Tag: Manipur violence

  • ಮಣಿಪುರ ಮಾತುಕತೆ ಸಫಲ; ರಾಷ್ಟ್ರೀಯ ಹೆದ್ದಾರಿ ತೆರೆಯಲು ಕುಕಿ ಗ್ರೂಪ್ ಒಪ್ಪಿಗೆ

    ಮಣಿಪುರ ಮಾತುಕತೆ ಸಫಲ; ರಾಷ್ಟ್ರೀಯ ಹೆದ್ದಾರಿ ತೆರೆಯಲು ಕುಕಿ ಗ್ರೂಪ್ ಒಪ್ಪಿಗೆ

    ಮಣಿಪುರ: ಕಳೆದ ಎರಡು ವರ್ಷಗಳಿಂದ ಹಿಂಸಾಚಾರಪೀಡಿತವಾಗಿದ್ದ ಮಣಿಪುರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. 2 ವರ್ಷಗಳಿಂದ ಮೈತೇಯಿ ಜನರಿಗೆ ನಿರ್ಬಂಧಿಸಲಾದ ಹೆದ್ದಾರಿಗಳನ್ನ ತೆರೆಯುವಂತೆ ಮತ್ತೊಂದು ಕುಕಿ ಬುಡಕಟ್ಟು ಸಮುದಾಯದ ಮನವೊಲಿಸುವಲ್ಲಿ ಕೇಂದ್ರ ಸರ್ಕಾರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

    ಮಾತುಕತೆ ಸಫಲವಾದ ಬಳಿಕ ಕುಕಿ ಸಮುದಾಯದ ಗುಂಪು ರಾಷ್ಟ್ರೀಯ ಹೆದ್ದಾರಿ-2 ಅನ್ನು ತೆರೆಯಲು ಒಪ್ಪಿಕೊಂಡಿದೆ. ದೆಹಲಿಯಲ್ಲಿ ಗೃಹ ಸಚಿವಾಲಯ ಮತ್ತು ಕುಕಿ-ಝೋ ಕೌನ್ಸಿಲ್ (KZC) ಗುಂಪಿನ ನಡುವೆ ನಡೆದ ಹಲವಾರು ಸುತ್ತಿನ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: Manipur | ಬಿರೇನ್‌ ಸಿಂಗ್‌ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

    ಹೌದು. ಕೇಂದ್ರ ಗೃಹ ಸಚಿವಾಲಯ, ಮಣಿಪುರ ಸರ್ಕಾರ ಮತ್ತು ಕುಕಿ-ಝೋ ಗುಂಪುಗಳು ಗುರುವಾರ ಹೊಸ ಒಪ್ಪಂದಕ್ಕೆ (Suspension of Operations (SoO) ಸಹಿ ಹಾಕಿವೆ. ರಾಜ್ಯದ ಪ್ರಾದೇಶಿಕ ಸಮಗ್ರತೆ ಕಾಪಾಡಿಕೊಳ್ಳುವ ಉದ್ದೇಶವನ್ನು ಈ ಒಪ್ಪಂದ ಪುನರುಚ್ಚರಿಸಿದೆ. ಅಲ್ಲದೇ 2023ರ ಮೇ 3ರಂದು ಜನಾಂಗೀಯ ಸಂಘರ್ಷ ಶಮನಗೊಳಿಸುವ ಮಹತ್ವದ ಹೆಜ್ಜೆಯೂ ಇದಾಗಿದೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮ, ಓರ್ವ ಸಿಬ್ಬಂದಿಗೆ ಗಾಯ

    ಮುಂದಿನ ವಾರ ಮೋದಿ ಭೇಟಿ ಸಾಧ್ಯತೆ
    ಇದೇ ಸೆಪ್ಟೆಂಬರ್ 2ನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮೈತೇಯಿ – ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದ ಬಳಿಕ ಇದು ಪ್ರಧಾನಿಯವರ ಮೊದಲ ಭೇಟಿಯಾಗಲಿದೆ. ಇದನ್ನೂ ಓದಿ: ದಸರಾ ಬಳಿಕ ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ನಿಗದಿ – ಚುನಾವಣಾ ಆಯೋಗದ ಮೂಲಗಳ ಹೇಳಿಕೆ

    ಮಾತುಕತೆ ಸಫಲ:
    ಇಂದು ದೆಹಲಿಯಲ್ಲಿ ನಡೆದ ಸುದೀರ್ಘ ಮಾತುಕತೆಯ ಬಳಿಕ ಕೇಂದ್ರ ಸರ್ಕಾರ, ಕುಕಿ ಗುಂಪು ಹಾಗೂ ಮಣಿಪುರ ಸರ್ಕಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ-2 ಅನ್ನು ಮತ್ತೆ ತೆರೆಲಾಗುತ್ತದೆ. ಇದರಿಂದ ಅಗತ್ಯವಸ್ತುಗಳ ಸಾಗಾಟ ಜೊತೆಗೆ ಪ್ರಯಾಣಿಕರ ಸಂಚಾರಕ್ಕೂ ಅನುಕೂಲವಾಗಲಿದೆ. ಅಲ್ಲದೇ ಕುಕಿ-ಝೋ ಕೌನ್ಸಿಲ್ (KZC) ಈ ಮಾರ್ಗದಲ್ಲಿ ಶಾಂತಿ ಕಾಪಾಡಿಕೊಳ್ಳಲು ಭದ್ರತಾ ಪಡೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದೆ.

    ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
    ಮೀಟೈ ಸಮುದಾಯ ಎಸ್‍ಟಿ ಸ್ಥಾನಮಾನದ ಬೇಡಿಕೆಯ ಕುರಿತು 4 ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‍ಪುರ ಜಿಲ್ಲೆಯ ಟೋಬರ್ಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ಆರಂಭವಾಗಿತ್ತು. ಈವರೆಗೆ ಸಂಘರ್ಷದಲ್ಲಿ ಸುಮಾರು 260 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

    ಬಳಿಕ ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಹಿಂಸಾಚಾರ ನಡೆಯುತ್ತಲೇ ಇತ್ತು. ಅಲ್ಲದೇ ಕೆಲ ಶಸ್ತ್ರಸಜ್ಜಿತ ಗುಂಪುಗಳು ಸಶಸ್ತ್ರಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸುತ್ತಲೇ ಇದ್ದರು. ಈ ಸಂರ್ಭದಲ್ಲಿ ಅಮಾಯಕರೂ ಸಾವನ್ನಪ್ಪಿದ್ದರು. ಕೊನೆಗೆ ಸಂಘರ್ಷ ನಿಯಂತ್ರಿಸಲಾಗದೇ ಕಳೆದ ವರ್ಷ ಬಿರೇನ್‌ ಸಿಂಗ್‌ ಮಣಿಪುರ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: Manipur Violence: ಧಗ ಧಗನೆ ಹೊತ್ತಿ ಉರಿಯುತ್ತಿದ್ದ ಮಣಿಪುರ ಸಹಜ ಸ್ಥಿತಿಗೆ – ಮೂರೇ ದಿನದಲ್ಲಿ 54 ಮಂದಿ ಸಾವು

    ಸದ್ಯ ಇದೀಗ ಹೊಸ ಒಪ್ಪಂದದ ಬಳಿಕ ಮಣಿಪುರದಲ್ಲಿ ಶಾಂತಿ ನೆಲೆಸುವ ವಿಶ್ವಾಸವಿದೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ

  • ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ

    ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ

    ಇಂಫಾಲ್‌: ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur violence) ಶಾಂತಿ ಸುವ್ಯವಸ್ಥೆ ಕಾಪಾಡಲು 10,800 ಸೈನಿಕರನ್ನು (Soldiers) ಕಳುಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದಾಗಿ ನಿಯೋಜಿಸಲಾದ ಕೇಂದ್ರೀಯ ಭದ್ರತಾ ಪಡೆಗಳ ಒಟ್ಟು ಸಂಖ್ಯೆ 288ಕ್ಕೆ ತಲುಪಿದೆ ಎಂದು ರಾಜ್ಯದ ಮುಖ್ಯ ಭದ್ರತಾ ಸಲಹೆಗಾರ ತಿಳಿಸಿದ್ದಾರೆ.

    90 ಕಂಪನಿಗಳು ಅಥವಾ ಕೇಂದ್ರೀಯ ಪಡೆಗಳ ಸರಿಸುಮಾರು 10,800 ಸೈನಿಕರ ಸೇರ್ಪಡೆಯೊಂದಿಗೆ ಮಣಿಪುರದಲ್ಲಿ ನಿಯೋಜಿಸಲಾದ ಒಟ್ಟು ಕಂಪನಿಗಳ ಸಂಖ್ಯೆ 288ಕ್ಕೆ ತಲುಪಿದೆ ಎಂದು ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅದಾನಿಯನ್ನು ಬಂಧಿಸಬೇಕು, ಸಂಸತ್ತಿನಲ್ಲಿ ಹೋರಾಡುತ್ತೇವೆ: ಮಲ್ಲಿಕಾರ್ಜುನ ಖರ್ಗೆ

    ನಾಗರಿಕರ ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ಹಾಗೂ ದುರ್ಬಲ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗುತ್ತಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲೂ ಸಮನ್ವಯ ಘಟಕಗಳು ಹಾಗೂ ಜಂಟಿ ನಿಯಂತ್ರಣ ಕೊಠಡಿಗಳನ್ನ ಸ್ಥಾಪಿಸಲಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಎಲ್ಲಾ ಪ್ರದೇಶಗಳು ನಿಯಂತ್ರಣಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದೇ ನವೆಂಬರ್‌ 18ರಂದು ಮಣಿಪುರದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ಕೇಂದ್ರ ಸಚಿವ ಅಮಿತ್‌ ಶಾ (Amit Shah) ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಆ ಬಳಿಕ ಹೆಚ್ಚುವರಿ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ನಿಯೋಜಿಸಲು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

    ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
    ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರರು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು.

    ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.

    ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು, ಶಾಂತಿಯನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿಗಳನ್ನ ನೇರವಾಗಿ ಹೊಣೆ ಮಾಡಿತು. ಇದನ್ನೂ ಓದಿ: ಅಘಾಡಿಗೆ ಆಪರೇಷನ್‌ ಭೀತಿ – ಮತ್ತೆ ರೆಸಾರ್ಟ್‌ ಪಾಲಿಟಿಕ್ಸ್‌ , ಕರ್ನಾಟಕಕ್ಕೆ ಶಾಸಕರು?

  • ಮಣಿಪುರ | ಉದ್ರಿಕ್ತರಿಗೆ ಹೆದರಿ ಬಂಕರ್‌ ನಿರ್ಮಿಸಿಕೊಂಡ ಸಚಿವ!

    ಮಣಿಪುರ | ಉದ್ರಿಕ್ತರಿಗೆ ಹೆದರಿ ಬಂಕರ್‌ ನಿರ್ಮಿಸಿಕೊಂಡ ಸಚಿವ!

    ಇಂಪಾಲ: ಮಣಿಪುರದಲ್ಲಿ (Manipur) ಹಲವು ಶಾಸಕರ ನಿವಾಸಗಳ ಮೇಲೆ ದಾಳಿ ನಡೆದ ಕೆಲವೇ ದಿನಗಳಲ್ಲಿ ರಾಜ್ಯ ಸಚಿವರೊಬ್ಬರು ತಮ್ಮ ಮನೆಗೆ ಭದ್ರತೆ ಹೆಚ್ಚಿಸಿಕೊಂಡಿದ್ದಾರೆ.

    ಖುರಾಯ್‌ನ ಬಿಜೆಪಿ (BJP) ಶಾಸಕ ಹಾಗೂ ಸಚಿವ ಲೀಶಾಂಗ್ಥೆಮ್ ಸುಸಿಂದ್ರೋ ಮೈತೆಯ್ (Leishangthem Susindro Meitei) ಅವರು ತಮ್ಮ ಮನೆಯ ಸುತ್ತ ಮುಳ್ಳುತಂತಿ ಬೇಲಿಯನ್ನು ನಿರ್ಮಿಸಿ, ಬಂಕರ್ ಕೂಡ ನಿರ್ಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಇತ್ತೀಚಿಗೆ ಜಿರಿಬಾಮ್‌ನಿಂದ (Manipur Jiribam) ನಾಪತ್ತೆಯಾಗಿದ್ದ 6 ಮಂದಿಯನ್ನು ಉಗ್ರರು ಹತ್ಯೆಗೈದಿದ್ದರು. ಈ ಪೈಕಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ 16 ಕಿಮೀ ದೂರದ ನದಿಯಲ್ಲಿ (River) ಪತ್ತೆಯಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನಾಕಾರರು ಶನಿವಾರ ಶಾಸಕರು ಮತ್ತು ಸಚಿವರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಉದ್ರಿಕ್ತ ಗುಂಪು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿತ್ತು. ಇದಾದ ಬೆನ್ನಲ್ಲೇ ಇಂಫಾಲ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವಿಶೇಷವಾಗಿ ಸಿಂಗ್ ಅವರ ನಿವಾಸ ಮತ್ತು ರಾಜಭವನದ ಸುತ್ತಲೂ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

    ಹೆಚ್ಚುತ್ತಿರುವ ಹಿಂಸಾಚಾರದ ಮಧ್ಯೆ, ಸರ್ಕಾರ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇಂಫಾಲ್ ಪೂರ್ವ ಮತ್ತು ಪಶ್ಚಿಮ, ಬಿಷ್ಣುಪುರ್, ತೌಬಲ್, ಕಕ್ಚಿಂಗ್, ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರದಲ್ಲಿ ಇಂಟರ್ನೆಟ್‌ ಸೇವೆ ಸ್ಥಗಿತ ಗೊಳಿಸಲಾಗಿದೆ.

    ಇಂಟರ್ನೆಟ್ ನಿಷೇಧವು ಪ್ರಮುಖ ಕಚೇರಿಗಳು, ಸಂಸ್ಥೆಗಳು ಮತ್ತು ಮನೆಯಿಂದ ಕೆಲಸ ಮಾಡುವ ಜನರ ಕೆಲಸಕ್ಕೆ ತೊಂದರೆಯಾಗಿದ್ದರಿಂದ ಬ್ರಾಡ್‌ಬ್ಯಾಂಡ್ ಸೇವೆಗಳ ಮೇಲಿನ ಅಮಾನತ್ತನ್ನು ಇಂದು ತೆಗೆದುಹಾಕಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಗ್ರಹಿಸಲು, ಮಣಿಪುರ ಪೊಲೀಸರು ಪಶ್ಚಿಮ ಇಂಫಾಲ ಮತ್ತು ಪೂರ್ವ ಇಂಫಾಲ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದ್ದಾರೆ.

  • ಮಣಿಪುರ ಗಲಭೆ: ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ – 50 ಕೇಂದ್ರೀಯ ಭದ್ರತಾ ಪಡೆ ನಿಯೋಜನೆ

    ಮಣಿಪುರ ಗಲಭೆ: ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ – 50 ಕೇಂದ್ರೀಯ ಭದ್ರತಾ ಪಡೆ ನಿಯೋಜನೆ

    – ನ.19ರ ವರೆಗೆ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳು ಬಂದ್

    ಇಂಫಾಲ್‍: ಹಿಂಸಾಚಾರ ಪೀಡಿತ ಮಣಿಪುರದ (Manipur violence) ಭದ್ರತಾ ವ್ಯವಸ್ಥೆಗಳ ಕುರಿತು ಕೇಂದ್ರ ಸಚಿವ ಅಮಿತ್‌ ಶಾ (Amit Shah) ಅವರಿಂದು ಉನ್ನತ ಮಟ್ಟದ ಸಭೆ ನಡೆಸಿದರು. ಹಲವು ವಿಷಯಗಳ ಕುರಿತು ಚರ್ಚಿಸಿದರು.

    ಈ ವೇಳೆ ಉದ್ವಿಗ್ನತೆ ಹೆಚ್ಚಿರುವ ಕಾರಣ ಮಣಿಪುರದಲ್ಲಿ ಹೆಚ್ಚುವರಿ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ನಿಯೋಜಿಸಲು ನಿರ್ಧರಿಸಲಾಯಿತು. ಈ ಸಂಬಂಧ ಸಭೆಯ ಬಳಿಕ ಸಿಎಪಿಎಫ್‌ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಅಮಿತ್‌ ಶಾ ನಿರ್ದೇಶನ ನೀಡಿದರು. ಈ ಮೊದಲೇ 20 ಭದ್ರತಾ ಪಡೆಗಳನ್ನು ನಿಯೋಹಿಸಲಾಗಿತ್ತು. ಸದ್ಯ ಒಟ್ಟು 70 ಕೇಂದ್ರೀಯ ಭದ್ರತಾ ಪಡೆಗಳು ಮಣಿಪುರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ವರದಿಗಳು ತಿಳಿಸಿವೆ.

    ಶಾಲೆ, ಕಾಲೇಜುಗಳು ಬಂದ್‌:
    ಇನ್ನೂ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಜನ ಕಂಗಾಲಾಗಿದ್ದು, ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳು ಸೇರಿದಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳನ್ನು ನವೆಂಬರ್‌ 19ರ ವರೆಗೆ (ಮಂಗಳವಾರ) ಬಂದ್‌ ಮಾಡಿರುವುದಾಗಿ ಮಣಿಪುರ ಸರ್ಕಾರ ಸೋಮವಾರ (ಇಂದು) ಘೋಷಿಸಿದೆ. ಇದನ್ನೂ ಓದಿ: ವಿಮಾನ ಪ್ರಯಾಣದಲ್ಲಿ ದಾಖಲೆ – ನ.17 ರಂದು ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

    ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?
    ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು. ಇದನ್ನೂ ಓದಿ: ದೆಹಲಿ | 10, 12ನೇ ತರಗತಿಯವರಿಗೆ ಬೇರೆ ಬಗೆಯ ಶ್ವಾಸಕೋಶಗಳಿಲ್ಲ – ತರಗತಿ ಬಂದ್‌ಗೆ ಸುಪ್ರೀಂ ನಿರ್ದೇಶನ

    ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಇದರಿಂದ ಅಮಿತ್‌ ಶಾ ಮಹಾರಾಷ್ಟ್ರದಲ್ಲಿ ನಿಯೋಜನೆಗೊಂಡಿದ್ದ ಚುನಾವಣಾ ರ‍್ಯಾಲಿಗಳನ್ನು ದಿಢೀರ್‌ ಸ್ಥಗಿತಗೊಳಿಸಿ ಭಾನುವಾರ ಸಂಜೆಯೇ ಭದ್ರತಾ ಅಧಿಕಾರಿಗಳ ಸಭೆ ನಡೆಸಿದ್ದರು.

    ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು, ಶಾಂತಿಯನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿಗಳನ್ನ ನೇರವಾಗಿ ಹೊಣೆ ಮಾಡಿತು. ಇದನ್ನೂ ಓದಿ: ನಾವು ಜಾತಿ ಸಮೀಕ್ಷೆ ನಡೆಸುತ್ತೇವೆ, ಅವಕಾಶ ವಂಚಿತರಿಗೆ ಇದರಿಂದ ಲಾಭವಾಗಲಿದೆ: ರಾಹುಲ್ ಗಾಂಧಿ

    ಸದ್ಯ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೈಗೆತ್ತಿಕೊಂಡಿದೆ. ಇದನ್ನೂ ಓದಿ: Kantara Chapter 1 ಟೈಟಲ್ ಟೀಸರ್ ರಿಲೀಸ್- ರಿಷಬ್ ಶೆಟ್ಟಿ ಲುಕ್‌ಗೆ ಫ್ಯಾನ್ಸ್ ಫಿದಾ

  • ಮಣಿಪುರ | ಪ್ರತಿಭಟನಾಕಾರರು, ಭದ್ರತಾ ಪಡೆಗಳ ನಡುವೆ ಘರ್ಷಣೆ – ಯುವಕ ಸಾವು

    ಮಣಿಪುರ | ಪ್ರತಿಭಟನಾಕಾರರು, ಭದ್ರತಾ ಪಡೆಗಳ ನಡುವೆ ಘರ್ಷಣೆ – ಯುವಕ ಸಾವು

    ಇಂಪಾಲ: ಮಣಿಪುರದ ಹಿಂಸಾಚಾರ (Manipur Violence) ಪೀಡಿತ ಜಿರಿಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರ ನಡುವಿನ ಘರ್ಷಣೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಾನುವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಕೆ ಅಥೌಬಾ (21) ಎಂಬ ಯುವಕ ಸಾವನ್ನಪ್ಪಿದ್ದಾನೆ. ಯುವಕನ ಸಾವಿಗೆ ಕಾರಣವಾದ ಬುಲೆಟ್ ಯಾರದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು, ಮಣಿಪುರದ ವಿಶೇಷ ಪೊಲೀಸ್ ಕಮಾಂಡೋಗಳು ಗುಂಪನ್ನು ಚದುರಿಸಲು ಗುಂಡು ಹಾರಿಸಿದ್ದಾರೆ. ಈ ವೇಳೆ ಅಥೌಬಾ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    ಪ್ರತಿಭಟನಾಕಾರರ ಗುಂಪು ಭಾನುವಾರ ರಾತ್ರಿ ವಿವಿಧ ನಾಯಕರ ಮನೆಗಳು ಮತ್ತು ರಾಜಕೀಯ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಹಲವಾರು ವಸ್ತುಗಳನ್ನು ಧ್ವಂಸ ಮಾಡಿದೆ. ಪ್ರತಿಭಟನಾಕಾರರು ನ.11 ರಂದು ನಡೆದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಹತ್ಯೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದರು. ರಾಜ್ಯ ರಾಜಧಾನಿ ಇಂಫಾಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಮತ್ತು ಮೂವರು ಶಾಸಕರು ಸೇರಿದಂತೆ ಕನಿಷ್ಠ ಇಬ್ಬರು ಮಂತ್ರಿಗಳ ಮನೆಗಳ ಹೊರಗೆ ಗುಂಪು ಪ್ರತಿಭಟನೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಸ್ಸಾಂ ಪೊಲೀಸರು ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಇತ್ತೀಚೆಗೆ ಶಂಕಿತ ಕುಕಿ ಉಗ್ರರ ಪೈಕಿ ಹತ್ತು ಮಂದಿಯನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿತ್ತು. ಮಣಿಪುರದ ಕುಕಿ ಪ್ರಾಬಲ್ಯದ ಚುರಾಚಂದ್‌ಪುರಕ್ಕೆ ಸಾಗಿಸಲು ಆಸ್ಪತ್ರೆಯಿಂದ 10 ಶವಗಳನ್ನು ಹೊರತೆಗೆಯಲು ಯತ್ನಿಸಿದ ಪೊಲೀಸರನ್ನು ಪ್ರತಿಭಟನಾಕಾರರು ತಡೆದಿದೆ ಎಂದು ವರದಿಯಾಗಿದೆ.

  • ಮಣಿಪುರದ ಭದ್ರತಾ ವ್ಯವಸ್ಥೆ ಕುರಿತು ಅಮಿತ್ ಶಾ ಸಭೆ – ಸೋಮವಾರವೂ ಹೈವೋಲ್ಟೇಜ್‌ ಮೀಟಿಂಗ್‌

    ಮಣಿಪುರದ ಭದ್ರತಾ ವ್ಯವಸ್ಥೆ ಕುರಿತು ಅಮಿತ್ ಶಾ ಸಭೆ – ಸೋಮವಾರವೂ ಹೈವೋಲ್ಟೇಜ್‌ ಮೀಟಿಂಗ್‌

    ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರಿಂದು ಹಿಂಸಾಚಾರ ಪೀಡಿತ ಮಣಿಪುರದ (Manipur violence) ಪರಿಸ್ಥಿತಿ, ಭದ್ರತಾ ವ್ಯವಸ್ಥೆಗಳ ಕುರಿತು ಸಭೆ ನಡೆಸಿದ್ದಾರೆ.

    ಮಹಾರಾಷ್ಟ್ರ ಚುನಾವಣಾ ರ‍್ಯಾಲಿಯನ್ನು ರದ್ದುಗೊಳಿಸಿ ಭಾನುವಾರವೇ ದೆಹಲಿಗೆ ವಾಪಸ್ಸಾದ ಅಮಿತ್‌ ಶಾ ಉನ್ನತ ಅಧಿಕಾರಿಗಳಿಂದ ವಸ್ತುಸ್ಥಿತಿ ವಿವರ ಪಡೆದುಕೊಂಡಿದ್ದಾರೆ. ಅಲ್ಲದೇ ಈಶಾನ್ಯ ರಾಜ್ಯದಲ್ಲಿ ಶಾಂತಿಯುತ ವಾತಾವರಣ ಸ್ಥಾಪಿಸಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಸೋಮವಾರ (ನ.18) ಗೃಹ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಉನ್ನತಮಟ್ಟದ ಸಭೆಯನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ‘ದಿ ಸಾಬರಮತಿ ರಿಪೋರ್ಟ್’ | ಗೋಧ್ರಾ ದುರಂತದ ಹಿಂದಿನ ಸತ್ಯ ಬಹಿರಂಗ – ಮೋದಿ ಶ್ಲಾಘನೆ

    ಹಿಂಸಾಚಾರ ಭುಗಿಲೆದ್ದಿದ್ದೇಗೆ?
    ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು. ಇದನ್ನೂ ಓದಿ: ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಇದನ್ನೂ ಓದಿ: ಮಸ್ಕ್‌ ಜೊತೆ ಒಪ್ಪಂದ – ಫಸ್ಟ್‌ ಟೈಂ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ

    ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆ:
    ಇತ್ತೀಚೆಗೆ ಮಣಿಪುರದ ಜಿರಿಬಾಮ್‌ನಿಂದ (Manipur Jiribam) ನಾಪತ್ತೆಯಾಗಿದ್ದ 6 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ 16 ಕಿಮೀ ದೂರದ ನದಿಯಲ್ಲಿ (River) ಪತ್ತೆಯಾಗಿತ್ತು. ಈ ಬೆನ್ನಲ್ಲೇ ಭಾನುವಾರ (ಇಂದು) ಬೆಳಗ್ಗೆ ರುಂಡವಿಲ್ಲದ ಮತ್ತೊಂದು ಮಹಿಳೆಯ ಮೃತದೇಹ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ, ಜೊತೆಗೆ ಉಗ್ರರು ಒತ್ತೆಯಾಳಾಗಿ ಇರಿಸಿದ್ದರು ಎನ್ನಲಾದ 2 ವರ್ಷದ ಮಗುವಿನ ದೇಹವು ಪತ್ತೆಯಾಗಿದೆ ಎಂದು ವರದಿಯಾಗಿದೆ. ಜಿರಿಬಾಮ್‌ ಜಿಲ್ಲೆಯ ಗಡಿಯಲ್ಲಿರುವ ಬರಾಕ್‌ ನದಿಯಲ್ಲಿ ತೇಲಿಬರುತ್ತಿದ್ದ ಮೃತದೇಹವನ್ನು ಅಸ್ಸಾಂನ ಕ್ಯಾಚರ್‌ ಜಿಲ್ಲೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಆದ್ರೆ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಒಟ್ಟಿನಲ್ಲಿ ನಾಪತ್ತೆಯಾದ 6 ಮಂದಿಯಲ್ಲಿ ಇವರೂ ಒಬ್ಬರೆಂದು ಶಂಕಿಸಲಾಗಿದೆ. 4ನೇ ಮೃತದೇಹ ಪತ್ತೆಯಾದ ಬೆನ್ನಲ್ಲೇ ಮಣಿಪುರದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ.

  • ರುಂಡವಿಲ್ಲದ ಮಹಿಳೆಯ ಮೃತದೇಹ ಅರೆಬೆತ್ತಲೆಯಾಗಿ ಪತ್ತೆ – ಮಣಿಪುರ ಮತ್ತೆ ಧಗ ಧಗ

    ರುಂಡವಿಲ್ಲದ ಮಹಿಳೆಯ ಮೃತದೇಹ ಅರೆಬೆತ್ತಲೆಯಾಗಿ ಪತ್ತೆ – ಮಣಿಪುರ ಮತ್ತೆ ಧಗ ಧಗ

    – ಚುನಾವಣಾ ರ‍್ಯಾಲಿ ಸ್ಥಗಿತಗೊಳಿಸಿದ ಅಮಿತ್‌ ಶಾ

    ಇಂಫಾಲ್‌: ಇತ್ತೀಚೆಗೆ ಮಣಿಪುರದ ಜಿರಿಬಾಮ್‌ನಿಂದ (Manipur Jiribam) ನಾಪತ್ತೆಯಾಗಿದ್ದ 6 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ 16 ಕಿಮೀ ದೂರದ ನದಿಯಲ್ಲಿ (River) ಪತ್ತೆಯಾಗಿತ್ತು. ಈ ಬೆನ್ನಲ್ಲೇ ಭಾನುವಾರ (ಇಂದು) ಬೆಳಗ್ಗೆ ರುಂಡವಿಲ್ಲದ ಮತ್ತೊಂದು ಮಹಿಳೆಯ ಮೃತದೇಹ  ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ, ಜೊತೆಗೆ ಉಗ್ರರು ಒತ್ತೆಯಾಳಾಗಿ ಇರಿಸಿದ್ದರು ಎನ್ನಲಾದ 2 ವರ್ಷದ ಮಗುವಿನ ದೇಹವು ಪತ್ತೆಯಾಗಿದೆ ಎಂದು ವರದಿಯಾಗಿದೆ.

    ಜಿರಿಬಾಮ್‌ ಜಿಲ್ಲೆಯ ಗಡಿಯಲ್ಲಿರುವ ಬರಾಕ್‌ ನದಿಯಲ್ಲಿ ತೇಲಿಬರುತ್ತಿದ್ದ ಮೃತದೇಹವನ್ನು ಅಸ್ಸಾಂನ ಕ್ಯಾಚರ್‌ ಜಿಲ್ಲೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಆದ್ರೆ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಒಟ್ಟಿನಲ್ಲಿ ನಾಪತ್ತೆಯಾದ 6 ಮಂದಿಯಲ್ಲಿ ಇವರೂ ಒಬ್ಬರೆಂದು ಶಂಕಿಸಲಾಗಿದೆ. 4ನೇ ಮೃತದೇಹ ಪತ್ತೆಯಾದ ಬೆನ್ನಲ್ಲೇ ಮಣಿಪುರದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಇದನ್ನೂ ಓದಿ: ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ಭುಗಿಲೆದ್ದ ಹಿಂಸಾಚಾರ:
    ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು. ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತು.

    ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಶಾ:
    ಇನ್ನು ಮಣಿಪುರದಲ್ಲಿ ಹೆಚ್ಚಿದ ಹಿಂಸಾಚಾರದಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ತಮ್ಮ ಚುನಾವಣಾ ರ‍್ಯಾಲಿಗಳನ್ನು ರದ್ದುಗೊಳಿಸಿದ್ದಾರೆ. ಮೂಲಗಳ ಪ್ರಕಾರ, ಈಶಾನ್ಯ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಗೃಹ ಸಚಿವರು ಸಭೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಮಣಿಪುರದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಗಮನದಲ್ಲಿಟ್ಟುಕೊಂಡು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ಅವರು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಮಿತ್‌ ಶಾ ಪಾಲ್ಗೊಳ್ಳುವ ಸಾಧ್ಯತೆಗಳಿದ್ದು, ಚುನಾವಣಾ ರ‍್ಯಾಲಿಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಸ್ಕ್‌ ಜೊತೆ ಒಪ್ಪಂದ – ಫಸ್ಟ್‌ ಟೈಂ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ

  • Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು

    Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು

    ಇಂಫಾಲ: ಮಣಿಪುರದ (Manipur) ಜಿರಿಬಾಮ್ ಜಿಲ್ಲೆಯಲ್ಲಿಂದು ಮುಂಜಾನೆ ನಡೆದ ಹಿಂಸಾಚಾರದಲ್ಲಿ (Manipur Violence) ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎರಡು ಶಸ್ತ್ರಸಜ್ಜಿತ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಸಾವಿಗೀಡಾಗಿದ್ದಾರೆ. ಮತ್ತೋರ್ವ ವ್ಯಕ್ತಿಯನ್ನು ಮನೆಗೆ ನುಗ್ಗಿ ಮಲಗಿದ್ದಾಗಲೇ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಕೆಲವೆಡೆ ದುಷ್ಕರ್ಮಿಗಳು ಕೆಲ ಮನೆಗಳಿಗೆ ಬೆಂಕಿ ಹಚ್ಚಿದ ಮೇಲೆ ಹಿಂಸಾಚಾರ ಆರಂಭಗೊಂಡಿತ್ತು. ಇದನ್ನೂ ಒದಿ: ಊಟ ನೀಡಲು ನಿರಾಕರಿಸಿದ ಹೋಟೆಲ್‌ಗೆ ಲಾರಿ ನುಗ್ಗಿಸಿದ ಚಾಲಕ – ವೀಡಿಯೋ ವೈರಲ್

    ಆಗಸ್ಟ್ 1 ರಂದು ಪಕ್ಕದ ಅಸ್ಸಾಂನ ಕ್ಯಾಚಾರ್‍ನಲ್ಲಿ ಸಿಆರ್‍ಪಿಎಫ್ ಯೋಧರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಣಿಪುರವನ್ನು ಸಹಜ ಸ್ಥಿತಿಗೆ ತರಲು ಮೈತೇಯಿ ಮತ್ತು ಹ್ಮಾರ್ ಸಮುದಾಯಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಬಂದಿದ್ದರು. ಇದಾದ ಬಳಿಕ ಕೆಲವೆಡೆ ಹಿಂಸಾಚಾರ ಆರಂಭಗೊಂಡಿತ್ತು.

    ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಈ ಜನಾಂಗೀಯ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಇದನ್ನೂ ಒದಿ: ಬಳ್ಳಾರಿ ಜೈಲಲ್ಲಿ ಗಣೇಶ ಚತುರ್ಥಿ ಆಚರಣೆ – ಆರೋಪಿ ದರ್ಶನ್‌ಗಿಲ್ಲ ವಿನಾಯಕನ ದರ್ಶನ ಭಾಗ್ಯ

  • ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌; ಸಂತ್ರಸ್ತರಿಗೆ ನೆರವಾಗದ ಪೊಲೀಸರು!

    ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌; ಸಂತ್ರಸ್ತರಿಗೆ ನೆರವಾಗದ ಪೊಲೀಸರು!

    – ಉದ್ರಿಕ್ತರ ದಾಳಿ ಕಂಡು ಪೊಲೀಸರೇ ನಡುಗಿದರಾ? – ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಏನಿದೆ?

    ಇಂಫಾಲ್‌: ಸಂಘರ್ಷ ಪೀಡಿತ ಮಣಿಪುರದಲ್ಲಿ‌ (Manipur Violence) ಕಳೆದ ವರ್ಷ ಮೇ 3ರಂದು ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ  ದೋಷಾರೋಪ ಪಟ್ಟಿ (CBI Chargesheet) ಸಲ್ಲಿಸಿದ್ದು, ಹಲವು ವಿಷಯಗಳನ್ನು ಉಲ್ಲೇಖಿಸಿದೆ. ಕೃತ್ಯಕ್ಕೆ ಪೊಲೀಸರು ಸಂತ್ರಸ್ತರಿಗೆ ನೆರವಾಗದೇ ಇರುವುದೇ ಕಾರಣ ಎಂದು ಮಾಡದಿರುವುದೇ ಕಾರಣ ಎಂದು ಉಲ್ಲೇಖಿಸಿದ್ದಾರೆ.

    ಅಂದು ಸಂತ್ರಸ್ತ ಮಹಿಳೆಯರು ನೆರವು ಕೋರಿ ಪೊಲೀಸರ (Manipur Police) ವಾಹನ ಏರಿದ್ದರು, ಆದ್ರೆ ಪೊಲೀಸರು ಕೀ ಇಲ್ಲ ಎನ್ನುವ ನೆಪ ಹೇಳಿ ನೆರವು ನೀಡಲು ನಿರಾಕರಿಸಿದ್ದಾರೆ. ಮಹಿಳೆಯರು ಮಾತ್ರವಲ್ಲ ಇಬ್ಬರು ಪುರುಷರೂ ಪೊಲೀಸರ ವಾಹನ ಏರಿದ್ದರು. ಆದ್ರೆ ಸಂಘರ್ಷನಿರತರು ಅವರನ್ನು ಕಾರಿನಿಂದ ಎಳೆದು ಥಳಿಸುತ್ತಿದ್ದಂತೆ ಸ್ಥಳದಿಂಧ ಕಾಲ್ಕಿತ್ತರು ಎಂದು ಕೇಂದ್ರೀಯ ತನಿಖಾ ದಳ ತನ್ನ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಬೆತ್ತಲೆ ಮೆರವಣಿಗೆ ದಿನವೇ ಮತ್ತಿಬ್ಬರು ಯುವತಿಯರ ಮೇಲೆ ರೇಪ್, ಮರ್ಡರ್ ಆರೋಪ – ಮಣಿಪುರ ಧಗ ಧಗ

    ಏನಿದು ಪ್ರಕರಣ – ಆ ಕರಾಳ ದಿನ ನಡೆದಿದ್ದೇನು?
    2023ರ ಮೇ 3-4 ರಂದು ನಡೆದಿದ್ದ ಹಿಂಚಾಚಾರದ ವೇಳೆ ಸಾರ್ವಜನಿಕರ ಮೇಲೆ ಭಾರೀ ಹಲ್ಲೆ ನಡೆದಿತ್ತು. ಈ ವೇಳೆ ಸಂತ್ರಸ್ತರು ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳಲು ಕಾಡಿನತ್ತ ಓಡಿದ್ದರು. ಆದ್ರೆ ಅವರನ್ನು ಶಸ್ತ್ರಾಸ್ತ್ರ ಹಿಡಿದುಕೊಂಡೇ ಹಿಂಬಾಲಿಸಿದ್ದ ದಾಳಿಕೋರರು ಕಾಡಿನೊಳಗೆ ಹೊಕ್ಕಿದ್ದವರನ್ನೆಲ್ಲ ಬಲವಂತವಾಗಿ ರಸ್ತೆಗೆ ಎಳೆದುತಂದು ಥಳಿಸತೊಡಗಿದ್ದರು. ಅಷ್ಟೇ ಅಲ್ಲ ಸಂತ್ರಸ್ತೆಯರಿಬ್ಬರನ್ನು ಒಂದು ಕಡೆ. ಇನ್ನಿಬ್ಬರು ಮಹಿಳೆಯರು, ಅವರ ತಂದೆ ಹಾಗೂ ಗ್ರಾಮದ ಯಜಮಾನನನ್ನು ಇನ್ನೊಂದು ಕಡೆ ನಿಲ್ಲಿಸಿ ಕಿರುಕುಳ ನೀಡಲು ಶುರು ಮಾಡಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: 2023ರಲ್ಲಿ ಏಷ್ಯಾ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ : WMO ವರದಿ

    ಕಿರುಕುಳ ತಾಳಲಾರದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಸಂತ್ರಸ್ತರು ರಕ್ಷಣೆಗಾಗಿ ಪೊಲೀಸ್ ವಾಹನಕ್ಕೆ ನುಗ್ಗಿದ್ದರು. ವಾಹನ ಚಾಲನೆ ಮಾಡುವಂತೆ, ಇಲ್ಲಿಂದ ಕರೆದೊಯ್ದು ರಕ್ಷಣೆ ಕೊಡುವಂತೆ ಬೇಡಿಕೊಂಡಿದ್ದರು. ಆದ್ರೆ ವಾಹನದ ಕೀ ಇಲ್ಲ ಎಂದು ಹೇಳಿ ಪೊಲೀಸರು ನೆರವಾಗಲು ನಿರಾಕರಿಸಿದ್ದರು. ಹೀಗೆ ಹೇಳಿದ ಕ್ಷಣಾರ್ಧದಲ್ಲೇ ಕಾರು ಚಾಲನೆ ಮಾಡಿದ ಚಾಲಕ, ಸಾವಿರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಸಮೀಪವೇ ವಾಹನ ನಿಲ್ಲಿಸಿದ್ದ. ಇದರಿಂದ ಭಯಗೊಂಡ ಸಂತ್ರಸ್ತರು, ಬೇರೆಡೆಗೆ ಕರೆದೊಯ್ಯುವಂತೆ ಅಂಗಲಾಚಿದ್ದರು. ಈ ಮಧ್ಯೆ, ಸಂತ್ರಸ್ತ ಮಹಿಳೆಯ ತಂದೆಯನ್ನು ಹತ್ಯೆ ಮಾಡಲಾಗಿತ್ತು. ಬಳಿಕ, ವಾಹನದಲ್ಲಿದ್ದವರನ್ನು ಉದ್ರಿಕ್ತರು ಹೊರಗೆಳೆದು ಮನಸ್ಸೋ ಇಚ್ಛೆ ಹಲ್ಲೆಗೈದರು. ಅಷ್ಟರಲ್ಲಿ ಪೊಲೀಸರು ಅಲ್ಲಿಂದ ಕಾಲ್ಕಿತ್ತು ದೌಡಾಯಿಸಿದ್ದರು. ನಂತರ ಉದ್ರಿಕ್ತರ ಗುಂಪು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ (Women Paraded) ನಡೆಸಿತ್ತು, ಇದೇ ವೇಳೆ ಅಲ್ಲಿದ್ದ ಇಬ್ಬರು ಪುರುಷರ ಮೇಲೆ ಹಲ್ಲೆ ನಡೆಸಿತ್ತು ಸಿಬಿಐ ಹೇಳಿದೆ.

    ಮುಂದುವರಿದ ತನಿಖೆ:
    ಇದರ ಬೆನ್ನಲ್ಲೇ ರಾಜ್ಯದಾದ್ಯಂತ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು. ಕೃಷ್ಣ ಸಂಬಂಧ ಮಣಿಪುರ ಸರ್ಕಾರದ ಶಿಫಾರಸ್ಸು ಮತ್ತು ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಿಬಿಐ ತನಿಖೆ ಆರಂಭಿಸಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಕೊಲೆ, ಕೋಮುಗಲಭೆಗೆ ಸಂಚು ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

    ಜನಾಂಗೀಯ ಹಿಂಸಾಚಾರಕ್ಕೆ ಕಾರಣ ಏನು?
    ಮಣಿಪುರದಲ್ಲಿ ಬಹುಸಂಖ್ಯೆಯಲ್ಲಿರುವ ಮೈತೇಯಿ ಸಮುದಾಯದವರು ತಮಗೆ ಎಸ್ಟಿ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳು ಇದನ್ನು ವಿರೋಧಿಸಿದ್ದವು. ಇದರಿಂದ ಸೃಷ್ಟಿಯಾದ ಬಿಕ್ಕಟ್ಟು ರಾಜ್ಯದಲ್ಲಿ ಭೀಕರ ಹಿಂಸಾಚಾರಕ್ಕೆ ಕಾರಣವಾಗಿತ್ತು.

  • ಮಣಿಪುರದಲ್ಲಿ ಮತ್ತೆ ಗುಂಡಿನ ಸುರಿಮಳೆ – ಇಬ್ಬರು ಸಾವು, ಓರ್ವ BJP ಮುಖಂಡನಿಗೆ ಗಂಭೀರ ಗಾಯ

    ಮಣಿಪುರದಲ್ಲಿ ಮತ್ತೆ ಗುಂಡಿನ ಸುರಿಮಳೆ – ಇಬ್ಬರು ಸಾವು, ಓರ್ವ BJP ಮುಖಂಡನಿಗೆ ಗಂಭೀರ ಗಾಯ

    – ಹಲವೆಡೆ ಗ್ರಾಮಸ್ಥರು ಪಲಾಯನ

    ಇಂಫಾಲ: ಮಣಿಪುರದಲ್ಲಿ (Manipur) 2024ರ ವರ್ಷಾರಂಭದ ಮೊದಲ ದಿನದಿಂದಲೇ ಹಿಂಸಾಚಾರ ಭುಗಿಲೆದ್ದಿದೆ. ಮಂಗಳವಾರ (ಜ.30) ಮತ್ತೆ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ಓರ್ವ ಬಿಜೆಪಿ ಮುಖಂಡ (BJP Leader) ಸೇರಿ ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    2024ರ ವರ್ಷಾರಂಭದ ಮೊದಲ ದಿನವೇ ಮಣಿಪುರದಲ್ಲಿ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದರು. ಆ ನಂತರ ಇಲ್ಲಿನ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವೆ ಗುಂಡಿನ ಚಮಮಕಿ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಮಣಿಪುರದಲ್ಲಿ ಗುಂಡಿನ ಸುರಿಮಳೆಗೈದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಣಿಪುರದಲ್ಲಿ ಭದ್ರತಾ ಪಡೆ-ಬಂಡುಕೋರರ ನಡುವೆ ಗುಂಡಿನ ಚಕಮಕಿ

    ಇಂಫಾಲದ ಪಶ್ಚಿಮ ಜಿಲ್ಲೆಯ ಕೌತ್ರುಕ್ ಗ್ರಾಮದಲ್ಲಿ ಗುಂಡಿನ ದಾಳಿ (Firing) ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಓಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

    ಗುಂಡಿನ ದಾಳಿ ವೇಳೆ ಇಲ್ಲಿನ ಬಿಜೆಪಿ ಯುವಘಟಕದ ಭಾಗವಾದ ಭಾರತೀಯ ಜನತಾ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಮನೋಹರ್ಮಯುಮ್ ಬರೀಶ್ ಶರ್ಮಾ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    ಇದಲ್ಲದೇ ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿ ಎರಡು ಸಮುದಾಯಗಳ ಗ್ರಾಮ ಸ್ವಯಂಸೇವಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹಿಂಸಾಚಾರದ ನಂತರ ಇಂಫಾಲ್ ಕಣಿವೆಯ ಕಡಂಗ್‌ಬಂಡ್, ಕೌಟ್ರುಕ್ ಮತ್ತು ಕಾಂಗ್‌ಚುಪ್ ಗ್ರಾಮಗಳಿಂದ ಹಲವು ನಿವಾಸಿಗಳು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.