Tag: Mangalmukhi

  • ಮಂಗಳಮುಖಿಯಾಗಿ ಬದಲಾದ ನಟ ನವಾಜುದ್ದೀನ್ ಸಿದ್ದಿಕಿ

    ಮಂಗಳಮುಖಿಯಾಗಿ ಬದಲಾದ ನಟ ನವಾಜುದ್ದೀನ್ ಸಿದ್ದಿಕಿ

    ನಾನಾ ಪಾತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ರಂಜಿಸಿರುವ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ, ಇದೀಗ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಮಂಗಳಮುಖಿಯಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿವೆ. ಇದ್ದಕ್ಕಿದ್ದಂತೆಯೇ ಈ ನಟ ಯಾಕೆ ಹೀಗೆ ಬದಲಾದರು ಎಂದು ಹಲವರು ಪ್ರಶ್ನಿಸಿದ್ದಾರೆ. ನವಾಜುದ್ದೀನ್ ಗೆ ಏನಾಯಿತು ಎಂದು ಕೇಳಿದವರೂ ಇದ್ದಾರೆ. ಹುಡುಕಾಟದ ಮಧ್ಯ ನಂತರ ಗೊತ್ತಾಗಿದ್ದು, ಅವರು ಸಿನಿಮಾಗಾಗಿ ಅಂಥದ್ದೊಂದು ಪಾತ್ರ ಮಾಡಿದ್ದಾರೆ.

    ಹೌದು, ನವಾಜುದ್ದೀನ್ ಸಿದ್ದಕಿ ಇದೀಗ ಹಡ್ಡಿ ಹೆಸರಿನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಸಿನಿಮಾದಲ್ಲಿ ಅವರು ಮಂಗಳಮುಖಿಯ ಪಾತ್ರ ಮಾಡಿದ್ದಾರೆ. ಅದಕ್ಕಾಗಿ ಥೇಟ್ ಮಂಗಳಮುಖಿಯಂತೆಯೇ ಅವರ ಗೆಟಪ್ ಕೂಡ ಬದಲಾಗಿದೆ. ಅವರ ಮೊದಲು ನೋಟದ ಫೋಟೋವನ್ನು ರಿಲೀಸ್ ಮಾಡಿದ್ದು, ಅಭಿಮಾನಿಗಳು ಅದನ್ನು ಕಂಡು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ನಟನ ಈ ಗಂಭೀರತೆಗೆ ಫಿದಾ ಕೂಡ ಆಗಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ಜ್ಯೂ.ಎನ್‌ಟಿಆರ್ ಎಂಟ್ರಿ: ಇಲ್ಲಿದೆ ಮಾಹಿತಿ

    ಈ ಕುರಿತು ಸ್ವತಃ ಸಿದ್ದಕಿ ತಮ್ಮ  ಅನುಭವಗಳನ್ನು ಹಂಚಿಕೊಂಡಿದ್ದು, ಎಂಬತ್ತಕ್ಕೂ ಹೆಚ್ಚು ನಿಜ ಮಂಗಳಮುಖಿಯೊಂದಿಗೆ ಕೆಲಸ ಮಾಡಿದ್ದಾಗಿ ಬರೆದುಕೊಂಡಿದ್ದಾರೆ. ಟ್ರಾನ್ಸ್ ಮಹಿಳೆಯರ ಜೊತೆ ಕೆಲಸ ಮಾಡಿದ್ದು, ಯಾವತ್ತಿಗೂ ಮರೆಯಲಾರದ ಅನುಭವ ನೀಡಿದೆ ಎಂದಿರುವ ಸಿದ್ದಿಕಿ, ಈ ಸಿನಿಮಾದ ಪಾತ್ರ ನೋಡಿ ಸ್ವತಃ ತಮ್ಮ ಮಗಳು ಅಪ್ ಸೆಟ್ ಆಗಿದ್ದ ಸಂಗತಿಯನ್ನೂ ಅವರು ಬಿಚ್ಚಿಟ್ಟಿದ್ದಾರೆ.

    ಈ ಪಾತ್ರವನ್ನು ಮಾಡುವಾಗ ಮಂಗಳಮುಖಿಯರ ಬಗ್ಗೆ ಗೌರವವು ಹೆಚ್ಚಾಯಿತು ಅಂದಿರುವ ಅವರು, ತಾನು ಪಾತ್ರ ಮಾಡುತ್ತಿದ್ದೇನೆ ಎಂದು ಮಗಳನ್ನು ನಂಬಿಸಲು ಸಾಕು ಸಾಕಾಯಿತು ಎಂದೂ ಅವರು ಹೇಳಿದ್ದಾರೆ. ಮಂಗಳಮುಖಿಯರ ಮನೆಯ ತಲ್ಲಣಗಳು ನನಗೆ ಈ ಮೂಲಕ ಅರ್ಥವಾಗುತ್ತಾ ಹೋದವು ಎಂದು ಭಾವನಾತ್ಮಕವಾಗಿ ಅವರು ಪೋಸ್ಟ್ ಮಾಡಿದ್ದಾರೆ. ಇದೊಂದು ಮರೆಯಲಾರದ ಅನುಭವ ಎಂದು ಅವರು ಅಭಿಮಾನಿಗಳ ಜೊತೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೆಲಮಂಗಲದಲ್ಲಿ ಮಂಗಳಮುಖಿ ಆತ್ಮಹತ್ಯೆ – ಪೊಲೀಸರಿಂದ ತನಿಖೆ

    ನೆಲಮಂಗಲದಲ್ಲಿ ಮಂಗಳಮುಖಿ ಆತ್ಮಹತ್ಯೆ – ಪೊಲೀಸರಿಂದ ತನಿಖೆ

    ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಹಮಾಮ್ ನಡೆಸಿ ಜೀವನ ನಿರ್ವಹಿಸುತ್ತಿದ್ದ ಮಂಗಳಮುಖಿ, ತಾನು ವಾಸವಿದ್ದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರಸಭೆ ವ್ಯಾಪ್ತಿಯ ಜಕ್ಕಸಂದ್ರ ಗ್ರಾಮದ ನಿವಾಸಿ ಮಾಯಾ(33) ಮೃತ ಮಂಗಳಮುಖಿ. ಮಾಯಾ ಅವರನ್ನು ಹೊಳೆನರಸೀಪುರದ ನೇರಳಿ ಗ್ರಾಮದ ಮೂಲದವರು ಎನ್ನಲಾಗುತ್ತಿದೆ. ಮಾಯಾ ಕಳೆದ 3 ವರ್ಷದಿಂದ ಚಕ್ಕಸಂದ್ರ ಗ್ರಾಮದ ನಿವಾಸಿ ಜಯಮ್ಮ ಎಂಬವರ ಮನೆಯನ್ನ ಬಾಡಿಗೆ ಪಡೆದು ವಾಸವಾಗಿದ್ದರು. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿಬರ್ತಾನೆ: ಜಗ್ಗೇಶ್

    ರಾ.ಹೆದ್ದಾರಿ ತುಮಕೂರು ರಸ್ತೆಯ ಜಾಸ್ ಟೋಲ್ ಬಳಿ ಹಮಾಮ್ ನಡೆಸುತ್ತಿದ್ದು, ಇಂದು ಬೆಳಿಗ್ಗೆ ಬಾಗಿಲು ತೆಗೆಯದ ಕಾರಣ ಪಕ್ಕದ ಮನೆಯ ನಿವಾಸಿ, ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬಂದು ಮನೆಯ ಕಿಟಕಿಯಲ್ಲಿ ನೋಡಿದ್ದಾಗ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕೂಡಲೇ ನೆಲಮಂಗಲ ಟೌನ್ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ನೆಲಮಂಗಲ ಟೌನ್ ಪೊಲೀಸರು ಬಾಗಿಲು ಒಡೆದು ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಭೇಟಿಯಾದ ಸಚಿನ್