Tag: Maneye Manthralaya

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕ್ಷೌರಿಕನ ಸಹಾಯಕ್ಕೆ ಬಂದ ಶಾಸಕ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕ್ಷೌರಿಕನ ಸಹಾಯಕ್ಕೆ ಬಂದ ಶಾಸಕ

    ಮಂಗಳೂರು: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ್ ಎಂಬವರಿಗೆ ಬೇಕಾದ ದಿನಚರಿ ವಸ್ತುಗಳನ್ನು ಇಂದು ನೀಡಲಾಯಿತು.

    ಮಲ್ಲೇಶ್ ಚಿತ್ರದುರ್ಗ ಮೂಲದವರಾಗಿದ್ದು ಕಳೆದ ಕೆಲವು ವರ್ಷದಿಂದ ಬೆಳ್ತಂಗಡಿಯ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದು ಲಾಕ್ ಡೌನ್ ಬಳಿಕ ಸಲೂನ್ ಓಪನ್ ಆದ್ರೂ ಜನ ಬರದೇ ದಿನಕ್ಕೆ 100 ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗದೆ ಊಟಕ್ಕೂ ಕಷ್ಟವಾಗಿತ್ತು. ಹೀಗಾಗಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಮಲ್ಲೇಶ್ ಕರೆ ಮಾಡಿದ್ದರು.

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ “ಶ್ರಮಿಕ ನೆರವು” ಮೂಲಕ ದಿನ ಬಳಕೆಗೆ ಬೇಕಾದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ಇಂದು ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾತನಾಡಿದ ಮಲ್ಲೇಶ್ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹಾಗೂ ಶಾಸಕ ಹರೀಶ್ ಪೂಂಜಾ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಜಗದೀಶ್ ಲಾಯಿಲಾ, ರಾಜೇಶ್ ಪೆಂರ್ಬುಡ, ಪ್ರತೀಶ್ ಹೊಸಂಗಡಿ, ಸುಪ್ರಿತ್ ಜೈನ್, ಆದೇಶ್ ಶೆಟ್ಟಿ ಜೊತೆಗಿದ್ದರು.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕಿಡ್ನಿ ಕಳೆದುಕೊಂಡ ಮಹಿಳೆಗೆ ಶಾಸಕರ ಸಹಾಯ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕಿಡ್ನಿ ಕಳೆದುಕೊಂಡ ಮಹಿಳೆಗೆ ಶಾಸಕರ ಸಹಾಯ

    ಶಿವಮೊಗ್ಗ: ಪಬ್ಲಿಕ್ ಟಿವಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದ ಮಹಿಳೆಗೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ನೆರವು ನೀಡಿದ್ದಾರೆ.

    ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ನಡೆಸಿಕೊಡುವ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೊಪ್ಪ ಗ್ರಾಮದ ಮಹಿಳೆ ಯಶೋಧ ಎಂಬುವರು ಕರೆ ಮಾಡಿ ತನಗೆ ಎರಡು ಕಿಡ್ನಿ ಸಮಸ್ಯೆ ಇದೆ. ಜೀವನ ಸಾಗಿಸುವುದು ಕಷ್ಟವಾಗಿದೆ. ಈಗಾಗಿ ದಿನಸಿ ಕಿಟ್ ಕೊಡಿಸಿ ಎಂದು ಕೇಳಿಕೊಂಡಿದ್ದರು.

    ಕಾರ್ಯಕ್ರಮ ವೀಕ್ಷಣೆ ಮಾಡಿದ್ದ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅವರು, ತನ್ನ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಸಂಕಷ್ಟದಲ್ಲಿ ಇರುವುದನ್ನು ಗಮನಿಸಿದ್ದರು. ನಂತರ ಆ ಮಹಿಳೆ ವಿಳಾಸ ಪಡೆದು ಮಹಿಳೆ ಮನೆಗೆ ತಾವೇ ಸ್ವತಃ ಅವರೇ ಭೇಟಿ ನೀಡಿ 3 ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಹಾಗೂ 5 ಸಾವಿರ ರೂಪಾಯಿ ಹಣವನ್ನು ಸಹ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    https://www.facebook.com/publictv/posts/4369546059729779