Tag: manipal hospital

  • ಬಂಡೆಗೆ ಡಿಕ್ಕಿ ಹೊಡೆದ ಟೂರಿಸ್ಟ್ ಬಸ್- ಏಳು ಪ್ರಯಾಣಿಕರ ಸಾವು

    ಬಂಡೆಗೆ ಡಿಕ್ಕಿ ಹೊಡೆದ ಟೂರಿಸ್ಟ್ ಬಸ್- ಏಳು ಪ್ರಯಾಣಿಕರ ಸಾವು

    ಉಡುಪಿ: ಪ್ರವಾಸಿ ಬಸ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿ ಮಾಳ ಬಳಿ ನಡೆದಿದೆ.

    ಮೈಸೂರು ಜಿಲ್ಲೆಯ ಬಸ್ ಇದಾಗಿದ್ದು, ಮೈಸೂರಿನಿಂದ ಮಂಗಳೂರಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಉಡುಪಿ-ಚಿಕ್ಕಮಗಳೂರು ಘಾಟಿ ರಸ್ತೆಯ ಎಸ್.ಕೆ.ಬಾರ್ಡರ್ ಸಮೀಪದ ಅಬ್ಬಾಸ್ ಕಟ್ಟಿಂಗ್ ಬಳಿ ಬಸ್ ಬಂಡೆಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ 35 ಪ್ರವಾಸಿಗರ ಪೈಕಿ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಘಾಟಿಯ ತಿರುವಿನಲ್ಲಿ ಪಕ್ಕದ ಬಂಡೆಗೆ ಡಿಕ್ಕಿಯಾದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

    ಬಸ್ ಮುಂಭಾಗ ಕುಳಿತಿದ್ದ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ಪೇಜಾವರಶ್ರೀ ಭೇಟಿಗೆ ಆಗಮಿಸಿದ ಸಿದ್ದಗಂಗಾ ಸಿದ್ದಲಿಂಗ ಸ್ವಾಮೀಜಿ

    ಪೇಜಾವರಶ್ರೀ ಭೇಟಿಗೆ ಆಗಮಿಸಿದ ಸಿದ್ದಗಂಗಾ ಸಿದ್ದಲಿಂಗ ಸ್ವಾಮೀಜಿ

    ಉಡುಪಿ: ಪೇಜಾವರಶ್ರೀ ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ತುಮಕೂರು ಸಿದ್ದಗಂಗಾ ಮಠಾಧೀಶ ಸಿದ್ದಲಿಂಗಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೇಜಾವರಶ್ರೀ ಕನ್ನಡ ನಾಡಿನ ಹೆಮ್ಮೆಯ ಸಂತ. ಶ್ರೀಗಳ ಆರೋಗ್ಯ ಶೀಘ್ರ ಸುಧಾರಣೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಪೇಜಾವರಶ್ರೀಗಳು ಸಮಾಜದ ಎಲ್ಲರ ಪ್ರೀತಿಗೆ ಪಾತ್ರರು. ಸಂಘಟನಾತ್ಮಕವಾಗಿ ದೇಶಕ್ಕೆ ಶಕ್ತಿ ಕೊಟ್ಟವರು. ಶ್ರೀಗಳ ನಿರಂತರ ಚಟುವಟಿಕೆ ನಮ್ಮ ಊಹೆಗೂ ಮೀರಿದ್ದು ಎಂದು ಪೇಜಾವರಶ್ರೀಗಳನ್ನು ಶ್ಲಾಘಿಸಿದರು.

    ವಿಶ್ವೇಶತೀರ್ಥ ಸ್ವಾಮೀಜಿಗಳು ವೈಯಕ್ತಿಕ ಆರೋಗ್ಯಕ್ಕೆ ಗಮನವೇ ಕೊಟ್ಟಿಲ್ಲ. ದೇಶಕ್ಕಾಗಿ ಸಮಾಜಕ್ಕಾಗಿ ಜೀವನ ಮುಡುಪಾಗಿಟ್ಟವರು. ಕೆಎಂಸಿ ವೈದ್ಯರು ವಿಶೇಷ ಕಾಳಜಿ ವಹಿಸಿದ್ದಾರೆ. ಪೇಜಾವರ ಕಿರಿಯ ಶ್ರೀಗಳು ಆಸ್ಪತ್ರೆಯಲ್ಲಿ ಹಿರಿಯ ಶ್ರೀಗಳ ಜೊತೆಗೆ ಇದ್ದು ಕಾಳಜಿ ವಹಿಸಿದ್ದಾರೆ. ಶ್ರೀಗಳು ಬೇಗ ಗುಣಮುಖರಾಗಿ ಮಠಕ್ಕೆ ವಾಪಸಾಗುವಂತೆ ಆಗಲಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾರೈಸಿದ್ದಾರೆ.

  • ಪೇಜಾವರಶ್ರೀ ಆರೋಗ್ಯ ಸ್ಥಿರ- ಬೆಂಗಳೂರು ವೈದ್ಯರು ಇಂದು ಮಣಿಪಾಲಕ್ಕೆ

    ಪೇಜಾವರಶ್ರೀ ಆರೋಗ್ಯ ಸ್ಥಿರ- ಬೆಂಗಳೂರು ವೈದ್ಯರು ಇಂದು ಮಣಿಪಾಲಕ್ಕೆ

    ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಎಂಟನೇ ದಿನ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿದಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಇಂದು ಬೆಂಗಳೂರಿನ ತಜ್ಞ ವೈದ್ಯರು ಆಗಮಿಸುವ ಸಾಧ್ಯತೆಯಿದೆ.

    ಈ ಹಿಂದೆ ಎರಡು ದಿನ ಮಣಿಪಾಲದಲ್ಲೇ ಇದ್ದು ಮೇಲ್ವಿಚಾರಣೆ ನಡೆಸಿ ವಾಪಾಸ್ ತೆರಳಿದ್ದ ತಜ್ಞ ವೈದ್ಯರು, ಇದೀಗ ಮತ್ತೆ ಬಂದು ಶ್ರೀಗಳ ಆರೋಗ್ಯದ ರಿಪೋರ್ಟ್ ಸದ್ಯದ ಕಂಡೀಶನ್ ಪರಿಶೀಲನೆ ಮಾಡಲಿದ್ದಾರೆ. ರಕ್ತದೊತ್ತಡ ಮತ್ತು ಮಧುಮೇಹ ಸಹಜ ಸ್ಥಿತಿಯಲ್ಲಿದೆ. ಕಫ ಬಹುತೇಕ ಕರಗಿಯಾಗಿದೆ ಎಂಬ ಮಾಹಿತಿಯಿದೆ.

    ಶ್ವಾಸಕೋಶದ ಸಮಸ್ಯೆ ಮಾತ್ರ ಕಾಣಿಸುತ್ತಿದೆ. ಗುರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪೇಜಾವರ ಮಠದ ಭಕ್ತ ವಾಸುದೇವ ಭಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಕಳೆದ ರಾತ್ರಿ ಕೆಎಂಸಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ವಿಶ್ವೇಶತೀರ್ಥ ಸ್ವಾಮೀಜಿಯ ಪ್ರಜ್ಞಾ ಸ್ಥಿತಿಯಲ್ಲಿ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

    ಕಳೆದ 24 ಗಂಟೆಗೆ ಹೋಲಿಸಿದರೆ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲೆ ಮುಂದುವರಿದಿದೆ. ಪೇಜಾವರ ಶ್ರೀಗಳು ಜೀವ ರಕ್ಷಕ ಸಾಧನಗಳ ಅಳವಡಿಕೆಯಲ್ಲಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದರು. ಕಳೆದ ಶುಕ್ರವಾರ ಬೆಳಗ್ಗಿನ ಜಾವ 5 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಅಡ್ಮಿಟ್ ಮಾಡಲಾಗಿತ್ತು.

  • ಪುಟ್ಟ ಅಭಿಮಾನಿಗೆ ಅಪ್ಪು ಆಸರೆ – ಕೊಟ್ಟ ಮಾತಿನಂತೆ ಪ್ರೀತಿಗೆ ಮಣಿಪಾಲ್‍ನಲ್ಲಿ ಕಿಡ್ನಿ ಆಪರೇಷನ್

    ಪುಟ್ಟ ಅಭಿಮಾನಿಗೆ ಅಪ್ಪು ಆಸರೆ – ಕೊಟ್ಟ ಮಾತಿನಂತೆ ಪ್ರೀತಿಗೆ ಮಣಿಪಾಲ್‍ನಲ್ಲಿ ಕಿಡ್ನಿ ಆಪರೇಷನ್

    ಬೆಂಗಳೂರು: ದಾವಣಗೆರೆ ಮೂಲದ ಪುನೀತ್ ಅಭಿಮಾನಿಯಾದ ಪುಟ್ಟ ಬಾಲಕಿಯ ಕಿಡ್ನಿ ವೈಫಲ್ಯದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿಯ ನಂತರ ಪುನೀತ್ ಅಭಿಮಾನಿಯನ್ನು ಭೇಟಿ ಮಾಡಿ ಕಿಡ್ನಿ ಹಾಕಿಸಿ ಚಿಕಿತ್ಸೆ ಕೊಡಿಸೋದಾಗಿ ಹೇಳಿದ್ರು. ಅದರಂತೆಯೆ ಈಗ ಪುಟ್ಟ ಬಾಲಕಿಯ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ.

    ದಾವಣಗೆರೆ ಮೂಲದ 12 ವರ್ಷದ ಬಾಲಕಿ ಪ್ರೀತಿ ಪವರ್‍ಸ್ಟರ್ ಪುನೀತ್ ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿ. ಈಕೆ ಆರನೇ ತರಗತಿ ಓದುತ್ತಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಳು. ಜೀವನದ ಮೇಲೆ ಆಸೆಯನ್ನೇ ತೊರೆದಿದ್ದ ಈಕೆಗೆ ಒಮ್ಮೆ ಪುನೀತ್‍ರನ್ನ ನೋಡಬೇಕು, ನಂತರ ನನ್ನ ಪ್ರಾಣ ಹೋದರೂ ಪರವಾಗಿಲ್ಲ ಎಂದಿದ್ದಳು. ಇದನ್ನ ಪುನೀತ್ ಹುಟ್ಟುಹಬ್ಬದಂದು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಪುನೀತ್ ರಾಜ್‍ಕುಮಾರ್ ಬಾಲಕಿ ಭೇಟಿ ಮಾಡಿ ಚಿಕಿತ್ಸೆ ಕೊಡಿಸೋದಾಗಿ ಹೇಳಿದ್ರು. ಅದರಂತೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸ್ತಿದ್ದಾರೆ.

    ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಯಾರಾದ್ರೂ ಕಿಡ್ನಿ ದಾನ ಮಾಡಿದ್ರೆ ಬದುಕುವ ಭರವಸೆ ನೀಡಿದ್ರು ವೈದ್ಯರು. ಅದರಂತೆ ಬಾಲಕಿ ತಂದೆ ಕುಮಾರ್ ಮಗಳ ಭವಿಷ್ಯಕ್ಕಾಗಿ ಒಂದು ಕಿಡ್ನಿಗಳನ್ನು ದಾನ ಮಾಡ್ತಿದ್ದಾರೆ. ಮಣಿಪಾಲ್ ವೈದ್ಯರು ತಂದೆಯ ಕಿಡ್ನಿಯನ್ನು ಮಗಳಿಗೆ ಜೋಡಣೆ ಮಾಡಲು ಸಿದ್ಧರಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ಮಾಡ್ತಿದ್ದಾರೆ.

    ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿರೋ ಪುನೀತ್, ಬಾಲಕಿಗೆ ಬದುಕು ನೀಡ್ತಿರೋದು ನಿಜಕ್ಕೂ ಶ್ಲಾಘನೀಯ.