Tag: mangalsutra

  • ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳ ಕೊಲೆ – ಸತ್ಯ ಹೊರಬರುತ್ತಿದ್ದಂತೆ ಆರೋಪಿ ಆತ್ಮಹತ್ಯೆ

    ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳ ಕೊಲೆ – ಸತ್ಯ ಹೊರಬರುತ್ತಿದ್ದಂತೆ ಆರೋಪಿ ಆತ್ಮಹತ್ಯೆ

    – ಕೊಲೆ ಮಾಡಿ ಹೃದಯಾಘಾತ ಎಂದು ಬಿಂಬಿಸಿದ್ದ ಆರೋಪಿ

    ಹಾಸನ: ಚಿನ್ನದ ಮಾಂಗಲ್ಯ ಸರದ (Mangalsutra) ಆಸೆಗೆ ಮಾವನ ಮಗಳನ್ನೇ ಕೊಂದು ಹೃದಯಾಘಾತ (Heart Attack) ಎಂದು ಬಿಂಬಿಸಿ, ಸತ್ಯ ಹೊರಬರುತ್ತಿದ್ದಂತೆ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arasikere) ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶಕುಂತಲ (48) ಕೊಲೆಯಾದ ಮಹಿಳೆ. ಶಿವಮೂರ್ತಿ (55) ಮಾವನ ಮಗಳನ್ನೇ ಕೊಂದ ಆರೋಪಿ. ತನಿಖೆ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 27 ವರ್ಷಗಳ ಹಿಂದೆ ಪಾಲಾಕ್ಷ ಜೊತೆ ವಿವಾಹವಾಗಿದ್ದ ಶಕುಂತಲಾ, ಮಕ್ಕಳಿಲ್ಲದ ಕಾರಣ ಮನೆಯಲ್ಲಿ ಇಬ್ಬರೇ ವಾಸವಿದ್ದರು. ಆ.20 ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನ ಮಗಳ ಮನೆಗೆ ಶಿವಮೂರ್ತಿ ಬಂದಿದ್ದ. ಮನೆಗೆ ಬರುವಾಗಲೇ ನಕಲಿ ಚಿನ್ನದ ಸರ ತಂದಿದ್ದ. ಬಳಿಕ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ನಕಲಿ ಚಿನ್ನದ ಸರ ಹಾಕಿದ್ದ. ದನ ಮೇಯಿಸಲು ಹೋಗಿದ್ದ ಶಕುಂತಲಾ ಪತಿ ಪಾಲಾಕ್ಷ ವಾಪಸ್ ಮನೆಗೆ ಬಂದ ವೇಳೆ ಶಕುಂತಲಾ ನೆಲದ ಮೇಲೆ ಬಿದ್ದಿದ್ದಳು. ಇದನ್ನೂ ಓದಿ: ನಾವು ಮಾಡುವ ಈ ಸಣ್ಣ ತಪ್ಪುಗಳೇ ಸೈಬರ್‌ ಅಪರಾಧಕ್ಕೆ ದಾರಿ – 7 ತಿಂಗಳಲ್ಲಿ ಬರೋಬ್ಬರಿ 861 ಕೋಟಿ ಲೂಟಿ

    ಪತ್ನಿ ನೆಲದ ಮೇಲೆ ಬಿದ್ದಿರುವ ಬಗ್ಗೆ ಪಾಲಾಕ್ಷ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಶಕುಂತಲಾ ಸಾವನ್ನಪ್ಪಿರುವ ಸುದ್ದಿ ತಿಳಿದು ಗ್ರಾಮಕ್ಕೆ ಬಂದಿದ್ದ ಶಕುಂತಲಾ ಸಹೋದರಿಯರು ಪತಿ ಪಾಲಾಕ್ಷ ವಿರುದ್ಧವೇ ಆರೋಪ ಮಾಡಿದ್ದರು. ಇದೇ ವೇಳೆ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ ಶಿವಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ವೇಳೆ ಗ್ರಾಮಸ್ಥರು ಶಿವಮೂರ್ತಿ ಮಾತನ್ನೇ ನಂಬಿದ್ದರು. ಆದರೆ ಸಾವಿನ ಬಗ್ಗೆ ಅನುಮಾನಗೊಂಡ ಶಕುಂತಲಾ ಸಂಬಂಧಿಕ 112ಕ್ಕೆ ಕರೆ ಮಾಡಿದ ಹಿನ್ನೆಲೆ ಸ್ಥಳಕ್ಕೆ ಜಾವಗಲ್ ಪೊಲೀಸರು ಆಗಮಿಸಿದ್ದರು. ಈ ವೇಳೆ ಹೃದಯಾಘಾತವಾಗಿದೆ ಮರಣೋತ್ತರ ಪರೀಕ್ಷೆ ಬೇಡ ಎಂದು ಶಿವಮೂರ್ತಿ ಹೇಳಿದ್ದಾನೆ. ಅಲ್ಲದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂಗೆ ಮರಣೋತ್ತರ ಪರೀಕ್ಷೆ ಬೇಡ ಎಂದು ಗ್ರಾಮದ ಕೆಲವರು ಫೋನ್ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – 9 ಬಾರಿ ಚಾಕು ಇರಿದು ಲಿವ್ ಇನ್ ಗೆಳತಿಯ ಕೊಂದ ಪ್ರಿಯಕರ

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಂತೆ ಶಿವಮೂರ್ತಿ ಭಯಗೊಂಡಿದ್ದ. ಗ್ರಾಮದ ಹಲವೆಡೆ ಸಿಸಿಟಿವಿ ಅಳವಡಿಸಿದ್ದು, ಶಿವಮೂರ್ತಿ ಸಿಸಿಟಿವಿ ಇದ್ದ ಕಡೆ ಓಡಾಡುವುದನ್ನೇ ಬಿಟ್ಟಿದ್ದ. ಶಿವಮೂರ್ತಿ ಪತ್ನಿ ಗ್ರಾ.ಪಂ. ಸದಸ್ಯೆ ಆಗಿದ್ದರು. ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಹೆದರಿದ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆ ನಂತರ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣದ ಸತ್ಯಾಂಶ ಬಯಲಾಗಿದೆ. ಚಿನ್ನದ ಸರ ಕದ್ದ ಶಿವಮೂರ್ತಿ ಅದನ್ನು ಜಾವಗಲ್‌ನ ಚಾಮುಂಡೇಶ್ವರಿ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟಿದ್ದ. ಸದ್ಯ ಪೊಲೀಸರು ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರವಾಡ | ಯೂಟ್ಯೂಬರ್‌ ಮುಕಳೆಪ್ಪನ ಪತ್ನಿ ಪೊಲೀಸರ ವಶಕ್ಕೆ – ಶಕ್ತಿ ಸದನ ಕೇಂದ್ರಕ್ಕೆ ರವಾನೆ

  • ಮಾಂಗಲ್ಯ ಸರಕ್ಕೂ ಬಂತು ಫ್ಯಾಷನ್ ಟಚ್

    ಮಾಂಗಲ್ಯ ಸರಕ್ಕೂ ಬಂತು ಫ್ಯಾಷನ್ ಟಚ್

    ಕಾಲುಂಗುರದ ಕಾಲ ಆಯ್ತು ಈಗ ‘ತಾಳಿ’ ಟ್ರೆಂಡ್

    ಹಿಂದೂಗಳ ಪದ್ಧತಿಯ ಮದುವೆಯಲ್ಲಿ ಮಾಂಗಲ್ಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈಗಂತೂ ವಿವಿಧ ರೀತಿಯ ಡಿಸೈನ್‌ಗಳ ಮಾಂಗಲ್ಯ ಸರಗಳನ್ನು ಧರಿಸುವುದು ಟ್ರೆಂಡ್ ಆಗಿದೆ. ಮೊದಲೆಲ್ಲ ಸಾಂಪ್ರದಾಯಿಕ ಸರವಾಗಿದ್ದ ತಾಳಿ ಈಗ ಫ್ಯಾಷನ್ ಆಗಿ ಬದಲಾಗಿದೆ. ಮಾಂಗಲ್ಯಕ್ಕೂ ಫ್ಯಾಷನ್ ಟಚ್ ಕೊಡಲಾಗಿದೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್

    ನಾನಾ ಡಿಸೈನರ್‌ಗಳು ವಿವಿಧ ವಿನ್ಯಾಸದ ಮಂಗಳಸೂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅದರಲ್ಲಿ ಕೈಗೆ ತಾಳಿ ಸರ, ಚಿನ್ನದ ಮಾಂಗಲ್ಯ, ಕಪ್ಪು ಮಣಿ ಚಿನ್ನದ ಮಾಂಗಲ್ಯ, ಲಾಕೆಟ್ ಹೊಂದಿರುವ ಕಪ್ಪು ಮಣಿಯ ಮಾಂಗಲ್ಯ, ಚಿನ್ನದ ಸರಪಳಿ ಮಾಂಗಲ್ಯ, ಹಗುರವಾದ ಮಾಂಗಲ್ಯದ ವಿನ್ಯಾಸ, ಹೀಗೆ ಬಗೆ ಬಗೆಯ ಡಿಸೈನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

    ಕೈಗೆ ಮಾಂಗಲ್ಯ ಸರ:

    ಕತ್ತಿನಲ್ಲಿದ್ದ ಕರಿಮಣಿ ಈಗ ಕೈಗೆ ಬಳೆಯ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ಇತ್ತೀಚೆಗೆ ಅಂಬಾನಿ ಮನೆ ಸೊಸೆ ರಾಧಿಕಾ ಮಾಂಗಲ್ಯ (ತಾಳಿ) ಸರವನ್ನು ಕೈಗೆ ಕಂಕಣದ ರೂಪದಲ್ಲಿ ಧರಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮಂಗಳ ಸೂತ್ರದಲ್ಲಿ ಕರಿಮಣಿ, ಮುತ್ತುಗಳು ಹಾಗೂ ಲಾಕೆಟ್ ಹೊರತುಪಡಿಸಿ ಅನಂತ್ ಅಂಬಾನಿ ಹೆಸರಿನ ಮೊದಲ ಅಕ್ಷರ ಎ ಕೂಡ ಒಳಗೊಂಡಿತ್ತು. ಇದು ಫ್ಯಾಷನ್ ಪ್ರಿಯರ ಗಮನ ಸೆಳೆದಿತ್ತು.

     

    View this post on Instagram

     

    A post shared by Meera Sakhrani (@meerasakhrani)

    ಚಿನ್ನದ ತಾಳಿ ಸರ:

    ಮದುವೆ ವೇಳೆ ವಧುಗೆ ಹಾಕುವ ಚಿನ್ನದ ಮಾಂಗಲ್ಯವನ್ನು ಈಗಿನ ಫ್ಯಾಷನ್‌ಗೆ ತಕ್ಕಂತೆ ಮಾಡಬಹುದು. ಚಿನ್ನದ ಮಾಂಗಲ್ಯವನ್ನು ಶಾರ್ಟ್ ಆಗಿ ಮಾಡಿಸಿದರೆ ಸೀರೆಯಿಂದ ಹಿಡಿದು ಎಲ್ಲಾ ಬಟ್ಟೆಗಳಿಗೂ ಒಪ್ಪುತ್ತದೆ.

    ಕಪ್ಪು ಮಣಿ ಚಿನ್ನದ ಮಾಂಗಲ್ಯ:

    ತೆಳುವಾದ ಚಿನ್ನದ ಸರಪಳಿ ಮತ್ತು ಕಪ್ಪು ಮಣಿಗಳಿಂದ ತಯಾರಿಸಿರೋದನ್ನು ಮಾಂಗಲ್ಯವು ಆಫೀಸ್‌ಗೆ ಮತ್ತು ಸಮಾರಂಭಗಳಲ್ಲಿ ಧರಿಸಿಬಹುದು.

    ಲಾಕೆಟ್ ಹೊಂದಿರುವ ಕಪ್ಪು ಮಣಿಯ ಮಾಂಗಲ್ಯ:

    ಕಡಿಮೆ ಬಜೆಟ್‌ನಲ್ಲಿ ಕಪ್ಪು ಮಣಿಗಳ ಮಾಂಗಲ್ಯವನ್ನು ಧರಿಸಬಹುದು. ಜೊತೆಗೆ ಉಡುಗೊರೆಯಾಗಿಯೂ ನೀಡಬಹುದು. ಫ್ಯಾಷನ್ ತಕ್ಕಂತೆ ಲಾಕೆಟ್ ಅನ್ನು ಬದಲಾಯಿಸಬಹುದು.

    ಚಿನ್ನದ ಸರಪಳಿ ಮಾಂಗಲ್ಯ:

    ತೆಳುವಾದ ಚಿನ್ನದ ಸರಪಳಿ ತಾಳಿ ಕೂಡ ಶಾರ್ಟ್ ಆಗಿ ಮಾಡಿಸಿ ಧರಿಸಬಹುದು. ಇದು ಕೂಡ ಈಗ ಟ್ರೆಂಡ್‌ನಲ್ಲಿದೆ. ಇದಕ್ಕೆ ಕಪ್ಪು ಮಣಿ ಹಾಕಬಹುದು.

    ಹಗುರವಾದ ಮಾಂಗಲ್ಯದ ವಿನ್ಯಾಸ:

    ಮುತ್ತು, ಚಿನ್ನ ಸಮಾನ ಪ್ರಮಾಣದಲ್ಲಿರುವ ಹಗುರವಾದ ಮಾಂಗಲ್ಯದ ವಿನ್ಯಾಸ ನಾರಿಮಣಿಯರು ಹೆಚ್ಚು ಇಷ್ಟಪಡುತ್ತಾರೆ. ಪದ್ಧತಿಯ ಜೊತೆ ಫ್ಯಾಷನ್ ಕೂಡ ಮಾಡಬಹುದಾಗಿದೆ. ಒಟ್ನಲ್ಲಿ ಮದುವೆಯಾಗಿರುವ ಯುವತಿಯರಿಗೆ ಕಾಲುಂಗುರದ ಫ್ಯಾಷನ್ ಜೊತೆ ಮಾಂಗಲ್ಯದ ಸರದಲ್ಲೂ ಟ್ರೆಂಡ್‌ಗೆ ತಕ್ಕಂತೆ ಧರಿಸುವ ಕಾಲ ಬಂದಿದೆ. ಕಾಲಕ್ಕೆ ತಕ್ಕಂತೆ ಇದು ಕೂಡ ಬದಲಾಗಿದೆ.

  • ರೈಲ್ವೇ ಎಕ್ಸಾಂಗೆ ಮಂಗಳಸೂತ್ರ, ಜನಿವಾರ ತೆಗೆಸುವಂತಿಲ್ಲ – ರೈಲ್ವೇ ಇಲಾಖೆಯಿಂದ ಅಧಿಕೃತ ಆದೇಶ

    ರೈಲ್ವೇ ಎಕ್ಸಾಂಗೆ ಮಂಗಳಸೂತ್ರ, ಜನಿವಾರ ತೆಗೆಸುವಂತಿಲ್ಲ – ರೈಲ್ವೇ ಇಲಾಖೆಯಿಂದ ಅಧಿಕೃತ ಆದೇಶ

    ಬೆಂಗಳೂರು: ರೈಲ್ವೇ ನೇಮಕಾತಿ ಪರೀಕ್ಷೆ ವೇಳೆ ಮಂಗಳಸೂತ್ರ ಧರಿಸಿದ್ರೆ ಪರೀಕ್ಷೆಗೆ ಅವಕಾಶವಿಲ್ಲ ಎಂಬ ನಿರ್ಬಂಧವನ್ನು ರೈಲ್ವೆ ಸಚಿವಾಲಯ ವಾಪಸ್ ಪಡೆದಿದೆ.

    ಜನಿವಾರ ವಿವಾದದಿಂದಾಗಿ ತೀವ್ರ ಟೀಕೆ, ಅಸಮಾಧಾನ ವ್ಯಕ್ತವಾಗಿದ್ದ ಬೆನ್ನಲ್ಲೇ ಈಗ ನಿರ್ಬಂಧ ಸಡಿಲಿಸಲಾಗಿದೆ. ಮಾರ್ಗಸೂಚಿಯಲ್ಲಿ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂದು ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    ಈ ಬಗ್ಗೆ ಸಂಸದರು, ಶಾಸಕರು ಮನವಿ ಮಾಡಿದ ಹಿನ್ನೆಲೆ ಟ್ವೀಟ್ ಮೂಲಕ ಕೇಂದ್ರ ಸಚಿವ ಸೋಮಣ್ಣ ಗೊಂದಲಕ್ಕೆ ಇತಿಶ್ರೀ ಹಾಡಿದ್ದಾರೆ. ಜನಿವಾರ, ಮಾಂಗಲ್ಯ, ಸಂಸ್ಕೃತಿ ಬಿಂಬಿಸುವ ಯಾವುದೇ ವಸ್ತು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ವೈಭವ್‌ ʻಯಶಸ್ವಿʼ ಶತಕ – ಚಿರಯುವಕನ ಆಟಕ್ಕೆ ಗುಜರಾತ್‌ ಧೂಳಿಪಟ, ರಾಜಸ್ಥಾನ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

  • ಮೆಟ್ಟಿಲಿನಿಂದ ಜಾರಿಬಿದ್ದ ವೇಳೆ ಕತ್ತು ಸೀಳಿಬಿಟ್ಟಿತು ಮಾಂಗಲ್ಯ – ಗೃಹಿಣಿ ಸಾವು

    ಮೆಟ್ಟಿಲಿನಿಂದ ಜಾರಿಬಿದ್ದ ವೇಳೆ ಕತ್ತು ಸೀಳಿಬಿಟ್ಟಿತು ಮಾಂಗಲ್ಯ – ಗೃಹಿಣಿ ಸಾವು

    ನವದೆಹಲಿ: ಗೃಹಿಣಿ ತಮ್ಮ ಮನೆಯ ಮೆಟ್ಟಿಲಿನಿಂದ ಬಿದ್ದು, ಮಾಂಗಲ್ಯ ಸರ ಆಕೆಯ ಕುತ್ತಿಗೆ ಸೀಳಿ ಮೃತಪಟ್ಟಿರುವ ಘಟನೆ ದೆಹಲಿಯ ಗಾಂಧಿನಗರದಲ್ಲಿ ನಡೆದಿದೆ.

    ಮೆಟ್ಟಿಲಿನಿಂದ ಗೃಹಿಣಿ ಜಾರಿಬಿದ್ದ ವೇಳೆ ತಾಳಿಯು ಆಕೆಯ ಕುತ್ತಿಗೆ ಸೀಳಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಪಿಡಿಒಗೆ ಕಿಸ್ ಕೊಟ್ಟ ಸದಸ್ಯ!

    ದೆಹಲಿಯ ಗಾಂಧಿನಗರದ ರಘುವೀರ್‌ಪುರ 2ನೇ ಮುಖ್ಯರಸ್ತೆಯ 4ನೇ ಮನೆಯಲ್ಲಿ ಗೃಹಿಣಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಮಧ್ಯಾಹ್ನ 12:39ರ ವೇಳೆಗೆ ಪೊಲೀಸ್ ನಿಯಂತ್ರಣಾ ಕೊಠಡಿಗೆ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಗೃಹಿಣಿ ರಾಧಾದೇವಿ ಅವರ ಮೃತದೇಹ ಮೆಟ್ಟಿಲುಗಳ ಮೇಲೆ ಇತ್ತು. ಆಕೆಯ ಕುತ್ತಿಗೆ ಮೇಲೆ ಗಾಯದ ಗುರುತುಗಳಾಗಿದ್ದವು ಎಂದಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

    CRIME 2

    ಘಟನೆಯ ಸಮಯದಲ್ಲಿ ಆಕೆಯ ನಾಲ್ಕು ವರ್ಷದ ಮಗ ಅವಳೊಂದಿಗೆ ಇದ್ದನು. ತನ್ನ ತಾಯಿ ಬಟ್ಟೆ ಒಣಗಿಸಲು ಟೆರೇಸ್‌ಗೆ ಹೋಗಿದ್ದು, ಕೆಳಗೆ ಬರುವಾಗ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ. ಆಕೆಯ ಗಂಟಲಿನ ಮೇಲೆ ಗಾಯದ ಗುರುತುಗಳಿದ್ದವು. ಆಕೆ ಮೆಟ್ಟಿಲಿನಿಂದ ಬಿದ್ದಾಗ ಕುತ್ತಿಗೆಯಲ್ಲಿದ್ದ ಮಂಗಳಸೂತ್ರ ಅವಳ ಗಂಟಲಿನ ಮೇಲೆ ಆಳವಾದ ಗಾಯವನ್ನು ಮಾಡಿ ಕತ್ತು ಸೀಳುವಂತೆ ಮಾಡಿದೆ. ಇದರಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಟಿಬಿ ಆಸ್ಪತ್ರೆಗೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    Live Tv

  • ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

    ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಒಬ್ಬ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಶನ್‌ಗೆ ಬಹಳಷ್ಟು ಒತ್ತು ಕೊಡುವ ಮಾಡರ್ನ್ ಮಹಿಳೆಯೂ ಹೌದು. ನಟಿ 2018ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ಪ್ರೇಮಮಯ ಜೀವನಕ್ಕೆ ಮೂಕವಿಸ್ಮಿತರಾದವರೇ ಇಲ್ಲ.

    ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಒಂದು ಬ್ರಾಂಡ್ ಶೂಟ್‌ನಲ್ಲಿ ತಮ್ಮ ಮದುವೆಯ ಸಂದರ್ಭದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವರು ಮೊದಲ ಬಾರಿಗೆ ಮಂಗಳ ಸೂತ್ರವನ್ನು ಧರಿಸಿದಾಗ ಏನನ್ನಿಸಿತು ಎಂಬುವುದರ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

    ನಾನು ಮಂಗಳಸೂತ್ರವನ್ನು ಮೊದಲ ಬಾರಿಗೆ ಧರಿಸಿದ ಸಂದರ್ಭ ನನಗಿನ್ನೂ ನೆನಪಿದೆ. ಏಕೆಂದರೆ ಮಂಗಳಸೂತ್ರದ ಅರ್ಥ ಏನು ಎಂಬುದರ ಬಗ್ಗೆ ಕಲ್ಪನೆ ಮಾಡಿಕೊಂಡೇ ಬೆಳೆದಿದ್ದೇನೆ. ಆ ಕ್ಷಣ ನನಗೆ ಬಹಳ ವಿಶೇಷವಾಗಿತ್ತು. ಅದೇ ಸಂದರ್ಭದಲ್ಲಿ ನಾನೊಬ್ಬ ಆಧುನಿಕ ಮಹಿಳೆಯಾಗಿ ಇದರ ಅರ್ಥದ ಪರಿಣಾಮ ಏನು ಎಂಬುದರ ಬಗ್ಗೆ ನನಗೂ ಅರಿವಿತ್ತು ಎಂದರು.

    ನಾನು ಮಂಗಳಸೂತ್ರ ಧರಿಸಲು ಇಷ್ಟಪಡುತ್ತೇನೋ ಅಥವಾ ಪಿತೃಪ್ರಧಾನಕ್ಕೆ ಒಳಗಾಗುತ್ತೇನೋ? ಆದರೆ ಅದೇ ಸಂದರ್ಭದಲ್ಲಿ ನನಗನ್ನಿಸಿದ್ದು ನಾನು ಇವೆರಡೂ ತಲೆಮಾರಿನ ಮಧ್ಯದಲ್ಲಿರುತ್ತೇನೆ ಎಂದು. ಸಂಪ್ರದಾಯವನ್ನು ಕಾಪಾಡಿಕೊಳ್ಳಬೇಕು. ಆದರೆ ನೀವು ಯಾರು ಹಾಗೂ ಯಾವ ಕಾರಣಕ್ಕೆ ಇಲ್ಲಿ ನಿಂತಿರುವಿರಿ ಎಂಬುದನ್ನೂ ತಿಳಿದುಕೊಳ್ಳಬೇಕು. ಮುಂದಿನ ಪೀಳಿಗೆಯ ಹುಡುಗಿಯರು ಭಿನ್ನವಾಗುವುದನ್ನು ನಾವು ನೋಡುತ್ತೇವೆ ಎಂದು ಪ್ರಿಯಾಂಕಾ ಹೇಳಿದರು. ಇದನ್ನೂ ಓದಿ: ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾನಿ ಹಾಟ್ ಅವತಾರ

    ನಂತರದಲ್ಲಿ ಪ್ರಿಯಾಂಕಾ ಮಂಗಳಸೂತ್ರದ ಕಪ್ಪು ಮಣಿಗಳ ಪ್ರಾಮುಖ್ಯತೆಯ ಬಗ್ಗೆಯೂ ತಿಳಿಸಿದ್ದಾರೆ. ಕಪ್ಪು ಎನ್ನುವುದು ದುಷ್ಟತನವನ್ನು ತೊಡೆದು ಹಾಕುತ್ತದೆ ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.

  • ದೇಶದ ವಿವಿಧ ರಾಜ್ಯಗಳ ಮಂಗಳಸೂತ್ರ ವಿನ್ಯಾಸದ ಮಾಹಿತಿ

    ದೇಶದ ವಿವಿಧ ರಾಜ್ಯಗಳ ಮಂಗಳಸೂತ್ರ ವಿನ್ಯಾಸದ ಮಾಹಿತಿ

    ಭಾರತದ ವಿವಾಹವು ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಾಂಪ್ರದಾಯನ್ನು ತೋರಿಸುತ್ತದೆ. ಧರ್ಮವನ್ನು ಹೊರತು ಪಡಿಸಿ ದೇಶಾದ್ಯಂತ ಆಚರಿಸುವ ಸಾಮಾನ್ಯ ಆಚರಣೆ ಅಂದರೆ ಮಂಗಳ ಸೂತ್ರ ಎಂಬ ಪವಿತ್ರವಾದ ಗಂಟನ್ನು ಕಟ್ಟುವುದು. 6ನೇ ಶತಮಾನದಿಂದ ಈ ಪದ್ದತಿ ಅಸ್ತಿತ್ವದಲ್ಲಿದ್ದು, ವರನು ವಧುವಿನ ಕುತ್ತಿಗೆಗೆ ಹಳದಿ ದಾರವನ್ನು ಕಟ್ಟುತ್ತಾನೆ. ಇದು ಜೀವಮಾನದ ಬಾಂಧವ್ಯದ ಸಂಕೇತವೆಂದೇ ಪರಿಗಣಿಸಲಾಗಿದೆ ಮತ್ತು ಇದು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ.  ಇದನ್ನೂ ಓದಿ:ಅಕ್ಕ, ತಂಗಿ ಇಬ್ಬರಿಗೂ ತಾಳಿಕಟ್ಟಿದ ವರ

    taali

    ಮಹಿಳೆಯರು ಹಲವಾರು ಆಭರಣಗಳನ್ನು ಧರಿಸಿದರೂ, ಮಂಗಳ ಸೂತ್ರವಿಲ್ಲದೇ ಇರಲು ಸಾಧ್ಯವಿಲ್ಲ. ಮಂಗಳಸೂತ್ರವು ಸಾಂಪ್ರದಾಯಿಕ ಭಾರತೀಯ ಮಹಿಳೆಯರು ಮದುವೆಯಾಗಿರುವುದನ್ನು ತಿಳಿಸುವುದರ ಜೊತೆಗೆ ಸಮಾಜದಲ್ಲಿ ವಧುವಿನ ಗೌರವವನ್ನು ಹೆಚ್ಚಿಸುತ್ತದೆ. ದಕ್ಷಿಣ ಭಾರತದ ಕಡೆ, ಮಂಗಳಸೂತ್ರವು ಹಳದಿ ಬಣ್ಣದ ದಾರ ಮತ್ತು ಚಿನ್ನದ ತಾಳಿಬೊಟ್ಟನ್ನು ಹೊಂದಿರುತ್ತದೆ. ಮತ್ತೆ ಉಳಿದ ಭಾಗಗಳಲ್ಲಿ ಕಪ್ಪುಮಣಿಗಳಿಂದ ವಿನ್ಯಾಸಗೊಳಿಸಲಾದ ಬಟ್ಟಲಿನ ಆಕಾರದ ಪೆಂಡೆಂಟ್‍ಗಳ ರೀತಿಯ ಮಂಗಳಸೂತ್ರಗಳಿರುತ್ತದೆ.

    taali

    ಮಂಗಳ ಸೂತ್ರ ಪದದ ಅರ್ಥ ಮಂಗಳ ಎಂದರೆ ಮಂಗಳಕರ, ಸೂತ್ರ ಎಂದರೆ ದಾರ. ಪ್ರಾಚೀನ ಹಿಂದೂ ಸಂಪ್ರಾದಾಯದ ಪ್ರಕಾರ ಮಂಗಳ ಸೂತ್ರವನ್ನು ವಿವಾಹಿತ ಮಹಿಳೆ ತನ್ನ ಪತಿಯ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಧರಿಸುತ್ತಾರೆ. ಆದರೆ ಪತಿ ತೀರಿಕೊಂಡ ನಂತರವಷ್ಟೇ ಮಂಗಳಸೂತ್ರವನ್ನು ಅವರ ಕುತ್ತಿಗೆಯಿಂದ ತೆಗೆಬೇಕಾಗುತ್ತದೆ. ಅಲ್ಲದೇ ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ರೀತಿಯ ಮಂಗಳ ಸೂತ್ರಗಳಿದ್ದು, ಪ್ರತಿಯೊಂದು ಸಂಸ್ಕೃತಿಯೂ ಬೇರೆ ಬೇರೆ ಅರ್ಥವನ್ನು ತಿಳಿಸುತ್ತದೆ ಮತ್ತು ವಿಭಿನ್ನ ರೀತಿಯ ಮಂಗಳ ಸೂತ್ರವನ್ನು ಹೊಂದಿರುತ್ತದೆ. ಈ ಕುರಿತ ಕೆಲವು ಮಾಹಿತಿ ಈ ಕೆಳಗಿನಂತಿದೆ. ಇದನ್ನೂ ಓದಿ:ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

    ಕರ್ನಾಟಕ ಮಂಗಳಸೂತ್ರ
    ಈ ಮಂಗಳ ಸೂತ್ರವನ್ನು ಕಾರ್ತಮಣಿ ಪಾಠಕ್ ಎಂದು ಕರೆಯಲಾಗುತ್ತದೆ. ಕೂರ್ಗ್ ಪ್ರದೇಶದ ಯಾವುದೇ ಕೊಡವ ವಧುವಿಗೆ ಇದು ಬಹಳ ಅತ್ಯಂತ ಪ್ರಮುಖ ಆಭರಣವಾಗಿದೆ. ಕಾರ್ತಮಣಿ ಮತ್ತು ಪಾಠಕ್ ಎರಡು ಪ್ರತ್ಯೇಕ ಆಭರಣಗಲಾಗಿದ್ದು, ಪಾಠಕ್ ಎಂದರೆ ಚಿನ್ನದ ಪೆಂಡೆಂಟ್ ಆಗಿರುತ್ತದೆ. ಈ ಪೆಂಡೆಂಟ್‍ಗಳನ್ನು ಲಕ್ಷ್ಮೀ  ಭಾವಚಿತ್ರಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಇನ್ನೂ ಕಾರ್ತಮಣಿ ಎಂದರೆ ನಾಣ್ಯದ ಸುತ್ತಲೂ ಸಣ್ಣ ಮಾಣಿಕ್ಯವನ್ನು ಅಳವಡಿಸಲಾಗಿರುತ್ತದೆ.

    Karnataka Mangalsutra

    ತಮಿಳುನಾಡು ಮಂಗಳಸೂತ್ರ
    ಈ ಮಂಗಳಸೂತ್ರವನ್ನು ತಾಳಿ ಕೋಡಿ ಎಂದು ಕರೆಯಲಾಗುತ್ತದೆ. ಇದು ಒಗ್ಗಟ್ಟು, ಬದ್ಧತೆ, ಗೌರವ ಮತ್ತು ಇಬ್ಬರ ನಡುವಿನ ಪರಸ್ಪರ ಪ್ರೀತಿಯ ಅರ್ಥವನ್ನು ತಿಳಿಸುತ್ತದೆ. ಇದರಲ್ಲಿ ತಾಳಿಯ ಮುದ್ರೆಗಳು, ಎಲೆಗಳಿರುತ್ತದೆ. ಇದನ್ನೂ ಓದಿ:ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

    ಆಂಧ್ರ ಪ್ರದೇಶದ ಮಂಗಳಸೂತ್ರ
    ತೆಲುಗು ಮಂಗಳ ಸೂತ್ರ ಎರಡು ಸುತ್ತಿನ ನಾಣ್ಯಗಳನ್ನು ಹೊಂದಿರುತ್ತದೆ. ವರನ ಕಡೆಯವರು ಮತ್ತು ವಧುವಿನ ಕಡೆಯವರಿಬ್ಬರು ಒಂದೊಂದು ನಾಣ್ಯಗಳನ್ನು ಮದುವೆಯ ಸಮಯದಲ್ಲಿ ನೀಡುತ್ತಾರೆ. ಇದನ್ನು ಹಳದಿ ಬಣ್ಣದ ದಾರದಲ್ಲಿ ಕಟ್ಟಲಾಗಿರುತ್ತದೆ. ಈ ಮಂಗಳಸೂತ್ರವು ಎರಡು ಕುಟುಂಬಗಳ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ. ಇದನ್ನೂ ಓದಿ:ಕುಖ್ಯಾತ ಮನೆಗಳ್ಳನ ಬಂಧನ- 150 ಗ್ರಾಂ ಚಿನ್ನಾಭರಣ ವಶ

     Telugu Mangalsutra

    ಕೇರಳ ಮಂಗಳಸೂತ್ರ
    ಇದನ್ನು ಕ್ರಿಶ್ಚಿಯನ್ನರಲ್ಲಿ ಮಿನ್ನು ಹಾಗೂ ಹಿಂದೂಗಳಲ್ಲಿ ತಾಳಿ ಎಂದು ಕರೆಯುತ್ತಾರೆ. ಮಿನ್ನು ಪ್ರೀತಿಯ ಸಂಕೇತಿಸುವ ಹೃದಯದ ಆಕಾರದ ಚಿನ್ನದ ಪೆಂಡೆಂಟ್‍ನಿಂದ ವಿನ್ಯಾಸಗೊಳಿಸಲಾಗಿರುತ್ತದೆ ಹಾಗೂ ಕ್ರಾಸ್ ಸಿಂಬಲ್ ಪತಿ ಹಾಗೂ ಪತ್ನಿ ನಡುವಿನ ಸಂಬಂಧ ಸೂಚಿಸುತ್ತದೆ.

    Kerala Mangalsutra

    ಮಹಾರಾಷ್ಟ್ರ ಮಂಗಳಸೂತ್ರ
    ಮಹಾರಾಷ್ಟ್ರ ಮಂಗಳಸೂತ್ರವನ್ನು ಕಪ್ಪು ಬಣ್ಣದ ಮಣಿಯಿಂದ ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ ಬಟ್ಟಲಿನ ಆಕಾರದ ಎರಡು ನಾಣ್ಯಗಳಿರುತ್ತದೆ. ಇದರಲ್ಲಿ ಶಿವ ಮತ್ತು ಶಕ್ತಿಯನ್ನು ಸೂಚಿಸುತ್ತದೆ. ಮಣಿಗಳ ಎರಡು ಎಳೆಗಳು ಗಂಡ ಮತ್ತು ಹೆಂಡತಿಯ ಸಂಕೇತವಾಗಿದ್ದು, ಕಪ್ಪು ಮಣಿಗಳು ದುಷ್ಟ ಕಣ್ಣನಿಂದ ದೂರವಿರಿಸುವುದರ ಜೊತೆಗೆ ಸಂತೋಷದಿಂದ ದಾಂಪತ್ಯ ಜೀವನವನ್ನು ನಡೆಸಲು ಸಹಾಯಕವಾಗಿದೆ. ಇದನ್ನೂ ಓದಿ:ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ

    Maharashtrian Mangalsutra

  • ವಧುವೇ ವರನಿಗೆ ತಾಳಿ ಕಟ್ಟುವ ವಿಶೇಷ ಆಚರಣೆ!

    ವಧುವೇ ವರನಿಗೆ ತಾಳಿ ಕಟ್ಟುವ ವಿಶೇಷ ಆಚರಣೆ!

    -ಪುಷ್ಪವೃಷ್ಟಿ ಹಾಕಿ ಹಿರಿಯರಿಂದ ಆಶೀರ್ವಾದ

    ವಿಜಯಪುರ: ವರ ವಧುವಿಗೆ ತಾಳಿಕಟ್ಟೋದು ಕಾಮನ್. ಆದ್ರೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ಡಿಫರೆಂಟಾಗಿ ಮದುವೆಯಾಗಿದ್ದಾರೆ.

    ಹೌದು, ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಆದ್ರೆ ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿದ್ದಾರೆ. ಈ ಭಾಗದಲ್ಲಿ ಇದೊಂದು ವಿಶಿಷ್ಠ ಮದುವೆ ಆಚರಣೆಯಾಗಿದೆ. ಸೋಮವಾರದಂದು ನಾಲತವಾಡ ಪಟ್ಟಣದಲ್ಲಿ ಎರಡು ಜೋಡಿಗಳು ವಿಶೇಷವಾಗಿ ಮದುವೆಯಾಗಿದ್ದಾರೆ. ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮಿತ್ ಜೊತೆ ಪ್ರಿಯಾ ಎನ್ನುವ ಎರಡು ಜೊಡಿಯ ಮದುವೆ ಆಗಿದ್ದು, ಇಲ್ಲಿ ಇಬ್ಬರು ವರರಿಗೆ ವಧುಗಳೇ ತಾಳಿ ಕಟ್ಟಿದ್ದು ವಿಶೇಷವಾಗಿತ್ತು.

    ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಲಾಯಿತು. ಅಪ್ಪಟ ಬಸವ ಧರ್ಮದ ತತ್ವದ ಅಡಿಯಲ್ಲಿ ನಡೆದ ಮದುವೆ ಇದಾಗಿದ್ದು, ಶುಭ ಮುಹೂರ್ತ ನೋಡದೆ ಮದುವೆ ಮಾಡಿಸಲಾಗಿದೆ. ವಧು-ವರರಿಗೆ ಅಕ್ಷತೆ ಬದಲು ಪುಷ್ಪವೃಷ್ಟಿ ಹಾಕಿ ಹಿರಿಯರು ಆಶೀರ್ವಾದ ಮಾಡಿದ್ದಾರೆ.

    ಈ ಮದುವೆಯಲ್ಲಿ ಇನ್ನೊಂದು ವಿಶೇಷವೇನೆಂದರೆ, ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನಸುಧೆ, ವಚನವರ್ಷ ಪುಸ್ತಕಗಳ ವಿತರಣೆ ಮಾಡಲಾಯಿತು. ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು, ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv