Tag: mango chitranna

  • ಸೋಮವಾರಕ್ಕೆ ಮಾಡಿ ಹುಳಿ ಹುಳಿ ಮಾವಿನಕಾಯಿ ಚಿತ್ರಾನ್ನ

    ಸೋಮವಾರಕ್ಕೆ ಮಾಡಿ ಹುಳಿ ಹುಳಿ ಮಾವಿನಕಾಯಿ ಚಿತ್ರಾನ್ನ

    ಮಾವಿನಕಾಯಿ ಸೀಸನ್ ಮುಗಿಯುತ್ತಾ ಬಂದಿದೆ. ಹೀಗಾಗಿ ನಾವು ಇಂದು ಮಾವಿನಕಾಯಿ ಚಿತ್ರಾನ್ನವನ್ನು ಮಾಡಿ ಸವಿದರೆ ಚೆನ್ನಾಗಿರುತ್ತದೆ. ಮಾವಿನಕಾಯನ್ನು ಸೇರಿಸಿ ತಯಾರಿಸುವ ಚಿತ್ರಾನ್ನ ಅದ್ಭುತ ರುಚಿಯನ್ನು ಹೊಂದಿರುತ್ತದೆ. ಉತ್ತಮ ಪರಿಮಳ ಹಾಗೂ ರುಚಿಯು ಮತ್ತೆ ಮತ್ತೆ ಚಿತ್ರಾನ್ನವನ್ನು ಸವಿಯಲು ಪ್ರೇರೇಪಿಸುವುದು ಅಂತು ಖಂಡಿತಾ ಹೌದು..

    ಬೇಕಾಗುವ ಸಾಮಗ್ರಿಗಳು:
    * ಅನ್ನ- 2 ಕಪ್
    * ಮಾವಿನಕಾಯಿ ತುರಿ- 1ಕಪ್
    * ಮೆಣಸಿನಕಾಯಿ- 5
    * ಇಂಗು ಚಿಟಿಕೆ
    * ಮೆಂತೆಪುಡಿ – 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಅರಿಶಿಣ – ಅರ್ಧ ಟೀ ಸ್ಪೂನ್
    * ಎಣ್ಣೆ – ಟೀ ಸ್ಪೂನ್
    * ಸಾಸಿವೆ – 1 ಚಮಚ
    * ಉದ್ದಿನ ಬೇಳೆ- 1 ಚಮಚ
    * ಹುರಿದ ನೆಲಗಡಲೆ ಅಗತ್ಯಕ್ಕೆ ತಕ್ಕಷ್ಟು
    * ಕರಿಬೇವು- ಅಗತ್ಯಕ್ಕೆ ತಕ್ಕಷ್ಟು
    * ಕೊತ್ತಂಬರಿ ಸೊಪ್ಪು

    ಮಾಡುವ ವಿಧಾನ:
    * ಹಸಿ ಮೆಣಸಿನಕಾಯಿ, ಇಂಗು ಮತ್ತು ಅರಿಶಿನವನ್ನು ಸೇರಿಸಿ ಒರಟಾಗಿ ರುಬ್ಬಿಕೊಂಡಿರಬೇಕು.
    * ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿಯಾದ ಬಳಿಕ ಸಾಸಿವೆ, ಉದ್ದಿನ ಬೇಳೆ, ಶೇಂಗಾ ಸೇರಿಸಿ 2-3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಬೇಕು.  ಇದನ್ನೂ ಓದಿ: ನಾಟಿ ಸ್ಟೈಲ್ ಪೆಪ್ಪರ್ ಚಿಕನ್ ಮಾಡುವ ವಿಧಾನ

    * ರುಬ್ಬಿಕೊಂಡ ಪೇಸ್ಟ್ ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿ. ನಂತರ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಮೇಥಿ ಪುಡಿ, ಅನ್ನ ಮತ್ತು ತುರಿದ ಮಾವಿನಕಾಯಿಯನ್ನು ಸೇರಿಸಿ, ಮಿಶ್ರಣಗೊಳಿಸಿ.

    * ಮಾವಿನಕಾಯಿ ಅತಿಯಾದ ಹುಳಿಯನ್ನು ಹೊಂದಿದ್ದರೆ ಒಂದು ಟೀ ಚಮಚ ಸಕ್ಕರೆಯನ್ನು ಸೇರಿಸಬಹುದು. ಇದೀಗ ರುಚಿಯಾದ ಬಿಸಿ ಬಿಸಿಯಾದ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ದವಾಗಿದೆ.