Tag: manhole

  • ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಚರಂಡಿ ಕ್ಲೀನ್‌ ಮಾಡಿಸಿದ ಅಧಿಕಾರಿ!

    ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಚರಂಡಿ ಕ್ಲೀನ್‌ ಮಾಡಿಸಿದ ಅಧಿಕಾರಿ!

    ಹಾವೇರಿ: ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಅಧಿಕಾರಿಯು ಚರಂಡಿ ಕ್ಲೀನ್‌ ಮಾಡಿಸಿರುವ ಅಮಾನವೀಯ ಘಟನೆ ಘಟನೆ ಹಾವೇರಿ‌ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

    ರಾಣೇಬೆನ್ನೂರು ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕನನ್ನು ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಬಾರದು ಎಂಬ ಸರ್ಕಾರದ ನಿಯಮವನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಗಬ್ಬು ವಾಸನೆಯಿಂದ ಕೂಡಿರುವ ಮ್ಯಾನ್‌ಹೋಲ್‌ಗೆ ಕಾರ್ಮಿಕನನ್ನು ಇಳಿಸಿ ಸ್ವಚ್ಛತೆ ಮಾಡಿಸಿದ್ದಾರೆ. ಅಧಿಕಾರಿಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

    ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕೆಯುಐಡಿಎಫ್‌ಸಿ ಸಹಾಯಕ ಇಂಜನಿಯರ್ ರವೀಂದ್ರ ಕಾರ್ಮಿಕನನ್ನು ಮ್ಯಾನ್‌ಹೋಲ್‌ನಿಂದ ಮೇಲೆ ಹತ್ತಿಸಿದ್ದಾರೆ. ಮಾನವೀಯತೆ ಮರೆತು ಕಾರ್ಮಿಕನನ್ನು ಮ್ಯಾನ್‌ಹೋಲ್‌ನಲ್ಲಿ ಇಳಿಸಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

    ಕಳೆದ ಕೆಲವು ದಿನಗಳಿಂದ ಒಳಚರಂಡಿ ಬ್ಲಾಕ್ ಆಗಿ ಸ್ಥಗಿತಗೊಂಡಿದ್ದರಿಂದ ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕನನ್ನು ಇಳಿಸಿ ಇಂಜಿನಿಯರ್‌ ಕೆಲಸ ಮಾಡಿಸುತ್ತಿದ್ದರು. ಮುಂದೆ ಈ ರೀತಿ ಮಾಡದಂತೆ ಅಧಿಕಾರಿಗಳಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಾವುಗಳ ಕಾಟಕ್ಕೆ ಬಂಗಲೆಗೆ ಬೆಂಕಿಯಿಟ್ಟ- 13 ಕೋಟಿ ರೂ. ಮನೆ ಸುಟ್ಟು ಭಸ್ಮ

  • ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ಮುಂಬೈ: ಸ್ವಚ್ಛತಾ ಕಾಮಗಾರಿಯ ವೇಳೆ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ದಬಾಯಿಸಿ ಇಳಿಸುವ ಅಧಿಕಾರಿಗಳನ್ನು ನಾವು ನೋಡಿದ್ದೇವೆ. ಅದರೆ ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದು ಕೆಲಸ ಮಾಡಿಸುತ್ತಿರುವ ಮುನ್ಸಿಪಲ್ ಆಫೀಸರ್ ಅಧಿಕಾರಿಯ ವೀಡಿಯೋ ವೈರಲ್ ಆಗಿದೆ.

    ಥಾಣೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಸರಿ ಇದೆಯೇ ಎಂದು ಮಹಿಳಾ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ (ಬಿಎನ್‍ಎಂಸಿ)ನ ಸ್ಯಾನಿಟರಿ ಇನ್ಸ್‍ಪೆಕ್ಟರ್ ಸುವಿಧಾ ಚವಾಣ್, ಮರದ ಏಣಿಯ ಸಹಾಯದಿಂದ ಮ್ಯಾನ್ ಹೋಲ್ ಒಳಗೆ ಇಳಿದು ಪರಿಶಿಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಳ

    ವೀಡಿಯೋದಲ್ಲಿ ಏನಿದೆ:
    ಮ್ಯಾನ್‍ಹೋಲ್‍ನಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿತ್ತು. ವೇಳೆ ಅಲ್ಲಿಗೆ ಬಂದ ಮಹಿಳಾ ಅಧಿಕಾರಿ ಸ್ವತಃ ಮ್ಯಾನ್‍ಹೋಲ್ ಒಳಕ್ಕೆ ಇಳಿದಿದ್ದಾರೆ. ಮ್ಯಾನ್‍ಹೋಲ್‍ಗೆ ಮರದ ಏಣಿಯೊಂದನ್ನು ಇರಿಸಿ ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಸುವಿಧಾ, ಒಳಗೆ ಏನೇನು ಕೆಲಸ ನಡೆಯುತ್ತಿದೆ ಎಂದು ಫೋಟೋ ತೆಗೆದು, ಅಲ್ಲಿದ್ದ ಕಾರ್ಮಿಕರ ಬಳಿ ಮಾತನಾಡಿ ಸ್ವಚ್ಛತಾ ಕೆಲಸ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಮಹಾರಾಷ್ಟ್ರದ ಭಿವಾಂಡಿ, ನಿಜಾಮ್‍ಪುರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಫೀಸ್ ಕಟ್ಟುವಂತೆ ಒತ್ತಾಯ ಮಾಡುವ ಶಾಲೆಗಳ ವಿರುದ್ಧ ಕ್ರಮ: ಸಿಎಂ

    ಮುಂಗಾರು ಪ್ರಾರಂಭವಾಗುತ್ತಿರುವುದರಿಂದ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳ ಬಗ್ಗೆ ಹೀಗೆಯೇ ನಿಗಾ ವಹಿಸುತ್ತಿದ್ದು, ಇವರು ಇಷ್ಟೊಂದು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಅಧಿಕಾರಿಗಳು ಇರಬೇಕು ಎಂದು ಶ್ಲಾಘಿಸುತ್ತಿದ್ದಾರೆ.

     

  • ಉಸಿರುಗಟ್ಟಿ ಕಾರ್ಮಿಕರು ಸಾವು- ಹೆಚ್‍ಡಿಕೆ, ನಿಖಿಲ್ ಸಂತಾಪ

    ಉಸಿರುಗಟ್ಟಿ ಕಾರ್ಮಿಕರು ಸಾವು- ಹೆಚ್‍ಡಿಕೆ, ನಿಖಿಲ್ ಸಂತಾಪ

    ಬೆಂಗಳೂರು: ಕೆಲಸ ಮಾಡುತ್ತಿದ್ದ ಹೊರ ಗುತ್ತಿಗೆಯ ಮೂವರು ಕಾರ್ಮಿಕರು ಮ್ಯಾನ್ ಹೋಲ್‍ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಇದಕ್ಕೆ ಎಚ್ ಡಿ ಕುಮಾರಸ್ವಾಮಿ ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ.

    ಈ ದುರ್ಘಟನೆ ನಡೆದಿರುವುದು ಅತ್ಯಂತ ದುರ್ದೈವದ ಸಂಗತಿ. ಇದಕ್ಕಾಗಿ ತೀವ್ರ ಕಂಬನಿ ಮಿಡಿಯುತ್ತೇವೆ. ಇದೊಂದು ಮನಕಲಕುವ ಸರಣಿ ಸಾವಾಗಿದೆ. ಬೇಜವಾಬ್ದಾರಿತನದಿಂದ ಗುತ್ತಿಗೆ ಕಾರ್ಮಿಕರ ಸಾವಿಗೆ ಕಾರಣನಾದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ರಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನೀರಿಲ್ಲ, ನೀರು ತರಲು ಬಿಡ್ತಿಲ್ಲ – ಯುವಕನ ಅಳಲು


    ಜೀವನ ನಿರ್ವಹಣೆಗಾಗಿ ಲಾಕ್‍ಡೌನ್ ಲೆಕ್ಕಿಸದೆ ಕೆಲಸ ಮಾಡುತ್ತಿದ್ದ ಮೂವರು ಕೂಲಿ ಕಾರ್ಮಿಕರ ಸಾವನ್ನಪ್ಪಿದ್ದಾರೆ. ನಿರ್ಮಾಣ ಹಂತದ ಮ್ಯಾನ್ ಹೋಲ್ ಒಳಗೆ ಇಳಿದ ಮೂವರು ಕಾರ್ಮಿಕರು ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ. ರಾಮನಗರದ ಐಜೂರು ಬಳಿಯ ನೇತಾಜಿ ಪಾಪೂಲರ್ ಶಾಲೆ ಮುಂಭಾಗದಲ್ಲಿ ಈ ದುರ್ಘಟನೆ ನಡೆದಿತ್ತು. ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ರಾಮನಗರ ಜಿಲ್ಲಾ ಆಸ್ಪತ್ರೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಪರಿಸ್ಥಿತಿ ಸುಧಾರಣೆಯಾದ್ರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಎಂ ಬಿಎಸ್‍ವೈ

    ಎಸ್‍ಪಿ ಕಚೇರಿಗೆ ಭೇಟಿ ನೀಡಿ ಘಟನೆ ಬಗ್ಗೆ ಎಸ್ಪಿ ಅವರಿಂದ ನಿಖಿಲ್ ಕುಮಾರಸ್ವಾಮಿ ಮಾಹಿತಿ ಪಡೆದಿದ್ದಾರೆ. ಕಾರ್ಮಿಕರ ಸಾವಿನಿಂದ ಅವರ ಕುಟುಂಬ ವರ್ಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸರ್ಕಾರದಿಂದ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

  • ದಲಿತ ಮಹಿಳೆಯನ್ನು ಮ್ಯಾನ್ ಹೋಲ್‍ಗೆ ಇಳಿಸಿದ PSSK ಕಾರ್ಖಾನೆ ಅಧಿಕಾರಿಗಳು

    ದಲಿತ ಮಹಿಳೆಯನ್ನು ಮ್ಯಾನ್ ಹೋಲ್‍ಗೆ ಇಳಿಸಿದ PSSK ಕಾರ್ಖಾನೆ ಅಧಿಕಾರಿಗಳು

    – ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಕಾರ್ಖಾನೆ

    ಮಂಡ್ಯ: ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಪಾಂಡವಪುರದ ಪಿಎಸ್‍ಎಸ್‍ಕೆ ಕಾರ್ಖಾನೆಯ ಅಧಿಕಾರಿಗಳು ದಲಿತ ಮಹಿಳೆಯನ್ನು ಬಲವಂತವಾಗಿ ಮ್ಯಾನ್ ಹೋಲ್‍ಗೆ ಇಳಿಸಿ ಸ್ವಚ್ಛ ಮಾಡಿಸಲಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್‍ಎಸ್‍ಕೆ ಕಾರ್ಖಾನೆಯ ಕ್ವಾಟರ್ಸ್ ನಲ್ಲಿನ ಒಣ ಮಲ ಗುಂಡಿಗೆ ಇಳಿದು ಸ್ವಚ್ಛ ಮಾಡು ಎಂದು ಕಾರ್ಖಾನೆಯ ಸಿವಿಲ್ ಇಂಜಿನಿಯರ್ ನಾಗೇಶ್ ಹೇಳಿದ್ದಾರೆ ಎನ್ನಲಾಗಿದೆ. ಮಂಜುಳಾ ಅಧಿಕಾರಿಗಳ ಒತ್ತಡಕ್ಕೆ ಮಣಿದು ಮ್ಯಾನ್ ಹೋಲ್‍ಗೆ ಇಳಿದು ಸ್ವಚ್ಛಗೊಳಿಸಿದ್ದಾರೆ.

    ಇದೀಗ ದಲಿತ ಮಹಿಳೆ ಅಧಿಕಾರಿಗಳು ನನ್ನ ಬಲಂವತವಾಗಿ ಮ್ಯಾನ್ ಹೋಲ್‍ಗೆ ಇಳಿಸಿ ಸ್ವಚ್ಛ ಮಾಡಿಸಿದ್ದಾರೆ ಎಂದು ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ನೀಡಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಸಿ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

  • ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿ ಮೇಲಕ್ಕೆ ಹಾರಿದ ಬಾಲಕ – ವಿಡಿಯೋ ವೈರಲ್

    ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿ ಮೇಲಕ್ಕೆ ಹಾರಿದ ಬಾಲಕ – ವಿಡಿಯೋ ವೈರಲ್

    ಬೀಜಿಂಗ್: ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿ ಮೇಲಕ್ಕೆ ಹಾರುವ ಭಯಾನಕ ಆಟವನ್ನು ಮಕ್ಕಳು ಆಡುತ್ತಿರುವ ವಿಚಾರ ದಕ್ಷಿಣ ಚೀನಾದಲ್ಲಿ ಬೆಳಕಿಗೆ ಬಂದಿದೆ.

    ವಿಡಿಯೋನಲ್ಲಿ ಮೂವರು ಮಕ್ಕಳು ಸೇರಿಕೊಂಡು ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿದ್ದಾರೆ. ಒತ್ತಡಕ್ಕೆ ಮ್ಯಾನ್ ಹೋಲ್ ಮುಚ್ಚಳ ಮೇಲಕ್ಕೆ ಹಾರಿದೆ. ಈ ವೇಳೆ ಮ್ಯಾನ್ ಹೋಲ್ ಮುಚ್ಚಳದ ಮೇಲಿದ್ದ ಬಾಲಕ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದಾನೆ.

    ಇದೀಗ ಈ ಘಟನೆ ವಿಚಾರವಾಗಿ ಪೋಷಕರು ಮತ್ತು ಚೀನಾದ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಜನವರಿ ತಿಂಗಳಿನಲ್ಲಿ ಇಂತಹ 5 ಮ್ಯಾನ್ ಹೋಲ್‍ಗಳು ಸ್ಪೋಟಗೊಂಡಿದೆ ಎಂದು ವರದಿಯಾಗಿದೆ.

    ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜನರು, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ನಿಬಂಧನೆ ಮತ್ತು ಮಾರ್ಗಸೂಚಿಗಳನ್ನು ಹಾಕಬೇಕೆಂದು ಆಗ್ರಹಿಸಿದ್ದಾರೆ.

  • ಮಳೆ ನೀರು ಬ್ಲಾಕ್ – ಮ್ಯಾನ್‍ಹೋಲ್‍ಗೆ ಇಳಿದ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ

    ಮಳೆ ನೀರು ಬ್ಲಾಕ್ – ಮ್ಯಾನ್‍ಹೋಲ್‍ಗೆ ಇಳಿದ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ

    ಮಂಗಳೂರು: ಮಳೆ ನೀರು ಹರಿದು ಹೋಗುವ ಮ್ಯಾನ್‍ಹೋಲ್ ಚೇಂಬರ್ ಗೆ ಸ್ವತಃ ಕಾರ್ಪೊರೇಟರೇ ಇಳಿದು ಸಮಸ್ಯೆ ಬಗೆಹರಿಸಿದ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ.

    ಮಂಗಳೂರಿನ ಕದ್ರಿ ಕಂಬಳ ರಸ್ತೆ ಬದಿಯಲ್ಲಿ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು, ಕಸಕಡ್ಡಿಗಳು ನಿಂತು ಮಳೆ ನೀರಿನ ಹರಿವಿಗೆ ಸಮಸ್ಯೆಯುಂಟಾಗಿತ್ತು. ಈ ಬಗ್ಗೆ ಸ್ಥಳೀಯರು ಮನಪಾ ಸದಸ್ಯ ಮನೋಹರ್ ಶೆಟ್ಟಿ ಕದ್ರಿಯವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಬಂದ ಕಾರ್ಪೊರೇಟರ್ ಕಾರ್ಮಿಕರನ್ನು ಕರೆಸಿ, ಪಕ್ಕದಲ್ಲೇ ಇದ್ದ ಮ್ಯಾನ್‍ಹೋಲ್ ಚೇಂಬರ್ ನೊಳಗೆ ಇಳಿದು ಪರಿಶೀಲಿಸುವಂತೆ ಹೇಳಿದರು. ಆದರೆ ಈ ಮ್ಯಾನ್‍ಹೋಲ್ ನೊಳಗೆ ಇಳಿಯಲು ಕಾರ್ಮಿಕರು ನಿರಾಕರಿಸಿದಾಗ, ಸತಃ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ ಕೂಡಲೇ ತಮ್ಮ ಮನೆಯಿಂದ ಬದಲಿ ಉಡುಪುಗಳನ್ನು ತರಿಸಿ ಮ್ಯಾನ್‍ಹೋಲ್ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ಪರಿಶೀಲಿಸಿದರು.

    ಅಲ್ಲಿ ಶೇಖರಣೆಗೊಂಡಿದ್ದ ಮಣ್ಣು ಹಾಗೂ ಕಸ, ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಟ್ಟರು. ಇವರ ಈ ಜನಪರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ

  • 500 ರೂ.ಗಾಗಿ ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕರು!

    500 ರೂ.ಗಾಗಿ ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕರು!

    ಬೀದರ್: 500 ರುಪಾಯಿಗಾಗಿ ಇಬ್ಬರು ವ್ಯಕ್ತಿಗಳು ಮ್ಯಾನ್ ಹೋಲ್‍ಗೆ ಇಳಿದ ಘಟನೆ ಬೀದರ್‍ನಲ್ಲಿ ನಡೆದಿದೆ. ಗಬ್ಬು ನಾರುವ ದುರ್ವಾಸನೆಯ ನಡುವೆ ಚರಂಡಿಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಎತ್ತುವ ದೃಶ್ಯ ಪಬ್ಲಿಕ್ ಟಿವಿಗೆ ಲಭಿಸಿದೆ.

    ಬೀದರ್ ನಗರದ ಹುಡ್ಕೋ ಕಾಲೋನಿಯಲ್ಲಿ ಇಬ್ಬರು ಕಾರ್ಮಿಕರು ಬಡಾವಣೆಯ ರಸ್ತೆಯಲ್ಲಿದ್ದ ಮ್ಯಾನ್ ಹೋಲ್‍ಗೆ ಇಳಿದು ಸ್ವಚ್ಛಗೊಳಿಸುತ್ತಿರುವ ಅಮಾನವೀಯ ಘಟನೆ ಕಂಡು ಬಂದಿದೆ. ಈ ಬಡಾವಣೆಯಲ್ಲಿ ಚರಂಡಿ ಹೂಳು ತುಂಬಿಕೊಂಡು ಮನೆಗಳಿಗೆ ಚರಂಡಿ ನೀರು ನುಗ್ಗಿ ಗಬ್ಬು ನಾರುವ ವಾಸನೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಹೀಗಾಗಿ 500 ರುಪಾಯಿ ಕೂಲಿ ಪಡೆದು ಇಬ್ಬರು ಕಾರ್ಮಿಕರು ಮ್ಯಾನ್ ಹೋಲ್‍ಗೆ ಇಳಿದಿದ್ದಾರೆ.

    ಕೈಗೆ ಹ್ಯಾಂಡ್ ಗ್ಲೋಸ್ ಹಾಕಿಕೊಳ್ಳದೆ, ಮುಖಕ್ಕೆ ಮಾಸ್ಕ್ ಕೂಡ ಹಾಕಿಕೊಳ್ಳದೆ ಅಪಾಯಕಾರಿಯಾದ ಮ್ಯಾನ್ ಹೋಲ್‍ನಲ್ಲಿ ಎಂಟ್ರಿಕೊಟ್ಟು ಅಸಹಾಯಕ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಇಂಥ ಅಮಾನವೀಯ ಕೆಲಸಗಳಲ್ಲಿ ಸುರಕ್ಷಿತ ಸಾಧನಗಳನ್ನು ಬಳಸಿ ಸ್ವಚ್ಛತೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ರಾಜ್ಯದಲ್ಲಿ ಆದೇಶ ನಿರಂತರ ಉಲ್ಲಂಘನೆಯಾಗುತ್ತಿದೆ.

  • ಬೆಂಗಳೂರಿನಲ್ಲಿ ಮ್ಯಾನ್ ಹೋಲ್ ದುರಂತ: ರಾಯಚೂರು ಮೂಲದ ಇಬ್ಬರು ಕೂಲಿ ಕಾರ್ಮಿಕರು ಬಲಿ

    ಬೆಂಗಳೂರಿನಲ್ಲಿ ಮ್ಯಾನ್ ಹೋಲ್ ದುರಂತ: ರಾಯಚೂರು ಮೂಲದ ಇಬ್ಬರು ಕೂಲಿ ಕಾರ್ಮಿಕರು ಬಲಿ

    ಆನೇಕಲ್: ಕಳೆದ ಕೆಲ ದಿನಗಳ ಹಿಂದಯಷ್ಟೇ ಬೆಂಗಳೂರಿನ ಸೋಮಸಂದ್ರ ಪಾಳ್ಯದಲ್ಲಿ ನಡೆದಿದ್ದ ಮ್ಯಾನ್ ಹೋಲ್ ದುರಂತ ಮಾಸುವ ಮುನ್ನವೇ ಮಂಗಳವಾರ ಚರಂಡಿ ನೀರನ್ನು ಶುಚಿಗೊಳಿಸಲು ಹೋಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.

    ಬೆಂಗಳೂರಿನ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಬಡಾವಣೆಯ ವಾಣಿಜ್ಯ ಕಟ್ಟಡದಲ್ಲಿ ಘಟನೆ ಸಂಭವಿಸಿದ್ದು, ರಾಯಚೂರು ಮೂಲದ ರಾಮು(35) ಹಾಗೂ ರವಿ(28)ಮೃತ ದುರ್ದೈವಿಗಳಾಗಿದ್ದಾರೆ.

    ಇಂದು ಮಧ್ಯಾಹ್ನ ಯಮ್ ಲೋಕ್ ಹೋಟೆಲ್ ನ ಚರಂಡಿ ನೀರನ್ನು ಕ್ಲೀನ್ ಮಾಡಲು ವೇಳೆ ರಾಮು ಮ್ಯಾನ್ ಹೋಲ್ ಗೆ ಇಳಿದಿದ್ದಾರೆ. ಈ ವೇಳೆ ಅವರು ಉಸಿರು ಕಟ್ಟಿ ಸಹಾಯಕ್ಕೆ ಕೂಗಾಡಿದ್ದಾರೆ. ರಾಮು ಅವರನ್ನು ರಕ್ಷಣೆ ಮಾಡಲು ರವಿ ಕೂಡ ಒಳಗೆ ಇಳಿದಿದ್ದು ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.

    ಈ ವಿಚಾರ ತಿಳಿದ ಸ್ಥಳೀಯರು ಹೆಚ್‍ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಪಡೆ ಹರಸಹಾಸ ಪಟ್ಟು ಶವವನ್ನು ಹೊರತೆಗೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.

    ಹೋಟೆಲ್ ಮಾಲೀಕ ಅವಿನಾಶ್ ಗುಪ್ತ, ಮ್ಯಾನೇಜರ್ ಆಯುಷ್ ಗುಪ್ತ, ಕಟ್ಟಡ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವೆಂಕಟೇಶ್ ವಿರುದ್ಧ ಎಚ್‍ಎಎಲ್ ಪೊಲೀಸರು ದೂರು ದಾಖಲಿಸಕೊಂಡಿದ್ದಾರೆ. ಮ್ಯಾನೇಜರ್ ಆಯುಷ್ ಗುಪ್ತ ಹಾಗೂ ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಜನವರಿ ಮೊದಲ ವಾರದಲ್ಲಿ ಸೋಮಸಂದ್ರಪಾಳ್ಯ ಮ್ಯಾನ್‍ಹೋಲ್‍ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಎನ್ ಡಿ ಸೆಫಲ್ ಅಪಾರ್ಟ್ ಮೆಂಟ್ ಬಳಿಯ ಒಳಚರಂಡಿ ನೀರು ಸಂಸ್ಕರಣಾ ಘಟಕ(ಎಸ್ ಟಿಪಿ)ಕ್ಕೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು.

  • ಬೈಕ್ ಸಮೇತ ಓಪನ್ ಮ್ಯಾನ್ ಹೋಲ್ ಗೆ ಬಿದ್ದು, ಟಯರ್ ಸ್ಫೋಟಗೊಂಡು ಯುವಕ ದುರ್ಮರಣ

    ಬೈಕ್ ಸಮೇತ ಓಪನ್ ಮ್ಯಾನ್ ಹೋಲ್ ಗೆ ಬಿದ್ದು, ಟಯರ್ ಸ್ಫೋಟಗೊಂಡು ಯುವಕ ದುರ್ಮರಣ

    ಮುಂಬೈ: ಬೈಕ್ ಸಮೇತ ಮ್ಯಾನ್ ಹೋಲ್ ಗೆ ಬಿದ್ದು ಬಳಿಕ ಟಯರ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲೇ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

    ಈ ಘಟನೆ ಮುಂಬೈನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದ್ದು, ಮೃತ ದುರ್ದೈವಿ ಯುವಕನನ್ನು ಮೋಹನ್ ರಾಥೋಡ್(27) ಎಂದು ಗುರುತಿಸಲಾಗಿದೆ. ಇವರು ಉಲ್ವೆ ನಿವಾಸಿ ಎನ್ನಲಾಗಿದೆ.

    ಏನಿದು ಘಟನೆ?: ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ತನ್ನ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಮೋಹನ್ ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ. ಬೈಕ್ ಮ್ಯಾನ್ ಹೋಲ್ ಗೆ ಬಿದ್ದ ಬಳಿಕ ಮ್ಯಾನ್ ಹೋಲ್ ಒಳಗಡೆಯೇ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಅವರ ದೇಹ ಭಾಗಶಃ ಸುಟ್ಟು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಸ್ಮಿತಾ ಜಾಧವ್ ತಿಳಿಸಿದ್ದಾರೆ.

    ಪೈಪ್ ಲೈನ್ ಗೋಸ್ಕರ ಈ ಮ್ಯಾನ್ ಹೋಲ್ ತೆರೆದಿದ್ದು, ಇದರ ಮೇಲೆ ಕವರ್ ಮಾಡದಿರುವುದು ಘಟನೆಗೆ ಕಾರಣವಾಗಿದ್ದು, ಅಲ್ಲದೇ ಮೃತ ಮೋಹನ್ ಮದ್ಯಪಾನ ಮಾಡಿದ್ದರಿಂದ ಬೈಕನ್ನು ನಿಯಂತ್ರಿಸಲು ಸಾಧ್ಯವಾಗದೇ ಈ ದುರಂತ ಸಂಭವಿಸಿದೆ ಅಂತ ಅವರು ಹೇಳಿದ್ದಾರೆ.

    ಘಟನೆಯ ಬಳಿಕ ಕೆಲ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಮೋಹನ್ ಅವರನ್ನು ಮ್ಯಾನ್ ಹೋಲ್ ನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೋಹನ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಸಿವಿಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೋಹನ್ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಅಂತ ಪೊಲೀಸರು ವಿವರಿಸಿದ್ದಾರೆ.

  • ಮ್ಯಾನ್ ಹೋಲ್ ಶುಚಿಗೊಳಿಸಲು ಗುಂಡಿಗಿಳಿದ ಮೂವರು ಕಾರ್ಮಿಕರ ಸಾವು

    ಮ್ಯಾನ್ ಹೋಲ್ ಶುಚಿಗೊಳಿಸಲು ಗುಂಡಿಗಿಳಿದ ಮೂವರು ಕಾರ್ಮಿಕರ ಸಾವು

    ಬೆಂಗಳೂರು: ಎಸ್ ಟಿ ಪಿ ಪ್ಲಾಂಟ್ ಶುಚಿಗೊಳಿಸಲು ಹೋಗಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ನಗರದ ಸೋಮಸುಂದರ ಪಾಳ್ಯದ ಸಫಲ್ ಅಪಾರ್ಟ್ ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಮೃತರು ಮಾದೇವಯ್ಯ, ನಾರಾಯಣಸ್ವಾಮಿ ಹಾಗೂ ಶ್ರೀನಿವಾಸ್ ಎಂದು ತಿಳಿದು ಬಂದಿದೆ.

    ಮ್ಯಾನ್ ಹೋಲ್‍ಗಳನ್ನು ಶುಚಿಗೊಳಿಸಲು ಕಾರ್ಮಿಕರನ್ನು ಬಳಸಬಾರದೆಂದು ಸುಪ್ರೀಂ ಕೋರ್ಟ್ ನಿಷೇಧ ಹೇರಿದ್ದರೂ ಗುತ್ತಿಗೆದಾರರು ಯಂತ್ರವನ್ನು ಬಳಸದೆ ಖಾಸಗಿ ಕೂಲಿ ಕಾರ್ಮಿಕರನ್ನು ಪ್ಲಾಂಟ್ ನಲ್ಲಿ ಇಳಿಸಿದ್ದು, ಈ ವೇಳೆ ವಿಷಯುಕ್ತ ಗಾಳಿ ಸೇವಿಸಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಮೂರು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಸ್ಥಳೀಯ ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ ಹಾಗೂ ಶಾಸಕ ಸತೀಶ್ ರೆಡ್ಡಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಘಟನಾ ಸ್ಥಳದಲ್ಲಿ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಅಕ್ರೋಶಗೊಂಡ ಮೃತನ ಸಂಬಂಧಿಕರು ಅಪಾರ್ಟ್ ಮೆಂಟ್ ಅಸೋಸಿಯೇಷನ್ ಸದಸ್ಯನ ಮೇಲೆ ಹಲ್ಲೆ ನಡೆಸಿದ್ದಾರೆ.