಿ ಚುರಚಂದಪುರಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

    ಜುಲೈನಲ್ಲಿ ಈ ವಿದ್ಯಾರ್ಥಿಗಳು, ಅಂಗಡಿಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಇಷ್ಟು ದಿನ ಬೇಕಾಯಿತು ಎಂದು ಹಲವರು ಪ್ರಶ್ನಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಹಿಂಸಾಚಾರ; ಶಸ್ತ್ರಸಜ್ಜಿತ ದುಷ್ಕರ್ಮಿಗಳೊಂದಿಗೆ ನಡೆದ ಗುಂಡಿನ ದಾಳಿಗೆ ಮತ್ತೆ 3 ಬಲಿ

    ಮಣಿಪುರ ಹಿಂಸಾಚಾರ; ಶಸ್ತ್ರಸಜ್ಜಿತ ದುಷ್ಕರ್ಮಿಗಳೊಂದಿಗೆ ನಡೆದ ಗುಂಡಿನ ದಾಳಿಗೆ ಮತ್ತೆ 3 ಬಲಿ

    ಇಂಫಾಲ: ಮಣಿಪುರದ (Manipur) ಉಖ್ರುಲ್ ಜಿಲ್ಲೆಯಲ್ಲಿ ಇಂದು (ಶುಕ್ರವಾರ) ಮುಂಜಾನೆ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಶಸ್ತ್ರಸಜ್ಜಿತ ದುಷ್ಕರ್ಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಈ ಘಟನೆ ನಡೆದಿದೆ.

    ಮಣಿಪುರದ ಉಖ್ರುಲ್ ಜಿಲ್ಲೆಯ ಥೋವೈ ಕುಕಿ ಗ್ರಾಮದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಮೂವರು ಗ್ರಾಮಸ್ಥರ ಸಾವಿಗೆ ಕಾರಣವಾಯಿತು. ಮೃತರನ್ನು ಜಮ್‌ಖೋಗಿನ್ ಹಾಕಿಪ್ (26), ತಂಗ್‌ಖೋಕೈ ಹಾಕಿಪ್ (35) ಮತ್ತು ಹೊಲೆನ್ಸನ್ ಬೈಟ್ (24) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Himachal Pradesh Rain: ರಣಭೀಕರ ಮಳೆಗೆ 74 ಮಂದಿ ಸಾವು – 10 ಸಾವಿರ ಕೋಟಿ ನಷ್ಟ!

    ಇದು ಹಿಂಸಾಚಾರ-ಪೀಡಿತ ಮಣಿಪುರದ ಇತ್ತೀಚಿನ ಘಟನೆಯಾಗಿದೆ. ಮಣಿಪುರದಲ್ಲಿ ಮೇ 3 ರಿಂದ ಜನಾಂಗೀಯ ಘರ್ಷಣೆಗಳು ನಡೆಯುತ್ತಲೇ ಇವೆ. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈಥೇಯ್ ಸಮುದಾಯದ ಬೇಡಿಕೆ‌ ವಿರುದ್ಧ ಕುಕಿ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಇದು ಎರಡು ಸಮುದಾಯಗಳ ನಡುವಿನ ಹಿಂಸಾಚಾರಕ್ಕೆ ಕಾರಣವಾಗಿದೆ.

    ಹಿಂಸಾಚಾರ ಭುಗಿಲೆದ್ದ ನಂತರ ಇಲ್ಲಿಯವರೆಗೆ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ಮತ್ತು ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಮಣಿಪುರ ಪೊಲೀಸರಲ್ಲದೆ ಸುಮಾರು 40,000 ಕೇಂದ್ರ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಸಮುದ್ರದ ಮಧ್ಯದಲ್ಲಿ ಚೀನಾ ಪ್ರಜೆ ರಕ್ಷಿಸಿದ ಭಾರತೀಯ ಕೋಸ್ಟ್‌ ಗಾರ್ಡ್‌ – ಧನ್ಯವಾದ ತಿಳಿಸಿದ ಚೀನಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

    ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

    ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದ (Manipur Violence) ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 8 ಬಂದೂಕುಗಳು, 112 ಕಾಟ್ರಿಡ್ಜ್‌ಗಳು ಮತ್ತು 6 ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಬಿಷ್ಣುಪುರ್, ಚುರಾಚಂದ್‌ಪುರ, ತೆಂಗನೌಪಾಲ್, ಕಾಂಗ್‌ಪೋಕ್ಪಿ ಮತ್ತು ರಾಜಧಾನಿ ಇಂಫಾಲ್ ಪಶ್ಚಿಮ ಜಿಲ್ಲೆಗಳಿಂದ ಈ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ. ತೆಂಗ್ನೌಪಾಲ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ 6 ಬಂಕರ್‌ಗಳನ್ನ ಸಹ ನಾಶಪಡಿಸಲಾಗಿದೆ. ಇದನ್ನೂ ಓದಿ: ಹಿಮಾಚಲ, ಉತ್ತರಾಖಂಡದಲ್ಲಿ ಮಳೆಗೆ 81 ಸಾವು – ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ

    ಇಂಫಾಲ್ ಜಿಲ್ಲೆಯ ಮಂತ್ರಪುಖ್ರಿ ಪ್ರದೇಶದಿಂದ ಒಪಿಯಾಡ್ ನೋವು ನಿವಾರಕ ಸಿರಪ್‌ನ 1,240 ಕೊಡೈನ್ ಫಾಸ್ಫೇಟ್ ಬಾಟಲಿಗಳೊಂದಿಗೆ ಅಸ್ಸಾಂ ಮೂಲದ ನಾಲ್ವರನ್ನ ಬಂಧಿಸಿದೆ ಎಂದು ನಾರ್ಕೋಟಿಕ್ಸ್ ಅಂಡ್‌ ಅಫೇರ್ಸ್‌ ಆಫ್‌ ಬಾರ್ಡರ್‌  (NAB) ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಳೆ ಅವಾಂತರಕ್ಕೆ ಹಿಮಾಚಲದಲ್ಲಿ 71 ಬಲಿ – 7.5 ಸಾವಿರ ಕೋಟಿ ನಷ್ಟ

    ಮಾರ್ಚ್ 3 ರಂದು ಮಣಿಪುರದಲ್ಲಿ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ ಆಯೋಜನೆ ಬಳಿಕ ಆರಂಭವಾದ ಘರ್ಷಣೆಯಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಚಾರ ಮಾಡಿದ್ದು ದೇಶಾದ್ಯಂತ ಟೀಕೆಗೆ ಕಾರಣವಾಗಿತ್ತು. ಇದೀಗ ಮಣಿಪುರ ಹಿಂಸಾಚಾರದ ಕುರಿತು ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳ (CBI) ದೇಶಾದ್ಯಂತ ತನ್ನ ಘಟಕಗಳಿಂದ 29 ಮಹಿಳಾ ಸಿಬ್ಬಂದಿ ಸೇರಿದಂತೆ 53 ಅಧಿಕಾರಿಗಳನ್ನ ನಿಯೋಜನೆ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

    [contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

  • ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ

    ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ

    ಇಂಫಾಲ್: ಮಣಿಪುರ ಹಿಂಸಾಚಾರದ (Manipur Violence) ತನಿಖೆಗಾಗಿ ಸಿಬಿಐ (CBI) ದೇಶಾದ್ಯಂತ ತನ್ನ ಘಟಕಗಳಿಂದ 29 ಮಹಿಳಾ ಸಿಬ್ಬಂದಿ ಸೇರಿದಂತೆ 53 ಅಧಿಕಾರಿಗಳನ್ನು ನಿಯೋಜಿಸಿದೆ. ಮೂವರು ಡಿಐಜಿಗಳಾದ ಲವ್ಲಿ ಕಟಿಯಾರ್, ನಿರ್ಮಲಾ ದೇವಿ ಮತ್ತು ಮೋಹಿತ್ ಗುಪ್ತಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಾಜ್‍ವೀರ್ ಅವರನ್ನು ಒಳಗೊಂಡ ತಂಡವು ಜಂಟಿ ನಿರ್ದೇಶಕ ಘನಶ್ಯಾಮ್ ಉಪಾಧ್ಯಾಯ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಷ್ಟು ದೊಡ್ಡ ಸಂಖ್ಯೆಯ ಮಹಿಳಾ ಅಧಿಕಾರಿಗಳನ್ನು ಏಕಕಾಲದಲ್ಲಿ ಸೇವೆಗೆ ನಿಯೋಜಿಸಲಾದ ಮೊದಲ ಪ್ರಕರಣ ಇದಾಗಿದೆ. ಅಲ್ಲದೆ 16 ಇನ್ಸ್‌ಪೆಕ್ಟರ್‌ ಮತ್ತು 10 ಸಬ್‍ಇನ್ಸ್‌ಪೆಕ್ಟರ್ ಸಹ ತಂಡದ ಭಾಗವಾಗಲಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪಕ್ಷಪಾತದ ಆರೋಪಗಳನ್ನು ತಪ್ಪಿಸಲು ಸ್ಥಳೀಯ ಅಧಿಕಾರಿಗಳ ಪಾತ್ರವನ್ನು ಕಡಿಮೆ ಮಾಡಲಾಗಿದೆ. ಇದನ್ನೂ ಓದಿ: Manipur: ಅಬ್ದುಲ್‌ ಕಲಾಂರಿಂದ ಗೌರವಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಸಜೀವ ದಹನ

    ಸಿಬಿಐ ಈಗಾಗಲೇ ಎಂಟು ಪ್ರಕರಣಗಳನ್ನು ದಾಖಲಿಸಿದೆ. ಇದರಲ್ಲಿ ಮೇ 4 ರಂದು ಜನಸಮೂಹದಿಂದ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಎರಡು ಪ್ರಕರಣಗಳು ಸೇರಿದೆ. ಈ ವೀಡಿಯೋ ಜುಲೈ 16 ರಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ನಂತರ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಹಿಂಸಾಚಾರಕ್ಕೆ ಸಂಬಂಧಿಸಿದ ಇನ್ನೂ 9 ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಸಜ್ಜಾಗಿದೆ. ಇದರಿಂದ ಸಿಬಿಐ ತನಿಖೆ ನಡೆಸುವ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಲಿದೆ. ಆದ್ಯತೆಯ ಮೇರೆಗೆ ತನಿಖೆ ನಡೆಸುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಣಿಪುರದಲ್ಲಿ ಹಿಂಸಾಚಾರ ನಡೆದಿದ್ದೇಕೆ?: ಮೀಟೈ ಸಮುದಾಯ ಎಸ್‍ಟಿ ಸ್ಥಾನಮಾನದ ಬೇಡಿಕೆಯ ಕುರಿತು 4 ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‍ಪುರ ಜಿಲ್ಲೆಯ ಟೋಬರ್ಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ಆರಂಭವಾಗಿತ್ತು. ನಂತರ ಇದರಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: Manipur Violence: ಮಣಿಪುರದಲ್ಲಿ 40 ಮಂದಿ ದಂಗೆಕೋರರ ಹತ್ಯೆ – ಇಂಟರ್ನೆಟ್ ಸೇವೆ ಬಂದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ 19 ವರ್ಷಗಳ ರಾಜಕೀಯ ಜೀವನದಲ್ಲಿ ಮಣಿಪುರದಂಥ ಘೋರ ಅನುಭವ ಎಂದೂ ಆಗಿಲ್ಲ: ರಾಹುಲ್‌ ಗಾಂಧಿ

    ನನ್ನ 19 ವರ್ಷಗಳ ರಾಜಕೀಯ ಜೀವನದಲ್ಲಿ ಮಣಿಪುರದಂಥ ಘೋರ ಅನುಭವ ಎಂದೂ ಆಗಿಲ್ಲ: ರಾಹುಲ್‌ ಗಾಂಧಿ

    ತಿರುವನಂತಪುರಂ: ನನ್ನ 19 ವರ್ಷಗಳ ರಾಜಕೀಯ ಜೀವನದಲ್ಲಿ ಮಣಿಪುರದಂತಹ ಸಂಘರ್ಷದ ಅನುಭವವನ್ನು ನಾನು ಎಂದಿಗೂ ಅನುಭವಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅಭಿಪ್ರಾಯಪಟ್ಟಿದ್ದಾರೆ.

    ತಮ್ಮ ತವರು ಕ್ಷೇತ್ರವಾದ ವಯನಾಡಿಗೆ (Wayanad) ಶನಿವಾರ ರಾಹುಲ್‌ ಗಾಂಧಿ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಣಿಪುರ ಹಿಂಸಾಚಾರ ಕುರಿತು ಮಾತನಾಡಿ, ನಾನು ಸ್ವಲ್ಪ ದಿನಗಳ ಹಿಂದೆ ಮಣಿಪುರಕ್ಕೆ (Manipur Violence) ಹೋಗಿದ್ದೆ. ನಾನು 19 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಮಣಿಪುರದಲ್ಲಿ ನಾನು ಅನುಭವಿಸಿದ ಅನುಭವವನ್ನು ರಾಜಕೀಯ ಜೀವನದಲ್ಲಿ ಎಂದಿಗೂ ಅನುಭವಿಸಿಲ್ಲ. ಬಿಜೆಪಿ ಕುಟುಂಬಗಳನ್ನು ನಾಶ ಮಾಡುವ ಗುರಿ ಹೊಂದಿದೆ. ಭಾರತವನ್ನು ವಿಭಜಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ಟಿಎಂಸಿ ರಕ್ತದೊಂದಿಗೆ ಆಟವಾಡಿದೆ: ಮೋದಿ ವಾಗ್ದಾಳಿ

    ನೀವು ಸಾವಿರಾರು ಕುಟುಂಬಗಳನ್ನು ನಾಶಪಡಿಸಿದ್ದೀರಿ. ನೀವು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅವಕಾಶ ನೀಡಿದ್ದೀರಿ. ನೀವು ಜನರ ಹತ್ಯೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಾ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ವೈಖರಿ ವಿರುದ್ಧ ಮತ್ತೆ ರಾಹುಲ್‌ ಗಾಂಧಿ ಗುಡುಗಿದ್ದಾರೆ.

    ಪ್ರಧಾನಿಯವರ ಎರಡು ಗಂಟೆ 13 ನಿಮಿಷಗಳ ಭಾಷಣದಲ್ಲಿ ಮಣಿಪುರದ ಸಮಸ್ಯೆಗೆ ಸಿಕ್ಕ ಸಮಯ ಕೇವಲ 2 ನಿಮಿಷ. ನೀವು ಭಾರತ್ ಮಾತೆಯ ಹತ್ಯೆಯ ಬಗ್ಗೆ ಕೇವಲ ಎರಡು ನಿಮಿಷಗಳ ಕಾಲ ಮಾತನಾಡಿದ್ದೀರಿ. ಹೀಗೆ ಮಾಡಲು ನಿಮಗೆ ಎಷ್ಟು ಧೈರ್ಯ? ನೀವು ಭಾರತದ ಕಲ್ಪನೆಯನ್ನು ಹೇಗೆ ತಳ್ಳಿಹಾಕುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಪ್ರಧಾನಿ ನಗುತ್ತ ಜೋಕ್ ಮಾಡಿಕೊಂಡಿದ್ದಾರೆ – ರಾಹುಲ್ ಕಿಡಿ

    ಕಲ್ಪೆಟ್ಟಾದಲ್ಲಿ ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಇಂದು ಮಾತನಾಡಿದರು. ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ವಯನಾಡಿಗೆ ರಾಹುಲ್‌ ಗಾಂಧಿ ಮೊದಲ ಭೇಟಿ ನೀಡಿದ್ದರು. ಅವರನ್ನು ಸ್ವಾಗತಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]