Tag: Manickam Tagore

  • ತುರ್ತು ಪರಿಸ್ಥಿತಿ ಬಗ್ಗೆ ಶಶಿ ತರೂರ್ ಲೇಖನ – ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಕಿಡಿ

    ತುರ್ತು ಪರಿಸ್ಥಿತಿ ಬಗ್ಗೆ ಶಶಿ ತರೂರ್ ಲೇಖನ – ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಕಿಡಿ

    ನವದೆಹಲಿ: ಕಾಂಗ್ರೆಸ್ ಹಾಗೂ ಸಂಸದ ಶಶಿ ತರೂರ್ (Shashi Throor) ಮಧ್ಯೆ ಫೈಟ್ ಮುಂದುವರಿದಿದೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಕ್ಕೆ ಇಟ್ಟಿರೋ ಸಂಸದ ಶಶಿ ತರೂರ್, ಪಕ್ಷದಲ್ಲೇ ಇದ್ದುಕೊಂಡು ಡ್ಯಾಮೇಜ್ ಮಾಡಿದ್ದಾರೆ. ಮಲಯಾಳಂ ಪತ್ರಿಕೆಯೊಂದಕ್ಕೆ ಬರೆದಿರೋ ಲೇಖನದಲ್ಲಿ ತುರ್ತು ಪರಿಸ್ಥಿತಿ ಪ್ರಸ್ತಾಪಿಸಿ, ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತುರ್ತು ಪರಿಸ್ಥಿತಿ ಹೇರಿಕೆ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ವಿಧಾನ. ಇಂದಿರಾ ಮಗ ಸಂಜಯ್‌ಗಾಂಧಿ ಸಂತಾನ ಹರಣ ಹೆಸರಿನಲ್ಲಿ ನಡೆಸಿದ್ದ ದೌರ್ಜನ್ಯವನ್ನೂ ಉಲ್ಲೇಖಿಸಿ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಮಾಡಿದ್ದಾರೆ. ಬಡ ಗ್ರಾಮೀಣ ಭಾಗದಲ್ಲಿ ಹಿಂಸೆ, ಬಲವಂತದಿಂದ ಸಂತಾನಹರಣ ಮಾಡಿಸಲಾಗುತ್ತಿತ್ತು. ಕೊಳಗೇರಿಗಳನ್ನು ಕರುಣೆಯೇ ಇಲ್ಲದೆ ನೆಲಸಮಗೊಳಿಸಲಾಯಿತು. ಸಾವಿರಾರು ಜನರು ನಿರ್ವಸತಿಗರಾದರು ಎಂದು ಶಶಿತರೂರ್ ಬರೆದಿದ್ದಾರೆ. 1975ರಲ್ಲಿದ್ದ ಭಾರತವೇ ಬೇರೆ, ಈಗ ಇರುವ ಭಾರತವೇ ಬೇರೆ ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಶಶಿ ತರೂರ್ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ನಮ್ಮಿಬ್ಬರನ್ನು ದೂರ ಮಾಡ್ತಾರೆ ಎಂಬ ಭಯದಲ್ಲಿ ಕಾಲುವೆಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

    ಇದು ಮತ್ತೆ ಕಾಂಗ್ರೆಸ್ ಹೈಕಮಾಂಡ್ ಕಣ್ಣು ಕೆಂಪಗಾಗಿಸಿದೆ. ಈ ಬಗ್ಗೆ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಕಿಡಿಕಾರಿದ್ದು, ಸ್ವಾತಂತ್ರ‍್ಯವು ಎಲ್ಲರಿಗೂ ಮುಕ್ತವಲ್ಲ. ವಿಶೇಷವಾಗಿ ಪರಭಕ್ಷಕಗಳು ದೇಶಭಕ್ತಿಯನ್ನು ಗರಿಗಳಾಗಿ ಧರಿಸಿದಾಗ ಸ್ವಾತಂತ್ರ‍್ಯ ಮುಕ್ತವಲ್ಲ ಅಂದಿದ್ದಾರೆ. ಇದನ್ನೂ ಓದಿ: ಕೊಯಮತ್ತೂರು ಬಾಂಬ್ ಬ್ಲಾಸ್ಟ್‌ನ ಪ್ರಮುಖ ಆರೋಪಿ ವಿಜಯಪುರದಲ್ಲಿ ಅರೆಸ್ಟ್

  • ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

    ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

    ಚೆನ್ನೈ: ಜಾತ್ಯಾತೀತತೆ ಎನ್ನುವುದು ಯುರೋಪಿಯನ್ ದೇಶದ ಪರಿಕಲ್ಪನೆಯಾಗಿದೆ. ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (Governer R N Ravi) ಹೇಳಿದ್ದಾರೆ. ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

    ಕನ್ಯಾಕುಮಾರಿಯ (Kanyakumari) ತಿರುವಟ್ಟಾರ್‌ನಲ್ಲಿ ನಡೆದ ಹಿಂದೂ ಧರ್ಮದ ವಿದ್ಯಾಪೀಠಂನ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜಾತ್ಯಾತೀತತೆ (Secularism) ಎನ್ನುವುದು ಪಶ್ಚಿಮದ ದೂರದ ದೇಶದಿಂದ ಬಂದ ಪರಿಕಲ್ಪನೆಯಾಗಿದ್ದು, ಜಾತ್ಯಾತೀತತೆಗೆ ಭಾರತದಲ್ಲಿ ನೆಲೆಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: MUDA Case| ಮಂಗಳವಾರ ಸಿಎಂಗೆ ಬಿಗ್‌ ಡೇ – ತೀರ್ಪು ಬೆನ್ನಲ್ಲೇ ನಡೆಯಲಿದೆ CLP ಸಭೆ

    ಯೂರೋಪಿನಲ್ಲಿ (Europe) ಚರ್ಚ್ ಹಾಗೂ ರಾಜರ ನಡುವೆ ಜಗಳ ಉಂಟಾದಾಗ ಜಾತ್ಯಾತೀತತೆ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಭಾರತದಲ್ಲಿ ಧರ್ಮ ಎಂಬ ಪರಿಕಲ್ಪನೆ ಇರಬೇಕಾದರೆ ಜಾತ್ಯಾತೀತತೆ ಅಗತ್ಯವಿಲ್ಲ. ಅದು ಯೂರೋಪಿನಲ್ಲಿಯೇ ಇರಲಿ. ಈ ದೇಶದ ಜನರ ಮೇಲೆ ಬಹಳಷ್ಟು ವಂಚನೆ ಮಾಡಲಾಗಿದೆ. ಅದರಲ್ಲಿ ಈ ಜಾತ್ಯಾತೀತತೆಯು ಒಂದು. ಇದು ಜನರಿಗೆ ತಪ್ಪು ಕಲ್ಪನೆಯನ್ನು ನೀಡುತ್ತಿದೆ ಎಂದರು.

    ಈ ಹೇಳಿಕೆ ಬೆನ್ನಲ್ಲೇ ವಿಪಕ್ಷಗಳಿಂದ ಭಾರೀ ವಿವಾದ ವ್ಯಕ್ತವಾಗಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ (Communist Party Of  India) ನಾಯಕಿ ಬೃಂದಾ ಕಾರಟ್ (Brinda Karat) ಮಾತನಾಡಿ, ರಾಜ್ಯಪಾಲರಿಗೆ ಸಂವಿಧಾನದ ಮೌಲ್ಯ ಏನು ಎಂದು ತಿಳಿದಿಲ್ಲ. ಸಂವಿಧಾನವು ವಿದೇಶಿ ಪರಿಕಲ್ಪನೆ ಎಂದು ಹೇಳುತ್ತಾರೆ. ಸಂವಿಧಾನದಲ್ಲಿ ನಂಬಿಕೆಯಿಲ್ಲದವರು ಇದನ್ನೆಲ್ಲ ಪ್ರಶ್ನಿಸುತ್ತಾ ರಾಜ್ಯಪಾಲರ ಸ್ಥಾನದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

    ತಮಿಳುನಾಡು ಕಾಂಗ್ರೆಸ್ ಸಂಸದ ಮಣಿಕ್ಕಂ ಟಾಗೋರ್ (Manickam Tagore) ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ಜಾತ್ಯಾತೀತತೆ ವಿದೇಶಗಳಲ್ಲಿ ವಿಭಿನ್ನವಾಗಿರಬಹುದು. ಭಾರತದಲ್ಲಿ ನಾವು ಪ್ರತಿಯೊಂದು ಧರ್ಮವನ್ನು, ಅವರ ಆಚರಣೆಗಳನ್ನು ಹಾಗೂ ಅವರ ಸಂಪ್ರದಾಯಗಳನ್ನು ಗೌರವಿಸುತ್ತೇವೆ. ಇದು ಭಾರತದಲ್ಲಿರುವ ಜಾತ್ಯಾತೀತದ ಕಲ್ಪನೆಯಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: ‘ಬಿಗ್‌ ಬಾಸ್‌ 11’ರಲ್ಲಿ ಸುದೀಪ್‌ ಕಾಸ್ಟ್ಯೂಮ್‌ ಹೇಗಿರುತ್ತೆ?: ಸುಳಿವು ಕೊಟ್ಟ ಕಿಚ್ಚ

  • ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

    ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

    ಹೈದರಾಬಾದ್: ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಅಪ್ರಾಪ್ತ ಆರೋಪಿಗಳ ಫೋಟೋ ಮತ್ತು ವೀಡಿಯೋ ಬಿಡುಗಡೆ ಮಾಡಿದ್ದಕ್ಕಾಗಿ ಬಿಜೆಪಿ ಶಾಸಕ ರಘುನಂದನ್ ರಾವ್ ಅವರನ್ನು ಕಾಂಗ್ರೆಸ್ ಸಂಸದ ಮತ್ತು ತೆಲಂಗಾಣ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಅವರು ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ

    ರಘುನಂದನ್ ರಾವ್ ಟ್ವೀಟ್‍ನಲ್ಲಿ, ತೆಲಂಗಾಣದಲ್ಲಿ ಆಡಳಿತಾರೂಢ(ತೆಲಂಗಾಣ ರಾಷ್ಟ್ರ ಸಮಿತಿ) ಟಿಆರ್‌ಎಸ್ ಸರ್ಕಾರದ ಹಿರಿಯ ಸದಸ್ಯರ ಪುತ್ರನಾಗಿರುವ ಅಪ್ರಾಪ್ತ ಆರೋಪಿಗೆ ಪೊಲೀಸರು ತರಾತುರಿಯಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ. ಶಾಸಕರ ಪುತ್ರನ ಕೈವಾಡವನ್ನು ಸಾಬೀತುಪಡಿಸುವ ವೀಡಿಯೋ ಸಾಕ್ಷಿಗಳನ್ನು ನಾನು ಹೊಂದಿದ್ದೇನೆ ಎಂದು ಬರೆದು ಅಪ್ರಾಪ್ತನ ಫೋಟೋ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

    ಈ ಟ್ವೀಟ್‍ಗೆ ಪ್ರತಿಕ್ರಿಯೆ ಕೊಟ್ಟ ಮಾಣಿಕಂ ಟ್ಯಾಗೋರ್ ಅವರು, ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂಐಎಂ ಶಾಸಕರ ಮಗ ಎಂದು ಹೇಳಲಾಗಿದೆ. ನಿಮ್ಮ ರಾಜಕೀಯ ಲಾಭಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ನೀವು ಸಂತ್ರಸ್ತೆ ಮತ್ತು ಅಪ್ರಾಪ್ತನ ಗುರುತನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಂಡಿದ್ದೀರಿ. ತೆಲಂಗಾಣದ ಮಗಳನ್ನು ಅವಮಾನಿಸಲು ನಾವು ಅನುಮತಿಸುವುದಿಲ್ಲ. ನಾವು ಮ್ಯಾಚ್ ಫಿಕ್ಸಿಂಗ್ ಮಾಡಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ 

    ನಡೆದಿದ್ದೇನು?
    ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಅಪ್ಡೇಟ್ ಸಿಗುತ್ತಿದೆ. ಶನಿವಾರ ಸಿಕ್ಕ ಸಿಸಿಟಿವಿಯಲ್ಲಿ, ಶಂಕಿತ ಆರೋಪಿಗಳು ಪಬ್‍ನ ಹೊರಗೆ ಅಪ್ರಾಪ್ತೆ ಜೊತೆ ಹೋಗಿದ್ದರು. ಈ ವೇಳೆ ಹುಡುಗರು ಆಕೆಯನ್ನು ಮನೆಗೆ ಬಿಡಲು ಮುಂದಾಗುತ್ತಾರೆ. ಸಂತ್ರಸ್ತೆ ಕಾರಿನ ಬಳಿ ಹೋಗುತ್ತಿದಂತೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಕಾರಿನೊಳಗೆಯೇ ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ನಿಂತಿರುವುದು ಸೆರೆಯಾಗಿದೆ.