Tag: Manesar

  • ಕೈ, ತಲೆ ಕತ್ತರಿಸಿ ಪತ್ನಿಯ ದೇಹವನ್ನು ಸುಟ್ಟು ಹಾಕಿದ ಪಾಪಿ ಗಂಡ

    ಚಂಡೀಗಢ: ಪತ್ನಿಯನ್ನು ಕೊಂದು, ಆಕೆಯ ಕೈಗಳು ಹಾಗೂ ತಲೆಯನ್ನು ಕತ್ತರಿಸಿ ದೇಹವನ್ನು ಸುಟ್ಟುಹಾಕಿದ ಪತಿಯನ್ನು ಹರಿಯಾಣ (Haryana) ಪೊಲೀಸರು ಬಂಧಿಸಿದ್ದಾರೆ.

    ಹರಿಯಾಣದ ಮಾನೇಸರ್ (Manesar) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಜಿತೇಂದರ್‌ನನ್ನು (34) ಬಂಧಿಸಲಾಗಿದೆ. ಏಪ್ರಿಲ್ 21ರಂದು ಮಾನೇಸರ್ ಹಳ್ಳಿಯೊಂದರಲ್ಲಿ ಅರ್ಧ ಸುಟ್ಟ ಮಹಿಳೆಯ ಶವ ಪತ್ತೆಯಾಗಿತ್ತು. ಅದರಲ್ಲಿ ಮಹಿಳೆಯ ತಲೆ ಮತ್ತು ಆಕೆಯ ಕೈಗಳನ್ನು ಕತ್ತರಿಸಲಾಗಿತ್ತು. ಆದ್ದರಿಂದ ಆಕೆಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟುಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

    ಜಿತೇಂದರ್ ಗಾಂಧಿನಗರದ ನಿವಾಸಿಯಾಗಿದ್ದು, ಮಾನೇಸರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕುಕ್ಡೋಲಾ ಗ್ರಾಮದ ನಿವಾಸಿ ಉಮೇದ್ ಸಿಂಗ್ ಪಂಚಗಾಂವ್ ಚೌಕ್‌ನಿಂದ ಕಸನ್ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲಿ 8 ಎಕರೆ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದ್ದರು. ಅಲ್ಲದೇ ಜಮೀನಿನಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಿದ್ದರು. ಇದರಲ್ಲಿ ಒಂದು ಕೊಠಡಿಯಲ್ಲಿ ಮಹಿಳೆಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸಿಡಿಲಿಗೆ 14 ಮಂದಿ ಬಲಿ

    ಅರೆಸುಟ್ಟ ಶವ ಕಂಡು ಉಮೇದ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನನ್ನ ನೆರೆಹೊರೆಯವರು ನನಗೆ ಕಾಲ್ ಮಾಡಿ ಜಮೀನಿನ ಕೊಠಡಿಯಿಂದ ಹೊಗೆ ಬರುತ್ತಿರುವುದಾಗಿ ತಿಳಿಸಿದರು. ನಾನು ಅಲ್ಲಿಗೆ ಹೋಗಿ ನೋಡಿದಾಗ ಮಹಿಳೆಯ ಶವ ಅರೆಸುಟ್ಟ ಸ್ಥಿತಿಯಲ್ಲಿತ್ತು ಎಂದು ಉಮೇದ್‌ಸಿಂಗ್ ತಾನು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದಾಗ ಬ್ರೇಕ್ ಫೇಲ್ – ಟ್ರಕ್ ಹೊಡೆತಕ್ಕೆ 12 ಕಾರುಗಳು ನಜ್ಜುಗುಜ್ಜು

    ಉಮೇದ್‌ಸಿಂಗ್ ಅವರ ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾದರು. ಏಪ್ರಿಲ್ 26ರಂದು ಮಹಿಳೆಯ ತಲೆ ಖೇರ್ಕಿ ದೌಲಾ ಪ್ರದೇಶದಲ್ಲಿ ಪತ್ತೆಯಾಗಿದೆ. ಇದು ಅರೆಸುಟ್ಟ ಮಹಿಳೆಯ ತಲೆ ಎಂದು ಖಚಿತಪಡಿಸಿಕೊಂಡ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ (Arrest) ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಆರೋಪಿ ವಿರುದ್ಧ ಮಾನೇಸರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯಗಳ ಮರೆಮಾಚುವಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ದಾಂತೇವಾಡ ನಕ್ಸಲ್ ದಾಳಿ- ಮೃತ ಯೋಧನ ಶವಕ್ಕೆ ಹೆಗಲು ಕೊಟ್ಟ ಭೂಪೇಶ್ ಬಘೇಲ್

  • ಸ್ನೇಹಿತರ ಜೊತೆಗೂಡಿ ಗರ್ಭಿಣಿ ಮೇಲೆ ಆಟೋ ಚಾಲಕನಿಂದ ಗ್ಯಾಂಗ್ ರೇಪ್!

    ಸ್ನೇಹಿತರ ಜೊತೆಗೂಡಿ ಗರ್ಭಿಣಿ ಮೇಲೆ ಆಟೋ ಚಾಲಕನಿಂದ ಗ್ಯಾಂಗ್ ರೇಪ್!

    ಚಂಡೀಗಢ : ಆಟೋ ಚಾಲಕ ಹಾಗೂ ಆತನ ಇಬ್ಬರು ಸಹಚರರು 23 ವರ್ಷದ ಗರ್ಭಿಣಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಹರಿಯಾಣದ ಮನೇಸರ್‍ನಲ್ಲಿ ಶನಿವಾರ ಬೆಳಕಿಗೆ ಬಂದಿದೆ.

    ಮೇ 21ರಂದು ಗರ್ಭಿಣಿ ವೈದ್ಯಕೀಯ ಪರೀಕ್ಷೆ ಮುಗಿಸಿಕೊಂಡು ಬರುವ ವೇಳೆ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಒಳಗಾದ ಗರ್ಭಿಣಿಯ ಪತಿ ಶುಕ್ರವಾರ ಮನೇಸರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನಡೆದಿದ್ದು ಏನು?
    ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯು 6 ತಿಂಗಳ ಗರ್ಭಿಣಿಯಾಗಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಪತಿಯೊಂದಿಗೆ ಬೈಕಿನಲ್ಲಿ ತೆರಳಿದ್ದಾರೆ. ವೈದ್ಯಕೀಯ ತಪಾಸಣೆ ನಂತರ ತನಗೆ ಬೈಕ್‍ನಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಕ್ಕೆ ಪತಿ ಆಟೋದಲ್ಲಿ ಕಳುಹಿಸಿದ್ದಾರೆ.

    ಬಾಯಾರಿಕೆ ಆಗಿದ್ದರಿಂದ ಆಟೋ ಚಾಲಕನ ಬಳಿ ನೀರು ಕೇಳಿ ಕುಡಿದಿದ್ದಾಳೆ. ಈ ವೇಳೆ ಆಕೆಗೆ ಪ್ರಜ್ಞೆ ತಪ್ಪಿದ್ದು, ಆಟೋ ಚಾಲಕ ಹಾಗೂ ಆತನ ಸಹಚರರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯು ಮೂಲತಃ ಬಿಹಾರದವರು, ಮನೇಸರ್‍ನಲ್ಲಿ ಗಂಡ ಹಾಗೂ ಮಗುನೊಂದಿಗೆ ಇದ್ದಾರೆ.

    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯಕೀಯ ಪರೀಕ್ಷೇಯ ನಂತರ ಭ್ರೂಣ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.