Tag: mangal sutra

  • ಮೋದಿ ಸಹ ಕರಿಮಣಿ ಮಾಲೀಕ ಆಗಿದ್ರಲ್ಲಾ, ಮಂಗಳಸೂತ್ರದ ಬೆಲೆ ಗೊತ್ತಾ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಮೋದಿ ಸಹ ಕರಿಮಣಿ ಮಾಲೀಕ ಆಗಿದ್ರಲ್ಲಾ, ಮಂಗಳಸೂತ್ರದ ಬೆಲೆ ಗೊತ್ತಾ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಕಲಬುರಗಿ: ಪ್ರಧಾನಿ ಮೋದಿ ಅವರೂ ಕರಿಮಣಿ ಮಾಲೀಕ (Karimani Malika) ಆಗಿದ್ದರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.

    ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ (BJP) ನಿರೀಕ್ಷೆಗೆ ತಕ್ಕಷ್ಟು ಮತಗಳು ಬಂದಿಲ್ಲ. ಹಾಗಾಗಿ ವಿಶ್ವಗುರು ಅಂತ ಕರೆಸಿಕೊಳ್ಳುವ ಮೋದಿ ಹತಾಶರಾಗಿದ್ದಾರೆ. ಮೊದಲ ಹಂತದ ಮತದಾನದ ವೇಳೆ ಅಲ್ಪಸಂಖ್ಯಾತರ ಪರವಾಗಿದ್ದರು, ಮುಸ್ಲಿಮರ (Muslims) ಏಳಿಗೆ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ನಾಗಪುರ ಆರ್‌ಎಸ್‌ಎಸ್ ಕಚೇರಿಗೆ ಮೋದಿ ಹೋಗಿ ಬಂದ ಮೇಲೆ ಏನಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟಿದ್ದು ಭಾರತದಲ್ಲಿ, ಬೆಳೆದಿದ್ದು ಪಾಕಿಸ್ತಾನ – ಪಾಕ್‌ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ!

    ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಿಂದೂ ಮಹಿಳೆಯ ಮಂಗಳಸೂತ್ರ ಸಹ ಉಳಿಯೋದಿಲ್ಲ ಅಂತಾ ಮೋದಿ ಹೇಳಿದ್ದಾರೆ. ಸೋನಿಯಾ ಗಾಂಧಿ ದೇಶಕ್ಕಾಗಿ ತಮ್ಮ ತಮ್ಮ ಮಂಗಳ ಸೂತ್ರ ಬಲಿಕೊಟ್ಟರು. ಎಲ್‌ಟಿಟಿಯವರು ರಾಜೀವ್‌ಗಾಂಧಿ ಅವರನ್ನ ಹತ್ಯೆಮಾಡಿದರು. ಮೋದಿ ಅವರೂ ಕರಿಮಣಿ ಮಾಲೀಕ ಆಗಿದ್ರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಜನ ಚಿನ್ನ ಆಸ್ತಿ-ಪಾಸ್ತಿ ಮಾರಾಟ ಮಾಡಿದ್ದು ಮೋದಿಯ ಮಾಸ್ಟರ್ ಸ್ಟ್ರೋಕ್‌ಗಳಿಂದ, ಬೆಲೆ ಏರಿಕೆ, ಕೊರೊನಾ ವೇಳೆ ಚಿಕಿತ್ಸೆಗೋಸ್ಕರ ಜನ ತಮ್ಮ ಆಸ್ತಿ ಮಾರಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ಮೋದಿಯವರ ಭಾಷಣಕ್ಕೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ? ಅವರ ಭಾಷಣದಲ್ಲಿ ಬರೀ ರಾಮಮಂದಿರ, ಹನುಮಾನ್ ಚಾಲಿಸಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇವುಗಳ ಹೆಸರು ಬಿಟ್ಟರೆ ಬೇರೆನೂ ಬರುತ್ತಿಲ್ಲ. ಚುನಾವಣಾ ಆಯೋಗ ಸತ್ತು ಹೋಗಿದೆಯಾ? ಮೋದಿ ಅವರ ದ್ವೇಷದ ಭಾಷಣಗಳಿಗೆ ಚುನಾವಣಾ ಆಯೋಗದಿಂದ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ. ಸಾಕಷ್ಟು ದೂರುಗಳನ್ನ ಕೊಟ್ಟರೂ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ರೆ ನಮಗೆ ಮಾತ್ರ ತಕ್ಷಣವೇ ನೋಟೀಸ್ ಜಾರಿ ಮಾಡ್ತಾರೆ. ಎಲೆಕ್ಷನ್ ಕಮಿಷನ್‌ನನ್ನ ಕಿತ್ತು ಬಿಸಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 93.5% ಮಾರ್ಕ್ಸ್‌ ನೋಡಿ ಮೂರ್ಛೆ ಬಿದ್ದ 10ನೇ ತರಗತಿ ವಿದ್ಯಾರ್ಥಿ- ಐಸಿಯುಗೆ ದಾಖಲು

  • ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?

    ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?

    ಮುಂಬೈ: ನಟಿ ಕತ್ರಿನಾ ಕೈಫ್ ಅವರು ಮದುವೆ ಮೂಲಕವಾಗಿ ಬಾಲಿವುಡ್ ಅಂಗಳದಲ್ಲಿ ಕಳೆದ ಒಂದು ತಿಂಗಳಿನಿಂದ ಸಖತ್ ಸುದ್ದಿಯಲ್ಲಿದ್ದರು. ಇದೀಗ ವಜ್ರ ಖಚಿತವಾಗಿರುವ ಮಾಂಗಲ್ಯ ಸರದ ಬೆಲೆ ಸುದ್ದಿ ಎಲ್ಲರನ್ನು ನಿಬ್ಬೆರಗಾಗಿಸಿದೆ.

    ಕತ್ರಿನಾ ಕೈಫ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು. ನಟ ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ರಾಯಲ್ ಆಗಿ ನಡೆದಿದೆ. ಕತ್ರಿನಾ ತಮ್ಮ ಮನೆಯಲ್ಲಿ ಕೂತಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಕತ್ರಿನಾ ಕೈಫ್ ಅವರ ಮಾಂಗಲ್ಯ ಸರ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಸೆನ್ಸಾರ್ ಅಂಗಳದಲ್ಲಿರುವ ‘ಪುರುಷೋತ್ತಮ’ ಚಿತ್ರತಂಡದಿಂದ ಸದ್ಯದಲ್ಲೇ ಟ್ರೇಲರ್ ಉಡುಗೊರೆ

     

    View this post on Instagram

     

    A post shared by Katrina Kaif (@katrinakaif)

    ಚಿನ್ನದ ಗುಂಡು ಹಾಗೂ ಕರಿಮಣಿಗಳನ್ನು ಹೊಂದಿರುವ ಈ ಮಂಗಳಸೂತ್ರ ವಜ್ರಗಳು ಇವೆ. ಸರದ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಪಂಜಾಬಿ ಸಂಪ್ರದಾಯದಂತೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆ ನಡೆದಿತ್ತು. ಮದುವೆಯಲ್ಲಿ ಧರಿಸಿದ್ದ ಕೆಂಪು ಬಣ್ಣದ ಲೆಹೆಂಗಾದ ಬೆಲೆ ಬರೋಬ್ಬರಿ 17 ಲಕ್ಷ ರೂಪಾಯಿ ಎನ್ನಲಾಗಿದೆ. ಇದನ್ನೂ ಓದಿ: ಅದಿತಿ ಪ್ರಭುದೇವ ಮದುವೆ ಆಗಲಿರುವ ಹುಡುಗ ಯಾರು ಗೊತ್ತಾ?

     

    View this post on Instagram

     

    A post shared by Katrina Kaif (@katrinakaif)

    ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ದಂಪತಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಒಟ್ಟಿಗೆ ಆಚರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕತ್ರಿನಾ ಕೈಫ್ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಮದುವೆಯಾದ ಬಳಿಕ ಸಿನಿಮಾ ಕೆಲಸಗಳಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಬ್ಯುಸಿಯಾಗಿದ್ದಾರೆ.