Tag: Mandya university

  • ಬಾಗಲಕೋಟೆ ವಿಶ್ವವಿದ್ಯಾಲಯ ಕಾಲೇಜುಗಳನ್ನ ವಿಭಾಗ ಮಾಡ್ಬೇಡಿ- ವಿಧಾನ ಪರಿಷತ್‌ನಲ್ಲಿ ಬಿಜೆಪಿ ಆಗ್ರಹ

    ಬಾಗಲಕೋಟೆ ವಿಶ್ವವಿದ್ಯಾಲಯ ಕಾಲೇಜುಗಳನ್ನ ವಿಭಾಗ ಮಾಡ್ಬೇಡಿ- ವಿಧಾನ ಪರಿಷತ್‌ನಲ್ಲಿ ಬಿಜೆಪಿ ಆಗ್ರಹ

    ಬೆಂಗಳೂರು: ಬಾಗಲಕೋಟೆ (Bagalkote) ತೋಟಗಾರಿಕೆ ವಿಶ್ವವಿದ್ಯಾಲಯ ಕಾಲೇಜುಗಳನ್ನ ಮಂಡ್ಯ (Mandya) ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಬಾರದು ಎಂದು ಬಿಜೆಪಿ (BJP) ಸದಸ್ಯರು ಸರ್ಕಾರಕ್ಕೆ ಆಗ್ರಹಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ತಳವಾರು ಸಾಬಣ್ಣ, ಪಿ.ಹೆಚ್.ಪೂಜಾರ್ ಈ ಬಗ್ಗೆ ಪ್ರಶ್ನೆ ಮಾಡಿದರು. ಬಾಗಲಕೋಟೆ ತೋಟಗಾರಿಕೆ ವಿವಿಯನ್ನ ಮುಚ್ಚುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಬಾಗಲಕೋಟೆ ತೋಟಗಾರಿಕೆ ವಿವಿ ಮುಚ್ಚಬಾರದು. ರಾಜ್ಯದ ಅತಿ ದೊಡ್ಡ ತೋಟಗಾರಿಕೆ ವಿವಿ ಇದು. 18 ವರ್ಷಗಳಿಂದ ವಿವಿ ಉತ್ತಮ ಕೆಲಸ ಮಾಡುತ್ತಿದೆ. ಈ ವಿಶ್ವವಿದ್ಯಾಲಯವನ್ನ ಮುಚ್ಚಬಾರದು ಎಂದರು. ಇದನ್ನೂ ಓದಿ: ಕಾಮಗಾರಿ ಬಿಲ್ ಮಂಜೂರಾಗದಿದ್ದಕ್ಕೆ ಪೆಟ್ರೋಲ್ ಕ್ಯಾನ್ ಹಿಡಿದು ಗ್ರಾಪಂ ಸದಸ್ಯೆ ಹೈಡ್ರಾಮಾ

    ಬಾಗಲಕೋಟೆ ವಿವಿಯಲ್ಲಿ ಈಗ ಇರುವ ತೋಟಗಾರಿಕೆ ಕಾಲೇಜುಗಳನ್ನು ಮಂಡ್ಯ ವಿವಿಗೆ ಸೇರ್ಪಡೆ ಮಾಡಲಾಗುತ್ತಿದೆ. ಸರ್ಕಾರದ ಈ ವ್ಯವಸ್ಥೆ ಸರಿಯಲ್ಲ. ಬಾಗಲಕೋಟೆ ತೋಟಗಾರಿಕೆ ವಿವಿ ಕಾಲೇಜುಗಳನ್ನ ಬೇರೆ ವಿವಿಗೆ(ಮಂಡ್ಯ ವಿವಿ) ಹಂಚಿಕೆ ಮಾಡಬಾರದು. ತೋಟಗಾರಿಕೆ ವಿವಿಯನ್ನು ವಿಭಾಗ ಮಾಡುವುದು ರೈತರಿಗೆ ಬರೆಯುವ ಮರಣ ಶಾಸನ ಆಗಿದೆ. ತೋಟಗಾರಿಕೆ ವಿವಿ ಕಾಲೇಜನ್ನು ಮಂಡ್ಯ ವಿವಿಗೆ ಸೇರ್ಪಡೆ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಯಿಗಳಂತೆ ಅತ್ಯಾಚಾರಿಗಳನ್ನೂ ಸಂತಾನಹರಣಗೊಳಿಸಬೇಕು: ರಾಜಸ್ಥಾನ ರಾಜ್ಯಪಾಲ

    ಇದಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉತ್ತರಿಸಿ, ಮಂಡ್ಯದಲ್ಲಿ ತೋಟಗಾರಿಕೆ ವಿವಿ ಮಾಡಲು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪ್ರಾರಂಭ ಮಾಡಲಾಗುತ್ತಿದೆ. ಜನಪ್ರತಿನಿಧಿಗಳ ಬೆಡಿಕೆ ಜಾಸ್ತಿ ಇತ್ತು. ಬಾಗಲಕೋಟೆ ದೂರ ಆಗುತ್ತದೆ. ಮಂಡ್ಯದಲ್ಲಿ ವಿವಿ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದರು. ಅದರಂತೆ ಬಾಗಲಕೋಟೆ ವಿವಿಯ ಕೆಲವು ಕಾಲೇಜುಗಳನ್ನ ಮಂಡ್ಯ ವಿವಿಗೆ ಸೇರ್ಪಡೆ ಮಾಡುವ ತೀರ್ಮಾನ ಮಾಡಿ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಕೊಡಲಾಗಿದೆ ಎಂದು ಹೇಳಿದರು. ಸಚಿವ ಉತ್ತರಕ್ಕೆ ಬಿಜೆಪಿ ಸದಸ್ಯರು ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸಿದರು.

  • ಮಂಡ್ಯ ವಿವಿ ವಿಲೀನಗೊಳಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ – ಬಿಜೆಪಿ, ಜೆಡಿಎಸ್ ಪ್ರತಿಭಟನೆ

    ಮಂಡ್ಯ ವಿವಿ ವಿಲೀನಗೊಳಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ – ಬಿಜೆಪಿ, ಜೆಡಿಎಸ್ ಪ್ರತಿಭಟನೆ

    – ಆರ್.ಅಶೋಕ್, ಅಶ್ವತ್ ನಾರಾಯಣ್ ಸಾಥ್

    ಮಂಡ್ಯ: ಇಲ್ಲಿನ ವಿವಿ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಪಕ್ಷಗಳು ಜಂಟಿಯಾಗಿ ಮಂಡ್ಯ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.

    ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ನಿರ್ಧಾರ ಮಂಡ್ಯ ಅಸ್ಮಿತೆಗೆ ಧಕ್ಕೆ ತಂದಿದೆ. ಬಿಜೆಪಿ ಸರ್ಕಾರದ ಕೊಠಡಿ ಕಿತ್ತುಕೊಳ್ಳಲು ಕಾಂಗ್ರೆಸ್ ಸಂಚು ನಡೆಸಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಅಲ್ಲದೇ ವಿವಿ ವಿಲೀನಗೊಳಿಸುವ ನಿರ್ಧಾರ ಕೈಬಿಡುವಂತೆ ಆಗ್ರಹಿಸಿದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಭೀಕರ ಅಪಘಾತ – ಐವರು ಮಾದಪ್ಪ ಭಕ್ತರ ದುರ್ಮರಣ

    ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವತ್ ನಾರಾಯಣ್, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಸೇರಿ ಭಾಗಿಯಾಗಿದ್ದರು. ಇದನ್ನೂ ಓದಿ: ಬದರಿನಾಥದಲ್ಲಿ ಹಿಮಪಾತ, 47 ಕಾರ್ಮಿಕರ ರಕ್ಷಣೆ – ಮೂವರ ಸ್ಥಿತಿ ಗಂಭೀರ, ಮೋದಿಯಿಂದ ಅಗತ್ಯ ನೆರವಿನ ಭರವಸೆ

  • ಮಂಡ್ಯ ವಿವಿ ಉಳಿಸಲು ಹೋರಾಟಕ್ಕೆ ಮುಂದಾದ ವಿದ್ಯಾರ್ಥಿಗಳು

    ಮಂಡ್ಯ ವಿವಿ ಉಳಿಸಲು ಹೋರಾಟಕ್ಕೆ ಮುಂದಾದ ವಿದ್ಯಾರ್ಥಿಗಳು

    ಮಂಡ್ಯ: ಜಿಲ್ಲೆಯಲ್ಲಿ ಇದೀಗ ವಿಶ್ವವಿದ್ಯಾಲಯದ ಕಿಚ್ಚು ಎದ್ದಿದ್ದು, ಮಂಡ್ಯ ವಿವಿ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಮಂಡ್ಯ ವಿಶ್ವವಿದ್ಯಾಲಯವನ್ನು ಸ್ಥಗಿತ ಮಾಡಿ ಎಂದಿನಂತೆ ಅಟೋನೋಮಸ್‍ನಲ್ಲೇ ಮುಂದುವರಿಸಿಕೊಂಡು ಹೋಗುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಆದೇಶವನ್ನು ವಿರೋಧಿಸಿ ಇದೀಗ ವಿದ್ಯಾರ್ಥಿಗಳು ಎಲ್ಲಾ ಪರೀಕ್ಷೆಗಳನ್ನು ಬಹಿಷ್ಕಾರ ಮಾಡಿ, ಮಂಡ್ಯ ವಿವಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯ ಸರ್ಕಾರಿ ಮಹಾವಿದ್ಯಾಲಯದ ಮುಂಭಾಗ ಇದೀಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಈಗಾಗಲೇ ವಿದ್ಯಾರ್ಥಿಗಳು ಒಂದು ಸೆಮಿಸ್ಟರ್ ಪರೀಕ್ಷೆಯನ್ನು ಮಂಡ್ಯ ವಿವಿಯ ನಿರ್ದೇಶನದಲ್ಲಿ ಬರೆದಿದ್ದು, ಇದೀಗ ಅಟೊನೋಮಸ್‍ನಲ್ಲಿ ಪರೀಕ್ಷೆ ಬರೆಯಿರಿ ಎಂದು ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಹೀಗಾಗಿ ಸರ್ಕಾರ ಮಂಡ್ಯ ವಿವಿಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.

    ಸಂಸದೆ ಸುಮಲತಾ ಅಂಬರೀಶ್ ಅವರು ಸ್ವಾಭಿಮಾನದ ಹೆಸರಲ್ಲಿ ಗೆದ್ದಿದ್ದಾರೆ. ಅವರ ಗೆಲುವಿಗೆ ವಿದ್ಯಾರ್ಥಿಗಳ ಮತಗಳು ಸಹ ಪ್ರಮುಖ ಕಾರಣ. ಹೀಗಾಗಿ ಅವರು ಸ್ವಾಭಿಮಾನದಿಂದ ಬಂದು ವಿದ್ಯಾರ್ಥಿಗಳಿಗೆ ಬಂಬಲ ನೀಡಿ ಮಂಡ್ಯ ವಿವಿಯನ್ನು ಉಳಿಸಬೇಕು. ಯಶ್-ದರ್ಶನ್ ಸಹ ಜೋಡೆತ್ತು ಎಂದು ಸುಮಲತಾ ಅವರ ಪರ ನಿಂತು ಅವರನ್ನು ಗೆಲ್ಲಿಸಿದ್ದಾರೆ. ಈಗ ಮಂಡ್ಯ ವಿವಿ ಉಳಿಸಲು ಸಹ ಅವರು ಮುಂದಾಗಬೇಕು. ಮಂಡ್ಯ ಶಾಸಕ ಶ್ರೀನಿವಾಸ್ ಕೂಡ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

    ರದ್ದು ಮಾಡಿದ್ದು ಯಾಕೆ?
    ಒಂದು ವರ್ಷದ ಹಿಂದೆ ಸರ್ಕಾರ ಮಂಡ್ಯ ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿತ್ತು. ಈಗ ಮಂಡ್ಯ ವಿವಿ ವಿಶೇಷ ಅಧಿಕಾರಿಯಾಗಿದ್ದ ಮಹದೇವನಾಯಕ ಅವರು ಅಕ್ರಮವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ರಮ ನೇಮಕಾತಿ ಹಾಗೂ ಕೋರ್ಸ್‍ಗಳನ್ನು ತೆರೆದಿದ್ದ ಮಹದೇವನಾಯಕ ಅವರನ್ನು ಸರ್ಕಾರ ಅಮಾನತುಗೊಳಿಸಿದ ಬೆನ್ನಲ್ಲೇ ವಿಶ್ವವಿದ್ಯಾಲಯವನ್ನು ಸರ್ಕಾರ ರದ್ದು ಪಡಿಸಿ ಆದೇಶಿಸಿದೆ.

    ಈಗಾಗಲೇ ಒಂದು ಸೆಮಿಸ್ಟರ್ ಪರೀಕ್ಷೆಯನ್ನು ಮಂಡ್ಯ ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಇದೀಗ ಅಟೊನೋಮಸ್‍ನಲ್ಲಿ ಪರೀಕ್ಷೆ ಎದುರಿಸಿ ಎಂದು ಹೇಳಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರು ವಿದ್ಯಾರ್ಥಿಗಳು ನಾವು ಅಟೊನೋಮಸ್‍ನಲ್ಲಿ ಪರೀಕ್ಷೆ ಬರೆಯಲ್ಲ. ನಾವು ಕಾಲೇಜಿಗೆ ಸೇರ್ಪಡೆಯಾಗಿದ್ದು ಮಂಡ್ಯ ವಿಶ್ವವಿದ್ಯಾಲಯ ಎಂದು ಆದರೆ ಈಗ ನಾವು ಅಟೊನೋಮಸ್ ಎಂದು ಹೇಗೆ ಪರೀಕ್ಷೆ ಬರೆಯುವುದು. ವಿಶ್ವವಿದ್ಯಾಲಯದ ಸರ್ಟಿಫಿಕೇಟ್‍ಗೆ ಬೆಲೆ ಇದೆ, ಆದರೆ ಅಟೊನೋಮಸ್‍ನ ಸರ್ಟಿಫಿಕೇಟ್‍ಗೆ ಬೆಲೆ ಕಡಿಮೆ. ಹೀಗಾಗಿ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪರೀಕ್ಷೆಗಳನ್ನು ಬಹಿಷ್ಕಾರ ಮಾಡಿದ್ದಾರೆ.

    ಯಾರೋ ಅವರ ಸ್ವಾರ್ಥಕ್ಕಾಗಿ ಎಸಗಿರುವ ಅಕ್ರಮಕ್ಕೆ ಸರ್ಕಾರ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳು ಚೆಲ್ಲಾಟ ಆಡುತ್ತಿವೆ. ಈಗ ಮಂಡ್ಯದಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಕಿಡಿಕಾರುತ್ತಿದ್ದಾರೆ.