Tag: manipal hospital

  • ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು – ರಾಜು ತಾಳಿಕೋಟೆ ನಿಧನಕ್ಕೆ ಶೈನ್ ಶೆಟ್ಟಿ ಕಣ್ಣೀರು

    ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು – ರಾಜು ತಾಳಿಕೋಟೆ ನಿಧನಕ್ಕೆ ಶೈನ್ ಶೆಟ್ಟಿ ಕಣ್ಣೀರು

    – ತುಂಬಾ ತಮಾಷೆಯ, ಬಹಳ ಪ್ರೀತಿಸುವ ವ್ಯಕ್ತಿ
    – ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ

    ಉಡುಪಿ: ರಾಜು ತಾಳಿಕೋಟೆ (Raju Talikote) ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ನಿನಗೋಸ್ಕರ ಈ ಚಿತ್ರ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು ಎಂದು ರಾಜು ತಾಳಿಕೋಟೆಯವರ ನಿಧನಕ್ಕೆ ನಟ ಶೈನ್ ಶೆಟ್ಟಿ (Shine Shetty) ಕಣ್ಣೀರಿಟ್ಟಿದ್ದಾರೆ.

    ಮಣಿಪಾಲ ಆಸ್ಪತ್ರೆ (Manipal Hospital) ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಗ್ ಬಾಸ್ ಸೀಸನ್ 7ರಲ್ಲಿ ಜೊತೆಗಿದ್ದೆವು. ಇಡೀ ಸೀಸನ್‌ನ ನಟರ ಜೊತೆ ಅನ್ಯೋನ್ಯ ಸಂಬಂಧವಿದೆ. ರಾಜು ತಾಳಿಕೋಟೆ ತುಂಬಾ ತಮಾಷೆಯ, ಬಹಳ ಪ್ರೀತಿಸುವ ವ್ಯಕ್ತಿ. ಸಿನಿಮಾ ನಿರ್ಮಾಣದ ಕಾಲ ಕೂಡಿ ಬಂದಾಗ ರಾಜು ಅವರನ್ನು ಸಂಪರ್ಕ ಮಾಡಿದ್ದೆ. ನಮ್ಮ ಸಿನಿಮಾಗೆ ಮೊದಲು ಆಯ್ಕೆ ಮಾಡಿದ್ದು ರಾಜು ತಾಳಿಕೋಟೆ ಅವರನ್ನು. ಪಾತ್ರ ಮತ್ತು ಡೈಲಾಗ್ ಅವರಿಗಾಗಿಯೇ ಬರೆದಿದ್ದೇವೆ. ರಾಜು ತಾಳಿಕೋಟೆಯವರಿಗೆ ಒಟ್ಟು 40 ದಿನದ ಶೆಡ್ಯೂಲ್ ಫಿಕ್ಸ್ ಆಗಿತ್ತು. ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ. ಉಡುಪಿ, ಮಂಗಳೂರು ಸುತ್ತಾಡಲು, ಮೀನು ತಿನ್ನಲು ಒಂದು ದಿನ ಮೊದಲೇ ಬಂದಿದ್ದರು. ಗೆಳೆಯರ ಜೊತೆ ಬೇರೆ ಬೇರೆ ಜಾಗಕ್ಕೆ ಸುತ್ತಾಡಿದ್ದಾರೆ ಎಂದರು.

    ಭಾನುವಾರ ರಾತ್ರಿ 11 ಗಂಟೆಗೆ ತಂಡದ ಜೊತೆ ಮಾತನಾಡಿದ್ದಾರೆ. ಬಳಿಕ 11:59ಕ್ಕೆ ಉಸಿರಾಟ ಸಮಸ್ಯೆ ಅಂತ ಫೋನ್ ಮಾಡಿದ್ದಾರೆ. ಕೂಡಲೇ ಹೆಬ್ರಿ ಹೆಲ್ತ್ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ನೇರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬಂದೆವು. ಕಳೆದ ರಾತ್ರಿಯೇ ಕುಟುಂಬಕ್ಕೆ ಮಾಹಿತಿಯನ್ನು ಕೊಟ್ಟಿದ್ದೇವೆ. ಮಕ್ಕಳು ಕುಟುಂಬಸ್ಥರು ಬಂದಿದ್ದರು. ಬಳಿಕ ಕೊನೆಯುಸಿರೆಳೆದಿದ್ದಾರೆ ಎಂದು ಬೇಸರಿಸಿದರು.

  • Bengaluru | ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಹ್ಲಾದ್ ಜೋಶಿ

    Bengaluru | ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಹ್ಲಾದ್ ಜೋಶಿ

    ಬೆಂಗಳೂರು: ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ (Manipal Hospital) ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Deve Gowda) ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಈ ವೇಳೆ ದೇವೇಗೌಡರು ಜೋಶಿ ಅವರೊಂದಿಗೆ ಲವಲವಿಕೆಯಿಂದ ಮಾತನಾಡಿದರು. ಹಿರಿಯ ರಾಜಕೀಯ ಮುತ್ಸದ್ದಿ, ಮಾರ್ಗದರ್ಶಕರು ಆಗಿರುವ ದೇವೇಗೌಡರು ಶೀಘ್ರವೇ ಚೇತರಿಸಿಕೊಂಡು ಉತ್ತಮ ಆರೋಗ್ಯವಂತರಾಗಿರಲಿ ಎಂದು ಹಾರೈಸಿದರು. ಇದನ್ನೂ ಓದಿ: ಬಿಹಾರದಲ್ಲಿ ಸೀಟು ಹಂಚಿಕೆ ಇತ್ಯರ್ಥ – ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ

    ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಶರಣಗೌಡ ಕಂದಕೂರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ತಪ್ಪು ಕಲ್ಪನೆ ದೂರ ಮಾಡಲು ನಾವು ಸಿದ್ಧ: ಸಿ.ಟಿ.ರವಿ

  • ದೇವೇಗೌಡರು ಆರೋಗ್ಯವಾಗಿದ್ದಾರೆ ಆತಂಕಪಡಬೇಕಿಲ್ಲ: ಹೆಚ್‌ಡಿಕೆ

    ದೇವೇಗೌಡರು ಆರೋಗ್ಯವಾಗಿದ್ದಾರೆ ಆತಂಕಪಡಬೇಕಿಲ್ಲ: ಹೆಚ್‌ಡಿಕೆ

    – ಆರೋಗ್ಯ ಸುಧಾರಣೆ ಆಗುವವರೆಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ

    ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರು (HD Devegowda) ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಮೂರು ನಾಲ್ಕು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಗುರುವಾರ ತಮ್ಮ ತಂದೆಯವರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಆತಂಕಪಡುವ ಅಗತ್ಯ ಇಲ್ಲ. ತಂದೆಯವರಿಗೆ ಆರೋಗ್ಯದ ಸಮಸ್ಯೆ ಇಲ್ಲ. ಕಳೆದ ಮೂರು ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದೇವರ ಮತ್ತು ಜನತೆಯ ಆಶೀರ್ವಾದದಿಂದ ಆರೋಗ್ಯವಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಆರೋಗ್ಯ ಸುಧಾರಣೆ ಆಗುವವರೆಗೂ ಆಸ್ಪತ್ರೆಯಲ್ಲೆ ಚಿಕಿತ್ಸೆ
    ಸದ್ಯ ಮಣಿಪಾಲ್‌ ಆಸ್ಪತ್ರೆಗೆ ದೇವೇಗೌಡರನ್ನ ದಾಖಲಿಸಲಾಗಿದ್ದು, ಆರೋಗ್ಯ ಸುಧಾರಣೆ ಆಗುವವರೆಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಸಂಪೂರ್ಣವಾಗಿ ಆರೋಗ್ಯ ಚೇತರಿಕೆ ಬಳಿಕ ಡಿಸ್ಸಾರ್ಜ್ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಸದ್ಯಕ್ಕೆ ದೇವೇಗೌಡರ ಆರೋಗ್ಯ ಸುಧಾರಣೆ ಆಗಿದ್ದು, ವಾರ್ಡ್ ನಲ್ಲಿ ಇದ್ದಾರೆ. ಇನ್ನೂ 2-3 ದಿನಗಳ ವರೆಗೂ ಆರೋಗ್ಯ ಚೇತರಿಕೆಯತ್ತ ವೈದ್ಯರು ನಿಗಾ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

  • ʻಪಬ್ಲಿಕ್‌ ಟಿವಿʼ ಸಿಬ್ಬಂದಿಗೆ ಸಮಗ್ರ ಆರೋಗ್ಯ ತಪಾಸಣೆ

    ʻಪಬ್ಲಿಕ್‌ ಟಿವಿʼ ಸಿಬ್ಬಂದಿಗೆ ಸಮಗ್ರ ಆರೋಗ್ಯ ತಪಾಸಣೆ

    – 2 ದಿನಗಳ ಕಾಲ ಆರೋಗ್ಯ ತಪಾಸಣಾ ಶಿಬಿರ

    ಬೆಂಗಳೂರು: ʻಪಬ್ಲಿಕ್‌ ಟಿವಿʼ (Public TV) ವತಿಯಿಂದ ಮಲ್ಲೇಶ್ವರಂನ ಮಣಿಪಾಲ್‌ ಆಸ್ಪತ್ರೆ (Manipal Hospital) ಸಹಯೋಗದಲ್ಲಿ ಸಿಬ್ಬಂದಿ‌ ವರ್ಗದವರಿಗೆ ಎರಡು ದಿನಗಳ ಕಾಲ ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

    ಆರೋಗ್ಯ ತಪಾಸಣಾ ಶಿಬಿರಕ್ಕೆ (Health Checkup Camp) ಶುಕ್ರವಾರ ಚಾಲನೆ ನೀಡಲಾಯಿತು. ಪ್ರಾಥಮಿಕ, ರಕ್ತ ಪರೀಕ್ಷೆ ಹಾಗೂ ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಲಾಯಿತು. ಸಂಸ್ಥೆಯ ಎಲ್ಲ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ತಪಾಸಣೆ ನಡೆಯಿತು. ಇದನ್ನೂ ಓದಿ: 2ನೇ ಆಷಾಢ ಶುಕ್ರವಾರ – ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡಿ ತಾಯಿ

    ಎರಡು ದಿನಗಳ ಕಾಲ ನಡೆಯುತ್ತಿರುವ ಈ ಆರೋಗ್ಯ ತಪಾಸಣಾ ಶಿಬಿರವು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವರೆಗೂ ನಡೆಯಲಿದೆ. ರಕ್ತದೊತ್ತಡ, ರಕ್ತ ಪರೀಕ್ಷೆ (Blood Test), ಎತ್ತರ, ತೂಕ, ಇಸಿಜಿ (ECG) ಸೇರಿ ವಿವಿಧ ರೀತಿಯ ತಪಾಸಣೆ ಮಾಡಲಾಯಿತು. ಇದನ್ನೂ ಓದಿ: ಚಿಪ್ಸ್ ಖರೀದಿಸಲು ಅಂಗಡಿಗೆ ತೆರಳಿದ್ದ 7ರ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

    ‘ಪಬ್ಲಿಕ್‌ ಟಿವಿ’ಯ ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಆರೋಗ್ಯ ತಪಾಸಣೆಗೆ ಒಳಗಾದರು. ಮಣಿಪಾಲ್‌ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಆರೋಗ್ಯ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿದರು. ಶನಿವಾರವೂ ಸಹ ತಪಾಸಣಾ ಶಿಬಿರ ಇರಲಿದೆ. ಇದನ್ನೂ ಓದಿ: ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಯ ತಾಳಿ, ಅಮ್ಮನ ಒಡವೆ ಅಡವಿಟ್ಟು 20 ಲಕ್ಷ ಲಂಚ – APMC ವಿರುದ್ಧ ಭ್ರಷ್ಟಾಚಾರದ ಆರೋಪ

  • ಗುಂಡೇಟಿನಿಂದ ಆಸ್ಪತ್ರೆ ಸೇರಿರೋ ಮುತ್ತಪ್ಪ ರೈ ಮಗನ ಆರೋಗ್ಯ ವಿಚಾರಿಸಿದ ಡಿಕೆಶಿ

    ಗುಂಡೇಟಿನಿಂದ ಆಸ್ಪತ್ರೆ ಸೇರಿರೋ ಮುತ್ತಪ್ಪ ರೈ ಮಗನ ಆರೋಗ್ಯ ವಿಚಾರಿಸಿದ ಡಿಕೆಶಿ

    ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ (Muttappa Rai) ಪುತ್ರ ರಿಕ್ಕಿ ರೈ ಗುಂಡೇಟು ತಿಂದು ಮಣಿಪಾಲ್ ಆಸ್ಪತ್ರೆ (Manipal Hospital)  ಸೇರಿದ್ದು, ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ಆರೋಗ್ಯವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)  ವಿಚಾರಿಸಿದ್ದಾರೆ.

    ಆಸ್ಪತ್ರೆಗೆ ಭೇಟಿ ನೀಡುವ ಮೊದಲೇ ರಿಕ್ಕಿ ರೈಗೆ (Rikki Rai) ಕರೆ ಮಾಡಿ ಘಟನೆ ಹೇಗಾಯ್ತು ಎಂದು ಮಾಹಿತಿ ಪಡೆದಿದ್ದಾರೆ. ಆರೋಪಿಗಳು ಯಾರೇ ಆಗಿದ್ದರೂ ಪೊಲೀಸರು ಪತ್ತೆ ಹಚ್ಚುತ್ತಾರೆ. ನಾನು ಗೃಹ ಇಲಾಖೆ ಜೊತೆಗೆ ಪ್ರಕರಣದ ಬಗ್ಗೆ ಮಾತನಾಡುತ್ತೇನೆ. ಪೊಲೀಸರು ಆರೋಪಿಗಳನ್ನ ಪತ್ತೆ ಮಾಡುತ್ತಾರೆ. ನೀನು ಆರೋಗ್ಯದ ಕಡೆ ಗಮನ ಕೊಡು ಎಂದು ಡಿಕೆಶಿ ಪೋನ್ ಮೂಲಕ ಸಾಂತ್ವನ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!

    ಶನಿವಾರ ಸಂಜೆ ಡಿಕೆಶಿ ರಿಕ್ಕಿ ರೈ ಜೊತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಪೊಲೀಸರ ತನಿಖೆ ನಡುವೆ ಡಿಸಿಎಂ ಆರೋಗ್ಯ ವಿಚಾರಿಸಿರುವುದು ಆತ್ಮಬಲ ಹೆಚ್ಚಿಸಿದೆ ಎಂದು ರಿಕ್ಕಿ ರೈ ಹೇಳಿದ್ದಾರೆ.

    ಏನಿದು ಘಟನೆ?
    ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ.

    ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್:
    ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ್ ಸೀಟ್‌ನನ್ನೇ ಗುರಿಯಾಗಿಸಿ 2 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ನ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಗಂಭೀರ ಗಾಯಗೊಂಡಿದ್ದರು.

    ಘಟನೆಯ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿಯ ಹಿಂದಿನ ಕಾರಣ, ದುಷ್ಕರ್ಮಿಗಳ ಗುರುತು ಮತ್ತು ಈ ಘಟನೆಯ ಹಿನ್ನೆಲೆಯನ್ನು ಪತ್ತೆಹಚ್ಚಲು ತೀವ್ರ ಪ್ರಯತ್ನ ನಡೆಯುತ್ತಿದೆ.ಇದನ್ನೂ ಓದಿ: ಗೆಳತಿಯೊಂದಿಗೆ ಲಿವ್‌ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ

  • ಕುರುಬೂರು ಶಾಂತಕುಮಾರ್ ಮಣಿಪಾಲ ಆಸ್ಪತ್ರೆಗೆ ಶಿಫ್ಟ್

    ಕುರುಬೂರು ಶಾಂತಕುಮಾರ್ ಮಣಿಪಾಲ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಪಂಜಾಬಿನ (Punjab) ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಇಂದು ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ (Bengaluru) ಕರೆತರಲಾಗಿದೆ.

    ಚಿಕಿತ್ಸೆಗಾಗಿ ಶಾಂತಕುಮಾರ್ ಅವರನ್ನು ಇದೀಗ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಂತಕುಮಾರ್ ಶೀಘ್ರ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾರೈಸಿದ್ದಾರೆ. ಇದನ್ನೂ ಓದಿ: ದರ ಏರಿಕೆ ಎಫೆಕ್ಟ್ – ವೀಕೆಂಡ್‌ನಲ್ಲಿಯೂ ನಮ್ಮ ಮೆಟ್ರೋ ಖಾಲಿ ಖಾಲಿ

    ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಶಾಂತಕುಮಾರ್ ಅವರು ಗಾಯಗೊಂಡು ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಷಯ ತಿಳಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರ್ ಅಂಬುಲೆನ್ಸ್ ಮೂಲಕ ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: 2 ಜೀವಗಳನ್ನ ಬಲಿ ಪಡೆದಿದ್ದ, ಇಡೀ ಗ್ರಾಮದ ಜನರನ್ನೇ ಕಾಡಿದ್ದ ಸಲಗ ಕೊನೆಗೂ ಸೆರೆ

    ಈ ಮಧ್ಯೆ ದೆಹಲಿ ನಿವಾಸಿ ಆಯುಕ್ತರಾದ ಇಂಕೊಂಗ್ಲ ಜಮೀರ್ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪಟಿಯಾಲದ ಆಸ್ಪತ್ರೆ ವೈದ್ಯರ ಜೊತೆ ಸತತ ಸಂಪರ್ಕದಲ್ಲಿದ್ದರು. ಇದನ್ನೂ ಓದಿ: ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಶನಿವಾರ ಏರ್ ಅಂಬುಲೆನ್ಸ್ ಸಜ್ಜುಗೊಳಿಸಿದ್ದರು. ಇಬ್ಬರು ಸಹಾಯಕರು ಹಾಗೂ ವೈದ್ಯರ ತಂಡದೊಂದಿಗೆ ಇಂದು ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಇದನ್ನೂ ಓದಿ: ಅಯೋಧ್ಯೆಗೆ ತೆರಳಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ – 10 ಮೊಬೈಲ್, 20,000 ರೂ. ದೋಚಿದ ಖದೀಮರು

  • ಮಾಜಿ ಸಿಎಂ ಎಸ್‌ಎಂ ಕೃಷ್ಣ ಮಣಿಪಾಲ್ ಆಸ್ಪತ್ರೆಗೆ ದಾಖಲು

    ಮಾಜಿ ಸಿಎಂ ಎಸ್‌ಎಂ ಕೃಷ್ಣ ಮಣಿಪಾಲ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna) ಮತ್ತೆ ಮಣಿಪಾಲ್ ಆಸ್ಪತ್ರೆಗೆ(Manipal Hospital) ದಾಖಲಾಗಿದ್ದಾರೆ.

    ಎರಡು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ಎಸ್‌ಎಂ ಕೃಷ್ಣ ದಾಖಲಾಗಿದ್ದಾರೆ. ಕಳೆದ ಬಾರಿ ದೀರ್ಘ ಕಾಲದವರೆಗೂ ಆಸ್ಪತ್ರೆಗೆ ದಾಖಲಾಗಿ ಎಸ್‌ಎಂಕೆ ಚಿಕಿತ್ಸೆ ಪಡೆದಿದ್ದರು. ಇಂದು ಮತ್ತೆ ರೂಟಿನ್ ಚೆಕಪ್ ಮಾಡಿಸಲು ಆಸ್ಪತ್ರೆಗೆ ದಾಖಲಾಗಿದ್ದಾರೆ. ರೂಟಿನ್ ಚೆಕಪ್ ಮಾಡಿ ಸೋಮವಾರ ಎಸ್‌ಎಂಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: US Presidential Election 2024 | ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಟ್ರಂಪ್‌ಗೆ ಮುನ್ನಡೆ

    ಇನ್ನು ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟ್ವೀಟ್ ಮಾಡಿದ್ದು, ಶೀಘ್ರವೇ ಎಸ್‌ಎಂಕೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ರಾಜ್ಯದ ಹಿರಿಯ ರಾಜಕೀಯ ಮುತ್ಸದ್ದಿಗಳು, ಮಾಜಿ ಮುಖ್ಯಮಂತ್ರಿಗಳಾದ ಎಸ್‌ಎಂ ಕೃಷ್ಣ ಅವರು ಶೀಘ್ರ ಗುಣಮುಖರಾಗಿ ಸಹಜ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೆಂದು ಹಾರೈಸುತ್ತೇನೆ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಚಿನ್ನ ಕದ್ದು ತೀರ್ಥಹಳ್ಳಿಯಲ್ಲಿ ಹೂತಿಟ್ಟಿದ್ದ ಖತರ್ನಾಕ್ ಕಳ್ಳ!

  • ಗುಣಮುಖರಾಗಿ ಆಸ್ಪತ್ರೆಯಿಂದ ಎಸ್.ಎಂ.ಕೃಷ್ಣ ಡಿಸ್ಚಾರ್ಜ್; ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ

    ಗುಣಮುಖರಾಗಿ ಆಸ್ಪತ್ರೆಯಿಂದ ಎಸ್.ಎಂ.ಕೃಷ್ಣ ಡಿಸ್ಚಾರ್ಜ್; ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ

    ಬೆಂಗಳೂರು: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ (S M Krishna) ಅವರು ಏ.29 ರಂದು ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಾಗಿದ್ದರು. 4 ತಿಂಗಳ ಸುದೀರ್ಘ ಚಿಕಿತ್ಸೆಯ ನಂತರ ಇಂದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್.ಎಂ.ಕೃಷ್ಣ ಅವರ ಆರೋಗ್ಯ ಸುಧಾರಿಸಿದ್ದು, ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮರಳಿ ಮನೆಗೆ ಆಗಮಿಸಿದ್ದಾರೆ ಎಂದು ಶಾಸಕ ದಿನೇಶ್ ಗೂಳಿಗೌಡ (Dinesh Guligowda) ತಿಳಿಸಿದ್ದಾರೆ.ಇದನ್ನೂ ಓದಿ: ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಪ್ರಕರಣ – ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ

    ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಶ್ವಾಸಕೋಶದ ಸೋಂಕು ನಿವಾರಣೆ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಭಗವಂತನ ಕೃಪೆ ಮತ್ತು ವೈದ್ಯರ ಪರಿಶ್ರಮದಿಂದ ಎಸ್.ಎಂ.ಕೃಷ್ಣ ಅವರು ಗುಣಮುಖರಾಗಿದ್ದಾರೆ. ಆದರೆ ಎರಡು ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಯಾವುದೇ ಸಾರ್ವಜನಿಕ ಭೇಟಿ ಮತ್ತು ಕಾರ್ಯಕ್ರಮಗಳಿಗೆ ಪಾಲ್ಗೊಳ್ಳದಂತೆ ವೈದ್ಯರು ಸೂಚನೆ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು, ಅಭಿಮಾನಿಗಳು ಕೆಲವು ದಿನಗಳ ಕಾಲ ಅವರನ್ನು ಭೇಟಿ ಮಾಡದಂತೆ ನೋಡಿಕೊಳ್ಳುವಂತೆ ಕುಟುಂಬದವರಿಗೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಯಾರೂ ಸಹ ಅನ್ಯತ ಭಾವಿಸದೇ ಹಿರಿಯ ಮುತ್ಸುದ್ದಿ ಎಸ್.ಎಂ.ಕೃಷ್ಣ ಅವರು ವಿಶ್ರಾಂತಿ ಪಡೆಯಲು ಸಹಕರಿಸಬೇಕಾಗಿದೆ ಹಾಗೂ ಸಂಪೂರ್ಣವಾಗಿ ಗುಣಮುಖರಾದ ಬಳಿಕ ಎಸ್.ಎಂ.ಕೃಷ್ಣ ಅವರೇ ಎಲ್ಲರನ್ನೂ ಭೇಟಿ ಮಾಡಲಿದ್ದಾರೆ.ಇದನ್ನೂ ಓದಿ: ಗೂಡ್ಸ್ ವಾಹನದಲ್ಲಿ ಜನರ ಪ್ರಯಾಣ ಕಾನೂನು ಬಾಹಿರ: ಎಡಿಜಿಪಿ ಅಲೋಕ್ ಕುಮಾರ್

    ಚಿಕಿತ್ಸೆ ನೀಡಿದ ಮಣಿಪಾಲ ವೈದ್ಯರ ತಂಡ ಹಾಗೂ ಸಿಬ್ಬಂದಿಗೆ ಎಸ್.ಎಂ.ಕೃಷ್ಣ ಅವರು ಧನ್ಯವಾದ ತಿಳಿಸುವಂತೆ ಹೇಳಿದ್ದಾರೆ.

  • ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸೋಮವಾರ ಸಂಜೆ ಪಾರ್ವತಿ ಸಿದ್ದರಾಮಯ್ಯ (Parvathi Siddaramaiah Discharge) ಅವರು ನಗರದ ಮಣಿಪಾಲ್ ಆಸ್ಪತ್ರೆ (Manipal Hospital) ಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಐದು ದಿನಗಳ ಹಿಂದೆ ತೀವ್ರ ಜ್ವರವಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಗುಣಮುಖರಾಗಿದ್ದು, ಮನೆಗೆ ವಾಪ್ಸಾಗಿದ್ದಾರೆ.

    ಜೂನ್ 21ರಂದು ಬೆಳಗ್ಗೆ 9.30ಕ್ಕೆ ಸಿದ್ದರಾಮಯ್ಯನವರು ದೆಹಲಿಗೆ ತೆರಳಬೇಕಿತ್ತು. ಆದರೆ ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಆಸ್ಪತ್ರೆಗೆ ಬಂದು ಪತ್ನಿಯ ಆರೋಗ್ಯ ವಿಚಾರಿಸಿದ್ದರು. ನಂತರ 11.30ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು. ಇದನ್ನೂ ಓದಿ: ನನ್ನನ್ನು ಎದುರು ಹಾಕೊಂಡು ಯಾರೂ ಗೆಲ್ಲೋಕ್ಕಾಗಲ್ಲ- ಕೆ.ಎನ್.ರಾಜಣ್ಣ ದರ್ಪದ ಮಾತು ವೈರಲ್

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಡಾ.ರಾಜ್ ಸಂಬಂಧಿ ಧ್ರುವನ್ ತೀವ್ರ ಅಪಘಾತ : ಶಿವರಾಜ್ ಕುಮಾರ್ ಹಾಗೂ ಮತ್ತಿತರರು ಆಸ್ಪತ್ರೆಗೆ ಭೇಟಿ

    ಡಾ.ರಾಜ್ ಸಂಬಂಧಿ ಧ್ರುವನ್ ತೀವ್ರ ಅಪಘಾತ : ಶಿವರಾಜ್ ಕುಮಾರ್ ಹಾಗೂ ಮತ್ತಿತರರು ಆಸ್ಪತ್ರೆಗೆ ಭೇಟಿ

    ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಸಹೋದರ, ನಿರ್ಮಾಪಕ ಎಸ್. ಎ ಶ್ರೀನಿವಾಸ್ ಪುತ್ರ ಹಾಗೂ ನಟ ಧ್ರುವನ್ (Dhruvan) ಅಲಿಯಾಸ್ ಸೂರಜ್ (Suraj) ನಿನ್ನೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮೊದಲ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕಾಲು ಕತ್ತರಿಸುವ ಅನಿವಾರ್ಯತೆ ವೈದ್ಯರಿಗೆ ಬಂದಿರುವ ಕಾರಣದಿಂದಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

     

    ಅಪಘಾತ (Road Accident) ನಡೆದ ಸ್ಥಳದಲ್ಲೇ ಧ್ರುವನ್ ಬಲಗಾಲಿನ ಕೆಳ ಭಾಗ ಟ್ವಿಸ್ಟ್ ಆಗಿತ್ತು. ಅಲ್ಲದೇ ಮುಕ್ಕಾಲು ಭಾಗ ತುಂಡರಿಸಿತ್ತು. ಮಂಡಿಯ ಮೇಲ್ಭಾಗದಲ್ಲೂ ತೀವ್ರ ಪೆಟ್ಟಾಗಿತ್ತು. ಹಾಗಾಗಿ ಮಣಿಪಾಲ್ ಆಸ್ಪತ್ರೆಯ (Manipal Hospital) ವೈದ್ಯರು ಮಂಡಿಯ ಕೆಳಭಾಗವನ್ನು ಕತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ನಟ ಶಿವರಾಜ್ ಕುಮಾರ್ (Shivraj Kumar), ನಿರ್ಮಾಪಕ ಚಿನ್ನೇಗೌಡ ಮತ್ತು ಧ್ರುವನ್ ಸಿನಿಮಾದ ನಿರ್ದೇಶಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಘಟನೆ ವಿವರ :

    ನಟ ಸೂರಜ್ (ಧ್ರುವನ್) ನಿನ್ನೆ ಬುಲೆಟ್ ನಲ್ಲಿ ಊಟಿಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಮಾರ್ಗಮಧ್ಯೆ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಮುಂದಿನಿಂದ ಬಂದ ಟಿಪ್ಪರ್ ಸೂರಜ್ ಮೇಲೆ ಹರಿದಿದೆ ಎಂದು ಹೇಳಲಾಘುತ್ತಿದೆ. ಚಾಮರಾಜನಗರ ಬೇಗೂರು (ಗುಂಡ್ಲುಪೇಟೆ) ಸಮೀಪದ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಬೈಕ್ ಸವಾರ ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು

    ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಅದಾಗಿದ್ದು, ಮೈಸೂರು ಕಡೆಯಿಂದ ಬರುತ್ತಿದ್ದ ಸೂರಜ್ ಬುಲೆಟ್ ಬೈಕ್ ಗೆ ಡಿಕ್ಕಿ  ಹೊಡೆದಿದೆ. ವಿಷಯ ತಿಳಿದ ಬೇಗೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸೂರಜ್ ಆಪ್ತರು ನೀಡಿದ ಮಾಹಿತಿಯಂತೆ ನಿನ್ನೆಯೇ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದ್ದು, ಕಾಲಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಒಂದು ಕಾಲು ಕತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅವರಿಗೆ ಪ್ರಜ್ಞೆ ಬಾರದೇ ಇರುವ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ.

     

    ಮೂಲ ಸೂರಜ್ ಅಂತಿದ್ದ ಹೆಸರನ್ನು ಧ್ರುವನ್ ಅಂತ ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ಭಗವಾನ್ ಶ್ರೀಕೃಷ್ಣ ಪರಮಾತ್ಮ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.