Tag: Manglore

  • ನಾನು ಭ್ರಷ್ಟಾಚಾರ ಎಸಗಿಲ್ಲ – ಮಾರಿಗುಡಿಯಲ್ಲಿ ಹರೀಶ್ ಪೂಂಜಾ ಪ್ರಮಾಣ

    ನಾನು ಭ್ರಷ್ಟಾಚಾರ ಎಸಗಿಲ್ಲ – ಮಾರಿಗುಡಿಯಲ್ಲಿ ಹರೀಶ್ ಪೂಂಜಾ ಪ್ರಮಾಣ

    ಮಂಗಳೂರು: ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ಎಸಗಿಲ್ಲ ಎಂದು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಅವರು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.

    ನಾನು ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಒಂದು ವೇಳೆ ತಪ್ಪುಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ ಎಂದು ಬೆಳ್ತಂಗಡಿ ಮಾರಿಗುಡಿ ದೇವಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ಗೆ ಜೈಲೇ ಗತಿ – ಆ.28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

    ಪ್ರಮಾಣ ಮಾಡಿದ್ದು ಯಾಕೆ?
    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ (Rakshith  Shivaram) ಆರೋಪಿಸಿದ್ದರು. ಇದನ್ನೂ ಓದಿ:ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಇಟ್ಟ ಸವಾರ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ- ಬೆಳ್ತಂಗಡಿ (Belthangadi) ಪ್ರವಾಸಿ ಬಂಗಲೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ. ಹೆದ್ದಾರಿಯ ಕಾಮಗಾರಿಯಲ್ಲಿ ಶಾಸಕ 3 ಕೋಟಿ ಕಿಕ್ ಬ್ಯಾಕ್ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡರೂ 2 ಕೋಟಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಮಾಡಿದ್ದಾರೆ ಎಂದು ದೂರಿದ್ದರು. ಇದನ್ನೂ ಓದಿ:ಬಾಲ ರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ

    ಮಾರ್ಚ್ 28, 2023 ರಲ್ಲಿ ಬೆಳ್ತಂಗಡಿಲ್ಲಿ ಪ್ರವಾಸಿ ಮಂದಿರ ಉದ್ಘಾಟನೆಯಾಗಿತ್ತು. ಈ ಪ್ರವಾಸಿ ಮಂದಿರ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪ್ರವಾಸಿ ಮಂದಿರದ ಅನುದಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಲ್ಲ: ಡಿಕೆಶಿ

    ಇಬ್ಬರ ನಡುವಿನ ವಾಕ್ಸಮರ ಜೋರಾಗುತ್ತಿದ್ದಂತೆ ಇಂದು ಹರೀಶ್ ಪೂಂಜಾ ಅವರು ಮಾರಿಗುಡಿಗೆ ಬಂದು ಪ್ರಮಾಣ ಮಾಡಿದ್ದಾರೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆದು ನಾನು ತಪ್ಪು ಮಾಡಿಲ್ಲ. ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಿಕೊಂಡಿದ್ದಾರೆ.ಕೇಜ್ರಿವಾಲ್‌ಗೆ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

  • ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ಸೌತ್ ಬ್ಯೂಟಿ ಪೂಜಾ ಹೆಗ್ಡೆ ಅವರು ಇತ್ತೀಚಿಗೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಚಿತ್ರ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಹೀಗಿರುವಾಗ ತಮ್ಮ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ, ಮಂಗಳೂರಿಗೆ ನಟಿ ಪೂಜಾ ಹೆಗ್ಡೆ (Pooja Hegde) ಬಂದು ಇಳಿದಿದ್ದಾರೆ.

    ಕುಟುಂಬದ (Family) ಜೊತೆ ಪೂಜಾ ಹೆಗ್ಡೆ ಬಾಂಬೆಯಲ್ಲಿ ಸೆಟೆಲ್ ಆಗಿದ್ರು ಕೂಡ ಆಗಾಗ ನಟಿ ಮಂಗಳೂರಿಗೆ (Mangaluru) ಬಂದು ಹೋಗುತ್ತಾರೆ. ಪೂಜಾ ಕುಟುಂಬ ಮೂಲತಃ ಮಂಗಳೂರಿನವರಾಗಿದ್ದು, ದೈವ ಕೋಲ, ಕಟೀಲು ದೇವಸ್ಥಾನ ಅಂತಾ ಬಂದು ಹೋಗುತ್ತಾರೆ.

    ಇದೀಗ ಸಿನಿಮಾ ತೆರೆಕಂಡ ಬೆನ್ನಲ್ಲೇ ತಮ್ಮ ಕುಟುಂಬದ ಜೊತೆ ಮಂಗಳೂರಿಗೆ ಪೂಜಾ ಬಂದಿದ್ದಾರೆ. ಕಾಡಿನಲ್ಲಿ ಸುತ್ತಾಡಿ, ಹೆಬ್ಬಲಸು ಕಿತ್ತು ತಿಂದಿದ್ದಾರೆ. ನಾಯಿ ಜೊತೆ ಆಟವಾಡಿದ್ದಾರೆ. ಮಂಗಳೂರಿನ ರುಚಿಯಾದ ಮೀನಿನ ಊಟ ಸವಿದಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಸದ್ದು ಮಾಡುತ್ತಿದ್ದಾರೆ ಕನ್ನಡದ ಮತ್ತೋರ್ವ ನಟ ಸರ್ದಾರ್ ಸತ್ಯ

     

    View this post on Instagram

     

    A post shared by Pooja Hegde (@hegdepooja)

    ಮಹೇಶ್ ಬಾಬು ನಟನೆಯ ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲು ಕಂಡಿರುವ ಪೂಜಾಗೆ ಮುಂದಿನ ಚಿತ್ರವಾದರೂ ಸಕ್ಸಸ್ ತಂದು ಕೊಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

  • ರಾಜಕೀಯ ಅಖಾಡಕ್ಕೆ ಸ್ಯಾಂಡಲ್‌ವುಡ್‌ ನಟಿ ಪೂಜಾ ರಮೇಶ್

    ರಾಜಕೀಯ ಅಖಾಡಕ್ಕೆ ಸ್ಯಾಂಡಲ್‌ವುಡ್‌ ನಟಿ ಪೂಜಾ ರಮೇಶ್

    ನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪೂಜಾ ರಮೆಶ್(Pooja Ramesh) ಇದೀಗ ರಾಜಕೀಯದತ್ತ(Politics) ಮುಖ ಮಾಡಿದ್ದಾರೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ಅಖಾಡದಲ್ಲಿ ಮಿಂಚಲು ನಟಿ ಸಜ್ಜಾಗಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ(Sandalwood) ಪೇಪರ್ ದೋಣಿ, ನಿರುದ್ಯೋಗಿ, ಲಹರಿ, ತಾಂಡವ, ಮಹಾಕಾಳಿ, ಸಿನಿಮಾಗಳ ಗಮನ ಸೆಳೆದ ನಟಿ ಪೂಜಾ ರಮೇಶ್ ಇದೀಗ ರಾಜಕೀಯಕ್ಕೆ ಬರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕರಾವಳಿ ಮೂಲದ ನಟಿ ರಾಯಚೂರಿನಲ್ಲಿ ಸ್ಪರ್ಧೆಗೆ ನಿಲ್ಲುವುದಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ


    ತಾವು ರಾಯಚೂರಿನಿಂದ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ಪೂಜಾ ರಮೇಶ್ ಹೇಳಿದ್ದಾರೆ. ರಾಯಚೂರಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಕಾರಣ ತಿಳಿಸಿರುವ ನಟಿ ಪೂಜಾ, ಇಲ್ಲಿ ಕೆಲ ಸಮಯದಿಂದಲೂ ನಾನು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಈ ಭಾಗದ ಜನರೊಟ್ಟಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಹಾಗಾಗಿ ನಾನು ಈ ರಾಯಚೂರಿನಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದಾರೆ.

    ಸದ್ಯ ಬಣ್ಣದ ಲೋಕಕ್ಕೆ ಬ್ರೇಕ್ ಹಾಕಿ, ಚುನಾವಣೆ ಅಖಾಡದಲ್ಲಿ ಇಳಿಯಲು ಪೂಜಾ ರಮೇಶ್ ರೆಡಿಯಾಗಿದ್ದಾರೆ. ಚಂದನವನದಲ್ಲಿ ಗುರುತಿಸಿಕೊಂಡಿರುವ ಹಾಗೆ, ರಾಜಕೀಯದಲ್ಲೂ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

    `ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

    ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ನಾಲ್ಕು ವರ್ಷಗಳ ನಂತರ ಮತ್ತೆ ನಟನೆಗೆ ಮರಳಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಕರಾವಳಿ ಬೆಡಗಿ ಐಶ್ವರ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ವಿಶ್ವ ಸುಂದರಿ ಐಶ್ವರ್ಯ ಬಾಲಿವುಡ್ ಮತ್ತು ತೆಲುಗು ಮತ್ತು ತಮಿಳು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. ಇದೀಗ `ಮಣಿರತ್ನಂ’ ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಚಿತ್ರದ ಮೂಲಕ ಕರಾವಳಿ ನಟಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದ ಲುಕ್ ಕೂಡ ಚಿತ್ರತಂಡ ರಿವೀಲ್ ಮಾಡಿದ್ದು, ಮಹಾರಾಣಿಯಂತೆ ಐಶ್ವರ್ಯ ರೈ ಕಂಗೊಳಿಸುತ್ತಿದ್ದಾರೆ. ಈ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.ಇದನ್ನೂ ಓದಿ: ಕಾಫಿ ವಿತ್ ಕರಣ್ ಶೋದಲ್ಲಿ ಕಾಣಿಸಿಕೊಳ್ಳಲು ಕೋಟಿ ರೂ ಕೇಳಿದ್ರಾ ರಣಬೀರ್ ಕಪೂರ್

    ಎಂದೂ ಮಾಡಿರದ ಭಿನ್ನ ಪಾತ್ರದಲ್ಲಿ ಐಶ್ವರ್ಯ ರೈ ಕಾಣಿಸಿಕೊಳ್ತಿದ್ದಾರೆ. ನಂದಿನಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ಮಹಾರಾಣಿಯಂತೆ ಕಂಗೊಳಿಸುತ್ತಿರುವ ನಟಿಯ ಪೋಸ್ಟರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಇನ್ನು ಜನಪ್ರಿಯ ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾದಂಬರಿ ಆಧರಿಸಿ `ಪೊನ್ನಿಯನ್ ಸೆಲ್ವನ್’ ಚಿತ್ರ ಮಾಡಲಾಗಿದೆ. ಇನ್ನೂ ಐಶ್ವರ್ಯ ರೈ ಜತೆ ಕಾರ್ತಿ, ತ್ರಿಷಾ, ವಿಕ್ರಮ್‌,ಪ್ರಕಾಶ್‌ ರಾಜ್‌, ಜಯರಾಮ್‌, ಜಯಂ ರವಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ಹಿಂದಿ,ತಮಿಳು, ತೆಲುಗು ಮತ್ತು ಹಿಂದಿ ವರ್ಷನ್‌ನಲ್ಲಿ ಈ ವರ್ಷ ಸೆಪ್ಟೆಂಬರ್ 30ಕ್ಕೆ ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕ ಕಿರುಕುಳ ಕೇಸ್ – ವಕೀಲ ರಾಜೇಶ್ ನ್ಯಾಯಾಲಯಕ್ಕೆ ಶರಣು

    ಲೈಂಗಿಕ ಕಿರುಕುಳ ಕೇಸ್ – ವಕೀಲ ರಾಜೇಶ್ ನ್ಯಾಯಾಲಯಕ್ಕೆ ಶರಣು

    ಮಂಗಳೂರು: ಇಂಟರ್ನ್‍ಶಿಪ್ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಆರೋಪಿ ವಕೀಲ ರಾಜೇಶ್ ಕೊನೆಗೂ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

    ನಗರದ ಮೂರನೇ ಜೆ.ಎಂ.ಎಫ್.ಸಿ ಕೋರ್ಟ್‍ಗೆ ವಕೀಲ ಕೆ.ಎಸ್.ಎನ್.ರಾಜೇಶ್ ಶರಣಾಗಿದ್ದಾನೆ. ಮಂಗಳೂರಿನ ಪ್ರಖ್ಯಾತ ವಕೀಲನಾಗಿದ್ದ ರಾಜೇಶ್ ವಿರುದ್ದ ಕಾನೂನು ವಿದ್ಯಾರ್ಥಿನಿ ದೂರು ನೀಡಿದ್ದರು. ಆರೋಪಿ ವಕೀಲನಿಂದ ನಿರಂತರ ಲೈಂಗಿಕ ಕಿರುಕುಳದ ಜೊತೆಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಅಕ್ಟೋಬರ್ 19 ರಂದು ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ

    ದೂರು ದಾಖಲಾದ ಬಳಿಕ ಕಳೆದ ಎರಡು ತಿಂಗಳಿನಿಂದ ಆರೋಪಿ ನಾಪತ್ತೆಯಾಗಿದ್ದ. ಸುಪ್ರೀಂ ಕೋರ್ಟ್‍ನಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಇದನ್ನೂ ಓದಿ: ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ತಂದೇ ತರುತ್ತೇವೆ: ಬಿಎಸ್‌ವೈ

     

  • ಘಾನಾದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು – ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ

    ಘಾನಾದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು – ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ

    ಮಂಗಳೂರು: ಹೈರಿಸ್ಕ್ ದೇಶ ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದನ್ನೂ ಓದಿ: ಭಾರತದಲ್ಲಿ ಓಮಿಕ್ರಾನ್‌ ಸೆಂಚುರಿ – 101 ಮಂದಿಗೆ ಸೋಂಕು

    ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ರ್ಯಾಪಿಡ್ ಆರ್.ಟಿ.ಪಿ.ಸಿ.ಆರ್. ತಪಾಸಣೆ ವೇಳೆ ಪಾಸಿಟಿವ್ ಪತ್ತೆಯಾಗಿದೆ. ಆ ಪ್ರಯಾಣಿಕನ ಹತ್ತಿರದ ಸೀಟಿನ ಒಟ್ಟು 27 ಪ್ರಯಾಣಿಕರಿಗೆ ಟೆಸ್ಟ್ ನಡೆಸಿ ಕ್ವಾರೆಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಪ್ರಯಾಣಿಕರ ಗಂಟಲು ದ್ರವ್ಯವನ್ನು ಜನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಯ ದೃಷ್ಟಿ ತೆಗೆದ ಮಂಜಮ್ಮ ಜೋಗತಿ!

    ಪಾಸಿಟಿವ್ ಬಂದ ಹಿನ್ನೆಲೆ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದು, ಏರ್ ಪೋರ್ಟ್ ಮುಖ್ಯಸ್ಥರು, ಏರ್ ಪೋರ್ಟ್ ಆರೋಗ್ಯಾಧಿಕಾರಿ (ಎ.ಪಿ.ಹೆಚ್.ಓ), ಜಿಲ್ಲಾ ಸರ್ವೇಕ್ಷಾಣಾಧಿಕಾರಿ (ಡಿ.ಎಸ್.ಓ), ಕೋವಿಡ್ ನೋಡಲ್ ಅಧಿಕಾರಿ ಹಾಗೂ ಅಪೋಲೋ ಲ್ಯಾಬ್ ಮುಖ್ಯಸ್ಥರೊಂದಿಗೆ ಈ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಿಗಿಗೊಳಿಸಲು ಸೂಚನೆ ನೀಡಿದ್ದಾರೆ.

  • ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಗಿಯದ ಪೂಜೆ ವಿವಾದ- ಪೂಜೆಯಲ್ಲೇ ನ್ಯೂನ್ಯತೆ ಇದೆ ಎಂದು ಆರೋಪ

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಗಿಯದ ಪೂಜೆ ವಿವಾದ- ಪೂಜೆಯಲ್ಲೇ ನ್ಯೂನ್ಯತೆ ಇದೆ ಎಂದು ಆರೋಪ

    ಮಂಗಳೂರು: ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಶೈವ-ವೈಷ್ಣವ ಪೂಜಾ ವಿವಾದ ಸದ್ಯ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ದೇವಸ್ಥಾನದಲ್ಲಿ ನಡೆಯುತ್ತಿರುವ ಪೂಜಾ ಪದ್ದತಿಗಳಲ್ಲೇ ನ್ಯೂನ್ಯತೆಗಳಿದೆ,ಈ ನಡುವೆ ಅರ್ಚಕರು ದೇವತಾ ತಾರತಮ್ಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ದೇವಸ್ಥಾನದ ಹಿತರಕ್ಷಣಾ ವೇದಿಕೆ ಮಾಡಿದೆ.

    ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಪೂಜಾ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ದೇವಸ್ಥಾನದಲ್ಲಿ ಶಿವರಾತ್ರಿಯ ಆಚರಣೆ ಮಾಡುವ ವಿಚಾರದಲ್ಲಿ ನಡೆದಿದ್ದ ಜಟಾಪಟಿ ಇದೀಗ ದೇವಸ್ಥಾನದಲ್ಲಿ ನಡೆಯುವ ದೈನಂದಿನ ಪೂಜೆಯಲ್ಲೇ ನ್ಯೂನತೆಗಳಿದೆ ಎಂದು ಹೇಳುವಷ್ಟರ ಮಟ್ಟಿಗೆ ಬಂದು ತಲುಪಿದೆ. ಕುಕ್ಕೆ ಸುಬ್ರಹ್ಮಣ್ಯ ಶೈವಾಂಶ ದೇವಸ್ಥಾನವಾಗಿದ್ದರು ಸಹ ಇಲ್ಲಿ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನು ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪಿಸಿದ್ದು, ಮೂಲ ದೇವರಿಗೆ ಪೂಜೆ ಮಾಡದೆ ವಿಷ್ಣುವಿಗೆ ಪೂಜೆ ಮಾಡುತ್ತಾರೆ. ಅಷ್ಟಮಂಗಲದಲ್ಲಿಯೂ ಪೂಜೆಯಲ್ಲಿ ಆಗುತ್ತಿರುವ ಈ ನ್ಯೂನತೆಗಳು ಉಲ್ಲೇಖವಾಗಿದೆ ಎಂದು ದೇವಸ್ಥಾನದ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್ ಆರೋಪಿಸಿದ್ದಾರೆ.

    ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರುಗಳಿಗೆ ಆಯಾಯ ರೀತಿಯಲ್ಲಿ ಪೂಜೆ ಸಲ್ಲಿಸಬೇಕು. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ 1980ರಲ್ಲಿ ಆಗಿರುವನಿರ್ಧಾರದ ಪ್ರಕಾರವೇ ಪೂಜೆ ನಡೆಯಬೇಕು ಎಂಬುದು ದೇವಸ್ಥಾನ ಹಿತರಕ್ಷಣಾ ವೇದಿಕೆಯ ಒತ್ತಾಯವಾಗಿದೆ. ಆದರೆ ಇಲ್ಲಿ ಅರ್ಚಕರು ದೇವತಾ ತಾರತಮ್ಯ ಮಾಡುತ್ತಿದ್ದಾರೆ, ಶಿವಲಿಂಗಕ್ಕೆ ವಿಷ್ಣು ಅಂತರ್ಯಾಮಿ ಎಂದು ಪೂಜೆ ಮಾಡುತ್ತಾರೆ, ಈ ನಡುವೆ ಸುಬ್ರಹ್ಮಣ್ಯ ದೇವರ ಒಳಗಿರುವ ವಿಷ್ಣುವಿಗೆ ಪೂಜೆ ಮಾಡುತ್ತಾರೆ, ನೈವೇದ್ಯ ವಿಷ್ಣುವಿಗೆ ನೀಡುತ್ತಾರೆ, ಶಿವ ದೇವರ ನೈವೇದ್ಯ ಪ್ರಸಾದವನ್ನು ಸಹಿತ ಅರ್ಚಕರು ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಈ ವಿವಾದಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆಗಳಿಂದ ಭಕ್ತರು ಗೊಂದಲ ಮತ್ತು ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕಾರಿಗಳು, ಭಕ್ತರು, ಅರ್ಚಕರು, ಧಾರ್ಮಿಕ ಪರಿಷತ್‍ನ ಜೊತೆ ಸಭೆ ನಡೆಸಿ ಈ ಎಲ್ಲಾ ಗೊಂದಲವನ್ನು ನಿವಾರಿಸಬೇಕಾಗಿದೆ.

  • ನಮೋ ವಿರುದ್ಧ ತುಳು ನಟನ ಧ್ವನಿ- ಆಕ್ರೋಶದ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ನಮೋ ವಿರುದ್ಧ ತುಳು ನಟನ ಧ್ವನಿ- ಆಕ್ರೋಶದ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಮಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿದ ತುಳು ಕಿರುತೆರೆ ನಟ ಮಂಗಳೂರಿನ ವಿಜಯ್ ಶೋಭರಾಜ್ ಪಾವೂರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಜಯ್ ಶೋಭಾರಾಜ್ ಪಾವೂರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ‘ನಮೋ ನಮಗೆ ಮೋಸ, ಪೆಟ್ರೋಲ್ ಧಗ ಧಗ, ಡೀಸೆಲ್ ಭಗ ಭಗ’ ಎಂದು ಬರೆದುಕೊಂಡಿದ್ದರು. ಇದನ್ನು ವಿರೋಧಿಸಿರುವ ನಮೋ ಅಭಿಮಾನಿಗಳು ಮೋದಿ ಬಗ್ಗೆ ಮಾತಾನಾಡಿದರೆ ನಾವು ಸುಮ್ಮನಿರುವುದಿಲ್ಲ. ನಿಮ್ಮ ನೂತನ ತುಳು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪೋಸ್ಟ್ ಗೆ ತೀವ್ರ ಪ್ರತಿರೋಧ ಬರುತ್ತಿದ್ದಂತೆ ಶೋಭರಾಜ್ ಪೋಸ್ಟ್ ಡಿಲೀಟ್ ಮಾಡಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

    ಶೋಭರಾಜ್ ಹಲವು ತುಳು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ, ನಿರ್ದೇಶಕರಾಗಿ ಮಿಂಚಿದ್ದರು. ಪ್ರಸ್ತುತ ಕನ್ನಡ ಖಾಸಗಿ ಚಾನಲ್ ಒಂದರಲ್ಲಿ ಬರುವ ಸೀರಿಯಲ್‍ನಲ್ಲೂ ಶೋಭರಾಜ್ ಕಾಣಿಸಿಕೊಂಡಿದ್ದಾರೆ.

  • ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ – ಬಂಧಿತರಿಗೆ ಉಗ್ರ ಸಂಘಟನೆ ಟಚ್ ಇರೋ ಶಂಕೆ

    ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ – ಬಂಧಿತರಿಗೆ ಉಗ್ರ ಸಂಘಟನೆ ಟಚ್ ಇರೋ ಶಂಕೆ

    ಮಂಗಳೂರು: ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೂ ಉಗ್ರ ಸಂಘಟನೆಗಳಿಗೂ ಲಿಂಕ್ ಇದ್ಯಾ ಎನ್ನುವ ಶಂಕೆ ವ್ಯಕ್ತವಾಗಿದೆ.

    ಕಳೆದ ನವೆಂಬರ್ 27 ರಂದು ಮಂಗಳೂರಿನ ಬಿಜೈ ಹಾಗೂ ನ.30 ರಂದು ಕೋರ್ಟ್ ರಸ್ತೆಯಲ್ಲಿ ಗೋಡೆ ಬರಹ ಪತ್ತೆಯಾಗಿತ್ತು. ಈ ಬರಹದಲ್ಲಿ ಲಷ್ಕರ್ ಉಗ್ರರ ಪರವಾಗಿ ಹಾಗೂ ಮುಸ್ಲಿಂ ಧರ್ಮದ ಪರವಾಗಿ ಬರೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಪೊಲೀಸರ ತನಿಖಾ ತಂಡ 4 ವಿವಿಧ ತಂಡಗಳಿಂದ ಹಲವು ಆಯಾಮದಲ್ಲಿ ತನಿಖೆ ಆರಂಭಿಸಿತ್ತು.

    ಈ ಪ್ರಕರಣದ ತನಿಖೆಯಲ್ಲಿರುವ ಪೊಲೀಸರ ತಂಡ ಅನುಮಾನದ ಮೇಲೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಆಹ್ಮದ್(21) ಬಂಧಿಸಿ ತನಿಖೆ ನಡೆಸುತ್ತಿತ್ತು. ಇದನ್ನು ಓದಿ:ಮಂಗಳೂರಿನಲ್ಲಿ ಗೋಡೆ ಬರಹ-ಮತ್ತಿಬ್ಬರ ಬಂಧನ

    ಬಂಧಿತರು ಸ್ಥಳೀಯ ಯಾವುದೇ ಸಂಘಟನೆಗಳ ಜೊತೆ ಗುರುತಿಸಿಕೊಂಡಿಲ್ಲ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂ.ಟೆಕ್ ಮಾಡುತ್ತಿದ್ದ ಮುನೀರ್ ಆರ್ಯಸಮಾಜ ರಸ್ತೆಯ ಪ್ರೆಸಿಡೆನ್ಸಿ ಅವೆನ್ಯೂ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದನು. ಲಾಕ್ ಡೌನ್ ಮಂಗಳೂರಿನಲ್ಲಿ ತಿರುಗಾಡಲು ಝೋಮ್ಯಾಟೋ ಸೇರಿದ್ದನು

    ಆಗಾಗ ಮಂಗಳೂರಿಗೆ ಮಹಮ್ಮದ್ ಶಾರೀಕ್ ಬರುತ್ತಿದ್ದನು. ಈ ಇಬ್ಬರಿಗೂ ಉಗ್ರ ಸಂಘಟನೆಗಳೊಂದಿಗೆ ಟಚ್ ಇರುವವರ ಜೊತೆ ಸಂಪರ್ಕ ಇರುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೆ ಸಿಕ್ಕ ವಿವಿಧ ಸಾಕ್ಷಗಳಲ್ಲಿ ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಹಿನ್ನೆಲೆ ಅವರ ಸಂಪರ್ಕ ಹಾಗೂ ಬರಹದ ಉದ್ದೇಶ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಮಂಗಳೂರು: ಬಲಿಷ್ಠರ ಆಟವೆಂದೇ ಹೆಸರು ಗಳಿಸಿರುವ ಕಬಡ್ಡಿಯನ್ನು ಈಗ ವಿಕಲ ಚೇತನರೂ ಆಡಲಾರಂಭಿಸಿದ್ದು, ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡ ಪ್ರಶಸ್ತಿಯನ್ನು ಗೆದ್ದಿದೆ.

    ಒಂದು ಕೈ ಊನ ಇದ್ದವರು, ಕೈ ಅರ್ಧಕ್ಕೆ ಕಳಕೊಂಡವರು, ಒಂದು ಕಾಲು ಸಪೂರ ಇದ್ದವರು, ಒಂದು ಕಾಲೇ ಇಲ್ಲದವರು ಹೀಗೆ ನಾನಾ ತೆರನಾದ ದೈಹಿಕ ಊನವುಳ್ಳವರು ನಿರಾಯಾಸವಾಗಿ ಕಬಡ್ಡಿ ರೈಡ್ ಮಾಡ್ತಿರೋದನ್ನು ನೋಡಿದರೆ ಅಚ್ಚರಿಯಾಗುತ್ತೆ. ಆದ್ರೆ ದೈಹಿಕ ಬಲ ಮತ್ತು ಯುಕ್ತಿಯಿಂದಲೇ ಆಡೋ ಕಬಡ್ಡಿ ಆಟವನ್ನು ವಿಕಲಚೇತನರು, ತಾವು ಇತರೇ ಆಟಗಾರರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಅನ್ನುವಂತೆ ಆಡಿ ತೋರಿಸಿದ್ದಾರೆ.

    ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ 12 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ವಿಪರ್ಯಾಸ ಅಂದರೆ, ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ ನಡೆಯಿತು. ರಾಷ್ಟ್ರ ಮಟ್ಟದಲ್ಲಿ ಕೂಟ ನಡೆಯುತ್ತಿದ್ದರೂ ಪ್ರಚಾರ ಇಲ್ಲದ ಕಾರಣ ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದರು.

    ವಿಕಲಚೇತನರು ಎಂದರೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರೇ ಹೆಚ್ಚು. ಆದರೆ ಸಾಧಿಸಬೇಕೆಂಬ ಛಲವೊಂದಿದ್ದರೆ ಎಂತವರೂ ಏನನ್ನಾದರೂ ಸಾಧಿಸಬಹುದು ಅನ್ನೋದನ್ನ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿದ್ದ ವಿಕಲಚೇತನರು ತೋರಿಸಿಕೊಟ್ಟಿದ್ದಾರೆ. ದೈಹಿಕವಾಗಿ ಬಲಿಷ್ಠರಾಗಿರುವರು ಆಡುವ ಪ್ರೋ ಕಬಡ್ಡಿಯನ್ನು ನೋಡೋರು, ಅಂಗವೈಕಲ್ಯತೆ ಇರುವವರು ತಾವೇನೂ ಕಮ್ಮಿಯಿಲ್ಲ ಎಂದು ಕಬಡ್ಡಿ ಆಡಿ ದೇಶಕ್ಕೆ ಚಾಂಪಿಯನ್ ಆಗಿದ್ದಾರೆ.

    ಸಾಮಾನ್ಯವಾಗಿ ಅಂಗ ವಿಕಲಚೇತರೆಂದರೆ ವೀಲ್ ಚೇರ್ ಕೊಟ್ಟು ಬದಿಗಿರಿಸುತ್ತಾರೆ. ಆದರೆ, ಅವರಲ್ಲೂ ಆಡೋ ಹುಮ್ಮಸ್ಸು ಇರುತ್ತೆ ಅನ್ನುವುದನ್ನು ಯಾರೂ ಮನಗಾಣುವುದಿಲ್ಲ. ಪ್ಯಾರಾ ಒಲಿಂಪಿಕ್ಸ್ ಅನ್ನುವ ಪ್ರತ್ಯೇಕ ವಿಭಾಗ ಇದ್ದರೂ, ಕಬಡ್ಡಿ ಆಡಿಸಿ ನೋಡಿದ್ದಿಲ್ಲ. ಆದರೆ ಬಾಗಲಕೋಟೆ, ವಿಜಾಪುರ, ಕೊಪ್ಪಳದಂತಹ ಹಳ್ಳಿ ಹುಡುಗರೇ ಕರ್ನಾಟಕ ತಂಡದಲ್ಲಿದ್ದು ಇದೇ ಮೊದಲ ಬಾರಿಗೆ ನಡೆದ ರಾಷ್ಟ್ರೀಯ ವಿಕಲ ಚೇತನರ ಕಬಡ್ಡಿ ಪಂದ್ಯಾವಳಿಯ ಫೈನಲಿನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.

    ಇಷ್ಟಕ್ಕೂ ಕರ್ನಾಟಕ ತಂಡವನ್ನು ಕಟ್ಟಿ ಬೆಳೆಸಿದ ಕೀರ್ತಿ ಕೋಚ್  ಶೇಖರ್ ಗೆ ಸಲ್ಲುತ್ತದೆ. ದೈಹಿಕ ಊನ ಇದ್ದವರನ್ನು ಸ್ಫೂರ್ತಿ ಕೊಟ್ಟು 18 ವರ್ಷಗಳ ಹಿಂದೆ ತಂಡ ಕಟ್ಟಿದ ಶೇಖರ್ ಸದ್ಯ ತಂಡದ ಕೋಚ್ ಆಗಿದ್ದಾರೆ. ಬಲಿಷ್ಠರ ಕ್ರೀಡೆಗೆ ವಿಕಲ ಚೇತನರ ಎಂಟ್ರಿಯಾಗಿದ್ದಾರೆ. ಸಮಾಜ ಹಾಗೂ ಸರ್ಕಾರದ ಕಡೆಯಿಂದ ಸಹಕಾರ ಸಿಕ್ಕರೆ ಇಂಥವರೂ ರಾಷ್ಟ್ರ ಮಟ್ಟದಲ್ಲಿ ಮಿಂಚಬಲ್ಲರು ಅನ್ನುವುದನ್ನು ತೋರಿಸಿದ್ದಾರೆ. ಒಟ್ಟಿನಲ್ಲಿ ಸಾಧಿಸಬೇಕೆಂಬ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋದನ್ನು ಈ ಸಾಹಸಿಗರು ನಾಡಿಗೆ ತೋರಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv