Tag: Mangalore-Bangalore train

  • ರೈಲು ಡಿಕ್ಕಿ ಹೊಡೆದು ಮೂರು ವರ್ಷದ ಚಿರತೆ ದುರ್ಮರಣ

    ರೈಲು ಡಿಕ್ಕಿ ಹೊಡೆದು ಮೂರು ವರ್ಷದ ಚಿರತೆ ದುರ್ಮರಣ

    ಹಾಸನ: ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಗಂಡು ಚಿರತೆಯೊಂದು ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಸಮೀಪದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರು-ಮಂಗಳೂರು ಮಾರ್ಗದ ರೈಲಿಗೆ ಸಿಲುಕಿ ಚಿರತೆ ಮೃತಪಟ್ಟಿದೆ. ರೈಲ್ವೆ ಹಳಿ ಪರೀಕ್ಷೆ ವೇಳೆ ಚಿರತೆಯ ಮೃತ ದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆಯು ಮೂರು ವರ್ಷದ್ದಾಗಿದೆ ಎಂದು ತಿಳಿಸಿದ್ದಾರೆ.

    ಜೂನ್ 3 ರಂದು ಶಿರಾಡಿಘಾಟ್‍ನ ಎಡಕುಮರಿ ಸಮೀಪದಲ್ಲಿ ಮಂಗಳೂರು-ಬೆಂಗಳೂರು ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆ ಮತ್ತು ಮರಿ ಆನೆ ಮೃತಪಟ್ಟಿದ್ದವು. ರೈಲು ಮಾರ್ಗವು ಕಾಡಿನ ಮಧ್ಯದಲ್ಲಿಯೇ ಹಾದು ಹೋಗಿದ್ದು, ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ಮಧ್ಯದಲ್ಲಿರುವ ಎಡಕುಮರಿ ಸಮೀಪದಲ್ಲಿ ಈ ಘಟನೆ ನಡೆದಿತ್ತು. ತಾಯಿ ಆನೆ ಹಾಗೂ ಅದರ ಮರಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ, ಸ್ಥಳದಲ್ಲಿಯೇ ಮೃತಪಟ್ಟಿದ್ದವು.

  • ರೈಲಿಗೆ ಸಿಲುಕಿ ತಾಯಿ, ಮರಿಯಾನೆ ಸಾವು

    ರೈಲಿಗೆ ಸಿಲುಕಿ ತಾಯಿ, ಮರಿಯಾನೆ ಸಾವು

    ಮಂಗಳೂರು: ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆ ಮತ್ತು ಮರಿ ಆನೆ ದುರ್ಮರಣಕ್ಕೀಡಾದ ಘಟನೆ ಶಿರಾಡಿಘಾಟ್‍ನ ಎಡಕುಮರಿ ಸಮೀಪದಲ್ಲಿ ನಡೆದಿದೆ.

    ಮಂಗಳೂರು-ಬೆಂಗಳೂರು ರೈಲು ಮಾರ್ಗವು ಕಾಡಿನ ಮಧ್ಯದಲ್ಲಿಯೇ ಹಾದು ಹೋಗಿದ್ದು, ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ಮಧ್ಯದಲ್ಲಿರುವ ಎಡಕುಮರಿ ಸಮೀಪದಲ್ಲಿ ಈ ಘಟನೆ ನಡೆದಿದೆ. ತಾಯಿ ಆನೆ ಹಾಗೂ ಅದರ ಮರಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ, ಸ್ಥಳದಲ್ಲಿಯೇ ಮೃತಪಟ್ಟಿವೆ.

    ಎಂದಿನಂತೆ ಸೋಮವಾರ ರೈಲ್ವೆ ಸಿಬ್ಬಂದಿ ಹಳಿಗಳ ಪರಿಶೀಲನೆ ನಡೆಸುವ ವೇಳೆ ಆನೆಗಳ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾನುವಾರ ತಡರಾತ್ರಿಯೇ ಘಟನೆ ನಡೆದಿದ್ದು, ರಾತ್ರಿ ಮಂಜಿನ ವಾತಾವರಣದಿಂದ ಲೊಕೊ ಪೈಲೆಟ್ ಗೆ (ರೈಲು ಚಾಲಕ) ಆನೆಗಳು ಹಳಿ ದಾಟುತ್ತಿರುವುದು ಕಾಣಿಸಿರಲಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.