Tag: Maninder Kaur

  • ಆರೋಗ್ಯ ಸಚಿವರಿಂದ ಛೀಮಾರಿ – ಪಂಜಾಬ್ ಮಾಜಿ ಸಿಎಂ ಅತ್ತಿಗೆ ರಾಜೀನಾಮೆ

    ಆರೋಗ್ಯ ಸಚಿವರಿಂದ ಛೀಮಾರಿ – ಪಂಜಾಬ್ ಮಾಜಿ ಸಿಎಂ ಅತ್ತಿಗೆ ರಾಜೀನಾಮೆ

    ಚಂಡೀಗಢ: ಪಂಜಾಬ್‍ನ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರು ಇತ್ತೀಚೆಗೆ ರಾಜ್ಯದ ಹಿರಿಯ ಆರೋಗ್ಯ ಅಧಿಕಾರಿಯನ್ನು ಕ್ಯಾಮೆರಾ ಎದುರೇ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಟೀಕಿಸಿದ ಬೆನ್ನಲ್ಲೆ ಮತ್ತೊಂದು ಅಹಿತಕರ ಘಟನೆ ನಡೆದಿದೆ.

    ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ರಾಜ್ ಬಹದ್ದೂರ್ ಅವರು ಜೌರಾಮಜ್ರಾ ಅವರಿಂದ ಅವಮಾನಕ್ಕೊಳಗಾಗಿ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ, ರಾಜ್ಯದ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರ ಸೊಸೆ ಡಾ.ಮಣಿಂದರ್ ಕೌರ್ ಅವರು ಸಹ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಇದನ್ನೂ ಓದಿ:  ಕೊಯಿನಾಡು ಬಳಿ ರಸ್ತೆಯಲ್ಲಿ ಬಿರುಕು : ಮಡಿಕೇರಿ – ಮಂಗಳೂರು ಸಂಪರ್ಕ ಕಡಿತ ಸಾಧ್ಯತೆ 

    ಅಸಲಿ ಕಾರಣವೇನು?
    ಕೌರ್ ಅವರು ಚನ್ನಿ ಅವರ ಸಹೋದರ ಡಾ.ಮನೋಹರ್ ಸಿಂಗ್ ಅವರ ಪತ್ನಿಯಾಗಿದ್ದಾರೆ. ಅವರು ಇತ್ತೀಚಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಸ್ಸಿ ಪಠಾನಾದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ವಿಫಲರಾಗಿದ್ದರು. ಜೌರಮಜ್ರಾ ಅವರು ಆಸ್ಪತ್ರೆ ಭೇಟಿ ನೀಡಿದ ನಂತರ ವರ್ಗಾವಣೆ ಪಟ್ಟಿ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ಕೌರ್ ಅವರ ಹೆಸರು ಇರುವುದೇ ಅವರು ಕೆಲಸ ತೊರೆಯಲು ಕಾರಣ ಎಂದು ಮೂಲಗಳು ಹೇಳುತ್ತಿವೆ. ಇದನ್ನೂ ಓದಿ: ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ

    ಕೌರ್ ವಿರುದ್ಧ ವಾಗ್ದಾಳಿ
    ಕೌರ್ ಹಿರಿಯ ವೈದ್ಯಕೀಯ ಅಧಿಕಾರಿಯಾಗಿ ನೇಮಕಗೊಂಡಿದ್ದ ಖರಾರ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜೌರಮಜ್ರಾ ಅವರು ಕಾರ್ಯನಿರ್ವಹಿಸದ ಫ್ಯಾನ್ ಮತ್ತು ಆಸ್ಪತ್ರೆಯಲ್ಲಿ ಶುಚಿತ್ವದ ಕೊರತೆಗಾಗಿ ಕೌರ್ ವಿರುದ್ಧ ಸಾರ್ವಜನಿಕವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನೆಲೆ ಕೌರ್ ಅವರು ರಾಜೀನಾಮೆಯನ್ನು ನೀಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:  ಮಿಡ್-ಡೇ ಮೀಲ್ ಯೋಜನೆಯಿಂದ 11 ಕೋಟಿ ರೂ. ವಸೂಲಿ – ಪ್ರಾಂಶುಪಾಲರ ವಿರುದ್ಧ ಆರೋಪ 

    Bhagwant Mann

    ಡಾ.ರಾಜ್ ಬಹದ್ದೂರ್ ಅವರ ಬಳಿ ಪಂಜಾಬ್ ಸಿಎಂ ಭಗವಂತ್ ಮಾನ್ ಕ್ಷಮೆಯಾಚಿಸಿ ಮತ್ತೆ ಅಧಿಕಾರ ಸ್ವೀಕರಿಸಲು ತಿಳಿಸಿದ್ದಾರೆ. ಆದರೆ ಅವರು ನಿರಾಕರಿಸಿದ್ದರು. ಮಾನ್ ಬಹದ್ದೂರ್ ಅವರಲ್ಲಿ ಕ್ಷಮೆಯಾಚಿಸಿದರೂ ಸಹ, ಆಮ್ ಆದ್ಮಿ ಪಕ್ಷದ ವಕ್ತಾರರು ಆರೋಗ್ಯ ಸಚಿವರನ್ನು ಅವರ ‘ಸಾಮಾನ್ಯ ತಪಾಸಣೆ’ಗೆ ಬೆಂಬಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]