Tag: Mango Plantation

  • ಮಾವಿನ ತೋಟಕ್ಕೆ ಅಳವಡಿಸಿದ್ದ ಮುಳ್ಳು ತಂತಿಗೆ ಸಿಲುಕಿ ಚಿರತೆ ಸಾವು

    ಮಾವಿನ ತೋಟಕ್ಕೆ ಅಳವಡಿಸಿದ್ದ ಮುಳ್ಳು ತಂತಿಗೆ ಸಿಲುಕಿ ಚಿರತೆ ಸಾವು

    ಕೋಲಾರ: ಮಾವಿನ ತೋಟಕ್ಕೆ ಅಳವಡಿಸಿದ್ದ ಮುಳ್ಳು ತಂತಿ ಬೇಲಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ತಾಲೂಕಿನ ತಲಗುಂದ ಪುರಹಳ್ಳಿ ಬಳಿ ನಡೆದಿದೆ.

    ತಲಗುಂದ ಗ್ರಾಮದ ರಮೇಶ್ ಅವರಿಗೆ ಸೇರಿದ ಮಾವಿನ ತೋಪಿನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ವೇಳೆ ಆಹಾರ ಅರಿಸಿ ಬಂದು ಮುಳ್ಳು ತಂತಿ ಬೇಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ಇದೆ.

    ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಲ್ಲದೆ ಚಿರತೆ ಕಂಡು ಜನ ಸಹ ಭಯಭೀತರಾಗಿದ್ದಾರೆ.

  • ರಾತ್ರೋ ರಾತ್ರಿ ತೋಟದಲ್ಲಿದ್ದ 600ಕ್ಕೂ ಹೆಚ್ಚು ಸಸಿಗಳು ನಾಶ

    ರಾತ್ರೋ ರಾತ್ರಿ ತೋಟದಲ್ಲಿದ್ದ 600ಕ್ಕೂ ಹೆಚ್ಚು ಸಸಿಗಳು ನಾಶ

    ರಾಯಚೂರು: ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಉಂಡ್ರಾಳದೊಡ್ಡಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಸಸಿಗಳನ್ನು ನಾಶ ಮಾಡಲಾಗಿದೆ.

    ಕಾಂಗ್ರೆಸ್ ಕಾರ್ಯಕರ್ತ ಗ್ರಾಮ ಪಂಚಾಯ್ತಿ ಸದಸ್ಯ ರಂಗನಾಥ್ ತೋಟದ ಮಾವಿನ ಸಸಿಗಳು ನಾಶವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕೆಲವರು ಹಿಂದಿನಿಂದಲೂ ದ್ವೇಷ ಸಾಧಿಸುತ್ತಿದ್ದು ಅವರೇ ಈ ಕೃತ್ಯ ಎಸಗಿದ್ದಾರೆ ಅಂತ ರಂಗನಾಥ್ ಆರೋಪಿಸಿದ್ದು, ಕರಿಯಪ್ಪ ನಾಯಕ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.

    9 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 900 ಗಿಡಗಳಲ್ಲಿ 600 ಕ್ಕೂ ಹೆಚ್ಚು ಗಿಡಗಳನ್ನ ನಾಶ ಮಾಡಲಾಗಿದೆ. ಘಟನೆ ಹಿನ್ನೆಲೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.