Tag: Mango Chaat

  • ‘ಮ್ಯಾಂಗೋ ಚಾಟ್’ ಮಾಡುವ ಸೂಪರ್ ವಿಧಾನ

    ‘ಮ್ಯಾಂಗೋ ಚಾಟ್’ ಮಾಡುವ ಸೂಪರ್ ವಿಧಾನ

    ಮಾವಿನಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಿರಲ್ಲ. ಅದರಲ್ಲಿಯೂ ಮಾವಿನಿಂದ ಮಾಡಿದ ಯಾವುದೇ ತಿಂಡಿಗಳನ್ನು ಎಲ್ಲ ಮಂದಿ ಸಂತೋಷದಿಂದ ಸವಿಯುತ್ತಾರೆ. ಅದರಲ್ಲಿಯೂ ಮ್ಯಾಗೋ ಚಾಟ್ ಎಲ್ಲರ ಬಾಯಲ್ಲಿ ನೀರು ಬರಿಸುತ್ತೆ. ಅದಕ್ಕೆ ಇಂದು ನಿಮಗೆ ಸಿಂಪಲ್ ಆಗಿ ‘ಮ್ಯಾಗೋ ಚಾಟ್’ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಕಡ್ಲೆ ಪುರಿ – 2 ಕಪ್
    * ಕಟ್ ಮಾಡಿದ ಹಸಿ ಮಾವಿನಕಾಯಿ ಅಥವಾ ತುರಿಯಬಹುದು – 1 ಕಪ್
    * ಹುರಿದ ಕಡಲೆಕಾಯಿ – 1/2 ಕಪ್
    * ಕಟ್ ಮಾಡಿದ ಈರುಳ್ಳಿ – 2
    * ಹಸಿರು ಮೆಣಸಿನಕಾಯಿ – 3* ನಿಂಬೆ ರಸ – 1 ಚಮಚ
    * ಚಾಟ್ ಮಸಾಲಾ ಪುಡಿ – 1 ಟೀಚಮಚ
    * ನ್ಯಾಚೋಸ್ – 1/2 ಕಪ್
    * ಕಟ್ ಮಾಡಿದ ಟೊಮೆಟೊ – 2
    * ಬೇಯಿಸಿದ ಆಲೂಗಡ್ಡೆ – 2
    * ಕೆಂಪು ಮೆಣಸಿನ ಪುಡಿ – 1 ಟೀಚಮಚ
    * ಅಗತ್ಯವಿರುವಂತೆ ಕಪ್ಪು ಉಪ್ಪು

    ಮಾಡುವ ವಿಧಾನ:
    * ದೊಡ್ಡ ಬಟ್ಟಲಿಗೆ ಕಟ್ ಮಾಡಿದ ಮಾವಿನಕಾಯಿ, ಬೇಯಿಸಿದ ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈ ಮಿಶ್ರಣಕ್ಕೆ ಕಟ್ ಮಾಡಿದ ಹಸಿರು ಮೆಣಸಿನಕಾಯಿ, ಹುರಿದ ಕಡಲೆಕಾಯಿ, ಪುಡಿಮಾಡಿದ ನಾಚೋಸ್ ಮತ್ತು ಕಡ್ಲೆ ಪುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಂತೆ ಚಾಟ್ ಮಸಾಲ, ಕೆಂಪು ಮೆಣಸಿನ ಪುಡಿ, ಕಪ್ಪು ಉಪ್ಪು ಮತ್ತು ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ.

    – ಸರ್ವಿಂಗ್ ಬೌಲ್‍ಗೆ ಹಾಕಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ, ಆನಂದಿಸಿ.