Tag: Mangaluru International Airport

  • ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್

    ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್

    ಮಂಗಳೂರು: ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangaluru International Airport) ನಡೆದಿದೆ.

    ಬೆಳಗ್ಗೆ 8:30ಕ್ಕೆ ದುಬೈಗೆ (Dubai) ತೆರಳಲು ಇಂಡಿಗೋ ವಿಮಾನ (IndiGo Flight) ಸಿದ್ಧವಾಗಿತ್ತು. ಈ ವೇಳೆ ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದಾಗ ವಿಮಾನದ ರೆಕ್ಕೆಗೆ ಹಕ್ಕಿಯೊಂದು ಬಡಿದಿದೆ. ತಕ್ಷಣ ಎಚ್ಚೆತ್ತ ಪೈಲೆಟ್ ನಿಯಂತ್ರಣ ಕೊಠಡಿಗೆ (Air Traffic Control) ಮಾಹಿತಿ ನೀಡಿದ್ದಾರೆ. ಟೇಕಾಫ್ ಮಾಡದೇ ಮರಳಿ ನಿಲ್ದಾಣಕ್ಕೆ ತಂದಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿತ – 5 ವರ್ಷದ ಬಳಿಕ ಶತಮಾನದ ಹಿಂದಿನ ದೇವಾಲಯ ಗೋಚರ

    ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಹಕ್ಕಿಯ ಡಿಕ್ಕಿಯಿಂದಾಗಿ ಉಂಟಾಗಿರಬಹುದಾದ ಹಾನಿಯ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ ಪ್ರಯಾಣಿಕರನ್ನು ಕರೆದೊಯ್ಯಲು ಬೆಂಗಳೂರಿನಿಂದ (Bengaluru) ಮತ್ತೊಂದು ವಿಮಾನವನ್ನು ತರಿಸಲಾಯಿತು. ಘಟನೆಯಿಂದ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನೂ ಓದಿ: ಹಾಪ್‌ಕಾಮ್ಸ್‌ನಲ್ಲಿ ಮೇ 26 ರಿಂದ ಮಾವು, ಹಲಸು ಮೇಳ

  • ಒಳ ಉಡುಪಿನಲ್ಲಿ 1.10 ಕೋಟಿ ಮೌಲ್ಯದ ಅಕ್ರಮ ಚಿನ್ನ – ಮಂಗಳೂರಿನಲ್ಲಿ ಮಹಿಳೆ ಅರೆಸ್ಟ್

    ಒಳ ಉಡುಪಿನಲ್ಲಿ 1.10 ಕೋಟಿ ಮೌಲ್ಯದ ಅಕ್ರಮ ಚಿನ್ನ – ಮಂಗಳೂರಿನಲ್ಲಿ ಮಹಿಳೆ ಅರೆಸ್ಟ್

    ಮಂಗಳೂರು: ಒಳ ಉಡುಪಿನಲ್ಲಿ 1.10 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರವಾಗಿ ಸಾಗಿಸುತ್ತಿದ್ದ ಮಹಿಳೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಲಾಗಿದೆ.

    ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದ ಮಹಿಳೆಯನ್ನು ಕೇರಳದ ಕಾಸರಗೋಡು ಮೂಲದ ಮೊಹಮ್ಮದ್ ಅಲಿ ಸಮೀರಾ ಎಂದು ಗುರುತಿಸಲಾಗಿದೆ. ಸಮೀರಾ ದುಬೈನಿಂದ ಅಕ್ರಮ ಚಿನ್ನ ಮತ್ತು ವಿದೇಶಿ ಸಿಗರೇಟ್ ಗಳನ್ನು ತನ್ನ ಒಳ ಉಡುಪು, ಸ್ಯಾನಿಟರಿ ಪ್ಯಾಡ್, ಸಾಕ್ಸ್ ನಲ್ಲಿ ಬಚ್ಚಿಟ್ಟು ಯಾರಿಗೂ ತಿಳಿಯದ ಹಾಗೆ ಸಾಗಾಟದಲ್ಲಿ ತೊಡಗಿದ್ದಳು.

    ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಾಚರಣೆಗಿಳಿದ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 1.10 ಕೋಟಿ ರೂ. ಮೌಲ್ಯದ 2.41 ಚಿನ್ನ ವಶಕ್ಕೆ ಪಡೆದು ಸಮೀರಾಳನ್ನು ಬಂಧಿಸಿದ್ದಾರೆ.

  • ಮಂಗಳೂರು ಏರ್‌ಪೋರ್ಟಿಗೆ ಹುಸಿಬಾಂಬ್ ಕರೆ- ಕಾರ್ಕಳ ಯುವಕನ ಬಂಧನ

    ಮಂಗಳೂರು ಏರ್‌ಪೋರ್ಟಿಗೆ ಹುಸಿಬಾಂಬ್ ಕರೆ- ಕಾರ್ಕಳ ಯುವಕನ ಬಂಧನ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಉಡುಪಿ ಜಿಲ್ಲೆಯ ಕಾರ್ಕಳದ ಮುರಾಡಿ ನಿವಾಸಿ ವಸಂತ್ (33) ಬಂಧಿತ ಆರೋಪಿ. ಈತ ನಿನ್ನೆ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ ರಾವ್ ಅವರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ.

    ಇತ್ತ ಬೆದರಿಕೆ ಕರೆ ಆಗಮಿಸುತ್ತಿದಂತೆ ವಾಸುದೇವ ರಾವ್ ಅವರು ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಪರಿಶೀಲನೆ ನಡೆಸಲಾಗಿತ್ತು. ಆ ಬಳಿಕ ಫೋನ್ ಕರೆ ಹುಸಿ ಬೆದರಿಕೆ ಎಂಬುವುದು ಖಚಿತವಾಗಿತ್ತು.

    ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೊಬೈಲ್ ನಂಬರ್ ಆಧರಿಸಿ ಟ್ರ್ಯಾಕ್ ಮಾಡಿ ಆರೋಪಿಯನ್ನು ಪತ್ತೆ ಮಾಡಿದ್ದರು. ಸದ್ಯ ಬಂಧಿತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತಂತೆ ಬಜಪೆ ಠಾಣಾ ಪೊಲೀಸರಿಂದ ಪ್ರಕರಣ ದಾಖಲಾಗಿದೆ.