Tag: Mangaluru Jail

  • ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

    ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

    ಮಂಗಳೂರು: ಕಾರಾಗೃಹದಲ್ಲೇ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಪ್ರಕಾಶ ಗೋಪಾಲ್ ಮೂಲ್ಯ (43) ಆತ್ಮಹತ್ಯೆ ಮಾಡಿಕೊಂಡ ಕೈದಿ. ಈತ ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿದ್ದ. ಇಂದು ಜೈಲಿನ ಶೌಚಾಲಯದ ಕಿಟಕಿ ಗ್ರಿಲ್‌ಗೆ ಟವಲ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಮಾ.11 ರಂದು ಪ್ರಕಾಶ್ ಗೋಪಾಲ್ ಮೂಲ್ಯನನ್ನು ಮೂಡಬಿದ್ರೆಯಲ್ಲಿ ಪೊಲೀಸರು ಬಂಧಿಸಿದ್ದರು. ನೆರೆ ಮನೆಯ 13 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಬಂಧನವಾಗಿದ್ದ.

    ಜೈಲಿಗೆ ಬರ್ಕೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಗಳೂರು ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ – ಜೈಲಲ್ಲೇ ಸಿಕ್ತು ಡ್ರಗ್ಸ್‌, ಗಾಂಜಾ, ಮೊಬೈಲ್‌

    ಮಂಗಳೂರು ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ – ಜೈಲಲ್ಲೇ ಸಿಕ್ತು ಡ್ರಗ್ಸ್‌, ಗಾಂಜಾ, ಮೊಬೈಲ್‌

    ಮಂಗಳೂರು: ಇಲ್ಲಿನ (Mangaluru Jail) ಕೋಡಿಯಾಲ್‌ಬೈಲ್‌ನಲ್ಲಿರುವ ಕಾರಾಗೃಹದ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಗಾಂಜಾ, ಡ್ರಗ್ಸ್, ಮೊಬೈಲ್ ಸೇರಿ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಜೈಲಿನೊಳಗೆ ಇಂದು ಬೆಳಗ್ಗಿನ ಜಾವ 150 ಕ್ಕೂ ಅಧಿಕ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಕೈದಿಗಳನ್ನು ಹಾಗೂ ಸೆಲ್‌ಗಳಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಖೈದಿಗಳ ಜೊತೆ ಗಾಂಜಾ ಹಾಗೂ ಡ್ರಗ್ಸ್ ಪ್ಯಾಕೇಟ್‌ಗಳು ಸಿಕ್ಕಿದ್ದು ಅದನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿ – ವಾರದಲ್ಲಿ ಬರೋಬ್ಬರಿ 90ಕ್ಕೂ ಅಧಿಕ ಮನೆಗಳು ಕುಸಿತ

    25 ಮೊಬೈಲ್ ಫೋನ್‌ಗಳು, ಐದು ಚಾರ್ಜರ್, ಐದು ಇಯರ್ ಫೋನ್, ಒಂದು ಬ್ಲೂಟೂತ್ ಡಿವೈಸ್, ಒಂದು ಪೆನ್‌ಡ್ರೈವ್, ಒಂದು ಕತ್ತರಿ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡ್ರಗ್, ಗಾಂಜಾ ಪತ್ತೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್‌ ಅಗರ್ ವಾಲ್ ತನಿಖೆಗೆ ಆದೇಶ ನೀಡಿದ್ದಾರೆ.

    ಪೊಲೀಸ್‌ ಕಮಿಷನರ್‌ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿ, ಮೂವರು ಎಸಿಪಿ, 15 ಇನ್‌ಸ್ಪೆಕ್ಟರ್‌, 150 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ: ಲಕ್ಷ್ಮಣ ಸವದಿ

  • ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು: ಕೇಂದ್ರ ಕಾರಾಗೃಹದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

    ಟ್ಯೂಬ್ ಲೈಟ್, ಕಲ್ಲು, ಅಲ್ಯೂಮಿನಿಯಂ ಫ್ರೇಂ ನಿಂದ ಕೈದಿಗಳು ಬಡಿದಾಡಿಕೊಂಡಿದ್ದು, ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಕೈದಿಗಳ ದಾಳಿ ನಡೆಸಿದ್ದಾರೆ. 5 ಜನ ಕೈದಿಗಳಿಗೆ ಗಂಭೀರ ಗಾಯಗೊಂಡಿದ್ದರೆ, 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೈ ಮುರಿದಿದೆ.

    ಗಲಾಟೆ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮನವಿಗೂ ಕ್ಯಾರೇ ಎನ್ನದೇ ಕೈದಿಗಳು ಬಡಿದಾಟ ಮುಂದುವರಿಸಿದ್ದಕ್ಕೆ ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯ ಬಳಿಕ ಜೈಲಿನೊಳಗೆ ಡಿಸಿಪಿ ಹನುಮಂತರಾಯ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • ಮಂಗ್ಳೂರು ಜೈಲಿನಲ್ಲಿ ಜೀವಂತವಾಗಿದೆ ಜೀತ ಪದ್ದತಿ-ರೌಡಿಯೊಬ್ಬನಿಗೆ ಸಹ ಕೈದಿಯಿಂದ ಭರ್ಜರಿ ಮಸಾಜ್

    ಮಂಗ್ಳೂರು ಜೈಲಿನಲ್ಲಿ ಜೀವಂತವಾಗಿದೆ ಜೀತ ಪದ್ದತಿ-ರೌಡಿಯೊಬ್ಬನಿಗೆ ಸಹ ಕೈದಿಯಿಂದ ಭರ್ಜರಿ ಮಸಾಜ್

    ಮಂಗಳೂರು: ರೌಡಿಗಳ ಪಾಲಿಗೆ ಸ್ವರ್ಗ ಅನ್ನೋ ಕುಖ್ಯಾತಿಗೆ ಕಾರಣವಾಗಿರುವ ಮಂಗಳೂರು ಜೈಲಿನಲ್ಲಿ ಜೀತ ಪದ್ಧತಿಯೂ ನಡೆಯುತ್ತೆ ಅನ್ನೋದು ಬೆಳಕಿಗೆ ಬಂದಿದೆ. ರೌಡಿಯೊಬ್ಬ ಸಹ ಕೈದಿಯೊಬ್ಬನಿಂದ ಕಾಲು ಒತ್ತಿಸಿ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ಲಭ್ಯವಾಗಿದೆ.

    ರವೂಫ್ ಅನ್ನುವ ಕೈದಿಯಿಂದ ತನ್ನ ಕಾಲು ಒತ್ತಿಸುತ್ತಾ ಅದನ್ನು ಸ್ವತಃ ರೌಡಿ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾನೆ. ಮೊಬೈಲ್ ವಿಡಿಯೋವನ್ನು ಈಗ ಜೈಲಿನ ಒಳಗಿನಿಂದಲೇ ರೌಡಿಗಳು ಮಾಧ್ಯಮಕ್ಕೆ ರವಾನಿಸಿದ್ದಾರೆ. ಆ ಮೂಲಕ ಮಂಗಳೂರಿನ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುವುದರ ಜೊತೆಗೆ ಜೀತ ಪದ್ಧತಿಯನ್ನೂ ನಡೆಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

    ಕೈದಿಗಳು ಮೊಬೈಲ್, ಗಾಂಜಾ, ಡ್ರಗ್ಸ್ ಸೇವಿಸ್ತಾರೆ ಅನ್ನುವ ಆರೋಪ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಪೊಲೀಸರು ಆಗಿಂದಾಗ್ಗೆ ಜೈಲಿಗೆ ದಾಳಿ ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಇದೇನಿದ್ದರೂ ಪ್ರಭಾವಿ ಕೈದಿಗಳ ಮೊಬೈಲ್ ಬಳಕೆಗೆ ನಿಯಂತ್ರಣ ಹೇರುವಲ್ಲಿ ಸಫಲವಾಗಿಲ್ಲ.

    https://www.youtube.com/watch?v=jAgdbTYO924