Tag: Mangalya

  • ಮಾಂಗಲ್ಯಕ್ಕೂ ಸಿಕ್ತು ಹೊಸ ರೂಪ

    ಮಾಂಗಲ್ಯಕ್ಕೂ ಸಿಕ್ತು ಹೊಸ ರೂಪ

    ಫ್ಯಾಷನ್ ಜಮಾನದಲ್ಲಿ ಬಟ್ಟೆಯಿಂದ ಕಾಲಿಗೆ ಹಾಕುವ ಬೂಟಿನವರೆಗೂ ವಿವಿಧ ಟ್ರೆಂಡ್‌ಗಳು ಸದ್ದು ಮಾಡುತ್ತಿವೆ. ಇದೀಗ ಮಾಂಗಲ್ಯಕ್ಕೂ (Mangalya) ಹೊಸ ರೂಪ ಸಿಕ್ಕಿದೆ. ನೆಕ್ಲೆಸ್ ರೂಪದ ಮಾಂಗಲ್ಯಗಳು ಇದೀಗ ಟ್ರೆಂಡಿಯಾಗಿವೆ. ಹೌದು, ವಿವಾಹಿತೆಯರ ಸುಮಂಗಲಿತನದ ಪ್ರತೀಕ ಈ ‘ಕರಿಮಣಿ’ (Karimani) ಸರದ ಮಾಂಗಲ್ಯಗಳು ಇದೀಗ ನಾನಾ ಬಗೆಯ ನೆಕ್ಲೆಸ್ ರೂಪವನ್ನು ಪಡೆದಿವೆ.

    ಇಂದಿನ ಜನರೇಷನ್‌ನ ಮದುವೆಯಾದ ಹೆಣ್ಣಿಗೆ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಬಂದಿವೆ. ಅದರಲ್ಲೂ ಫ್ಯಾಷನೆಬಲ್ ಆಗಿ ಧರಿಸಲು ಬಯಸುವ ಉದ್ಯೋಗಸ್ಥ ಮಹಿಳೆಯರ ಕತ್ತನ್ನು ಅಲಂಕರಿಸಿದೆ. ಮದುವೆಯಾದ ಮಹಿಳೆಯರು ಮೊದಲಿನಂತೆ ಉದ್ದುದ್ದದ ಮಾಂಗಲ್ಯ ಸರಗಳನ್ನು ಧರಿಸುವುದು ಕಡಿಮೆಯಾಗಿದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ಆದಷ್ಟೂ ಲೈಟ್‌ವೈಟ್ ಹಾಗೂ ಸಿಂಪಲ್ ಆಗಿರುವಂತಹ ನೆಕ್ಲೇಸ್ ರೂಪದ ಕರಿಮಣಿ ಸರಗಳನ್ನು ಅಥವಾ ನೆಕ್ ಚೈನ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್‌ ಮಾಡಿದ ಶ್ರೀಲೀಲಾ

    ಹಾಗಾಗಿ ದಶಕಗಳ ಹಿಂದೆಯೇ ಈ ಆಭರಣದ ಟ್ರೆಂಡ್ (Trend) ಕಾಲಿಟ್ಟಿತ್ತು. ಒಂದಿಷ್ಟು ವರ್ಗದ ಮಹಿಳೆಯರು ಮಾತ್ರ, ಅದರಲ್ಲೂ ಹೊರಗಡೆ ದುಡಿಯುವ ಮಹಿಳೆಯರು ಇವನ್ನು ಧರಿಸುತ್ತಿದ್ದರು. ಇಲ್ಲವೇ ಮಾಡೆಲಿಂಗ್ ಹಾಗೂ ಫ್ಯಾಷನ್ ಕ್ಷೇತ್ರದ ಯುವತಿಯರು ಇವನ್ನು ಅತಿ ಹೆಚ್ಚಾಗಿ ಧರಿಸುತ್ತಿದ್ದರು. ಕಾಲ ಕಳೆದಂತೆ ಇವುಗಳ ಬಳಕೆ ಹೆಚ್ಚಾಗತೊಡಗಿತು. ನೋಡಲು ಆಕರ್ಷಕವಾಗಿ ಕಾಣುವ ಮಾಂಗಲ್ಯದ ಕರಿಮಣಿ ನೆಕ್ಲೆಸ್ ಫೇಮಸ್ ಆಯಿತು. ಈ ಪರಿಣಾಮ, ಬರಬರುತ್ತಾ ಕರಿಮಣಿ ಮಾಂಗಲ್ಯಕ್ಕೆ ಸಿಂಪಲ್ ನೆಕ್ಲೆಸ್ ರೂಪ ದೊರಕಿತು.

    ಒಂದೆಳೆ, ಎರಡೆಳೆ, ಕೆಲವು ಐದೆಳೆಯ ಕರಿಮಣಿ ಇರುವಂತಹ ಮಂಗಲಸೂತ್ರದ ನೆಕ್ಲೆಸ್‌ನಂತವು ಟ್ರೆಂಡಿಯಾಗಿವೆ. ಅವುಗಳಲ್ಲಿ ಅತಿ ಹೆಚ್ಚು ಬೇಡಿಕೆ ಹಾಗೂ ಮಾರಾಟವಾಗುತ್ತಿರುವ ಮಾಂಗಲ್ಯಗಳೆಂದರೇ ಒಂದೆಳೆಯ ಕರಿಮಣಿ ಸೂತ್ರ. ಅದರಲ್ಲೂ ಸಿಂಪಲ್ ಡಿಸೈನ್‌ನವು, ಗೋಲ್ಡ್ ಚೈನ್, ಗೋಲ್ಡ್ ಬೀಡ್ಸ್ ಇರುವಂತಹ 18 ಇಂಚಿನ ಕರಿಮಣಿ ಮಾಂಗಲ್ಯ ಸರದ ನೆಕ್ಲೆಸ್‌ಗೆ ಬೇಡಿಕೆ ಹೆಚ್ಚಾಗಿದೆ. ಕರಿಮಣಿ ಮಾಂಗಲ್ಯದ ನೆಕ್ಲೆಸ್‌ಗಳಲ್ಲಿ ಇದೀಗ ರ‍್ಕೋನ್‌ನ ಪೆಂಡೆಂಟ್ ಇರುವಂತಹ ಸರಗಳು ಅಂದರೆ, ಚಿಕ್ಕ ನೆಕ್ಲೆಸ್‌ಗಳು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಹರಳಿನ ಬಿಳಿ ಕಲ್ಲಿನ, ಅಮೆರಿಕನ್ ಡೈಮಂಡ್‌ನ ಒಂದರಿಂದ ಎರಡು ಇಂಚಿನ ನಾನಾ ವಿನ್ಯಾಸದ ಪೆಂಡೆಂಟ್‌ನ ಕರಿಮಣಿ ನೆಕ್ಲೆಸ್‌ಗಳು ಉದ್ಯೋಗಸ್ಥ ಮಹಿಳೆಯರನ್ನು ಸೆಳೆದಿವೆ.

    ಈ ಕುರಿತು ಇಲ್ಲಿದೆ ಟಿಪ್ಸ್

    ಬಂಗಾರೇತರ ಲೋಹದಲ್ಲೂ ಇವು ಲಭ್ಯ.
    ಸಿಲ್ವರ್ ಜ್ಯುವೆಲರಿ ಡಿಸೈನ್‌ನಲ್ಲೂ ದೊರೆಯುತ್ತಿವೆ.
    ಒಂದೆಳೆಯ ಸರದಂತಹ ನೆಕ್‌ಚೈನ್ ಡಿಸೈನ್‌ನಲ್ಲೂ ದೊರೆಯುತ್ತಿವೆ.

  • ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

    ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

    ಚಿಕ್ಕೋಡಿ: ಬೆಳಗಾವಿ (Belgavi) ಜಿಲ್ಲೆಯ ಅಥಣಿ (Athani) ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ಪುರಸಭೆ ವಾಹನಗಳ ಮೂಲಕ ಕಸ ಸಂಗ್ರಹಿಸುವ ಪೌರಕಾರ್ಮಿಕರು (Civic Worker) ಕಸದಲ್ಲಿ ದೊರೆತ 50 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಸಂಬಂಧಪಟ್ಟ ಮಾಲೀಕರಿಗೆ ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

    ಪ್ರತಿದಿನದಂತೆ ಮುಂಜಾನೆ ಎಂ.ಜಿ. ಮಾರ್ಕೆಟ್‍ನಲ್ಲಿ (M.G.Market) ಕಸ ಸಂಗ್ರಹಿಸಿದ ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ವಾಹನ ಚಾಲಕ ಬಸವರಾಜ ಕೋರಿ ಪಟ್ಟಣದ ಹೊರವಲಯದಲ್ಲಿ ವಾಹನದಲ್ಲಿನ ಕಸವನ್ನು ವಿಲೇವಾರಿ ಮಾಡಿದ್ದರು. ಚಿನ್ನದ ಸರವನ್ನು ಕಳೆದುಕೊಂಡ ಮಾಳಿ ಜ್ಯುವೆಲರಿ ಮಾಲೀಕರು ಕಾಗದ ಒಂದರಲ್ಲಿ ಪ್ಯಾಕ್ ಮಾಡಿಟ್ಟಿದ್ದ ಚಿನ್ನದ ಸರ ಕಸದ ಡಬ್ಬಿಯಲ್ಲಿ ಹೋಗಿರುವ ಸಂದೇಹವಿದೆ. ಸ್ವಲ್ಪ ಹುಡುಕಿ ನೋಡಿ ಎಂದು ಪೌರಕಾರ್ಮಿಕರಿಗೆ ಹೇಳಿದ್ದಾರೆ. ಇದನ್ನೂ ಓದಿ: ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌

    ನಂತರ ಎರಡನೇ ಬಾರಿಗೆ ಕಸ ವಿಲೇವಾರಿ ಮಾಡಲು ಹೋದಾಗ ಮೊದಲನೇ ಬಾರಿ ವಿಲೇವಾರಿ ಮಾಡಿದ್ದ ಕಸದಲ್ಲಿ ಚಿನ್ನದ ಸರ ದೊರಕಿದ್ದು, ಅದನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ಬಸವರಾಜು ಕೋರಿ ಅವರನ್ನು ಪಟ್ಟಣದ ವ್ಯಾಪಾರಸ್ಥರು, ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಮತ್ತು ಪೌರಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಕಾಂಬಳೆ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ- ವೀಡಿಯೋ ಮಾಡಿ ತಪ್ಪೊಪ್ಪಿಕೊಂಡ ತಂದೆ

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿದ್ದು ನಿಜ, ಬ್ರೇಕಪ್ ಬಳಿಕ ಬಲವಂತವಾಗಿ ತಾಳಿ ಕಟ್ಟಿದ: ಯುವತಿ

    ಪ್ರೀತಿಸಿದ್ದು ನಿಜ, ಬ್ರೇಕಪ್ ಬಳಿಕ ಬಲವಂತವಾಗಿ ತಾಳಿ ಕಟ್ಟಿದ: ಯುವತಿ

    ಹಾಸನ : ನನಗೆ ಅನ್ಯಾಯವಾಗಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತನಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕನ ವಿರುದ್ಧ ಯುವತಿ ಆಕ್ರೋಶ ಹೊರಹಾಕಿದ್ದಾಳೆ.

    ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ಜನವರಿ 21 ರಂದು ಯುವತಿಯೊಬ್ಬಳಿಗೆ ಸತೀಶ್ ಎಂಬ ಯುವಕ ಬಲವಂತವಾಗಿ ತಾಳಿ ಕಟ್ಟಿ ನಾವಿಬ್ಬರು ಪ್ರೀತಿ ಮಾಡಿದ್ದು ಮದುವೆಯಾಗಿದ್ದೇವೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದರಿಂದ ಜನವರಿ 25ರಂದು ನಡೆಯಬೇಕಿದ್ದ ಯುವತಿ ಮದುವೆ ನಿಂತು ಹೋಗಿತ್ತು.

    ಇದೀಗ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ, ನಾನು ಅಣ್ಣನೊಂದಿಗೆ ಅಜ್ಜಿ ಮನೆಗೆ ತೆರಳಿದ್ದೆ. ಈ ವೇಳೆ ಹದಿನೈದು ಮಂದಿ ನನ್ನ ಮನೆಗೆ ಬಂದಿದ್ದಾರೆ. ಅಮ್ಮ ಫೋನ್ ಮಾಡಿ ವಿಷಯ ತಿಳಿಸಿದಾಗ ಮನೆಗೆ ಬಂದೆ. ನನ್ನ ತಾಯಿ ಬಳಿ ನಿನ್ನ ಮಗಳನ್ನು ಲವ್ ಮಾಡುತ್ತಿದ್ದೇನೆ ಮದುವೆ ಮಾಡಿಕೊಡಿ ಎಂದು ಕೇಳಿದರು. ನನ್ನ ತಾಯಿ ನಿನಗೆ ಮದುವೆ ಇಷ್ಟ ಇದಿಯಾ ಎಂದರು. ನನಗೆ ಇವನ ಜೊತೆ ಮದುವೆ ಇಷ್ಟ ಇಲ್ಲ ಎಂದು ಹೇಳಿದೆ. ಈ ವೇಳೆ ಬಲವಂತವಾಗಿ ತಾಳಿಕಟ್ಟಲು ಮುಂದಾದಾಗ ಎರಡು ಬಾರಿ ತಾಳಿ ಕಿತ್ತೆಸೆದೆ. ನಂತರ ನನ್ನ ಎರಡು ಕೈಗಳನ್ನು ಹಿಡಿದುಕೊಂಡು ಎಲ್ಲರೂ ಸೇರಿ ಬಲವಂತವಾಗಿ ಅರಿಶಿನಕೊಂಬು ಕಟ್ಟಿಸಿದರು ಎಂದು ಯುವತಿ ಹೇಳಿದ್ದಾಳೆ.

    ಕಿರುಚಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ನಂತರ ನನ್ನನ್ನು ಕುಶಾಲನಗರ ಬಳಿಯಿರುವ ಹೋಂ ಸ್ಟೆಯಲ್ಲಿ ಇಟ್ಟು ಕಿರುಕುಳ ನೀಡಿದ್ದಾರೆ. ಇದೀಗ ನನಗೆ ನಿಶ್ಚಿಯವಾಗಿದ್ದ ಮದುವೆ ಮುರಿದು ಬಿದ್ದಿದ್ದು, ಆ ಹುಡುಗನಿಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿದೆ. ನನಗಾದಂತೆ ಯಾವ ಯುವತಿಗೂ ಆಗಬಾರದು ಎಲ್ಲರಿಗೂ ಶಿಕ್ಷೆಯಾಗಬೇಕೆಂದು ಯುವತಿ ಒತ್ತಾಯಿಸಿದ್ದಾಳೆ.

    ಇನ್ನು ತಮ್ಮಿಬ್ಬರ ಪ್ರೀತಿಯ ಬಗ್ಗೆಯೂ ಮಾತನಾಡಿರುವ ಯುವತಿ, ನಾಲ್ಕು ವರ್ಷದ ಹಿಂದೆ ಸತೀಶ್ ನಾನು ಪ್ರೀತಿಸುತ್ತಿದ್ದೆವು. ಸತೀಶ್ ಕಿರುಕುಳ ನೀಡುತ್ತಿದ್ದರಿಂದ ಬ್ರೇಕಪ್ ಆಗಿತ್ತು ಎಂದು ತಿಳಿಸಿದ್ದಾಳೆ.

  • ಮಕ್ಕಳ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟಿದ್ದ ತಾಯಿಗೆ ಹರಿದು ಬರತ್ತಿರೋ ಸಹಾಯದ ಮಹಾಪೂರ

    ಮಕ್ಕಳ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟಿದ್ದ ತಾಯಿಗೆ ಹರಿದು ಬರತ್ತಿರೋ ಸಹಾಯದ ಮಹಾಪೂರ

    – ಪ್ರತಿ ತಿಂಗಳು 1,000 ರೂಪಾಯಿನಂತೆ 3 ವರ್ಷ ಧನ ಸಹಾಯ

    ಗದಗ: ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ಮಾಂಗಲ್ಯ ಅಡವಿಟ್ಟು ಟಿವಿ ಕೊಡಿಸಿದ ಮಹಾ ತಾಯಿ ಕುರಿತು ಪಬ್ಲಿಕ್ ಟಿವಿನಲ್ಲಿ ವರದಿ ಪ್ರಸಾರ ಮಾಡಿತ್ತು. ಇದೀಗ ತಾಯಿಗೆ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ತ್ಯಾಗಮಯಿ ತಾಯಿಯ ಮಾಂಗಲ್ಯ ಹಿಂದಿರುಗಿಸಿದ ಅಂಗಡಿ ಮಾಲೀಕ

    ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮ ನಿವಾಸಿ ಕಸ್ತೂರಿ ಅವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು ಟಿವಿಯನ್ನು ಕೊಡಿಸಿದ್ದರು. ಇದೀಗ ತಾಯಿಗೆ ಸಹಾಯ ಮಾಡಲು ಅನೇಕ ದಾನಿಗಳು ಮುಂದಾಗುತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ ಸಹ 50 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟಿರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ- ಗದಗ ಜಿಲ್ಲೆಯಲ್ಲಿ ಮನಕಲಕುವ ಘಟನೆ

    ಹುಬ್ಬಳ್ಳಿಯಿಂದ ಆಪ್ತ ಸಹಾಯಕನನ್ನು ರಡ್ಡೆರ ನಾಗನೂರ ಗ್ರಾಮಕ್ಕೆ ಕಳುಹಿಸಿ 50 ಸಾವಿರ ರೂಪಾಯಿ ಹಣ ಕೊಡಿಸಿದ್ದಾರೆ. ಅದರಲ್ಲಿ ಮಾಂಗಲ್ಯ ಬಿಡಿಸಲು 15 ಸಾವಿರ, ಮಕ್ಕಳ ಶಿಕ್ಷಣಕ್ಕೆ 35 ಸಾವಿರ ರೂಪಾಯಿ ನೀಡಿ ಮುಂದೆ ಸಹಾಯ ಬೇಕಾದರೆ ಸಂಪರ್ಕಿಸುವಂತೆ ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.

    ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಸಹ 20 ಸಾವಿರ ಚೆಕ್ ನೀಡಿದ್ದಾರೆ. ತಮ್ಮ ಬೆಂಬಲಿಗರನ್ನು ಗ್ರಾಮಕ್ಕೆ ಕಳುಹಿಸಿ ಅವರ ಮೂಲಕ 20 ಸಾವಿರ ರೂ. ಚೆಕ್ ಕೊಡಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

    ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವದಡಿ ಮಕ್ಕಳಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿನಂತೆ 3 ವರ್ಷ ಧನ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಹೀಗೆ ಅನೇಕ ಸಂಘ ಸಂಸ್ಥೆಗಳು ಮಹಾ ತಾಯಿಗೆ ಧನ ಸಹಾಯದ ಮೂಲಕ ನೆರವಾಗುತ್ತಿದ್ದಾರೆ.

  • ಮಹಾತಾಯಿ ದುಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು: ಹೆಚ್‍ಡಿಕೆ

    ಮಹಾತಾಯಿ ದುಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು: ಹೆಚ್‍ಡಿಕೆ

    ಬೆಂಗಳೂರು: ಮಾಂಗಲ್ಯ ಅಡವಿಟ್ಟ ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ ಮಹಾತಾಯಿಯ ದುಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಟ್ವೀಟ್ ಮೂಲಕ ಘಟನೆಗಳು ಮರುಕಳಿಸದಂತೆ ನಮ್ಮ ಸಮಾಜ ಮತ್ತು ಸರ್ಕಾರ ಎಚ್ಚರ ವಹಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

    ಕೊರೋನಾ ಸೋಂಕು ಜನರ ಜೀವ-ಜೀವನದ ಜೊತೆ ಮಾತ್ರ ಚೆಲ್ಲಾಟ ಮಾಡುತ್ತಿಲ್ಲ. ಇಡೀ ಮನುಕುಲದ ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ. ನಾಲ್ಕು ಮಕ್ಕಳ ಪೈಕಿ 7 ಮತ್ತು 8 ನೇ ತರಗತಿ ಓದುತ್ತಿರುವ ಇಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಮನೆಯಲ್ಲಿ ಟಿವಿ ಇಲ್ಲದ ಕಾರಣ ತಾಳಿಯನ್ನು ಅಡವಿಟ್ಟು ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದ ಕಸ್ತೂರಿ ಎಂಬ ಮಹಾತಾಯಿ ದುಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದಿವೆ.

    ಇಂತಹ ನೂರಾರು ನಿದರ್ಶನಗಳು ಸದ್ದಿಲ್ಲದೆ, ಸುದ್ದಿಯಾಗದೆ ಬಡ ಪೋಷಕರು ಕೊರೊನಾ ಕಾಲದಲ್ಲಿ ಯಮಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಸಮಾಜ ಮತ್ತು ಸರ್ಕಾರ ಎಚ್ಚರ ವಹಿಸಬೇಕಿದೆ. ಆನ್‍ಲೈನ್ ಶಿಕ್ಷಣದ ಅಪಾಯ ಮತ್ತು ಬಡ ಪೋಷಕರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಕ್ಷಣವೇ ಸಮಗ್ರ ಯೋಜನೆಯೊಂದನ್ನು ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸುತ್ತೇನೆ.

    ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬಯಸಿದ್ದೆ. ಆದರೆ ಟಿವಿಯಲ್ಲಿ ಪಾಠ ಬರುತ್ತಿದ್ದ ಕಾರಣ ಮಕ್ಕಳು ಬೇರೆ ಮನೆಗೆ ಹೋಗಿ ಟಿವಿ ನೋಡುತ್ತಿದ್ದರು. ಆದರೆ ಅವರು ಬೇರೆ ಬೇರೆ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಹೀಗಾಗಿ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ಟಿವಿ ಖರೀದಿ ಮಾಡುವ ನಿರ್ಧಾರ ಮಾಡಿದೆ. ಆದರೆ ಗ್ರಾಮದಲ್ಲಿ ಯಾರ ಬಳಿಯೂ ಸಾಲ ಲಭಿಸಿರಲಿಲ್ಲ. ಆದ್ದರಿಂದ ನನ್ನ ಬಳಿ ಇದ್ದ ಮಾಂಗಲ್ಯವನ್ನು ಅಡವಿಟ್ಟು ಟಿವಿ ತಂದಿದ್ದೇನೆ ಎಂದು ಕಸ್ತೂರಿ ಹೇಳಿದ್ದಾರೆ.

    https://www.facebook.com/publictv/videos/688486148675277/

    ಈ ಕುರಿತು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆ ತಾಯಿ ಅಡವಿಟ್ಟ ಮಾಂಗಲ್ಯ ಬಿಡಿಸಿಕೊಡುವ ಜವಾಬ್ದಾರಿ ನನ್ನದು ಎಂದು ಸಚಿವ ಸಿಸಿ ಪಾಟೀಲ್ ಭರವಸೆ ನೀಡಿದ್ದಾರೆ.

  • ಕುತ್ತಿಗೆಗೆ ಲಾಂಗ್ ಇಟ್ಟು ಮಾಂಗಲ್ಯ ಸರ ಎಗರಿಸಿದ ಕಳ್ಳರು

    ಕುತ್ತಿಗೆಗೆ ಲಾಂಗ್ ಇಟ್ಟು ಮಾಂಗಲ್ಯ ಸರ ಎಗರಿಸಿದ ಕಳ್ಳರು

    ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿ, ಮಾಂಗಲ್ಯ ಸರ ದೋಚಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೋಡಂಬಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಭಾಗ್ಯಮ್ಮ ಅವರು ರಸ್ತೆ ಪಕ್ಕದಲ್ಲಿಯೇ ಹಸು ಮೇಯಿಸುತ್ತಿದ್ದರು. ಆಗ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು, ವಿಳಾಸ ಕೇಳುವ ನೆಪದಲ್ಲಿ ಅವರನ್ನು ಮಾತನಾಡಿಸಿದ್ದಾರೆ.

    ಭಾಗ್ಯಮ್ಮ ಅವರ ಜೊತೆ ಮಾತನಾಡುತ್ತಲೇ ತಮ್ಮ ಸುತ್ತ-ಮುತ್ತ ಯಾರು ಇಲ್ಲವೆಂದು ಖಚಿತಪಡಿಸಿಕೊಂಡ ಕಳ್ಳರು, ಲಾಂಗ್ ತೆಗೆದು ಅವರ ಕುತ್ತಿಗೆ ಇಟ್ಟು, ಬೆದರಿಕೆ ಹಾಕಿದ್ದಾರೆ. ಮಾಂಗಲ್ಯ ಸರ ತಮ್ಮ ಕೈಗೆ ಸಿಗುತ್ತಿದ್ದಂತೆ ಪರಾರಿಯಾಗಿದ್ದಾರೆ. ಮಾಂಗಲ್ಯ ಸರ ಕಳೆದುಕೊಂಡ ಭಾಗ್ಯಮ್ಮ ಜಮೀನಿನಲ್ಲಿಲ್ಲೇ ಕುಳಿತು ಅಳುತ್ತಿದ್ದರಂತೆ. ಬಳಿಕ ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಡರಾತ್ರಿ ಮನೆಗೆ ನುಗ್ಗಿ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಎಗರಿಸಿದ!

    ತಡರಾತ್ರಿ ಮನೆಗೆ ನುಗ್ಗಿ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಎಗರಿಸಿದ!

    ಮೈಸೂರು: ರಸ್ತೆಯಲ್ಲಿ ಹೋಗುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುವ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಕಳ್ಳನೊಬ್ಬ ತಡರಾತ್ರಿ ಮನೆಗೆ ನುಗ್ಗಿ ಗೃಹಿಣಿಯ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾನೆ.

    ನಂಜನಗೂಡು ತಾಲೂಕಿನ ಕೋಡಿ ನರಸೀಪುರ ಗ್ರಾಮದ ನಂದಿನಿ ಮಾಂಗಲ್ಯ ಸರ ಕಳೆದುಕೊಂಡವರು. ಶುಕ್ರವಾರ (ನಿನ್ನೆ) ತಡರಾತ್ರಿ ಮನೆಗೆ ನುಗ್ಗಿದ್ದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ನಂದಿನಿ ಅವರ ಪತಿ ಬಸಂತ್ ಕುಮಾರ್ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದರು.

    ಈ ಹಿನ್ನೆಲೆಯಲ್ಲಿ ಮನೆಯ ಬಾಗಿಲನ್ನು ಮುರಿದು ಒಳ ಬಂದ ಕಳ್ಳ, ನಂದಿನಿ ಬಾಯಿಯನ್ನು ಬಲವಂತವಾಗಿ ಮುಚ್ಚಿಸಿದ್ದಾನೆ. ಬಳಿಕ 1.2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಜಾಗ ಖಾಲಿ ಮಾಡಿದ್ದಾನೆ.

    ಕೂಡಲೇ ನಂದಿನಿ ಕಿರಿಚಾಡಿದ್ದರಿಂದ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಆಕೆಯ ಬಾವ ನಾರಾಯಣ ಮೂರ್ತಿ ಹೊರಬಂದ್ರು. ಆದರೆ ಅವರು ನೋಡುವಷ್ಟರಲ್ಲಿ ಸರಗಳ್ಳ ಸ್ಥಳದಿಂದ ಕಾಲ್ಕಿತ್ತಿದ್ದನು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಸ್ಪೆಕ್ಟರ್‌ ಶಿವಮೂರ್ತಿ, ದೊಡ್ಡ ಕವಲಂದೆ ಠಾಣೆ ಪಿಎಸ್‍ಐ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews