Tag: Mani Shankar Aiyar

  • INDIA ಕೂಟದ ನಾಯಕತ್ವ ತ್ಯಜಿಸಲು ಕಾಂಗ್ರೆಸ್‌ ಸಜ್ಜಾಗಿರಬೇಕು: ಮಣಿಶಂಕರ್‌ ಅಯ್ಯರ್‌

    INDIA ಕೂಟದ ನಾಯಕತ್ವ ತ್ಯಜಿಸಲು ಕಾಂಗ್ರೆಸ್‌ ಸಜ್ಜಾಗಿರಬೇಕು: ಮಣಿಶಂಕರ್‌ ಅಯ್ಯರ್‌

    ನವದೆಹಲಿ: INDIA ಕೂಟದಲ್ಲಿ ನಾಯಕತ್ವ ಸಮರ ನಡೆಯುತ್ತಿರುವ ಸಮಯದಲ್ಲೇ ಇಂಡಿಕೂಟದ ನಾಯಕತ್ವ ತ್ಯಜಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿ ಇರಬೇಕು ಎಂದು ಮಾಜಿ ಕೇಂದ್ರ ಮಂತ್ರಿ ಮಣಿಶಂಕರ್ ಅಯ್ಯರ್ (Mani Shankar Aiyar) ಸಲಹೆ ನೀಡಿದ್ದಾರೆ.

    ಇಂಡಿ ಕೂಟದ ಇನ್ನೊಂದು ಪಕ್ಷ ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇಂಡಿ ಕೂಟದ ಪ್ರಮುಖ ಪಕ್ಷವಾಗಿರುವ ಟಿಎಂಸಿಯ ಮಮತಾ ಬ್ಯಾನರ್ಜಿ ಸೇರಿ ಇತರೆ ಪಕ್ಷಗಳ ನಾಯಕರಿಗೆ ಮೈತ್ರಿಕೂಟದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯವಿದೆ ಎಂದು ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

    INDIA ಒಕ್ಕೂಟವನ್ನು ಮುನ್ನಡೆಸುವ ಕುರಿತು ಕಾಂಗ್ರೆಸ್‌ ಗಂಭೀರವಾಗಿ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮೈತ್ರಿಕೂಟದ ಬೇರೆ ಪಕ್ಷಗಳು ನಾಯಕತ್ವ ವಹಿಸಬಹುದೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಮಣಿಶಂಕರ್‌, ಕಾಂಗ್ರೆಸ್‌ ನಾಯಕತ್ವದ ವರ್ಗಾವಣೆಗೆ ಚಿಂತನೆ ಮಾಡಬೇಕಿದೆ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ಡಿಕೆಶಿ ಕೇಸ್‌ನಲ್ಲಿ ಹಿನ್ನಡೆ| ಕ್ರಿಮಿನಲ್ ಪಿತೂರಿ ಒಂದನ್ನೇ ಗಮನಿಸಿ PMLA ಅಡಿ ಕೇಸ್‌ ದಾಖಲಿಸಬೇಡಿ: ಸಿಬ್ಬಂದಿಗೆ ಇಡಿ ಬಾಸ್‌ ಸೂಚನೆ

    ಲೋಕಸಭೆ ಚುನಾವಣೆ ಬಳಿಕ ನಡೆದ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ INDIA ಕೂಟದ ಸಾಧನೆ ಅಷ್ಟೇನು ಉತ್ತಮವಾಗಿಲ್ಲ. ಹೀಗಾಗಿ ಕಾಂಗ್ರೆಸ್‌ ಬಣದ ನಾಯಕತ್ವದ ಬಗ್ಗೆ ಹೆಚ್ಚು ಚಿಂತಿಸದೇ, ಮೈತ್ರಿಕೂಟದ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಕೆಲಸ ಮಾಡಬೇಕು ಎಂದು ಅಯ್ಯರ್‌ ಸಲಹೆ ನೀಡಿದ್ದಾರೆ.
    ‌ಕೆಲ ದಿನಗಳ ಹಿಂದೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 2012 ರಲ್ಲಿ ಪ್ರಣಬ್‌ ಮುಖರ್ಜಿ (Pranab Mukherjee) ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರೆ 2014 ರಲ್ಲಿ ಯುಪಿಎ-3 ಅಧಿಕಾರಕ್ಕೆ ಖಂಡಿತ ಬರುತ್ತಿತ್ತು ಎಂದು ಹೇಳಿದ್ದರು.

    2012ರಲ್ಲಿ ಸೋನಿಯಾ ಗಾಂಧಿ (Sonia Gandhi) ಅವರು ಪ್ರಣಬ್‌ರನ್ನು ಕರೆದು ನೀವು ಪ್ರಧಾನಿಯಾಗಬಹುದು ಎಂದು ಆಫರ್‌ ನೀಡಿದ್ದರು. ಸೋನಿಯಾ ನೀಡಿದ್ದ ಆಫರ್‌ ನೋಡಿ ನನಗೆ ಅಚ್ಚರಿಯಾಗಿದೆ ಎಂದು ಪ್ರಣಬ್‌ ಅವರು ನನ್ನ ಬಳಿ ಹೇಳಿದ್ದರು ಎಂದು ತಿಳಿಸಿದ್ದರು.

     

  • ಸಿಂಗ್‌ ಬದಲು ಪ್ರಣಬ್‌ರನ್ನು ಪ್ರಧಾನಿ ಮಾಡುತ್ತಿದ್ದರೆ ಯುಪಿಎ-3 ಅಧಿಕಾರಕ್ಕೆ ಬರುತ್ತಿತ್ತು: ಮಣಿಶಂಕರ್‌ ಅಯ್ಯರ್‌

    ಸಿಂಗ್‌ ಬದಲು ಪ್ರಣಬ್‌ರನ್ನು ಪ್ರಧಾನಿ ಮಾಡುತ್ತಿದ್ದರೆ ಯುಪಿಎ-3 ಅಧಿಕಾರಕ್ಕೆ ಬರುತ್ತಿತ್ತು: ಮಣಿಶಂಕರ್‌ ಅಯ್ಯರ್‌

    ನವದೆಹಲಿ: 2012 ರಲ್ಲಿ ಪ್ರಣಬ್‌ ಮುಖರ್ಜಿ (Pranab Mukherjee) ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರೆ 2014 ರಲ್ಲಿ ಯುಪಿಎ-3 ಅಧಿಕಾರಕ್ಕೆ ಖಂಡಿತ ಬರುತ್ತಿತ್ತು ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 2012ರಲ್ಲಿ ರಾಷ್ಟ್ರಪತಿ ಆಯ್ಕೆ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಡಾ। ಮನಮೋಹನ್‌ ಸಿಂಗ್‌ (Manmohan Singh) ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಹಾಗೂ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವರಿಗೆ ಪ್ರಧಾನಿ ಹುದ್ದೆ ನೀಡಬೇಕಿತ್ತು ಎಂದು ಹೇಳಿದರು.

    2012ರಲ್ಲಿ ಸೋನಿಯಾ ಗಾಂಧಿ (Sonia Gandhi) ಅವರು ಪ್ರಣಬ್‌ರನ್ನು ಕರೆದು ನೀವು ಪ್ರಧಾನಿಯಾಗಬಹುದು ಎಂದು ಆಫರ್‌ ನೀಡಿದ್ದರು. ಸೋನಿಯಾ ನೀಡಿದ್ದ ಆಫರ್‌ ನೋಡಿ ನನಗೆ ಅಚ್ಚರಿಯಾಗಿದೆ ಎಂದು ಪ್ರಣಬ್‌ ಅವರು ನನ್ನ ಬಳಿ ಹೇಳಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಹೆತ್ತ ಮಗು ತನ್ನ ಬಳಿಯಿಲ್ಲದಿದ್ದರೂ ಅನಾಥ ಮಕ್ಕಳಿಗೆ ಸಹಾಯ – ಅತುಲ್ ಸಮಾಜಮುಖಿ ಕಾರ್ಯಕ್ಕೆ ಮನಸೋತ ಸ್ನೇಹಿತರು

    ನಾನು ಪ್ರಣಬ್‌ ಪ್ರಧಾನಿಯಾಗುತ್ತಾರೆ ಎಂದುಕೊಂಡಿದ್ದೆ. ಆದರೆ ನನ್ನ ನಿರೀಕ್ಷೆ ಉಲ್ಟಾ ಆಯ್ತು. ಪ್ರಣಬ್‌ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿ ಮುಂದುವರಿದರು. ಪ್ರಣಬ್‌ ಅತ್ಯುತ್ತಮ ಕೆಲಸಗಾರರಾಗಿದ್ದರಿಂದ ಪ್ರಧಾನಿ ಹುದ್ದೆ ನೀಡಬೇಕಿತ್ತು.ಆಡಳಿತದಲ್ಲಿ ಅನುಭವಿ ಆಗಿದ್ದ ಡಾ। ಸಿಂಗ್‌ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಬೇಕಿತ್ತು ಎಂದು ಅಯ್ಯರ್‌ ಹೇಳಿದರು.

    ಮಣಿಶಂಕರ್‌ ಅಯ್ಯರ್‌ ಅವರು A MAVERICK IN POLITICS: 1999-2024 ಪುಸ್ತಕ ಬರೆದಿದ್ದು, ಈ ಪುಸ್ತಕದಲ್ಲಿ ರಾಜಕೀಯ ನಾಯಕರ ಒಡನಾಟ, ಗಾಂಧಿ ಕುಟುಂಬದ ಜೊತೆಗಿನ ಸಂಬಂಧದ ಬಗ್ಗೆ ವಿವರಿಸಿದ್ದಾರೆ.

     

  • ಭಾರತದ ಮೇಲೆ ಚೀನಾ ದಾಳಿ ಬರೀ ಆರೋಪನಾ?- ಮಣಿಶಂಕರ್ ಹೇಳಿಕೆಗೆ ಬಿಜೆಪಿ ಗರಂ

    ಭಾರತದ ಮೇಲೆ ಚೀನಾ ದಾಳಿ ಬರೀ ಆರೋಪನಾ?- ಮಣಿಶಂಕರ್ ಹೇಳಿಕೆಗೆ ಬಿಜೆಪಿ ಗರಂ

    – ವಿವಾದವಾಗ್ತಿದ್ದಂತೆಯೇ ಬೇಷರತ್‌  ಕ್ಷಮೆ

    ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಮೂಲಕ ಸದ್ದು ಮಾಡಿದ್ದಾರೆ.

    ದೆಹಲಿಯಲ್ಲಿ ನೆಹರೂಸ್ ಫಸ್ಟ್ ರಿಕ್ರೂಟ್ಸ್ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಣಿಶಂಕರ್ ಅಯ್ಯರ್, 1962ರಲ್ಲಿ ಭಾರತದ ಮೇಲೆ ಚೀನಾ ಪಡೆಗಳು ದಾಳಿ ಮಾಡಿದ ಆರೋಪಗಳಿವೆ ಅಂತಾ ಹೇಳಿದ್ದಾರೆ. ಸಹಜವಾಗಿಯೇ ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    38,000 ಚದರ ಕಿಲೋಮೀಟರ್ ನಷ್ಟು ನಮ್ಮ ಭೂಭಾಗವನ್ನು ಆಕ್ರಮಿಸಿಕೊಂಡ ಅಂದಿನ ಚೀನಾ (China) ದಂಡಯಾತ್ರೆಯನ್ನೇ ಚರಿತ್ರೆಯ ಪುಟಗಳಿಂದ ಅಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ ಎಂದು ಕಿಡಿಕಾರಿದೆ. ಈ ಹಿಂದೆಯೂ ಚೀನಾಗೆ ಅನುಕೂಲವಾಗಿ ಕಾಂಗ್ರೆಸ್ (Congress) ವರ್ತಿಸಿದೆ ಅಂತಾ ಆರೋಪಿಸಿದೆ. ಈ ಬೆನ್ನಲ್ಲೇ ಎಚ್ಚೆತ್ತ ಕಾಂಗ್ರೆಸ್ ಎಂದಿನಂತೆ, ಅಯ್ಯರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದೆ.

    2020ರ ಲಡಾಖ್ ಘರ್ಷಣೆ ಪ್ರಸ್ತಾಪಿಸಿದ ಕಾಂಗ್ರೆಸ್, ಪ್ರಧಾನಿ ಮೋದಿ (Narendra Modi) ಏನೂ ಆಗಿಲ್ಲ ಎಂಬಂತೆ ಮಾತಾಡಿದ್ರು. ಇದು ಆರೋಪ ಅಷ್ಟೇ ಎಂದಿದ್ರು. ಎಂಬುದನ್ನು ನೆನಪಿಸಿ ಬಿಜೆಪಿಗೆ ಟಕ್ಕರ್ ನೀಡಿದೆ. ಈ ಮಧ್ಯೆ ಆಕಸ್ಮಾತ್ ಆಗಿ ಆರೋಪ ಎಂಬ ಪದ ಬಳಸಿದೆ ಎಂದಿರುವ ಮಣಿಶಂಕರ್ ಅಯ್ಯರ್, ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

  • ಪಾಕ್‌ ಸಹ ಅಣುಬಾಂಬ್‌ ಹೊಂದಿದೆ, ಕೆರಳಿಸಿದ್ರೆ ಭಾರತದ ಮೇಲೆ ಎಸೆಯುತ್ತಾರೆ: ಕಾಂಗ್ರೆಸ್‌ ಮಾಜಿ ಸಚಿವ ಪ್ರಚೋದನಕಾರಿ ಹೇಳಿಕೆ!

    ಪಾಕ್‌ ಸಹ ಅಣುಬಾಂಬ್‌ ಹೊಂದಿದೆ, ಕೆರಳಿಸಿದ್ರೆ ಭಾರತದ ಮೇಲೆ ಎಸೆಯುತ್ತಾರೆ: ಕಾಂಗ್ರೆಸ್‌ ಮಾಜಿ ಸಚಿವ ಪ್ರಚೋದನಕಾರಿ ಹೇಳಿಕೆ!

    – ಅಪ್ಪಿ-ತಪ್ಪಿ ಭಾರತದ ಮೇಲೆ ಬಾಂಬ್‌ ಉಡಾಯಿಸಿ ಅಂದ್ರೆ ಏನಾಗುತ್ತೆ ಯೋಚಿಸಿ?
    – ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಕಾಂಗ್ರೆಸ್‌ ಹಿರಿಯ ನಾಯಕ

    ನವದೆಹಲಿ: ಪಾಕಿಸ್ತಾನವು ಸಹ ಅಣುಬಾಂಬ್‌ಗಳನ್ನ (Nuclear Bombs) ಹೊಂದಿದೆ. ನಮ್ಮ ಸರ್ಕಾರ ಅವರನ್ನ ಕೆರಳಿಸಿದರೆ, ಭಾರತದ ಮೇಲೆ ಎಸೆಯಬಹುದು. ಆದ್ದರಿಂದ ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು, ಇಲ್ಲದಿದ್ದರೆ ದೇಶವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್‌ (Mani Shankar Aiyar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಈ ಹಿಂದೆಯೂ ಪಾಕಿಸ್ತಾನವನ್ನು (Pakistan) ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಭಾರತವು ಪ್ರಮಾಣು ಬಾಂಬ್‌ಗಳನ್ನು ಹೊಂದಿರುವಂತೆ ಪಾಕಿಸ್ತಾನವೂ ಸಹ ಹೊಂದಿದೆ. ನಾವು ಅವರನ್ನು ಗೌರವಿಸಿದರೆ, ನಮ್ಮನ್ನೂ ಅವರು ಗೌರವಿಸಿದ್ದಾರೆ. ನಾವು ಅವರನ್ನು ಕೆರಳಿಸಿದರೆ, ಅವರೂ ನಮ್ಮ ಮೇಲೆ ಪರಮಾಣು ಬಾಂಬ್‌ ಬಳಸಬೇಕೆಂದೇ ಯೋಚಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರನ್ನು ಸಾಗಿಸುವ ಡ್ರೋನ್‌ – ಮಧ್ಯಪ್ರಾಚ್ಯದ ಅಬುಧಾಬಿಯಲ್ಲಿ ಪ್ರಯೋಗ ಯಶಸ್ವಿ

    ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಮಿಲಿಟರಿ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರೆ ಅದು ಇನ್ನಷ್ಟು ಉದ್ವಿಗ್ನತೆಗೆ ಕಾರಣವಾಗುತ್ತದೆ. ಒಂದು ವೇಳೆ ಯಾರೋ ಹುಚ್ಚ ಭಾರತದ ಮೇಲೆ ಬಾಂಬ್‌ಗಳನ್ನು ಉಡಾಯಿಸಲು ನಿರ್ಧರಿಸಿದ್ರೆ ಏನಾಗುತ್ತದೆ ಯೋಚಿಸಿ? ಅವರು ಅಪ್ಪಿ-ತಪ್ಪಿ ಲಾಹೋರ್‌ನಲ್ಲೇ ಬಾಂಬ್‌ ಸಿಡಿಸಿದ್ರೂ, ಅದರ ವಿಕಿರಿಣ ಅಮೃತಸರ ತಲುಪೋದಕ್ಕೆ 8 ಸೆಕೆಂಡುಗಳು ಬೇಕಾಗೋದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು

    ಕಾಂಗ್ರೆಸ್‌ ಮಾಜಿ ಸಚಿವರ ಈ ಹೇಳಿಕೆಯನ್ನು ಬಿಜೆಪಿ ನಾಯಕರು ವ್ಯಾಪಕವಾಗಿ ಟೀಕಿಸಿದ್ದಾರೆ. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್‌ ಭಾರತದ ಮೇಲೆ ಯಾವ ಸಿದ್ಧಾಂತವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.

    ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಕಾಂಗ್ರೆಸ್‌ ಸಿದ್ಧಾಂತ ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸಿಯಾಚಿನ್‌ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟಿಕೊಡುವುದು, ಪಾಕಿಸ್ತಾನಕ್ಕೆ ಬೆಂಬಲ ನೀಡಿ ದೇಶ ವಿಭಜನೆ ಮಾಡುವುದು, ಸುಳ್ಳು, ನಿಂದನೆ, ಬಡವರನ್ನ ದಾರಿ ತಪ್ಪಿಸುವುದು ನಕಲಿ ಬರವಸೆಗಳನ್ನು ನೀಡುವುದು ಇವೇ ಕಾಂಗ್ರೆಸ್‌ನ ಸಿದ್ಧಾಂತ ಎಂದು ಕಿಡಿ ಕಾರಿದ್ದಾರೆ.

  • ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್‌ ಮಾಜಿ ಸಚಿವ

    ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್‌ ಮಾಜಿ ಸಚಿವ

    – ನಾವು ಸ್ನೇಹಶೀಲರಾಗಿದ್ದರೆ ಅವರೂ ಅತೀ ಸ್ನೇಹಶೀಲರಾಗಿರ್ತಾರೆ ಎಂದ ಮಣಿಶಂಕರ್ ಅಯ್ಯರ್‌
    – ಭಾರತ-ಪಾಕ್‌ ನಡುವೆ ಮೋದಿ ಆಡಳಿತ ದ್ವೇಷ ಮೂಡಿಸಿದೆ ಎಂದು ಆರೋಪ

    ನವದೆಹಲಿ: ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ. ಭಾರತೀಯರು ಸ್ನೇಹಶೀಲರಾಗಿದ್ದರೆ ಪಾಕಿಸ್ತಾನಿಯರು ಇನ್ನೂ ಹೆಚ್ಚು ಸ್ನೇಹಶೀಲರಾಗಿರುತ್ತಾರೆ. ಹಾಗಾಗಿ ಭಾರತ-ಪಾಕಿಸ್ತಾನದ (India, Pakistan) ನಡುವೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಆದ್ರೆ ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ (Narendra Modi) ಆಡಳಿತವು ವಿಶ್ವಾಸದ ಬದಲು ದ್ವೇಷ ಮೂಡಿಸಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್‌ (Mani Shankar Aiyar) ಪ್ರಧಾನಿ ಮೋದಿ ವಿರುದ್ಧ ಟೀಕಿಸಿದ್ದಾರೆ.

    ಭಾರತೀಯರು ಸ್ನೇಹಶೀಲರಾಗಿದ್ದರೆ ಪಾಕಿಸ್ತಾನಿಯರು (Pakistanis) ಇನ್ನೂ ಹೆಚ್ಚು ಸ್ನೇಹಶೀಲರಾಗಿರುತ್ತಾರೆ. ಪಾಕಿಸ್ತಾನದಷ್ಟು ಪ್ರೀತಿ ತೋರುವ ಇನ್ನಾವುದೇ ದೇಶವನ್ನು ನಾನು ನೋಡಿಲ್ಲ. ನನ್ನ ಅನುಭವದಲ್ಲಿ ಹೇಳುವುದಾದ್ರೆ ಪಾಕಿಸ್ತಾನಿಯರು ಎಲ್ಲದಕ್ಕೂ ಅತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ನಾವು ಸ್ನೇಹಶೀಲರಾಗಿದ್ದರೆ ಅವರು ಅತೀ ಸ್ನೇಹಶೀಲರಾಗಿರುತ್ತಾರೆ. ನಾವು ತಿರುಗಿನಿಂತರೆ ಅವರು ಇನ್ನೂ ತೀಕ್ಷ್ಣವಾಗಿ ತಿರುಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ದೊಡ್ಡ ಗೆಲುವು – ಕತಾರ್‌ನಲ್ಲಿ ಅರೆಸ್ಟ್‌ ಆಗಿದ್ದ ನೌಕಾ ಅಧಿಕಾರಿಗಳು ಬಿಡುಗಡೆ, ಸ್ವದೇಶಕ್ಕೆ ವಾಪಸ್‌

    ಪಾಕಿಸ್ತಾನದ ಅಲ್ಹಾಮಾದಲ್ಲಿ ನಡೆದ ಫೈಜ್ ಉತ್ಸವದಲ್ಲಿ ಇತ್ತೀಚೆಗೆ ಮಾತನಾಡಿದ್ದ ಅವರು, ನಾನು ಈ ಹಿಂದೆ ಪಾಕಿಸ್ತಾನದಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಕೆಲಸ ಮಾಡಿದ್ದೆ. ಆಗ ಪಾಕಿಸ್ತಾನಿಯರು ನನ್ನನ್ನೂ ನನ್ನ ಪತ್ನಿಯನ್ನೂ ಮುಕ್ತವಾಗಿ ಸ್ವಾಗತಿಸಿ ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ಹೀಗಾಗಿ ಭಾರತ-ಪಾಕಿಸ್ತಾನದ ನಡುವೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಆದರೆ ಕಳೆದ 10 ವರ್ಷಗಳ ನರೇಂದ್ರ ಮೋದಿ ಆಡಳಿತವು ವಿಶ್ವಾಸದ ಬದಲು ದ್ವೇಷ ಮೂಡಿಸಿದೆ ಎಂದು ಆರೋಪಿಸಿದ್ದಾರೆ.

    ಪಾಕಿಸ್ತಾನ ಹೇಗೆ ಇಸ್ಲಾಮಿಕ್‌ ಗಣರಾಜ್ಯವಾಗಿದೆಯೋ ಹಾಗೆಯೇ ಭಾರತವನ್ನು ಹಿಂದುತ್ವದ ಗಣರಾಜ್ಯವನ್ನಾಗಿ ಮಾಡುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ನಡೆದಿದೆ. ಇದು ತಪ್ಪು. ಪಾಕಿಸ್ತಾನದ ರಚನೆಯ ಕಾಲದಲ್ಲೇ ನೆಹರು ಹಾಗೂ ಗಾಂಧೀಜಿಯವರು ಭಾರತವನ್ನು ಧರ್ಮದ ಆಧಾರದ ಮೇಲೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂಬುದನ್ನು ಪುನರುಚ್ಛರಿಸಿದ್ದರು. ಇದನ್ನೂ ಓದಿ: ಪತಿ-ಪತ್ನಿಯ ವೈಮನಸ್ಸಿನಿಂದ ನಡೆದೇಹೋಯ್ತು ಘೋರ ದುರಂತ – ಮಹಿಳೆ ಮೇಲೆ ಗ್ಯಾಂಗ್‌ ರೇಪ್‌

    ಇನ್ನೂ ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳು ಪರಸ್ಪರ ಕಚ್ಚಾಡುತ್ತಿದ್ದರೂ ಉಭಯ ದೇಶಗಳ ಜನರು ಅನ್ಯ ತಟಸ್ಥ ದೇಶಗಳಲ್ಲಿ ಪರಸ್ಪರ ಭೇಟಿಯಾಗಿ ಭ್ರಾತೃತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಮಣಿಶಂಕರ್ ಅಯ್ಯರ್ ಅವರು ತಮ್ಮ ಪುಸ್ತಕದಲ್ಲಿ ಪಾಕಿಸ್ತಾನವನ್ನು ಹೊಗಳಿದ್ದು ತೀವ್ರ ವಿವಾದವಾಗಿತ್ತು. ಅಲ್ಲದೇ ಇತ್ತೀಚೆಗಷ್ಟೇ ಮಣಿಶಂಕರ್ ಅಯ್ಯರ್‌ ಪುತ್ರಿ ರಾಮಮಂದಿರ ವಿರೋಧಿಸಿ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಮುಸ್ಲಿಮರು ನಮ್ಮ ಹಿಂದುತ್ವ ಬೆಂಬಲಿಸುತ್ತಾರೆ.. ಬಿಜೆಪಿ ಹಿಂದುತ್ವ ತಿರಸ್ಕರಿಸುತ್ತಾರೆ: ಉದ್ಧವ್‌ ಠಾಕ್ರೆ