Tag: manganese ore

  • ಕರ್ನಾಟಕದಲ್ಲಿ 1.26 ದಶಲಕ್ಷ ಟನ್ ಚಿನ್ನ ಪತ್ತೆ!- ರಾಜ್ಯದಲ್ಲಿ ಎಲ್ಲಿ ಏನು ಪತ್ತೆ?

    ಕರ್ನಾಟಕದಲ್ಲಿ 1.26 ದಶಲಕ್ಷ ಟನ್ ಚಿನ್ನ ಪತ್ತೆ!- ರಾಜ್ಯದಲ್ಲಿ ಎಲ್ಲಿ ಏನು ಪತ್ತೆ?

    ಸಾಂದರ್ಭಿಕ ಚಿತ್ರ

    – 10 ವರ್ಷಗಳ ಕಾಲ ಜಿಎಸ್‍ಐ ಅಧ್ಯಯನ
    – ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಧ್ಯಯನ
    – ತಮಿಳುನಾಡಿನಲ್ಲಿ ಪ್ಲಾಟಿನಂ ನಿಕ್ಷೇಪ ಪತ್ತೆ

    ಹೈದರಾಬಾದ್: ಕರ್ನಾಟಕದಲ್ಲಿ ಚಿನ್ನ ಮತ್ತು ತಮಿಳುನಾಡಿನಲ್ಲಿ ಪ್ಲಾಟಿನಂ ನಿಕ್ಷೇಪ ಪತ್ತೆಯಾಗಿದೆ ಎಂದು ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ (ಜಿಎಸ್‍ಐ) ಹೇಳಿದೆ.

    ಹೈದರಾಬಾದಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಎಸ್‍ಐ ದಕ್ಷಿಣ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂ ಶ್ರೀಧರ್, ಕಳೆದ 10 ವರ್ಷಗಳಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಲ್ಲಿ ಅಧ್ಯಯನ ನಡೆಸಿದ್ದು, ತುಮಕೂರಿನ ಅಜ್ಜನಹಳ್ಳಿಯಲ್ಲಿ 1.26 ದಶಲಕ್ಷ ಟನ್ ಚಿನ್ನದ ನಿಕ್ಷೇಪ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಅಜ್ಜನಹಳ್ಳಿಯ ಬ್ಲಾಕ್ ಸಿಯಲ್ಲಿ 1.26 ದಶಲಕ್ಷ ಟನ್ ಸಂಪತ್ತು ಇದ್ದರೆ, ತಮಿಳುನಾಡಿನ ತಾಸಂಪಲೆಯಂನಂಲ್ಲಿ 0.402 ದಶಲಕ್ಷ ಟನ್ ಪ್ಲಾಟಿನಂ ನಿಕ್ಷೇಪವಿದೆ ಎಂದು ಅವರು ತಿಳಿಸಿದ್ದಾರೆ.

    ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕೂಸಿತ ವಾಗುವ ಸ್ಥಳಗಳ ಮ್ಯಾಪ್ ಮಾಡಿದ್ದೇವೆ. ತಮಿಳುನಾಡಿನ ಥೇನಿ, ನೀಲಗಿರಿ, ದಿಂಡಿಗಲ್, ಮಧುರೈ, ತಿರುನಲ್ವೇಲಿ, ಕನ್ಯಾಕುಮರಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಿದ್ದೇವೆ ಎಂದು ಶ್ರೀಧರ್ ತಿಳಿಸಿದರು.

    ಸಿಮೆಂಟ್ ತಯಾರಿಕೆಯಲ್ಲಿ ಬಳಸುವ ಸುಣ್ಣ ಕರ್ನಾಟಕದ ಬೆಳಗಾವಿ, ಹೊಸಕೋಟೆ, ಆಂಧ್ರದ ಗುಂಟೂರು ಮತ್ತು ಕರ್ನೂಲ್ ಜಿಲ್ಲೆಯಲ್ಲಿ ಪತ್ತೆಯಾಗಿದೆ.

    ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಪ್ರದೇಶದಲ್ಲಿ ಮ್ಯಾಂಗನೀಸ್ ನಿಕ್ಷೇಪದ ಲಭ್ಯತೆಯ ಬಗ್ಗೆ ಅಧ್ಯಯನ ನಡೆಯುತ್ತಿದ್ದು, ಸದ್ಯದ ಮಾಹಿತಿಯ ಅನ್ವಯ ಈ ಪ್ರದೇಶದಲ್ಲಿ ಸುಮಾರು 3 ಮೆಟ್ರಿಕ್ ಟನ್ ಮೆಗ್ನೀಷಿಯಂ ಲೋಹದ ಮಾದರಿಗಳು ಪತ್ತೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಬಳ್ಳಾರಿಯ ರಮಣದುರ್ಗ ಪ್ರದೇಶದಲ್ಲೂ ಮ್ಯಾಗನೀಸ್ ನಿಕ್ಷೇಪದ ಪತ್ತೆಯಾಗಿದೆ. ಉಳಿದಂತೆ 2016-17 ಅವಧಿಯಲ್ಲಿ ನಡೆದ ಅಧ್ಯಯನದ ವೇಳೆ ತೆಲಂಗಾಣದ ಕರೀಂ ನಗರ್, ಅದಿಲಾಬಾದ್, ಖಮ್ಮಂ ಹಾಗೂ ವರಂಗಲ್ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ 89.22 ಮೆಟ್ರಿಕ್ ಟನ್ ಕಬ್ಬಿಣ ಅದಿರು ಸಂಪನ್ಮೂಲಗಳು ಇರುವುದು ಜಿಎಸ್‍ಐ ಅಧ್ಯಯನದಲ್ಲಿ ಪ್ರಕಟವಾಗಿದೆ.

    ಕೇಂದ್ರ ಸರ್ಕಾರದ ಗಣಿ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ಪತ್ತೆ ಹಚ್ಚಿರುವ ನಿಕ್ಷೇಪಗಳ ಬಗ್ಗೆ ಹೆಚ್ಚಿನ ಅಧ್ಯನವನ್ನು ನಡೆಸಿದೆ. ಸಂಶೋಧನಾ ಕಾರ್ಯದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ‘ಭೂಮಿ ಸಂವಾದ’ ಎಂಬ ಕಾರ್ಯಕ್ರಮವನ್ನು ನಡೆಸಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com