Tag: Mandira Bedi

  • ಥೈಲ್ಯಾಂಡ್ ಪೂಲ್‌ನಲ್ಲಿ ಮೈಮರೆತ ಮಂದಿರಾ ಬೇಡಿ

    ಥೈಲ್ಯಾಂಡ್ ಪೂಲ್‌ನಲ್ಲಿ ಮೈಮರೆತ ಮಂದಿರಾ ಬೇಡಿ

    ಸೆಲೆಬ್ರಿಟಿಗಳು ತಮ್ಮ ಅಪ್ಡೇಟ್‌ಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ನೀಡುವುದು ಸಾಮಾನ್ಯ. ಬಹುತೇಕ ಸೆಲೆಬ್ರಿಟಿಗಳು ಇತ್ತೀಚಿಗೆ ಜಾಲಿ ಮೂಡ್ನಲ್ಲಿದ್ದು, ಬೇಸಿಗೆ ರಜೆ ಕಳೆಯುವುದಕ್ಕಾಗಿ ಹೋಗಿ ತಮ್ಮ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಈಗ ಬಾಲಿವುಡ್ ನಟಿ ಮಂದಿರಾ ಬೇಡಿ ಥೈಲ್ಯಾಂಡ್‌ನ ಫುಕೆಟ್‌ಗೆ ಪ್ರವಾಸ ಕೈಗೊಂಡಿದ್ದು, ಅಲ್ಲಿನ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    ನಟಿ ಬೀಚ್‌ನಲ್ಲಿ ಬಿಕಿನಿ ತೊಟ್ಟು ಸೆಲ್ಫಿ ಕ್ಲಿಕಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಈ ನಟಿ, ಸೂರ್ಯನ ಬೆಳಕು, ಸಮುದ್ರ, ಮರಳು ಮತ್ತು ಅದ್ಭುತವಾದ 4 ದಿನಗಳಿಗಾಗಿ ಧನ್ಯವಾದಗಳು. ಈ ವಾರ ಅದ್ಭುತವಾಗಿ ಕಳೆದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಂದಿರಾ ಬೇಡಿ ಅವರ ಆತ್ಮೀಯ ಸ್ನೇಹಿತೆ ಮತ್ತು ನಟಿ ಮೌನಿ ರಾಯ್ ಅವರು ‘ಮೈ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇನ್ನೂ ಕೆಲವು ಫೈರ್ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು 

     

    View this post on Instagram

     

    A post shared by Mandira Bedi (@mandirabedi)

    ಮಂದಿರಾ ಬೇಡಿ ಜನಪ್ರಿಯ ಟಿವಿ ಶೋ ಸಿಐಡಿ, 24 ಮತ್ತು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಶಾರುಖ್ ಖಾನ್ ಮತ್ತು ಕಾಜೋಲ್ ಅವರ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದಲ್ಲಿ ನಟಿಸಿದ್ದರು. ಮಂದಿರಾ ಬೇಡಿ ಅವರು ಫೇಮ್ ಗುರುಕುಲ, ಇಂಡಿಯನ್ ಐಡಲ್ ಜೂನಿಯರ್ ಮತ್ತು ಇಂಡಿಯಾಸ್ ಡೆಡ್ಲಿಯೆಸ್ಟ್ ರೋಡ್ಸ್‌ ಶೋಗಳನ್ನು ಸಹ ಆಯೋಜಿಸಿದ್ದಾರೆ.

  • ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ

    ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ

    ಮುಂಬೈ: ಬಾಲಿವುಡ್ ಖ್ಯಾತ ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿರ್ದೇಶಕ ಓನರಿ ಅವರು ರಾಕ್ ಕೌಶಲ್ ನಿಧನವನ್ನು ಖಚಿತಪಡಿಸಿದ್ದು, ಬಿಟೌನ್ ಸ್ಟಾರ್ ಗಳು ಸಂತಾಪ ಸೂಚಿಸುತ್ತಿದ್ದಾರೆ.

    ಇಷ್ಟು ಬೇಗ ಹೋದೆಯಾ? ಇಂದು ಬೆಳಗ್ಗೆ ನಿರ್ಮಾಪಕ ಮತ್ತು ಫಿಲಂ ಮೇಕರ್ ರಾಜ್ ಕೌಶಲ್ ಅವರನ್ನ ಕಳೆದುಕೊಂಡಿದ್ದೇವೆ. ನನ್ನ ಮೊದಲ ಚಿತ್ರ ‘ಮೈ ಬ್ರದರ್ ನಿಖಿಲ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅವರ ನಿಧನದ ಸುದ್ದಿ ತಿಳಿಸಲು ದುಃಖವಾಗ್ತಿದೆ. ಎಲ್ಲರಿಗೂ ಆಪ್ತರಾಗಿದ್ದ ರಾಜ್ ಕೌಶಲ್, ನಮ್ಮೊಳಗಿನ ಕಲೆ ಗುರುತಿಸಿ ಬೆಂಬಲ ನೀಡುತ್ತಿದ್ದರು ಎಂದು ನಿರ್ದೇಶಕ ಓನಿರ್ ಕಂಬನಿ ಮಿಡಿದಿದ್ದಾರೆ.

    ರಾಜ್ ಕೌಶಲ್ ಸ್ಕ್ರಿಪ್ಟ್ ರೈಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಿರ್ದೇಶನಕ್ಕೆ ಕಾಲಿಟ್ಟ ರಾಜ್ ಕೌಶಲ್, ಆಂಥೋನಿ ಕೌನ್ ಹೈ, ಶಾದಿ ಕಾ ಲಡ್ಡು, ಪ್ಯಾರ್ ಮೇ ಕಭೀ ಕಭೀ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಅದೇ ರೀತಿ ನಿಖಿಲ್, ಶಾದಿ ಕಾ ಲಡ್ಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

    1999ರಲ್ಲಿ ರಾಜ್ ಕೌಶಲ್ ಮತ್ತು ಮಂದಿರಾ ಬೇಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 19, 2011ರಂದು ಮಂದಿರಾ ಬೇಡಿ ಮಗ ವೀರ್ ಗೆ ಜನ್ಮ ನೀಡಿದ್ದರು. 2020ರಲ್ಲಿ ದಂಪತಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು.

  • ಸೀರೆ ಜೊತೆ ಹೈ ಹೀಲ್ಸ್ ತೊಟ್ಟು ಪುಶ್ ಅಪ್ ಮಾಡಿದ 45ರ ಮಂದಿರಾ ಬೇಡಿ- ವಿಡಿಯೋ

    ಸೀರೆ ಜೊತೆ ಹೈ ಹೀಲ್ಸ್ ತೊಟ್ಟು ಪುಶ್ ಅಪ್ ಮಾಡಿದ 45ರ ಮಂದಿರಾ ಬೇಡಿ- ವಿಡಿಯೋ

    ಮುಂಬೈ: ಫಿಟ್‍ನೆಸ್‍ನಿಂದಲೇ ಯಾವಾಗಲೂ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಮಂದಿರಾ ಈಗ ಇನ್‍ಸ್ಟಾಗ್ರಾಂ ಪೋಸ್ಟ್ ನಿಂದ ಮತ್ತೇ ಸುದ್ದಿಯಾಗಿದ್ದಾರೆ.

    ಮಂದಿರಾ ಕಾರ್ಯಕ್ರಮವೊಂದರಲ್ಲಿ ಸೀರೆ ಜೊತೆ ಹೈ ಹೀಲ್ಸ್ ನಲ್ಲಿ ಪುಶ್ ಅಪ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ಉಡುಪು ಯಾವುದೇ ಇರಲಿ, ಕೆಲಸ ಆಗುವ ಸಮಯದಲ್ಲಿ ಅದು ಆಗಬೇಕು” ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮಂದಿರಾಗೆ ನಿರೂಪಕ ಪುಶ್ ಅಪ್ ಮಾಡಲು ಸವಾಲು ನೀಡಿದ್ದರು. ಮಂದಿರಾ ಏನೂ ಯೋಚಿಸದೇ ಸವಾಲನ್ನು ಸ್ವೀಕರಿಸಿ, ಅದನ್ನು ಪೂರ್ಣಗೊಳಿಸಿದ್ದರು. ಕೆಲಸ ಏನೇ ಇರಲಿ, ಬಟ್ಟೆ ಯಾವುದೇ ಇರಲಿ, ಅದರ ಬಗ್ಗೆ ಯೋಚಿಸಬಾರದು ಎಂಬುದನ್ನು ತಿಳಿಸಿದ್ದಾರೆ.

    ಈ ಹಿಂದೆ ಕೂಡ ಮಂದಿರಾ ಬೇಡಿ ತನ್ನ ವರ್ಕೌಟ್ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ದಿಲ್‍ವಾಲೇ ದುಲ್ಹಾನಿಯಾ ಲೇ ಜಾಯಾಂಗೆ ಸಿನಿಮಾದಲ್ಲಿ ಕಾಣಿಸಿಕೊಂಡ ಈ ನಟಿ ಹಲವು ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಐಪಿಎಲ್‍ನಲ್ಲಿ ನಿರೂಪಣೆ ಮಾಡಿದ್ದಾರೆ.