Tag: manikant rathod

  • ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಸರಿಯಾದ ಕ್ರಮ ಜರುಗಿಸದಕ್ಕೆ ಸಿಎಂ, ಪರಂ ಅಸಮಾಧಾನ

    ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಸರಿಯಾದ ಕ್ರಮ ಜರುಗಿಸದಕ್ಕೆ ಸಿಎಂ, ಪರಂ ಅಸಮಾಧಾನ

    – ಪೊಲೀಸರಿಗೆ ಹೊಸ ಮಾದರಿಯ ಟೋಪಿಗೆ ಸಿಎಂ ಸಮ್ಮತಿ

    ಬೆಂಗಳೂರು: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಮಣಿಕಂಡ ರಾಥೋಡ್ ವಿರುದ್ಧ ಸರಿಯಾಗಿ ಒಂದು ಕೇಸ್ ಹಾಕೋದಕ್ಕೆ ಆಗ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇಂದು ನೃಪತುಂಗ ರಸ್ತೆಯಲ್ಲಿರುವ ಡಿ.ಜಿ.ಐಜಿಪಿ ಕಚೇರಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕಲಬುರಗಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮಾತನಾಡಿ, ಮಣಿಕಂಠ ರಾಥೋಡ್ ಬಹಿರಂಗವಾಗಿ ಅವರನ್ನು ಕೊಲೆ ಮಾಡುತ್ತೇನೆ, ಇವರನ್ನು ಕೊಲೆ ಮಾಡುತ್ತೇನೆ ಎಂದು ಹೇಳಿ ವಿಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದ. ಆತನ ವಿರುದ್ಧ ಕೇಸ್ ಹಾಕೋದಕ್ಕೆ ನಿಮಗೆ ಸಾಧ್ಯವಾಗ್ತಿಲ್ಲ ಎಂದಿದ್ದಾರೆ.ಇದನ್ನೂ ಓದಿ: ಹೊಸ ಆದಾಯ ತೆರಿಗೆ ನಿಯಮ ಜಾರಿ – ಸುಳ್ಳು ಮಾಹಿತಿ ನೀಡಿದ್ರೆ 200% ದಂಡ, ಜೈಲು

    ಅಂಥವನ ಮೇಲೆ ನೀವು ಕಠಿಣ ಕ್ರಮಕೈಗೊಳ್ಳದೇ ಹೋದರೆ, ಬೇರೆಯವರಿಗೆ ಅವನು ಪ್ರೇರಣೆಯಾಗುತ್ತಾನೆ. ಅವನ ರೀತಿ ಮತ್ತಷ್ಟು ಮಂದಿ ಹುಟ್ಟಿಕೊಳ್ಳುತ್ತಾರೆ, ಹಾಗಾಗಿ ಮತ್ತೆ ಹಾಗೇನಾದರೂ ಮಾಡಿದ್ದು ಕಂಡುಬಂದರೆ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಪೊಲೀಸರಿಗೆ ಹೊಸ ಮಾದರಿಯ ಟೋಪಿಗೆ ಸಮ್ಮತಿ ಸೂಚಿಸಿದ್ದಾರೆ. ಐದಾರು ರಾಜ್ಯದ ಟೋಪಿಗಳನ್ನು ಪರಿಶೀಲನೆ ಮಾಡಿದ ಸಿಎಂ ತೆಲಂಗಾಣ ರಾಜ್ಯದ ಟೋಪಿಯನ್ನು ಆಯ್ಕೆ ಮಾಡಿದ್ದಾರೆ. ತೆಲಂಗಾಣ ರಾಜ್ಯದ ಟೋಪಿಯನ್ನ ಹೆಡ್‌ ಕಾನ್ಸಟೇಬಲ್‌ಗೆ ಹಾಕಿಸಿ, ಪರಿಶೀಲನೆ ಮಾಡಿ ಅಂತಿಮಗೊಳಿಸಿದ್ದಾರೆ.

    ಕಳೆದ ಅಧಿವೇಶನದಲ್ಲಿ ಶಾಸಕ ಸಿ.ಎನ್ ಮಂಜೇಗೌಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಒಂದೇ ರೀತಿಯ ಟೋಪಿ ನೀಡಬೇಕೆಂದು ಪ್ರಶ್ನೆ ಮಾಡಿದ್ದರು. ಇದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಡಾ.ಪರಮೇಶ್ವರ್ ಅಂದಿನ ಡಿಜಿಐಜಿಪಿ ಅಲೋಕ್ ಮೋಹನ್‌ಗೆ ಸೂಚಿಸಿದ್ದರು. ಕೆಎಸ್‌ಆರ್‌ಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಟೋಪಿ ಬದಲಾವಣೆ ಕುರಿತು ಸಿವಿಲ್, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್, ಹಾಗೂ ಐಎಸ್‌ಡಿ ಸೇರಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳ ಹೆಡ್‌ಕಾನ್ಸಟೇಬಲ್ ಹಾಗೂ ಕಾನ್ಸಟೇಬಲ್‌ಗಳಿಂದ ಸಮಿತಿ ಅಭಿಪ್ರಾಯ ಸಂಗ್ರಹಿಸಿತ್ತು, ಅಲ್ಲದೆ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಸೇರಿ ಹೊರ ರಾಜ್ಯದ ಪೊಲೀಸರ ಟೋಪಿ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು.

    ಈ ಎಲ್ಲಾ ಅಭಿಪ್ರಾಯ ಬಳಿಕ ಮೂರು ಬಾರಿ ಸಭೆ ಸೇರಿ, ಸಮಾಲೋಚನೆ ನಡೆಸಿ ಅಂತಿಮವಾಗಿ ತೆಲಂಗಾಣ ರಾಜ್ಯದ ಟೋಪಿಯನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.ಇದನ್ನೂ ಓದಿ: ಸರ್ಕಾರಿ ಕಚೇರಿ ಆವರಣದಲ್ಲೇ 3 ಶ್ರೀಗಂಧ ಮರಗಳ ಕಳ್ಳತನ – ಅರಣ್ಯ ಇಲಾಖೆ ಕಚೇರಿ ಕೂಗಳತೆ ದೂರದಲ್ಲೇ ಕೃತ್ಯ!

  • ಬಿಜೆಪಿ ಮುಖಂಡನ ಸಹೋದರನ ರೈಸ್‍ಮಿಲ್‍ನಿಂದ 700 ಕ್ವಿಂಟಾಲ್ ಅಕ್ಕಿ ವಶ

    ಬಿಜೆಪಿ ಮುಖಂಡನ ಸಹೋದರನ ರೈಸ್‍ಮಿಲ್‍ನಿಂದ 700 ಕ್ವಿಂಟಾಲ್ ಅಕ್ಕಿ ವಶ

    ಯಾದಗಿರಿ: ಜಿಲ್ಲೆಯ ಶಹಾಪುರದಲ್ಲಿನ ಪಡಿತರ ಅಕ್ಕಿ ಕಳ್ಳತನ (Ration Theft) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ (Manikanta Rathod) ಸಹೋದರನ ರೈಸ್ ಮಿಲ್‍ನಿಂದ ಬರೋಬ್ಬರಿ 700 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಗುರುಮಠಕಲ್ ನಲ್ಲಿರುವ ಲಕ್ಷ್ಮೀವೆಂಕಟೇಶ್ವರ ರೈಸ್ ಮಿಲ್ ನಿಂದ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದು ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್‍ಗೆ (Raju Rathod) ಸೇರಿದ್ದಾಗಿದೆ. ಸುರಪುರ ಡಿವೈಎಸ್‌ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಪಾಲಿಶ್ ಮಾಡಿದ್ದ 630 ಕ್ವಿಂಟಾಲ್ ಪಡಿತರ ಅಕ್ಕಿ ಸೇರಿ ಒಟ್ಟು 700 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. 630 ಕ್ವಿಂಟಾಲ್ ಪಾಲಿಶ್ ಮಾಡಿರೋ ಪಡಿತರ ಅಕ್ಕಿಯ ಜೊತೆಗೆ 70 ಕ್ವಿಂಟಾಲ್ ಅಕ್ಕಿ ಪಾಲಿಶ್ ಮಾಡಲು ರೆಡಿ ಮಾಡಿಟ್ಟುಕೊಂಡಿದ್ದರು ಎನ್ನಲಾಗಿದೆ.

    ಸದ್ಯ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳು ರಾಜು ರಾಠೋಡ್ ಗೆ ಅಕ್ಕಿ ಮಾರಾಟ ಮಾಡಿರೋದಾಗಿ ಹೇಳಿಕೆ ನೀಡಿದ್ದಾರೆ. ಕಳೆದ 15 ದಿನಗಳಿಂದ ರಾಜು ರಾಠೋಡ್ ತಲೆ ಮರಿಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಅಸ್ಥಿಪಂಜರ ಪತ್ತೆ ಕೇಸ್‌: ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆಗೆ ಶರಣಾಗಿತ್ತಾ ಇಡೀ ಕುಟುಂಬ? – ಪೊಲೀಸರ ತನಿಖೆ ಚುರುಕು

  • ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ

    ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಯವರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.

    ಖರ್ಗೆ ಕುಟುಂಬವನ್ನ ಸಾಫ್ (ಕೊಲೆ) ಮಾಡ್ತೇನೆ ಎಂಬ ಬಿಜೆಪಿ ಅಭ್ಯರ್ಥಿ (BJP Candidate) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಖರ್ಗೆ ಸಾಹೇಬರು ಏನ್ ತಪ್ಪು ಮಾಡಿದ್ದಾರಮ್ಮ ಸತ್ತುಹೊಡಿಯೋಕೆ. ನಾನೇನು ತಪ್ಪು ಮಾಡಿದ್ದೀನಾ ಅಥವಾ ನಮ್ಮ ಮಕ್ಕಳು ತಪ್ಪು ಮಾಡಿದ್ದಾರಾ..?, 50 ವರ್ಷ ರಾಜಕೀಯ ಜೀವನದಲ್ಲಿ ಜನರ ಒಳಿತಿಗೆ ದುಡಿದಿದ್ದಾರೆ. ಖರ್ಗೆ ಸಾಹೇಬ್ರು ಜನರ ಒಳಿತಿಗೆ ರಾಜಕೀಯದಲ್ಲಿ ದುಡಿದಿದ್ದಾರೆ. ಆದ್ರೆ ಖರ್ಗೆ ಫ್ಯಾಮಿಲಿ ಸಾಫ್ ಮಾಡ್ತೇನೆ ಅಂತ ಹೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಏನಿದು ಪ್ರಕರಣ..?: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanth Rathod) ಮತ್ತು ಬಿಜೆಪಿ ಕಾರ್ಯಕರ್ತ ರವಿ ಮಧ್ಯೆ ನಡೆದ ಸಂಭಾಷಣೆಯ ಆಡಿಯೋವನ್ನು ಸುರ್ಜೇವಾಲಾ (Randeep Surjewala) ಬಿಡುಗಡೆ ಮಾಡಿದ್ದಾರೆ.

    ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಖರ್ಗೆ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂಬ ಸಂಭಾಷಣೆಯಿದೆ. ಬಿಜೆಪಿಯವರು ಖರ್ಗೆಯವರ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಕಿಡಿಕಾರಿದರು.  ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

    ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿಯವರು ಖರ್ಗೆ ಹತ್ಯೆಗೆ ಉತ್ತೇಜನ ನೀಡುತ್ತಿದ್ದಾರೆ. ಒಬ್ಬ ದಲಿತ ವ್ಯಕ್ತಿ ಈ ಮಟ್ಟಕ್ಕೆ ಬೆಳೆದಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಆಡಿಯೋ ಬಗ್ಗೆ ಪ್ರಧಾನಿ ಮೋದಿ ಆಗಲಿ, ಸಿಎಂ ಬೊಮ್ಮಾಯಿ ಚುನಾವಣಾ ಆಯೋಗವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.