Tag: manipal hospital

  • ಮಣಿಪಾಲ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ಬ್ಲಡ್ ಗ್ರೂಪ್‍ನ ಕಿಡ್ನಿ ಕಸಿ ಯಶಸ್ವಿ

    ಮಣಿಪಾಲ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ಬ್ಲಡ್ ಗ್ರೂಪ್‍ನ ಕಿಡ್ನಿ ಕಸಿ ಯಶಸ್ವಿ

    ಬೆಂಗಳೂರು: ಇತ್ತೀಚೆಗೆ ಯಂಗ್ ಯೇಜ್ ನಲ್ಲಿ ಕಿಡ್ನಿ ವೈಫಲ್ಯದ ಸಮಸ್ಯೆ ಕಾಡುತ್ತಿದೆ. ಕಿಡ್ನಿ ದಾನಕ್ಕೆ (Kidney Transplant) ಕೆಲವೊಮ್ಮೆ ಕುಟುಂಬಸ್ಥರು ತಯಾರಿದರೂ ರಕ್ತದ ಗುಂಪು ಮ್ಯಾಚ್ ಆಗದೇ ಜೀವನ್ಮರಣದ ಹೋರಾಟ ಮಾಡುವ ರೋಗಿಗಳಿದ್ದಾರೆ. ಆದರೆ ಇನ್ಮುಂದೆ ಈ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಬ್ಲಡ್ ಗ್ರೂಪ್ ಯಾವುದಾದರೂ ಕಿಡ್ನಿ ಕಸಿ ಮಾಡಬಹುದಾಗಿದೆ.

    ಮಗನಿಗೆ 16 ವರ್ಷವಿದ್ದಾಗ ಅಮ್ಮನಿಗೆ ಕಿಡ್ನಿ ವೈಫಲ್ಯವಾಗಿತ್ತು. ಕಿಡ್ನಿ ಕೊಡಲು ಮಗ ಮುಂದಾದರೂ 18 ವರ್ಷ ತುಂಬದೇ ಕಿಡ್ನಿ ಕೊಡುವಂತಿರಲಿಲ್ಲ. 19 ವರ್ಷಕ್ಕೆ ಕಿಡ್ನಿ ಕೊಟ್ಟು ಅಮ್ಮನ ಉಳಿಸಲು ಮುಂದಾದ ಮಗನಿಗೆ ರಕ್ತದ ಗುಂಪು ಹೊಂದಾಣಿಕೆಯಾಗದ ಸತ್ಯ ಗೊತ್ತಾಗಿದೆ. ಇನ್ನೊಂದು ಕೇಸ್‍ನಲ್ಲಿ 75 ವರ್ಷದ ಬೆನ್ನು ಬಾಗಿದ ಸ್ಥಿತಿಯಲ್ಲಿರುವ ಅಜ್ಜಿ ತನ್ನ ಮಗನ ಉಳಿಸಲು ಕಿಡ್ನಿ ಕೊಡಲು ತಯಾರಾಗಿದ್ದರೂ, ಇಲ್ಲೂ ಬ್ಲಡ್ ಗ್ರೂಪ್ ಮಗನ ಹಾಗೂ ತಾಯಿಯದ್ದು ಮ್ಯಾಚ್ ಆಗಿಲ್ಲ. ಆದರೂ ಹೊಂದಾಣಿಕೆಯಾಗದ ರಕ್ತದ ಗುಂಪು ಇದ್ದರೂ ಮಣಿಪಾಲ ಆಸ್ಪತ್ರೆಯ (Manipal Hospital) ವೈದ್ಯರು ರಿಸ್ಕ್ ತೆಗೆದುಕೊಂಡು ಕಿಡ್ನಿ ಕಸಿ ಮಾಡಿ ಮರು ಜೀವ ಕೊಟ್ಟಿದ್ದಾರೆ. ಈ ರೀತಿ ಸುಮಾರು 27 ಅಪರೂಪದ ಕಿಡ್ನಿ ಕಸಿಯೂ ಯಶಸ್ವಿಯಾಗಿದೆ. ಈಗ ಕಿಡ್ನಿ ಕಸಿ ಮಾಡಿಕೊಂಡವರು ಹಾಗೂ ಅವರ ಕುಟುಂಬಸ್ಥರ ಮೊಗದಲ್ಲಿ ನಗುವಿನ ಹೊನಲು ತುಂಬಿದೆ.

    ಇನ್ನು ಬೇರೆ ಬೇರೆ ಬ್ಲಡ್ ಗ್ರೂಪ್‍ನ ಕಿಡ್ನಿ ಕಸಿ ಪ್ರಕ್ರಿಯೆ ಕೊಂಚ ಸಂಕೀರ್ಣ. ಕಸಿ ಕ್ರಮದ ಮುನ್ನ ಹಾಗೂ ನಂತರ ರಕ್ತದಲ್ಲಿನ ಪ್ರತಿಕಾಯ ಮಟ್ಟವನ್ನು ಕಡಿಮೆ ಮಾಡಲು ಸಾಕಷ್ಟು ಔಷಧಗಳನ್ನು ನೀಡಲಾಗುತ್ತದೆ. ಮೂರು ತಿಂಗಳವರೆಗೆ ರೋಗಿಗಳನ್ನು ಯಾವುದೇ ಸೋಂಕು ತಾಕದಂತೆ ಎಚ್ಚರ ವಹಿಸಬೇಕು ಎಂದು ಮೂತ್ರಪಿಂಡ ತಜ್ಞ ಡಾ. ದೀಪಕ್ ಕುಮಾರ್ ಚಿತ್ರಹಳ್ಳಿ ಹೇಳುತ್ತಾರೆ. ಇದನ್ನೂ ಓದಿ: `ಗಂಧದಗುಡಿ’ ಚಿತ್ರಕ್ಕೆ ಟ್ಯಾಕ್ಸ್ ಫ್ರೀಗೆ ಒತ್ತಾಯ – ಅಪ್ಪು ಅಭಿಮಾನಿಗಳಿಂದ ಸರ್ಕಾರಕ್ಕೆ ಮನವಿ

    ಡಯಾಲಿಸಿಸ್‍ನಲ್ಲಿ ಬದುಕು ತಳ್ಳುವ ರೋಗಿಗಳಿಗೆ ಈ ಪ್ರಕ್ರಿಯೆ ನಿಜಕ್ಕೂ ಆಶಾದಾಯಕವಾಗಿದೆ. ಹೊಸ ಪ್ರಯೋಗದಲ್ಲಿ ಸಕ್ಸಸ್ ಕಂಡ ಮಣಿಪಾಲ ಆಸ್ಪತ್ರೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದೇ ಹೇಳಬಹುದು. ಇದನ್ನೂ ಓದಿ: ಪ್ರಹ್ಲಾದ್‌ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ, ರಾಜಸ್ಥಾನ ಸಿಎಂ ಗೆಹ್ಲೋಟ್

    Live Tv
    [brid partner=56869869 player=32851 video=960834 autoplay=true]

  • ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು, ವೈದ್ಯರ ತಂಡ ಆರೈಕೆ ಮಾಡ್ತಿದೆ: ಎಸ್‍ಎಂಕೆ ಹೆಲ್ತ್ ಬುಲೆಟಿನ್

    ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು, ವೈದ್ಯರ ತಂಡ ಆರೈಕೆ ಮಾಡ್ತಿದೆ: ಎಸ್‍ಎಂಕೆ ಹೆಲ್ತ್ ಬುಲೆಟಿನ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (S.M Krishna) ಅವರು ಸದ್ಯ ಐಸಿಯು (ICU) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ತಂಡ ಆರೈಕೆ ಮಾಡುತ್ತಿದೆ ಎಂದು ಮಣಿಪಾಲ್‌ ಆಸ್ಪತ್ರೆಯಿಂದ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಲಾಗಿದೆ.

    ಶ್ವಾಸಕೋಶದ (Lungs) ಸೊಂಕಿನಿಂದ ಬಳಲುತ್ತಿರುವ ಎಸ್‍ಎಂಕೆಗೆ ಡಾ ಸತ್ಯನಾರಾಯಣ್ ಮತ್ತು ಡಾ ಸುನೀಲ್ ಕಾರಂತ್ ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು ವೈದ್ಯರ ತಂಡ ಆರೈಕೆ ಮಾಡ್ತಾ ಇದೆ. ಶ್ವಾಸಕೋಶದ ಒಳಗಡೆ ಆಕ್ಸಿಜನ್ (Oxygen) ಪ್ರಮಾಣ ಏರುಪೇರು ಆಗ್ತಾ ಇದ್ದು, ವೈದ್ಯರ ತಂಡ ನಿಗಾವಹಿಸಿದೆ. ಆರೋಗ್ಯ ಸಚಿವ ಡಾ. ಸುಧಾಕರ್ ಮೇಲ್ವಿಚಾರಣೆ ನಡೆಸುತ್ತಾ ಇದ್ದಾರೆ. ಅಲ್ಲದೆ ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಬುಲೆಟಿನ್‌ ನಲ್ಲಿ ತಿಳಿಸಲಾಗಿದೆ.

    ತೀವ್ರ ಜ್ವರ ಹಿನ್ನೆಲೆ ಶನಿವಾರ ರಾತ್ರಿ 11 ಗಂಟೆವರೆಗೂ ವೈದೇಹಿ (Vydehi Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಐಸಿಯು ಮತ್ತು ಹೆಚ್ಚಿನ ನಿಗಾ ಹಿನ್ನೆಲೆ ಕುಟುಂಬಸ್ಥರು ಅವರನ್ನು ಮಣಿಪಾಲ್ ಆಸ್ಪತ್ರೆ (Manipal Hospital) ಗೆ ಶಿಫ್ಟ್ ಮಾಡಿದ್ದಾರೆ. ಸದ್ಯ ಮಣಿಪಾಲ್ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಮಾಜಿ ಸಿಎಂ ಆಸ್ಪತ್ರೆಗೆ ದಾಖಲಾದ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾಜಕೀಯ ಮುಖಂಡರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿಕೊಂಡಿದ್ದಾರೆ. ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಯವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸಿಎಂಗೆ ಸುಧಾಕರ್ (Dr. K Sudhakar) ಮತ್ತಿರರು ಸಾಥ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಅವರ ಆರೋಗ್ಯದಲ್ಲಿ (Health) ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡುತ್ತೇವೆ ಎಂಬುದಾಗಿ ಎಸ್.ಎಂ.ಕೃಷ್ಣ ನಿವಾಸದಿಂದ ಸಂದೇಶ ಬಂದಿದೆ.

    ಶ್ವಾಸಕೋಶದ (Lungs) ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ (Chief Minister) ಎಸ್.ಎಂ ಕೃಷ್ಣ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿದೆ. ಡಾ.ಸತ್ಯನಾರಾಯಣ್ ಮತ್ತು ಡಾ.ಸುನೀಲ್ ಕಾರಂತ್ ವೈದ್ಯರ ತಂಡದಿಂದ ಐಸಿಯುನಲ್ಲಿ ಚಿಕಿತ್ಸೆ (Treatment) ನೀಡಲಾಗುತ್ತಿದೆ. ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯರ ತಂಡದೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಿಪಿಐ ಇಲ್ಲಾಳ್‍ ಮೇಲೆ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಸಂಸದ ಜಾಧವ್ ಭೇಟಿ

    ಈ ನಡುವೆ ಎಸ್‌ಎಂ ಕೃಷ್ಣ ನಿವಾಸದಿಂದ ಸಂದೇಶ ಬಂದಿದ್ದು, ಎಸ್‌ಎಂ ಕೃಷ್ಣ ಅವರಿಗೆ ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಹಾಗೂ ಜ್ವರಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಊಹಾಪೊಹದ ಮಾಹಿತಿಗಳಿಗೆ ಕಿವಿಗೊಡದಂತೆ ಎಸ್‌ಎಂಕೆ ಪರವಾಗಿ ಕೊರುತ್ತೇವೆ ಎಂಬುದಾಗಿ ಸಂದೇಶ ರವಾನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

    ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ (Farmer Chief Minister) ಎಸ್‌.ಎಂ ಕೃಷ್ಣ (SM Krishna) ಅವರನ್ನು ಆಸ್ಪತ್ರೆ ದಾ‌ಖಲಿಸಲಾಗಿದೆ.

    ಶ್ವಾಸಕೋಶ (Lungs) ಸಮಸ್ಯೆಯಿಂದ ಬಳುತ್ತಿರುವ ಎಸ್‌.ಎಂ ಕೃಷ್ಣರನ್ನು ಬೆಂಗಳೂರಿನ ಮಣಿಪಾಲ್ ಆಸ್ಫತ್ರೆಗೆ (Manipal Hospital) ದಾಖಲಿಸಲಾಗಿದ್ದು, ಡಾ.ಸತ್ಯನಾರಾಯಣ್ ಮತ್ತು ಡಾ.ಸುನೀಲ್ ಕಾರಂತ್ ವೈದ್ಯರ ತಂಡದಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬಲವಂತವಾಗಿ ಮತಾಂತರಕ್ಕೆ ಯತ್ನ – 11 ಮಂದಿಯ ವಿರುದ್ಧ ಎಫ್‍ಐಆರ್

    ಶ್ವಾಸಕೋಶದಲ್ಲಿ ಆಕ್ಸಿಜನ್ ಪ್ರಮಾಣ ಏರುಪೇರು ಆಗುತ್ತಿದ್ದು, ವೈದ್ಯರ ತಂಡ ಹೆಚ್ಚಿನ ನಿಗಾ ವಹಿಸಿದೆ. ಸದ್ಯ ಆರೋಗ್ಯ ಸಚಿವ ಡಾ‌.ಸುಧಾಕರ್ ಮೇಲ್ವಿಚಾರಣೆ ನಡೆಸುತ್ತಿದ್ದು, ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್

    ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್

    ಬೆಂಗಳೂರು: ಮಳೆಯಿಂದ ಕಾರು ಟ್ರಾಫಿಕ್‍ನಲ್ಲಿ ಸಿಲುಕಿಕೊಂಡು ಡಾಕ್ಟರ್ (Doctor) ಒಬ್ಬರು 3 ಕಿ.ಮೀ ಓಡಿಕೊಂಡು ಆಸ್ಪತ್ರೆಗೆ (Hospital) ತೆರಳಿ ರೋಗಿಗೆ ಶಸ್ತ್ರಚಿಕಿತ್ಸೆ (Surgery) ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಟ್ರಾಫಿಕ್‍ನಲ್ಲಿ ಸಿಲುಕಿದ್ದ ಡಾ. ಗೋವಿಂದ ನಂದಕುಮಾರ್ ಬೆಂಗಳೂರಿನ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital) ಸರ್ಜನ್ ಆಗಿ ಕೆಲಸ ಮಾಡುತ್ತಿದ್ದು, ಸಕಾಲಕ್ಕೆ ರೋಗಿಗೆ ಚಿಕಿತ್ಸೆ ಸಿಗಬೇಕು ಎಂದು ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟು ಓಡಿ ಶಸ್ತ್ರಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಸಿದ ಪಾಲಿಕೆ – BBMP ಕಳಪೆ ಕಾಮಗಾರಿಗೆ ಜನರ ಛೀಮಾರಿ

    ಘಟನೆಯ ಹಿನ್ನೆಲೆ:
    ಆಗಸ್ಟ್ 30 ರಂದು ರೋಗಿಯೊಬ್ಬರಿಗೆ ಲ್ಯಾಪ್ರೋ ಸ್ಕೋಪಿಕ್ ಗ್ಲಾಡ್ ಬ್ಲಡರ್ ಚಿಕಿತ್ಸೆ ಮಾಡಬೇಕಾಗಿತ್ತು. ಹಾಗಾಗಿ ಡಾ. ಗೋವಿಂದ ನಂದಕುಮಾರ್ ಕನ್ನಿಂಗ್ ಹ್ಯಾಮ್‍ನಿಂದ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಅಂದು ವಿಪರೀತ ಮಳೆಯಾಗಿತ್ತು. ಪರಿಣಾಮ ಮಾರತಹಳ್ಳಿ ಮತ್ತು ಸರ್ಜಾಪುರದ ರಸ್ತೆ ಕಂಪ್ಲೀಟ್ ಜಾಮ್ ಆಗಿತ್ತು. ಬೆಳ್ಳಗ್ಗೆ 10 ಗಂಟೆಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಟ್ರಾಫಿಕ್ ಇದ್ದ ಪರಿಣಾಮ ಆಸ್ಪತ್ರೆ ತಲುಪಲು 1 ಗಂಟೆ ಸಮಯ ಹಿಡಿಯುತ್ತಿತ್ತು. ಹೀಗಾಗಿ ವೈದ್ಯರು ಕಾರನ್ನು ಆಸ್ಪತ್ರೆಗೆ ತರುವಂತೆ ಕಾರು ಚಾಲಕನಿಗೆ ಹೇಳಿ 3 ಕಿ.ಮೀ ಓಡಿಹೋಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಇದನ್ನೂ ಓದಿ: ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಸಿದ ಪಾಲಿಕೆ – BBMP ಕಳಪೆ ಕಾಮಗಾರಿಗೆ ಜನರ ಛೀಮಾರಿ

    ವೈದ್ಯರು ಓಡಿಹೋಗಿ ಮಾಡಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ರೋಗಿಯು ಆರೋಗ್ಯವಾಗಿ ಇದ್ದಾರೆ. ಇದೀಗ ವೈದ್ಯರ ಈ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

    ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

    ಬೆಂಗಳೂರು: ಹಿಮಾಲಯಕ್ಕೆ ಚಾರಣ ಹೋದ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯ ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಚಂದ್ರಮೋಹನ್ (31) ನಾಪತ್ತೆಯಾಗಿರುವ ವೈದ್ಯ. ವಸಂತನಗರ ನಿವಾಸಿಯಾಗಿರುವ ಇವರು ಒಂಟಿಯಾಗಿ ಹಿಮಾಲಯ ಪರ್ವತಕ್ಕೆ ಚಾರಣ ಹೊಗಿದ್ದಾರೆ. ಹೀಗೆ ಹೋಗಿ ಜೂನ್ 20 ರ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಆಗಲಿದೆ: ಸಿಎಂ ಘೋಷಣೆ

    ಚಂದ್ರಮೋಹನ್ ಅವರು ಒಂಟಿಯಾಗಿ ಚಾರಣ ಹೋಗುವ ಹವ್ಯಾಸ ಹೊಂದಿದ್ದಾರೆ. ಈ ಬಾರೀ ನೇಪಾಳಕ್ಕೆ ಚಾರಣ ಹೋಗಿದ್ದಾರೆ. ನೇಪಾಳದ ಮೂಲಕ ಹಿಮಾಲಯ ಹತ್ತಲು ಹೋಗಿದ್ದಾರೆ. ಶಿವನ ಅಪಾರ ಭಕ್ತನಾಗಿದ್ದ ಚಂದ್ರಮೋಹನ್, ಸಾಧು ಸಂತರ ಜೊತೆ ಪೂಜೆ, ಧ್ಯಾನದಲ್ಲಿ ತೊಡಗಿದ್ದರು. ಈ ಮೂಲಕ ಆಧ್ಯಾತ್ಮಿಕದ ಕಡೆ ಅತಿಯಾದ ಒಲವು ಹೊಂದಿದ್ದರು.

    ಯಾವುದೇ ಪ್ರವಾಸಿ ಗೈಡೆನ್ಸ್ ತೆಗೆದುಕೊಳ್ಳದೇ ಹೋಗಿದ್ದಾರೆ. ಹೊಸ ಹೊಸ ಸ್ಥಳಗಳನ್ನ ಅನ್ವೇಷಣೆ ಮಾಡಲು ಒಂಟಿಯಾಗಿ ಹೋಗುವ ಹವ್ಯಾಸ ಹೊಂದಿದ್ದರು. ಇದೀಗ ನಾಪತ್ತೆಯಾಗಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ವೈದ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv

  • ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆ

    ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆ

    ಶಿವಮೊಗ್ಗ: ನಗರದಲ್ಲಿ ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ.

    ಶಿಕ್ಷರೊಬ್ಬರಿಗೆ ಕಾಣಿಸಿಕೊಂಡ ಮಂಗನ ಕಾಯಿಲೆ. ಮಂಗನ ಕಾಯಿಲೆ ಪತ್ತೆಯಾದ ಶಿಕ್ಷಕರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ವೈದ್ಯರು ರಕ್ತದ ಮಾದರಿಯನ್ನು ಕೆಎಫ್‍ಡಿ ಲ್ಯಾಬ್‍ಗೆ ಕಳುಹಿಸಿದ್ದರು. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಶಿಕ್ಷಕರು ಕೆಎಫ್‍ಡಿ ಸೋಂಕು ಪತ್ತೆಯಾದ ಹಿನ್ನೆಲೆಯಾದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 15 ದಿನದ ಹಿಂದೆ ತೀರ್ಥಹಳ್ಳಿಯ ಮಹಿಳೆಯೊಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿತ್ತು. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

  • ಮಣಿಪಾಲ ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್

    ಮಣಿಪಾಲ ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್

    ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಹೊರಟ ಸಿದ್ದರಾಮಯ್ಯ ವರನ್ನು ವೈದ್ಯರು ಹಾಗೂ ಸಿಬ್ಬಂದಿ ಬೀಳ್ಕೊಟ್ಟರು.

    ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಜೂನ್ 1 ರಂದು ಸಿದ್ದರಾಮಯ್ಯ  ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಧ್ಯೆ ಒಟ್ಟು ಮೂರು ಬಾರಿ ಸಿದ್ದರಾಮಯ್ಯ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದು ಟೆಸ್ಟ್ ರಿಪೋರ್ಟ್  ನೆಗೆಟಿವ್ ಬಂದಿದೆ. ಇದನ್ನೂ ಓದಿ: ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ

    ಸಿದ್ದರಾಮಯ್ಯ ವೈರಲ್ ಫೀವರ್ ನಿಂದ ಬಳಲುತ್ತಿದ್ದು ವೈದ್ಯರ ಸಲಹೆ ಮೇರೆಗೆ 6  ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದಿದ್ದಾರೆ. ಪುತ್ರ ಶಾಸಕ ಯತೀಂದ್ರ ಜೊತೆಗಿದ್ದು ಸಿದ್ದರಾಮಯ್ಯ ಯೋಗಕ್ಷೇಮ ನೋಡಿಕೊಂಡಿದ್ದರು.  ಒಂದು ವಾರಗಳ ಕಾಲ ಸಿದ್ದರಾಮಯ್ಯ ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ತಗುಲಿದ್ದು, ಬಳಿಕ ಗುಣಮುಖರಾಗಿದ್ದರು.

  • ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ: ನಾಡಿದ್ದು ಡಿಸ್ಚಾರ್ಜ್

    ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ: ನಾಡಿದ್ದು ಡಿಸ್ಚಾರ್ಜ್

    ಬೆಂಗಳೂರು: ಅನಾರೋಗ್ಯದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಂಡುಬಂದಿದೆ. ಜ್ವರ ಲಕ್ಷಣ ಈಗ ಇಲ್ಲವಾಗಿದ್ದು ನಿನ್ನೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿಯೂ ನೆಗೆಟಿವ್ ವರದಿ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರ ಸಲಹೆ ಮೇರೆಗೆ ಇಂದು ಮತ್ತು ನಾಳೆ ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಬಹುತೇಕ ನಾಡಿದ್ದು ಸಿದ್ದರಾಮಯ್ಯ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

    ಜೂನ್ 1ರಂದು ಜ್ವರ ಕಂಡುಬಂದ ಕಾರಣಕ್ಕೆ ಸಿದ್ದರಾಮಯ್ಯ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಅಗತ್ಯ ಕಂಡುಬಂದರೆ ವೈದ್ಯರ ಸೂಚನೆ ಅನುಸರಿಸಿ ದಾಖಲಾಗುವ ಬಗ್ಗೆ ಹೇಳಿದ್ದರು. ಆ ಬಳಿಕ, ಸಿದ್ದರಾಮಯ್ಯ ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಸ್ಕ್ಯಾನಿಂಗ್ ರಿಪೋರ್ಟ್ ನಾರ್ಮಲ್ ಬಂದಿತ್ತು. ಆದರೂ ವೈರಲ್ ಫಿವರ್​ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಸಿದ್ದರಾಮಯ್ಯ ಜತೆ ಆಸ್ಪತ್ರೆಯಲ್ಲಿ ಪುತ್ರ ಡಾ.ಯತೀಂದ್ರ ಸಹ ಇದ್ದಾರೆ.

    ಕೊರೊನಾ ಸೋಂಕಿನಿಂದಾಗಿ ಸಿದ್ದರಾಮಯ್ಯ ಕಳೆದ ವರ್ಷ ಆಗಸ್ಟ್​ನಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು. ಸೋಂಕಿನಿಂದ ಗುಣಮಖರಾದ ಬಳಿಕ, ಕೋವಿಡ್‌ ಮಾರ್ಗಸೂತ್ರಗಳಂತೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ನಂತರ ನಿಯಮದಂತೆ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದರು.

  • ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ಕರೆದೊಯ್ದ ಪುತ್ರ ಯತೀಂದ್ರ

    ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ಕರೆದೊಯ್ದ ಪುತ್ರ ಯತೀಂದ್ರ

    ಬೆಂಗಳೂರು: ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆರೋಗ್ಯ ತಪಾಸಣೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದು, ಪುತ್ರ ಯತೀಂದ್ರ ಅವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ತಪಾಸಣೆಗೆ ಒಳಗಾಗುತ್ತಿದ್ದು, ಪುತ್ರ ಡಾ.ಯಂತೀಂದ್ರ ಸಿದ್ದರಾಮಯ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ನಂತರ ಅಡ್ಮಿಟ್ ಆಗಲು ಹೇಳಿದರೆ 2 ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರು ಸಿಟಿ ಸ್ಕ್ಯಾನ್ ಮಾಡಲಿದ್ದು, ತಪಾಸಣೆ ನಂತರ ಆಸ್ಪತ್ರೆಗೆ ಅಡ್ಮಿಟ್ ಆಗಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲಿದ್ದಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆರೋಗ್ಯ ತಪಾಸಣೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ತಗುಲಿತ್ತು, ಬಳಿಕ ಗುಣಮುಖರಾಗಿದ್ದರು.