ಮಣಿಕಂಠ ರಾಠೋಡ್ ಅವರು ಚಿತ್ತಾಪೂರ ಕ್ಷೇತ್ರದ ಬಿಜೆಪಿಯ (BJP Leader) ಪರಾಜಿತ ಅಭ್ಯರ್ಥಿಯಾಗಿದ್ದಾರೆ. ಇವರು ಚಿತ್ತಾಪೂರದಿಂದ ಕಲಬುರಗಿಗೆ ಬರುತ್ತಿರುವಾಗ ಶಹಾಬಾದ ಬಳಿ ಅಪರಿಚಿತರು ದಾಳಿ ಮಾಡಿದ್ದಾರೆ.
ಮಣಿಕಂಠ ರಾಠೋಡ್ ವಾಹನ ತಡೆದು ಬಿಯರ್ ಬಾಟ್ಲಿಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ಘಟನೆಯಿಂದ ಮಣಿಕಂಠ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಾಯಕನಲ್ಲ, ನಾನ್ ಸೆನ್ಸ್ ಎಂದು ಬಿಜೆಪಿ (BJP) ನಾಯಕ ಮಣಿಕಂಠ ರಾಠೋಡ್ (Manikanta Rathod) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ತಾಪೂರದ ಕೋಲಿ ಸಮಾಜದ ಯುವಕ ದೇವಾನಂದ ಆತ್ಮಹತ್ಯೆ ಪ್ರಕರಣದ ಆರೋಪಿ ಬಂಧನಕ್ಕೆ ಆಗ್ರಹಿಸಿ ತಿಂಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕೊಡುವುದು ಒತ್ತಟ್ಟಿಗಿರಲಿ. ಮನವಿ ಪಡೆಯುವ ಸೌಜನ್ಯವೂ ಸಚಿವರಿಗಿಲ್ಲ. ಆರೋಪಿ ಬಂಧನಕ್ಕೆ ರಸ್ತೆ ಮೇಲೆ ಉರುಳಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಕಡೆ ಗಮನ ಹರಿಸದೇ ಪ್ರಿಯಾಂಕ್ ಖರ್ಗೆ ಹೋಗ್ತಾರೆ. ಹೀಗಾಗಿ ಇವರು ನಾಯಕರಲ್ಲ ನಾನ್ ಸೆನ್ಸ್ ಎನ್ನಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ‘ಮೈ ಲಾರ್ಡ್’ ಹೇಳೋದು ಬಿಟ್ರೆ ನನ್ನ ಸಂಬಳದಲ್ಲಿ ಅರ್ಧ ಕೊಡ್ತೀನಿ: ಸುಪ್ರೀಂ ಜಡ್ಜ್
ಹಿಂದೂ ಪರ ಹೋರಾಟಗಾರರಾದ ಆಂದೋಲಾ ಸ್ವಾಮಿಜಿಗೆ ಬೆದರಿಕೆ ಹಾಕಲಾಗುತ್ತಿದೆ. ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಕಾಂಗ್ರೆಸ್‍ನಲ್ಲಿರುವ (Congress) ಲಿಂಗಾಯತ ನಾಯಕರೇ ಎಲ್ಲಿದ್ದೀರಿ? ಧರ್ಮ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸ್ವಾಮಿಜಿಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಧರ್ಮ ರಕ್ಷಣೆಗಾಗಿ ಆಂದೋಲಾ ಸ್ವಾಮಿಜಿ ಪರವಾಗಿ ನಿಲ್ಲಿ. ಕೇವಲ ಕುರ್ಚಿ ಆಸೆಗಾಗಿ ಸುಮ್ಮನಿದ್ದಿರಾ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹೊಸದು ಬೇಡ, ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ: ವೇದವ್ಯಾಸ ಕಾಮತ್
ಕಲಬುರಗಿ: ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ (IPS) ಆಫೀಸರ್ ಅಣ್ಣಾಮಲೈ, ರಾಜಕೀಯ ಒತ್ತಡದಿಂದ ಮಣಿಕಂಠ ಮೇಲೆ ಕೇಸ್ ಹಾಕುತ್ತಾರೆ ಎಂದು ಹೇಳುತ್ತಾರೆ. ಅವರಿಗೆ ಬುದ್ದಿ ಇದೆಯಾ ಅಥವಾ ಇಲ್ವಾ ಎಂಬುದು ಗೊತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಅಣ್ಣಾಮಲೈ (Annamalai) ವಿರುದ್ಧ ಕಿಡಿ ಕಾರಿದ್ದಾರೆ.
ಖರ್ಗೆ ಹತ್ಯೆ ಕುರಿತು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanta Rathod) ಬೆದರಿಕೆ ಆಡಿಯೋ ಬಗ್ಗೆ ಅಣ್ಣಾಮಲೈ ಹೇಳಿಕೆ ಕುರಿತು ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಪಿಎಸ್ ಓದಿದವರು ಹೇಗೆ ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳಲಿ. ಅಣ್ಣಾಮಲೈ ಡಿಸಿಪಿ ಆಗಿದ್ದಾಗ ರಾಜಕೀಯ ಒತ್ತಡದಿಂದಲೇ ಎಲ್ಲಾ ಕೇಸ್ ಮಾಡಿದ್ದಾರೆ. ಬಿಜೆಪಿಯವರು (BJP) ಖರ್ಗೆ ಕುಟುಂಬದ ಬಗ್ಗೆ ತಮ್ಮ ಮನದಾಳದ ಮಾತು ಏನು ಎಂದು ಹೇಳಲಿ. ಆ ಆಡಿಯೋವನ್ನು ನಾನೇ ಮಾಡಿಸಿದ್ದೇನೆ ಎಂದು ಹೇಳುತ್ತಾರೆ. ಈಗ ಸರ್ಕಾರ ಅವರದ್ದೇ ಇದೆಯಲ್ವಾ? ತನಿಖೆ ಮಾಡಿಸಲಿ ಎಂದು ಹರಿಹಾಯ್ದರು. ಇದನ್ನೂ ಓದಿ: ವರುಣಾ, ಚಾಮರಾಜನಗರದಲ್ಲಿ ಸ್ಪರ್ಧೆ ವಿಧಿ ನಿಯಮ : ಸೋಮಣ್ಣ
ಚಿತ್ತಾಪುರ ಅಭ್ಯರ್ಥಿ ಬಹಳ ಬುದ್ದಿವಂತ ಅಲ್ಲ. ಅವನು ಏನಿದ್ದರೂ ಅಕ್ಕಿಪಕ್ಕಿ ಲೆವೆಲ್ ಅಲ್ಲಿಯೇ ಇರುತ್ತಾನೆ. ಅದಕ್ಕೆ ಚಿತ್ತಾಪುರ ಉಸ್ತುವಾರಿಯ ಸುಪಾರಿಯನ್ನು ರವಿ ಕುಮಾರ್ ಅವರಿಗೆ ಕೊಟ್ಟಿರುವುದು. ಬಿಜೆಪಿಯವರು ಹತಾಶರಾಗಿದ್ದಾರೆ. ರವಿ ಕುಮಾರ್ ಅವರಿಗೆ ಈ ಹಿಂದೆಯೇ ಜೇವರ್ಗಿ ಮತ್ತು ಅಫಜಲಪುರದ ಟಿಕೆಟ್ ಮಾರಾಟ ಆಗಿದ್ಯಾ ಎಂದು ಕೇಳಿದ್ದೆ. ಮೋದಿಯವರು ಫೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೊತ್ತಾಯಿತು. ಮಣಿಕಂಠನಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಿಡುತ್ತಾರೆ ಎಂದು ಕಾಣಿಸುತ್ತದೆ. ಮೋದಿ ಚಿತ್ತಾಪುರಕ್ಕೆ ಬರದೇ ಇರುವುದಕ್ಕೆ ನನಗೆ ಬಹಳ ನಿರಾಸೆಯಾಗಿದೆ ಎಂದರು. ಇದನ್ನೂ ಓದಿ: 2 ದಿನವೂ ಕಮಾಲ್ – ಕರ್ನಾಟಕದಲ್ಲಿ ದಾಖಲೆ ಬರೆದ ಮೋದಿ ರೋಡ್ ಶೋ
ಇದೇ ಮಣಿಕಂಠ ಈ ಹಿಂದೆ ನವೆಂಬರ್‌ನಲ್ಲಿ ನನಗೆ ಶೂಟ್ ಮಾಡುತ್ತೇನೆ ಎಂದು ಕ್ಯಾಮೆರಾ ಮುಂದೆ ಹೇಳಿದ್ದ. ಬಿಜೆಪಿಯವರು ಮಾತನಾಡಿದರೆ ರಾಮರಾಜ್ಯ ಕಟ್ಟುತ್ತೇವೆ ಎಂದು ಹೇಳುತ್ತಾರೆ. ರಾಮರಾಜ್ಯವನ್ನು ರೌಡಿಗಳ ಜೊತೆ ಕಟ್ಟುತ್ತೀರಾ ಹೇಗೆ? ಬಿಜೆಪಿಯವರು ಎಂತಹವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂಬುದನ್ನು ಯೋಚನೆ ಮಾಡಲಿ. ರವಿ ಕುಮಾರ್‌ಗೆ ವಿಶ್ವನಾಥ್ ಪಾಟೀಲ್ ಅವರ ಕಾಲು ಧೂಳಿನಷ್ಟೂ ಅನುಭವ ಇಲ್ಲ. ವಿಶ್ವನಾಥ್ ಪಾಟೀಲ್ ಅವರನ್ನು ಖರೀದಿ ಮಾಡುತ್ತೇವೆ ಎಂದು ಚಿತ್ತಾಪುರದಲ್ಲಿ ಬಂದು ಹೇಳಲಿ. ವಿಶ್ವನಾಥ್ ಪಾಟೀಲ್ ಅವರು ಖರೀದಿ ಆಗುತ್ತಾರೆ ಎಂದು ತಿಳಿದುಕೊಂಡರೆ ಅವರಷ್ಟು ಮೂರ್ಖರು ಯಾರೂ ಇಲ್ಲ. ರವಿಕುಮಾರ್ ಗ್ರಾಮ ಪಂಚಾಯತ್ ಅಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮನೆ ಮೇಲೆ ಐಟಿ ದಾಳಿ
ಬಿಜೆಪಿಯವರು ಇಡೀ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ ತಂದು ವೈಯಕ್ತಿಕವಾಗಿ ಜಗಳ ತಂದಿಡಲು ಮುಂದಾಗಿದ್ದಾರೆ. ಬಿಜೆಪಿಯವರಿಗೆ ಕರ್ನಾಟಕ ಕೈತಪ್ಪಿದರೆ ಮುಜುಗರ ಆಗುತ್ತದೆ ಎಂದು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಲಬುರಗಿಯಲ್ಲಿ ಶನಿವಾರ ಐಟಿ ಅಸ್ತ್ರವನ್ನು ಬಳಸಿಕೊಂಡಿದ್ದಾರೆ. ಕಾಂಗ್ರೆಸ್ (Congress) ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಕಡಿವಾಣ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ವಾಹೆದ್ ಅಲಿ, ಮೊಹ್ಮದ್ ಜಹಾಗೀರ್‌ದಾರ್, ಅರವಿಂದ್ ಚೌಹಾಣ್ ಮನೆ, ಹೋಟೆಲ್ ಹಾಗೂ ಸ್ಟೋನ್ ಕ್ರಷರ್ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಅರವಿಂದ್ ಅವರ ಮನೆಯಲ್ಲಿ ಅವರ ತಾಯಿ ಒಬ್ಬರೇ ಇದ್ದಾಗ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳಿಂದ ಶಾಕ್ – ಕೆಎಂ ಉದಯ್ ಬೆಂಬಲಿಗರ ಮನೆಯಲ್ಲಿ 2 ಕೋಟಿ ಹಣ ಪತ್ತೆ
ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಯ ಪಾಲಿಗೆ ಕಳ್ಳರು ಸುಳ್ಳರಾಗಿದ್ದವರು ಬಿಜೆಪಿಗೆ ಸೇರಿದ ಮೇಲೆ ದೇಶಪ್ರೇಮಿಗಳು ಹಾಗೂ ರಾಷ್ಟ್ರಭಕ್ತರಾಗಿದ್ದಾರೆ. ಅರವಿಂದ್ ಚೌಹಾಣ್ ಬಿಜೆಪಿಯಿಂದ ಬಂದು ಎರಡು ವಾರ ಆಯಿತು. ಎರಡೇ ವಾರದಲ್ಲಿ ಅವರು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರಾ? ಅವರು ಎರಡೇ ವಾರದಲ್ಲಿ ಕೆಟ್ಟವರಾಗಿ ಬಿಟ್ಟರಾ ಹೇಗೆ? ಸದ್ಯ ಕಾಂಗ್ರೆಸ್‌ನಲ್ಲಿ ಅವರು ಸಕ್ರಿಯವಾಗಿರುವುದಕ್ಕೆ ಐಟಿ ರೇಡ್ ಮೂಲಕ ತೊಂದರೆ ಕೊಡುವ ಸಂದೇಶ ಸಾರಿದ್ದಾರೆ. ಇದರಿಂದ ನಾವು ಯಾರೂ ಹೆದರುವುದಿಲ್ಲ ಎಂದು ಹೆಳಿದರು. ಇದನ್ನೂ ಓದಿ: ಅಜ್ಜಿ ಗೆದ್ದಿದ್ದ ತೆಲಂಗಾಣದ ಮೇದಕ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧೆ?
ನೀವು ಪ್ರಾಮಾಣಿಕರಾಗಿದ್ದರೆ ಕೆಕೆಆರ್‌ಡಿಬಿ ಅಕ್ರಮ ಆಗಿರುವುದರ ಬಗ್ಗೆ ಸಿಎಜಿ ವರದಿ ಕೊಟ್ಟಿದೆ. ಅಕ್ರಮವಾಗಿರುವ ಬಗ್ಗೆ ವರದಿ ಕೊಟ್ಟರೂ ಅವರ ಮನೆ ಮೇಲೆ ಯಾಕೆ ದಾಳಿ ನಡೆಸಿಲ್ಲ? ಚಿಂಚೊಳಿಯ ಒಂದೇ ರೋಡ್ ಐವತ್ತು ಬಾರಿ ಟೆಂಡರ್ ಆಗಿದೆ. ಅವರ ಮನೆ ಮೇಲೆ ಯಾಕೆ ದಾಳಿ ಮಾಡಿಲ್ಲ? ಡಿಸಿಸಿ ಬ್ಯಾಂಕ್‌ನಲ್ಲಿ ರೈತರು ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು. ಅದು ಸರ್ಕಾರಕ್ಕೆ ಕೇಳಿಸಿಲ್ವಾ? ಜನ ಬಿಜೆಪಿ ಅಭ್ಯರ್ಥಿ ವಿರುದ್ಧ ಆಕ್ರೋಶ ಹೊರಹಾಕಿದರೆ ದಾಳಿ ಮಾತ್ರ ಕಾಂಗ್ರೆಸ್ ಅವರ ಮೇಲೆ ಆಗುತ್ತದೆ. ಬಿಜೆಪಿಯವರು ಸೋಲಿನ ಹತಾಶೆಯಿಂದ ಅವರ ನಾಯಕರಾದ ಮೋದಿ ಮತ್ತು ಅಮಿತ್ ಶಾ ಕಾಲಿಗೆ ಬಿದ್ದು ಹೇಗಾದರು ಮಾಡಿ ಗೆಲ್ಲಿಸಿ ಎಂದು ಕೇಳಿದ್ದಾರೆ. ಹಾಗಾಗಿ ಅವರು ಕೇಂದ್ರದ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಈ ಬಾರಿ ಕಲಬುರಗಿಯಲ್ಲಿ ನಮ್ಮ ಕಾಂಗ್ರೆಸ್ ಬಾವುಟ ಹಾರಿಸೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ – ಬಿಜೆಪಿ ಲೆಕ್ಕಾಚಾರ ಏನು?
ಬೀದರ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ಕಾಂಗ್ರೆಸ್ (Congress) ಪಕ್ಷ ಸೆರ್ಪಡೆಯಾಗಲಿ ಎನ್ನುವ ಮೂಲಕ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwara Khandre) ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ.
ಭಾಲ್ಕಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಒಂದು ಟಿಕೆಟ್‌ಗಾಗಿ ಮನೆಯ ಬಾಗಿಲು ಬಾಗಿಲು ಓಡಾಡುತ್ತಿದ್ದಾರೆ. ಲಕ್ಷ್ಮಣ ಸವದಿ (Laxman Savadi) ಟಿಕೆಟ್ ಸಿಗದೇ ಕಣ್ಣೀರು ಹಾಕಿ ಕೊನೆಗೂ ಕಾಂಗ್ರೆಸ್ ಸೆರ್ಪೆಡೆಯಾಗಿದ್ದಾರೆ ಎಂದರು. ಇದನ್ನೂ ಓದಿ: ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರು? – ಕೈ ಲೆಕ್ಕಾಚಾರ ಏನು?
ಹಿರಿಯರನ್ನು ಬಿಜೆಪಿ (BJP) ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ಜನ ಗಮನಿಸುತ್ತಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಇದೇ ರೀತಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಬರಲಿ. ಅಲ್ಲದೇ ಅವರ ಜೊತೆಗೆ ಇನ್ನೂ ಬಹಳಷ್ಟು ಜನರು ಕಾಂಗ್ರೆಸ್‌ಗೆ ಬರುತ್ತಾರೆ ಕಾದು ನೋಡಿ ಎಂದು ಹೊಸ ಬಾಂಬ್ ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್ – ಸಿದ್ದರಾಮಯ್ಯ ಕೋಲಾರದಿಂದ ಔಟ್, ಉಮಾಶ್ರೀಗೂ ಕೊಕ್
ಚಿತ್ತಾಪುರ ಕ್ಷೇತ್ರದಿಂದ ಮಣಿಕಂಠ ರಾಠೋಡ್‌ಗೆ (Manikanta Rathod) ಬಿಜೆಪಿ ಟಿಕೆಟ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರಿಂದ ಬಿಜೆಪಿಯ ಸಂಸ್ಕೃತಿ ಗೊತ್ತಾಗುತ್ತದೆ. ಯಾಕೆಂದರೆ ಪೊಲೀಸರು ಹಾಗೂ ಕಾನೂನು ಅವರನ್ನು ಗೂಂಡಾ ಪಟ್ಟಿಯಿಂದ ತೆಗೆಯಬಾರದು ಎಂದಿದ್ದರು. ಆದರೂ ರಾಜಕೀಯ ದುರುದ್ದೇಶದಿಂದ ಅವರ ಹೆಸರನ್ನು ಗೂಂಡಾ ಪಟ್ಟಿಯಿಂದ ತೆಗೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವರುಣಾದಲ್ಲಿ ಅಪ್ಪ-ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ: ಪ್ರತಾಪ್ ಸಿಂಹ
ಗೂಂಡಾಗಳಿಗೆ ಟಿಕೆಟ್ ನೀಡಿದ ಬಿಜೆಪಿಗೆ ಯಾವ ನೈತಿಕತೆ ಇದೆ? ಬಿಜೆಪಿಯವರು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರಾ ಎಂದು ಪ್ರಶ್ನೆ ಮಾಡಿದರು. ಕೇಂದ್ರ ಸಚಿವರಿಗೆ ಭಾಲ್ಕಿ ಮೇಲೆ ಪ್ರೀತಿ ಇದ್ದರೆ ಇಲ್ಲೇ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಕೇಂದ್ರ ಸಚಿವರು ಗಾಳಿಯಲ್ಲಿ ಬಂದು ಗಾಳಿಯಲ್ಲೇ ಹೋಗುತ್ತಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್
ಕಲಬುರಗಿ: ಒಂದೆಡೆ ಬುದ್ದ, ಬಸವ ಅಂಬೇಡ್ಕರ್ ತತ್ವದ ಬಗ್ಗೆ ಮಾತಾಡುವ ಕಾಂಗ್ರೆಸ್ (Congress) ಮುಖಂಡ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಬೇಡ ಜಂಗಮರಿಗೆ ಸಿಗಬೇಕಾದ ನ್ಯಾಯಯುತ ಎಸ್ಸಿ ಪ್ರಮಾಣ ಪತ್ರಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬಿಜೆಪಿ (BJP) ಚಿತ್ತಾಪೂರ (Chittapur) ಟಿಕೆಟ್ ಆಕಾಂಕ್ಷಿ ಮಣಿಕಂಠ ರಾಠೋಡ (Manikanta Rathod) ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿದ ಅವರು, 1995ರಲ್ಲಿ ಅಂದಿನ ಮುಖ್ಯಮಂತ್ರಿ ದೇವೇಗೌಡರಿಗೆ, ಮಲ್ಲಿಕಾರ್ಜುನ ಖರ್ಗೆ ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡದಂತೆ ಪತ್ರ ಬರೆದಿದ್ದರು ಎಂದು ಈ ಹಿಂದೆ ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ, ಪತಿಯಿಂದ ಪತ್ನಿ ಕೊಲೆ: ಆರೋಪಿ ಬಂಧನ
ಬೇಡ ಜಂಗಮ ಮನೆ ಮನೆಗೆ ಬಿಕ್ಷೆ ಬೇಡಿ ಬದುಕುತ್ತಿರುವ ಸಮುದಾಯ. ಇಂತಹ ಸಮುದಾಯಕ್ಕೆ ಸಿಗಬೇಕಾದ ಹಕ್ಕು ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಲ್ಲ ಎಂದರು.
ಆರ್ಥಿಕವಾಗಿ ಹಿಂದುಳಿದ ಬೇಡ ಜಂಗಮರಿಗೆ ಸರ್ಕಾರ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬೇಕು. ಅಭಿವೃದ್ಧಿ ಹೊಂದಿದವರೇ ಇನ್ನೆಷ್ಟು ಅಭಿವೃದ್ಧಿ ಹೊಂದಬೇಕು. ಹಿಂದುಳಿದವರಿಗೂ ಅವಕಾಶ ಬಿಟ್ಟುಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.
ನಾನು ಮೀಸಲಾತಿ ಬಿಟ್ಟುಕೊಡಲು ಸಿದ್ದನಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮೀಸಲಾತಿ ಬಿಟ್ಟುಕೊಡಲು ಸಿದ್ದರಿದ್ದಾರಾ ಎಂದು ರಾಠೋಡ್ ಸವಾಲು ಹಾಕಿದರು. ನಾನು ಶಾಸಕನಾದರೆ ಬೇಡ ಜಂಗಮರ ಪರ ಹೋರಾಟ ನಡೆಸುತ್ತೇನೆ ಎಂದು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್
LIVE TV
[brid partner=56869869 player=32851 video=960834 autoplay=true]
ಕಲಬುರಗಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗ್ತಿದೆ. ಇದೇ ವೇಳೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಬಿಜೆಪಿ ಮುಖಂಡ ಕೊಲೆ ಬೆದರಿಕೆಯ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಹತ್ಯೆಗೆ ಸಂಚು ಆರೋಪ ಕೇಳಿ ಬಂದಿದ್ದು, ಚಿತ್ತಾಪುರ ಬಿಜೆಪಿ (BJP) ಮುಖಂಡ ಮಣಿಕಂಠ ರಾಠೋಡ್ (Manikanta Rathod) ಆಡಿಯೋ ರಿಲೀಸ್ ಮಾಡಿದ್ದಾರೆ. ಜಮೀನು ವಿವಾದದಲ್ಲಿ ನನ್ನನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ ಎಂದು ರಾಠೋಡ್ ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಚಿರತೆ ಭೀತಿ; ಒಂಟಿಯಾಗಿ ಹೊರಗಡೆ ಓಡಾಡಬೇಡಿ – ವನ್ಯಜೀವಿ ತಜ್ಞರ ಎಚ್ಚರಿಕೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಕಂಠ ರಾಠೋಡ್, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟರು ನನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ. ಅದಕ್ಕಾಗಿ ದೇಶಿ ನಿರ್ಮಿತ ಪಿಸ್ತೂಲ್ ನಿಂದ ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ. ಕೊಲೆ ಮಾಡೋದಕ್ಕೆ 2 ದೇಶಿ ನಿರ್ಮಿತ ಪಿಸ್ತೂಲ್, 30 ಬುಲೆಟ್‌ಗಳನ್ನು ಖರೀದಿಸಿದ್ದಾರೆ. ಆದರೆ ದೇಶಿ ನಿರ್ಮಿತ ಪಿಸ್ತೂಲ್ ಮಾರಾಟ ಮಾಡಿದ್ದ ಆರೋಪಿಯನ್ನ ಬಂಧಿಸಿದ್ದ ಪೊಲೀಸರು, ಗನ್ ಕೇಸ್‌ನಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಹೆಸರು ತೆಗೆಯೋದಕ್ಕೆ ಡಿವೈಎಸ್‌ಪಿ 10 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನನ್ನು ಹತ್ಯೆ ಮಾಡೋದಕ್ಕೆ ಗುಪ್ತಚರ ಇಲಾಖೆಗೂ ಮಾಹಿತಿ ನೀಡಿ, ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದ ಅವರು, ಕೊಲೆ ಬೆದರಿಕೆ ಆಡಿಯೋ ರಿಲೀಸ್ ಮಾಡಿದ್ದಾರೆ. ಜೊತೆಗೆ ಕಲಬುರಗಿ ಪೊಲೀಸ್ ಕಮಿಷನರ್ ಎನ್.ರವಿಕುಮಾರ್ ಪತ್ನಿ ದಾಂಡಿಯಾ ನೈಟ್ ಹೆಸರಿನಲ್ಲಿ 3 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಎಲ್ಲ ಹಿಂದೂಗಳನ್ನ ಕೊಲ್ಲಬಹುದಿತ್ತು – ನಿವೃತ್ತ ಜಡ್ಜ್ ವಸಂತ ಮುಳಸಾವಳಗಿ
ಕಲಬುರಗಿ ಪೊಲೀಸ್ ಆಯುಕ್ತರ ಪತ್ನಿ ರೂಪಾಲಿ ನಾಯ್ಕ ಅವರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ದಾಂಡಿಯಾ ನೈಟ್ ಮಾಡುವುದಕ್ಕೆ ಹಣ ನೀಡಿ, ಇಲ್ಲವೇ ಗಡಿಪಾರು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಕಮಿಷನರ್ ಪತ್ನಿ ಮಾತಾಡಿರುವ ಆಡಿಯೋ ಸಹ ಬಿಡುಗಡೆ ಮಾಡಿದ್ದಾರೆ.
ಈ ಆರೋಪ ತಳ್ಳಿ ಹಾಕಿರುವ ಪೊಲೀಸ್ ಆಯುಕ್ತ ಎನ್.ರವಿಕುಮಾರ್ ದಾಂಡಿಯಾ ಕಾರ್ಯಕ್ರಮ ಮಾಡಿದ್ದು ನಿಜ ಆದರೆ ಹಣ ನೀಡಲೇಬೇಕು ಅಂತಾ ಡಿಮ್ಯಾಂಡ್ ಮಾಡಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಲಬುರಗಿ: ಗುರುಮಠಕಲ್ ಕ್ಷೇತ್ರದಲ್ಲಿ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಶಾಸಕರಾದಾಗಿನಿಂದಲೂ ಖರ್ಗೆಯವರ ಬೆಂಬಲಿಗರು ನನ್ನ ಮೇಲೆ ನಿರಂತರವಾಗಿ ಪ್ರಕರಣ ದಾಖಲಿಸಿಕೊಂಡು ಬಂದಿದ್ದರು. ಈಗಲೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿಂಬಾಲಕರನ್ನು ಬಿಟ್ಟು ಹೆದರಿಸುತ್ತಿದ್ದಾರೆ ಎಂದು ಸಮಾಜ ಸೇವಕ ಮಣಿಕಂಠ ರಾಠೋಡ್ ಆರೋಪಿಸಿದ್ದಾರೆ.
ಶಾಸಕರ ಕೈಗೊಂಬೆಯಾಗಿ ಪೊಲೀಸರು ಕೆಲಸ ಮಾಡುತ್ತಿದ್ದು, ಅವರನ್ನು ತೆಗೆದು ಹಾಕಲು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಂಡಿದ್ದೆವು. ಆದರೆ ಪುನಃ ಪ್ರಿಯಾಂಕ್ ಖರ್ಗೆಯವರನ್ನು ಕರೆದುಕೊಂಡು ಬಂದಿದ್ದಾರೆ. ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ, ಉದ್ಯೋಗ ಸೃಷ್ಟಿಸಿಲ್ಲ ಎಂದು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಇದನ್ನೂ ಓದಿ: ಊರಿಗೆ ವಾಪಾಸಾಗಲು ಅನುಮತಿಗಾಗಿ ಕಾಯುತ್ತಿದ್ದೇವೆ – ಯಾತ್ರೆಯಿಂದಲೇ ಪಬ್ಲಿಕ್ ಟಿವಿಗೆ ಲೈವ್ ಕೊಟ್ಟ ಕನ್ನಡಿಗರು
ತಾವು ಶಾಸಕರಾಗಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೇ ಅದರ ವಿರುದ್ಧ ಧ್ವನಿ ಎತ್ತದಂತೆ ಮಾಡುತ್ತಿದ್ದಾರೆ. ಗುರುಮಠಕಲ್‌ನಲ್ಲಿ ರೈಸ್ ಮಿಲ್ ಆರಂಭಿಸಿ, ಉದ್ಯೋಗ ನೀಡಿದ್ದು ನಮ್ಮ ಕುಟುಂಬ. ನಾವು ಸಿಬಿಎಸ್‌ಸಿ ಶಾಲೆ ಆರಂಭಿಸಿದ್ದೆವು. ಆದರೆ ಖರ್ಗೆ ಅವರು 35 ವರ್ಷ ಶಾಸಕರಾಗಿದ್ದರೂ ಏನು ಮಾಡಲಿಲ್ಲ. ಅಕ್ಕಿ ಕಳ್ಳತನದ ಕುರಿತು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ. ನಾನು ಪಡಿತರ ವಿತರಕರಲ್ಲ, ಸಾಗಣೆದಾರರಲ್ಲ ಅದ್ಹೇಗೆ ಕಳ್ಳತನ ಮಾಡಲು ಸಾಧ್ಯ? ಸ್ವಂತಃ ಬಲದ ಮೇಲೆ ಉದ್ಯಮ ಬೆಳೆಸಿಕೊಂಡು ಬಂದಿದ್ದೇವೆ ಎಂದರು. ಇದನ್ನೂ ಓದಿ: ಬೆಳಗಾವಿಗೆ ಮೂರು ದಿನ ಯಲ್ಲೋ ಅಲರ್ಟ್ – ತಹಶೀಲ್ದಾರ್ ಅಕೌಂಟ್‍ನಲ್ಲಿ ಹಣ ಇದೆ ಯಾವುದೇ ಸಮಸ್ಯೆ ಇಲ್ಲ: ಡಿ.ಸಿ ನಿತೇಶ್ ಪಾಟೀಲ್
Live Tv
[brid partner=56869869 player=32851 video=960834 autoplay=true]