Tag: mangaluru dasara

  • ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ

    ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ

    – ದಸರಾಕ್ಕೆ ಚಾಲನೆ ನೀಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ

    ಮಂಗಳೂರು: ಇಲ್ಲಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ (Kudroli Shri Gokarnanatheshwara Kshetra) ನಡೆಯುವ ಮಂಗಳೂರು ದಸರಾಕ್ಕೆ ಗುರುವಾರ ಚಾಲನೆ ದೊರೆಯಿತು. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿ (Navadurga Idol) ಪ್ರತಿಷ್ಠಾನೆ ನಡೆಯಿತು. ಈ ಬಾರಿಯ ದಸರಾಕ್ಕೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.

    ಮಂಗಳೂರು ದಸರಾ ಮಹೋತ್ಸವವನ್ನು ಆಯೋಜಿಸುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಮಹೋತ್ಸವ ‘ಮಂಗಳೂರು ದಸರಾ’ಕ್ಕಿಂದು (Mangaluru Dasara) ವಿದ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ವಿಘ್ನವಿನಾಶಕ ಗಣೇಶ, ವಿದ್ಯಾದೇವಿ ಶಾರದಾ ಮಾತೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌ 

    ಎಲ್ಲಾ ದೇವರನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗಿದ್ದು, 9 ದಿನಗಳ ಕಾಲ ಪೂಜಾ ಕೈಂಕರ್ಯ ನೆರವೇರಲಿದೆ. ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಈ ಬಾರಿಯ ಮಂಗಳೂರು ದಸರಾಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    ಈ ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿಯರನ್ನ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬವೇ ಸರಿ. ಇದನ್ನೂ ಓದಿ: ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ. ಈ ರೀತಿ ನವರಾತ್ರಿಯ ಸಂದರ್ಭ ದೇವರ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ, ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ?- ಸಿ.ಟಿ.ರವಿ

    ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಅಕ್ಟೋಬರ್ 13 ರಂದು ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನಡೆಸಿ ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಿ, ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು. ಸಂಭ್ರಮದ ಮಂಗಳೂರು ದಸರಾಕ್ಕೆ ನೀವೂ ಬನ್ನಿ.

  • ಮಂಗಳೂರು ದಸರಾ ಮೆರವಣಿಗೆಯಲ್ಲಿ ದೈವದ ಸ್ತಬ್ದಚಿತ್ರಕ್ಕಿಲ್ಲ ಅವಕಾಶ

    ಮಂಗಳೂರು ದಸರಾ ಮೆರವಣಿಗೆಯಲ್ಲಿ ದೈವದ ಸ್ತಬ್ದಚಿತ್ರಕ್ಕಿಲ್ಲ ಅವಕಾಶ

    – ಡಿಜೆ ಸಂಸ್ಕೃತಿಗೂ ಕಡಿವಾಣ

    ಮಂಗಳೂರು: ಕಾಂತಾರ (Kantara) ಸಿನಿಮಾ ಕರಾವಳಿಯ ದೈವಗಳ ಪ್ರಸಿದ್ಧಿಯನ್ನು ವಿಶ್ವದಾದ್ಯಂತ ಪಸರಿಸಿತ್ತು. ಆದರೆ ಈ ಸಿನಿಮಾದ ಕಾರಣಕ್ಕೆ ಇದೇ ದೈವಗಳು ಕೆಲವರಿಗೆ ತಮಾಷೆಯ ವಸ್ತುವಾಗಿದೆ. ಬೀದಿ ಬೀದಿಯಲ್ಲೂ ದೈವಗಳ ವೇಷ ಹಾಕಿ ಅವಮಾನ ಮಾಡೋ ಪ್ರಕರಣಗಳೂ ನಡೆದಿದೆ. ಹೀಗಾಗಿಯೇ ಈ ಬಾರಿಯ ಮಂಗಳೂರು ದಸರಾದಲ್ಲಿ (Mangaluru Dasara) ದೈವಗಳ ಸ್ತಬ್ಧ ಚಿತ್ರಗಳಿಗೆ ಬ್ರೇಕ್ ಹಾಕಲಾಗಿದೆ. ಡಿಜೆ ಸಂಸ್ಕೃತಿಗೂ ಕಡಿವಾಣ ಹಾಕುವ ಮೂಲಕ ವಿಭಿನ್ನ ದಸರಾ ಆಚರಣೆಗೆ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಆಡಳಿತ ಹೊಸ ಹೆಜ್ಜೆ ಇಟ್ಟಿದೆ.

    ಹೌದು. ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ ಕುದ್ರೋಳಿ (Kudroli Temple) ಶ್ರೀಕ್ಷೇತ್ರ ಸಜ್ಜಾಗುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ಅಕ್ಟೋಬರ್ 25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ ಎಂದು ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಖಡಕ್ ನಿರ್ಧಾರ ತಳೆದಿದೆ. ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ (Tableau) ಅವಕಾಶ ನೀಡುತ್ತಿಲ್ಲ. ಆದ್ದರಿಂದ ಇಂತಹ ಟ್ಯಾಬ್ಲೊಗಳು ಬಂದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಲಾಗಿದೆ. ಯಾವುದೇ ಜಾತಿ, ಧರ್ಮ, ಮತದವರಿಗೆ ನಿಂದನೆ, ಅವಮಾನ ಮಾಡುವಂತಹ ಟ್ಯಾಬ್ಲೊಗಳಿಗೂ ಅವಕಾಶ ಕೊಡುವುದಿಲ್ಲ ಎಂದು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ನವರಾತ್ರಿ 2023: ಬ್ರಹ್ಮಚಾರಿಣಿ ದೇವಿಯ ಹಿನ್ನೆಲೆ ಏನು?

    ಈ ಬಾರಿಯ ಮಂಗಳೂರು ದಸರಾದ ಮೆರವಣಿಗೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಡಿಜೆಗೆ ನಿಷೇಧ ಹಾಕಲಾಗಿದ್ದು, ಭಜನಾ ತಂಡಗಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ನೂರಾರು ಟ್ಯಾಬ್ಲೋಗಳು ಭಾಗವಹಿಸೋ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸಾಮರಸ್ಯದ ದಸರಾಕ್ಕೆ ಈ ಬಾರಿ ಮಂಗಳೂರು ದಸರಾ ಸಾಕ್ಷಿಯಾಗಲಿದೆ.ಎಲ್ಲಾ ಜಾತಿ ಮತ, ಧರ್ಮದವರು ಈ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಂತೆ ಕ್ರೈಸ್ತ ಧರ್ಮದವರು ಸೇರಿದಂತೆ ಬೇರೆ ಬೇರೆ ಧರ್ಮದವರು ಅವರವರ ಟ್ಯಾಬ್ಲೊಗಳನ್ನು ಮೆರವಣಿಗೆಯಲ್ಲಿ ತರಲಿದ್ದಾರೆ. ಮಂಗಳೂರು ದಸರಾದಲ್ಲಿ ಪ್ರತೀ ವರ್ಷ ಒಂದೊಂದು ವಿಶೇಷವಿರುತ್ತದೆ. ಈ ಬಾರಿ ಅಕ್ಟೋಬರ್ 15ರಂದು ರಾತ್ರಿ 8ಗಂಟೆಗೆ ಶ್ರಿಕ್ಷೇತ್ರದಿಂದ ಮಂಗಳೂರು ದಸರಾ ಮ್ಯಾರಥಾನ್ ನಡೆಯಲಿದೆ. ಜ್ಯೂಯೀಸ್ ಫಿಟ್ ನೆಸ್ ಕ್ಲಬ್ ಹಾಗೂ ಶ್ರೀಕ್ಷೇತ್ರ ಜೊತೆಯಾಗಿ ಸೇರಿ ಈ ಮ್ಯಾರಥಾನ್ ನಡೆಸಲಿದೆ. ಸಾವಿರಾರು ಮಂದಿ ಈ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

    ಒಟ್ಟಾರೆ ದೈವಗಳ ಅವಹೇಳನ ವಿರುದ್ಧ ಈ ಬಾರಿಯ ಮಂಗಳೂರು ದಸರಾ ಹೊಸ ಸಂದೇಶ ಸಾರಿದೆ. ದೇವಸ್ಥಾನದ ಆಡಳಿತ ಮಂಡಳಿಯ ಈ ನಡೆ ಇದೀಗ ಭಾರೀ ಪ್ರಸಂಶೆಗೆ ಕಾರಣವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವಿ ಫೋಟೋಶೂಟ್‍ಗಾಗಿ 21 ದಿನ ವ್ರತ ಮಾಡಿದ ಕ್ರಿಶ್ಚಿಯನ್ ಯುವತಿ!

    ದೇವಿ ಫೋಟೋಶೂಟ್‍ಗಾಗಿ 21 ದಿನ ವ್ರತ ಮಾಡಿದ ಕ್ರಿಶ್ಚಿಯನ್ ಯುವತಿ!

    – ಅನೀಶಾ ನಿಷ್ಠೆಗೆ ಭಾರೀ ಮೆಚ್ಚುಗೆ

    ಮಂಗಳೂರು: ದಸರಾ ಅಂದ್ರೆ ಎಲ್ಲರಿಗೂ ಥಟ್ಟಂತ ನೆನಪಿಗೆ ಬರುವುದು ದೇವಿ ಶಾರದಾ ಮಾತೆಯ ವಿಗ್ರಹ. ಪ್ರತಿವರ್ಷ ಮಂಗಳೂರಿನ ದಸರಾದಲ್ಲಿ ನವದುರ್ಗೆಯರ ಜೊತೆ ಶಾರದಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಸರಸ್ವತಿ ದೇವಿಯ ಮೂರ್ತಿ ಅದೆಷ್ಟು ಸುಂದರ ಅಂದ್ರೆ ಅದೇ ರೀತಿಯ ಫೋಟೋ ಶೂಟ್ ಗಳನ್ನು ಸಾಕಷ್ಟು ಯುವತಿಯರು, ಮಹಿಳೆಯರು ಮಾಡಿಸಿಕೊಳ್ಳುತ್ತಾರೆ. ಈ ವರ್ಷದ ವಿಶೇಷ ಅಂದ್ರೆ ಓರ್ವ ಕ್ರಿಶ್ಚಿಯನ್ ಸಮುದಾಯದ ಯುವತಿ, ವೃತಾಚರಣೆ ಮಾಡಿ ಫೋಟೋಶೂಟ್ ಭಾಗವಹಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

    ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುವ ಕರಾವಳಿಯ ದಸರಾ ಇತರ ಹಲವಾರು ಐತಿಹ್ಯ ಮತ್ತು ವೈಭವಗಳನ್ನು ಹೊಂದಿದೆ. ಇಲ್ಲಿನ ದಸರಾದಲ್ಲಿ ಹುಲಿವೇಷ ಸೇರಿದಂತೆ ಸಾಕಷ್ಟು ಟ್ಯಾಬ್ಲೋಗಳ ಮೂಲಕ ಪ್ರತಿವರ್ಷ ಜನರನ್ನು ರಂಜಿಸುವ ಕಾರ್ಯಕ್ರಮಗಳು ಇರುತ್ತಿತ್ತು. ಜೊತೆಗೆ ಲಕ್ಷಾಂತರ ಜನರು ಈ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ವರ್ಷ ಕೊರೊನಾದಿಂದಾಗಿ ಸರಳ ದಸರಾ ಆಚರಿಸಿದ್ದರಿಂದ ಎಲ್ಲಾ ಸಂಭ್ರಮಗಳಿಗೆ ಕೊಂಚ ಬ್ರೇಕ್ ಬಿದ್ದಿತ್ತು.

    ದಸರಾದಲ್ಲಿ ಪ್ರಮುಖ ಭಾಗ ಅಂದರೆ ಅದು ಗಣಪತಿ, ಆದಿಶಕ್ತಿ, ನವದುರ್ಗೆಯರು ಮತ್ತು ಸರಸ್ವತಿ ಮೂರ್ತಿ. ಕುದ್ರೋಳಿ ದೇವಸ್ಥಾನದ ಆವರಣದಲ್ಲಿರುವ ಸಭಾಭವನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳು ಅದೆಷ್ಟು ಸುಂದರ ಮತ್ತು ಮನಮೋಹಕ ಅಂದರೆ ಅದನ್ನು ನೋಡಿದವರು ವಾವ್ ಅನ್ನದೇ ಇರಲಾರರು. ಪ್ರಮುಖವಾಗಿ ಶಾರದಾ ಮಾತೆಯ ವಿಗ್ರಹ ಅತ್ಯಕರ್ಷಣೆಯಾಗಿರುತ್ತದೆ. ಪ್ರತಿವರ್ಷ ವರ್ಷಕ್ಕೂ ಕೊಂಚ ವಿಭಿನ್ನ ಶೈಲಿಯಲ್ಲಿ ಮೂಡಿಬರುವ ಶಾರದಾ ಮಾತೆಯ ಮೂರ್ತಿ ಸಾಕ್ಷಾತ್ ಸರಸ್ವತಿಯೇ ಧರೆಗಿಳಿದುಬಂದಂತೆ ಕಾಣುತ್ತಿತ್ತು. ಇದಷ್ಟು ಫೇಮಸ್ ಆಗಿದೆ ಅಂದ್ರೆ ಇದೇ ರೀತಿಯ ವೇಷ ಧರಿಸಿ ಫೋಟೊಶೂಟ್ ನ್ನು ಯುವತಿಯರು ಮತ್ತು ಮಹಿಳೆಯರು ಮಾಡಿಸಿಕೊಳ್ಳುತ್ತಿದ್ದಾರೆ.

    ದೇವಿಯ ಮುಡಿಯಲ್ಲಿ ಯಾವ ರೀತಿ ಮಲ್ಲಿಗೆ ಗುಚ್ಚ, ಕೈಯಲ್ಲಿನ ವೀಣೆ ಇದ್ದಂತೆ ಥೇಟ್ ಮೂರ್ತಿಯ ಹಾಗೆ ಅಲಂಕಾರ ಮಾಡಿಕೊಂಡು ಫೋಟೊಗೆ ಪೋಸ್ ಕೊಡುತ್ತಾರೆ. ದೇವಿಯ ಫೋಟೋ ಹೆಚ್ಚು ವೈರಲ್ ಆಗೋದು ವಿಸರ್ಜನೆಯ ಫೋಟೊಗಳಿಂದಾಗಿ. ವಿಸರ್ಜನೆ ವೇಳೆ ಸರಸ್ವತಿ ಮೂರ್ತಿ ಮುಳುಗುವಾಗ ಕ್ಲಿಕ್ ಮಾಡಿದ ಫೋಟೋ ಮಾದರಿಯಲ್ಲಿ ಯುವತಿಯರು ಮತ್ತು ಮಹಿಳೆಯರು ನೀರಿನಲ್ಲಿ ಮುಳುಗಿ ಫೋಟೊಗೆ ಪೋಸ್ ನೀಡುತ್ತಾರೆ.

    ಈ ಬಾರಿ ಮಂಗಳೂರಿನ ಪಾತ್ ವೇ ಮತ್ತು ಮರ್ಸಿ ಸಲೂನ್ ಆಯೋಜಿಸಿದ್ದ ಶ್ಯಾಡೋ ಆಫ್ ನವದುರ್ಗಕ್ಕೆ ರೂಪದರ್ಶಿಯರನ್ನು ಹುಡುಕುತ್ತಿದ್ದರು. ಆಗ ಸರಸ್ಪತಿ ಮೂರ್ತಿಯ ರೂಪದರ್ಶಿಯಾಗಿ ಮಂಗಳೂರಿನ ಕುಲಶೇಖರ ನಿವಾಸಿಯಾದ ಅನೀಶಾ ಅಂಜಲಿನ್ ಮೋಂತೇರೊ ಸೆಲೆಕ್ಟ್ ಆಗಿದ್ರು. ತನ್ನ ಧರ್ಮವಲ್ಲದ ಇಲ್ಲಿ ಈ ಕಾರ್ಯ ಮಾಡಲು ಆಕೆ ನಿಷ್ಠೆಯಿಂದ ತಯಾರಾಗಿದ್ದರು. 21 ದಿನ ಕಾಲ ಕಠಿಣ ವ್ರತ ಮಾಡಿ ಮಾಂಸಹಾರ ವರ್ಜಿಸಿದ್ದರು. ಹೀಗೆ ಸಂಪೂರ್ಣ ಸಸ್ಯಹಾರ ಅದರಲ್ಲೂ ಪಥ್ಯಹಾರ ಸೇವಿಸಿ ನಂತರ ಈ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಫೋಟೊಗಳನ್ನು ವರ್ಷಿಲ್ ಅಂಚನ್ ಸೆರೆಹಿಡಿದ್ದಾರೆ. ಇದೇ ರೀತಿ ಫೋಟೊಶೂಟ್ ಮಾಡಿದ್ದ ಹಲವು ಯುವತಿಯರು ಭಕ್ತವೃಂದದಿಂದ ಟೀಕೆಗೆ ಗುರಿಯಾಗಿದ್ದರು. ಆದರೆ ಅನೀಶಾಳ ಈ ವ್ರತ ನಿಷ್ಠೆಯಿಂದ ಈಗ ಎಲ್ಲರ ಮೆಚ್ಚುಗೆಗೆ ಇದು ಕಾರಣವಾಗಿದೆ.