ದಳಪತಿ ವಿಜಯ್ (Vijay) ಮತ್ತೊಂದು ಅಪರೂಪದ ಕೆಲಸ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಲೇ ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಇವರು, ಇದೀಗ ತಮ್ಮ ತಾಯಿಗಾಗಿ ಸಾಯಿಬಾಬಾ (Saibaba) ಮಂದಿರವನ್ನು (Mandir) ಕಟ್ಟಿದ್ದಾರೆ. ಈ ಮೂಲಕ ತಮ್ಮ ತಾಯಿ ಕನಸನ್ನು ಈಡೇರಿಸಿದ್ದಾರೆ.
ಚೆನ್ನೈನಲ್ಲಿ ಅವರದ್ದೊಂದು ಪುಟ್ಟ ನಿವೇಶನವಿತ್ತು. ಅಲ್ಲಿಯೇ ಸುಂದರವಾದ ಸಾಯಿಬಾಬಾ ಮಂದಿರ ಕಟ್ಟಬೇಕು ಎನ್ನುವುದು ತಾಯಿ ಕನಸಾಗಿತ್ತು. ಆ ನಿವೇಶನವನ್ನು ಹಾಗೇ ಉಳಿಸಿಕೊಂಡು ಬಂದಿದ್ದರು ಅವರ ತಾಯಿ. ಅವರ ತಾಯಿ ಸಾಯಿಬಾಬಾನ ಮಹಾನ್ ಭಕ್ತರೂ ಆಗಿರೋದ್ರಿಂದ ಈ ಕೆಲಸ ನೆರವೇರಿದೆ.
ಸದ್ಯ ಗೋಟ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ವಿಜಯ್. ಈ ನಡುವೆ ರಾಜಕೀಯ ಪಕ್ಷವನ್ನೂ ಅವರು ಕಟ್ಟಿದ್ದಾರೆ. ಮುಂದಿನ ತಮಿಳುನಾಡ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಿನಿಂದಲೇ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಸಮೀಪದ ಮಳಲಿಯಲ್ಲಿರುವ ಮಸೀದಿ ಬಗೆಗಿನ ವಿವಾದಕ್ಕೆ(Malali Masjid Row) ಸಂಬಂಧಿಸಿದಂತೆ ಮಂಗಳೂರು(Mangaluru) ಸಿವಿಲ್ ಕೋರ್ಟ್ ನವೆಂಬರ್ 9ಕ್ಕೆ ಆದೇಶ ಪ್ರಕಟಿಸಲಿದೆ.
ಮಸೀದಿಯಲ್ಲಿ ಕಾಮಗಾರಿ ನಡೆಸಬಾರದು. ಕೋರ್ಟ್ ಕಮೀಷನರ್ ಮೂಲಕ ಸರ್ವೇ ನಡೆಸುವಂತೆ ವಿಎಚ್‌ಪಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ ಮೂಲ ದಾವೆ ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕುರಿತು ತೀರ್ಪು ಬರಬೇಕಾದ ಹಿನ್ನೆಲೆಯಲ್ಲಿ ಆದೇಶವನ್ನು ನ.9ಕ್ಕೆ ಮುಂದೂಡಿದೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್ ಫೀಲ್ಡಿಂಗ್, ಶಮಿ ಮಾರಕ ಬೌಲಿಂಗ್ – ಭಾರತಕ್ಕೆ 6 ರನ್‌ಗಳ ರೋಚಕ ಜಯ
ಏನಿದು ವಿವಾದ?
ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ ಭಾಗವನ್ನು ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಸ್ಥಾನದಲ್ಲಿರುವಂತಹ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು. ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿತ್ತು.
ಈ ವಿವಾದ ಮಧ್ಯೆ ವಿಹೆಚ್‌ಪಿ ತಾಂಬೂಲ ಪ್ರಶ್ನೆ ಇಟ್ಟಿತ್ತು. ಈ ತಾಂಬೂಲ ಪ್ರಶ್ನೆಯಲ್ಲಿ ವೀರಶೈವ, ಲಿಂಗಾಯತರ ಭೂಮಿಯು ಶೈವ ಸಂಕಲ್ಪ ಆರಾಧನ ಸ್ಥಳವಾಗಿತ್ತು. ಅಲ್ಲೊಂದು ಮಠ ಇತ್ತು. ಜೊತೆಗೆ ಶಿವನ ದೇಗುಲವಿತ್ತು. ಅಲ್ಲಿ ದೇವರ ಆರಾಧನೆ, ಪೂಜೆ ನಡೆಯುತ್ತಿತ್ತು. ದೈವ ಸಾನಿಧ್ಯ ಇದ್ದ ಭೂಮಿ ಎಂಬುದಕ್ಕೆ ಸಂಶಯ ಇಲ್ಲ ಎಂಬ ಸುಳಿವು ತಾಂಬೂಲ ಪ್ರಶ್ನೆಯಲ್ಲಿ ಸಿಕ್ಕಿತ್ತು.
Live Tv
[brid partner=56869869 player=32851 video=960834 autoplay=true]
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿ ಬಗೆಗಿನ ವಿವಾದಕ್ಕೆ(Malali Masjid Row) ಸಂಬಂಧಿಸಿದಂತೆ ಇಂದು ಮಂಗಳೂರು(Mangaluru) ಸಿವಿಲ್ ಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ಮಸೀದಿಯಲ್ಲಿ ಕಾಮಗಾರಿ ನಡೆಸಬಾರದು. ಕೋರ್ಟ್ ಕಮೀಷನರ್ ಮೂಲಕ ಸರ್ವೇ ನಡೆಸುವಂತೆ ವಿಎಚ್‌ಪಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ಮಳಲಿ ಮಸೀದಿ ಪುನರ್ ನಿರ್ಮಾಣಕ್ಕೆ ಮಸೀದಿ ಆಡಳಿತ ಮಂಡಳಿ ಮುಂದಾಗಿತ್ತು. ಆದರೆ ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅರ್ಜಿ ವಿಚಾರಣೆ ಸಂದರ್ಭ ಮಸೀದಿ 700 ವರ್ಷಗಳ ಹಿಂದಿನಿಂದ ಇದೆ ಎಂದು ಮಸೀದಿ ಪರ ವಕೀಲರು ವಾದಿಸಿದ್ದರು. ಇದನ್ನೂ ಓದಿ: ಮಳಲಿಯಲ್ಲಿರುವುದು ದರ್ಗಾವಲ್ಲ, ಶಿವ ಸಾನಿಧ್ಯ- ತಾಂಬೂಲ ಪ್ರಶ್ನೆಯಲ್ಲಿ ಸುಳಿವು
ಏನಿದು ವಿವಾದ?
ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರೋ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ ಭಾಗವನ್ನು ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಸ್ಥಾನದಲ್ಲಿರುವಂತಹ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು. ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿವೆ.
ಈ ವಿವಾದ ಮಧ್ಯೆ ವಿಹೆಚ್‌ಪಿ ತಾಂಬೂಲ ಪ್ರಶ್ನೆ ಇಟ್ಟಿತ್ತು. ಈ ತಾಂಬೂಲ ಪ್ರಶ್ನೆಯಲ್ಲಿ ವೀರಶೈವ, ಲಿಂಗಾಯತರ ಭೂಮಿಯು ಶೈವ ಸಂಕಲ್ಪ ಆರಾಧನ ಸ್ಥಳವಾಗಿತ್ತು. ಅಲ್ಲೊಂದು ಮಠ ಇತ್ತು. ಜೊತೆಗೆ ಶಿವನ ದೇಗುಲವಿತ್ತು. ಅಲ್ಲಿ ದೇವರ ಆರಾಧನೆ, ಪೂಜೆ ನಡೆಯುತ್ತಿತ್ತು. ದೈವ ಸಾನಿಧ್ಯ ಇದ್ದ ಭೂಮಿ ಎಂಬುದಕ್ಕೆ ಸಂಶಯ ಇಲ್ಲ ಎಂಬ ಸುಳಿವು ತಾಂಬೂಲ ಪ್ರಶ್ನೆಯಲ್ಲಿ ಸಿಕ್ಕಿತ್ತು.
Live Tv
[brid partner=56869869 player=32851 video=960834 autoplay=true]
– ಸಾಮಾಜಿಕ ಜಾಲತಾಣದಲ್ಲಿ ಪುಸ್ತಕದ ಪ್ರತಿಯ ಫೋಟೋ ವೈರಲ್
– ವಿಜಯನಗರದ ದಂಡನಾಯಕ ತಿಮ್ಮಣ್ಣನಿಂದ ಕೋಟೆ ನಿರ್ಮಾಣ
ಮಂಡ್ಯ: ದಿನದಿಂದ ದಿನಕ್ಕೆ ತಾರಕ್ಕೆ ಏರುತ್ತಿರುವ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಇದೀಗ ಪುಸ್ತಕದಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಹೋರಾಟದ ಕಾವು ಹೆಚ್ಚುತ್ತಿರುವುದರ ಜೊತೆಗೆ ದಿನಕ್ಕೊಂದು ಮಹತ್ವದ ತಿರುವನ್ನು ಪಡೆದುಕೊಳ್ಳುತ್ತಿದೆ. ಜಾಮಿಯಾ ಮಸೀದಿಗೂ ಮೊದಲೇ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಿತ್ತು. ಆ ದೇವಾಸ್ಥಾನ ನಾಶ ಮಾಡಿ ಟಿಪ್ಪು ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇಲ್ಲಿ ದೇವಸ್ಥಾನ ಇತ್ತು ಎಂಬ ಹಿಂದೂ ಸಂಘಟನೆಗಳ ಆರೋಪಕ್ಕೆ ಪೂರಕ ಎಂಬಂತೆ ಈ ಹಿಂದೆ ಪ್ರಕಟವಾದ ಪುಸ್ತಕ ಸಿಕ್ಕಿದೆ.
ಪುಸ್ತಕದಲ್ಲಿ ಏನಿದೆ?
ಶ್ರೀರಂಗಪಟ್ಟಣ ಈ ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಗೋಹತ್ಯೆಯ ಪಾಪಕ್ಕೊಳಗಾದ ಗೌತಮ ಋಷಿಗಳು ಇಲ್ಲಿಗೆ ಬಂದು ದೇವಸ್ಥಾನಗಳನ್ನು ಸ್ಥಾಪಿಸಿ ಪೂಜಿಸಿದ್ದರು. ಆ ವೇಳೆ ಶ್ರೀರಂಗಪಟ್ಟಣವನ್ನು ಗೌತಮ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಆ ವೇಳೆ ಮೂಡಲ ದಿಕ್ಕಿಗೆ ಗೌತಮ ಋಷಿಗಳೇ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಿದ್ದರು. ಇದಾದ ನಂತರ ರಾಜಾಡಳಿತದ ರಾಜಧಾನಿಯಾದಗ ಗೌತಮ ಕ್ಷೇತ್ರ ಶ್ರೀರಂಗಪಟ್ಟಣವೆಂದು ಬದಲಾಗುತ್ತದೆ.
ಶ್ರೀರಂಗಪಟ್ಟಣದ ಸುತ್ತ ಇರುವ ಕೋಟೆಯನ್ನು ವಿಜಯನಗರದ ದಂಡನಾಯಕ ತಿಮ್ಮಣ್ಣ ಹೆಬ್ಬಾರನಿಂದ ನಿರ್ಮಿತವಾಗಿದೆ. ಈ ವೇಳೆ ತಿಮ್ಮಣ್ಣ ಹೆಬ್ಬಾರ ಕೇವಲ ಆಂಜನೇಯಸ್ವಾಮಿ ಮೂರ್ತಿ ಇದ್ದ ಜಾಗದಲ್ಲಿ ಭವ್ಯವಾದ ಮಂದಿರವೊಂದನ್ನು ಕಟ್ಟಿಸಿದ್ದರು. ಬಳಿಕ ಇಲ್ಲಿ ಪ್ರತಿನಿತ್ಯ ಆಂಜನೇಯಸ್ವಾಮಿಯನ್ನು ಜನರು ಆರಾಧನೆ ಮಾಡುತ್ತಿದ್ದರು. ಇಂತಹ ದೇವಸ್ಥಾನಕ್ಕೆ ವಿನಾಶಕಾಲ ಬಂದಿದ್ದು, ಟಿಪ್ಪು ಸುಲ್ತಾನ್ ಕಾಲದಲ್ಲಿದೆ.
ಅರ್ಚಕರ ಕೈ ಕತ್ತರಿಸಲಾಗಿತ್ತು
ಟಿಪ್ಪು ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶ ಮಾಡಿ ಅರ್ಚಕರಾಗಿದ್ದ ನಾರಾಯಣಸ್ವಾಮಿ ಅವರ ಕೈಯನ್ನು ಕತ್ತರಿಸಿ, ದೇವಸ್ಥಾನದ ಒಳಭಾಗದಲ್ಲಿ ಇದ್ದ ಏಳು ಕೊಪ್ಪರಿಗೆ ಹಣ ಹಾಗೂ ಅಮೂಲ್ಯವಾದ ರತ್ನಾಭರಣಗಳನ್ನು ದೋಚಲಾಗಿದೆ. ಆ ಹಣದಿಂದಲೇ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇಲ್ಲಿದ್ದ ಮೂಡಲಬಾಗಿಲು ಆಂಜನೇಯಸ್ವಾಮಿ ಮೂಲ ವಿಗ್ರಹವನ್ನು ಕಾವೇರಿ ನದಿಗೆ ಎಸೆದಿದ್ದಾನೆ.
ನಾನು ನಿನ್ನ ಜೊತೆ ಬರುತ್ತೇನೆ
ಟಿಪ್ಪು ಮರಣದ ನಂತರ ಅರ್ಚಕರಾದ ನಾರಾಯಣಸ್ವಾಮಿ ಅವರು ಕಾವೇರಿ ನದಿಯಲ್ಲಿ ಹೋಗುವ ವೇಳೆ ದಿವ್ಯವಾಣಿಯೊಂದು ‘ನಾನು ನಿನ್ನ ಜೊತೆ ಬರುತ್ತೇನೆ’ ಎಂದು ಕೇಳಿಬಂದಿದೆ. ಅದೇನೂ ಎಂದು ನೋಡಿದ ವೇಳೆ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲ ವಿಗ್ರಹ ಪತ್ತೆಯಾಗುತ್ತೆ. ನಂತರ ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮರುಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡಿದರು ಎಂದು ಬಾಲಗಣಪತಿಭಟ್ಟ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ.
ಜಾಮಿಯಾ ಮಸೀದಿಯಲ್ಲಾ, ಮಂದಿರಾ ಎಂದು ಹೋರಾಟ ನಡೆಸುತ್ತಿರುವ ವೇಳೆ ಈ ಪುಸ್ತಕ ದೊರೆತಿರುವುದು ಸಂಚಲನ ಮೂಡಿಸಿದೆ. ದೊರೆತಿರುವ ಪುಸ್ತಕವಾದ್ರು ಯಾವ ಕಾಲ ಘಟ್ಟದ್ದೂ, ಆ ಪುಸ್ತಕದಲ್ಲಿ ಬರೆದಿರುವ ವಿಚಾರಗಳ ಸತ್ಯ ಸತ್ಯತೆಗಳ ಬಗ್ಗೆ ಸರ್ಕಾರ ಪರೀಶಿಲಸಬೇಕಿದೆ. ಇದನ್ನೂ ಓದಿ: ಬೈಕರ್ ಗುಂಪಿನೊಂದಿಗೆ ಮಾತಿನ ಚಕಮಕಿ – ಸವಾರನಿಗೆ ಬೇಕೆಂದು ಸ್ಕಾರ್ಪಿಯೋ ಡಿಕ್ಕಿ
ಇಲ್ಲಿರುವ ದೇವಸ್ಥಾನದ ಮಾದರಿಯ ಕಂಬಗಳು, ಕೆತ್ತನೆಗಳು, ಕಲ್ಯಾಣಿ, ಬಾವಿ, ಗೋಪುರದ ಕಳಶಗಳನ್ನು ನೋಡಿ ಇದು ದೇವಸ್ಥಾನ ಎಂದು ತಿಳಿಯುತ್ತದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ಮತ್ತೆ ಜಾಮಿಯಾ ಬಳಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಹೋರಾಟಗಳನ್ನು ಆರಂಭಿಸಿದೆ. ಈ ಹೋರಾಟವನ್ನು ನ್ಯಾಯಾಲಯದ ಜೊತೆಗೆ ಪ್ರತಿಭಟನೆಯ ರೂಪದಲ್ಲಿ ಹೋರಾಟ ನಡೆಸುತ್ತಿವೆ.
ಬೆಳಗಾವಿ: ನಗರದ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿಯನ್ನು ಬ್ರಾಹ್ಮಣರು, ಮುಸ್ಲಿಮರು ಸೇರಿಯೇ ಕಟ್ಟಿದ್ದಾರೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಪಟ್ ಅನ್ನುವುದು ಬ್ರಾಹ್ಮಣ ಮನೆತನದ ಹೆಸರು. ಬಾಪಟ್ ಗಲ್ಲಿಯಲ್ಲಿ ಈ ಮೊದಲು ವಾತಾವರಣ ಬಹಳ ಕೆಟ್ಟಿತ್ತು. ಇಂತಹ ಕೆಟ್ಟ ವಾತಾವರಣ ಅಳಿಸಿ ಹಾಕಲು ಎಲ್ಲರೂ ಪ್ರಯತ್ನಿಸಿದ್ದರು. ಬ್ರಾಹ್ಮಣರು-ಮುಸ್ಲಿಮರು ಸೇರಿ ಶಾಹಿ ಮಸೀದಿ ಕಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಭಾರತೀಯ ಶಿಲ್ಪಿಗಳು ಮಸೀದಿ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷ ತರುವುದು ಒಳ್ಳೆಯದಲ್ಲ. ನಾವು ಸಹ ಇಂದು ಅಥವಾ ನಾಳೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗುತ್ತೇವೆ. ಮಸೀದಿ ಕುರಿತಂತೆ ಶಾಸಕ ಅಭಯ್ ಪಾಟೀಲ್ ಮನವಿ ತಿರಸ್ಕರಿಸುವಂತೆ ಕೋರುತ್ತೇವೆ ಎಂದರು. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!
ಬಿಜೆಪಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿದೆ. ತೈಲ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿದೆ. ಇಂತಹ ವಿಷಯಗಳನ್ನು ಮುಚ್ಚಿಡಲು ಮಂದಿರ, ಮಸೀದಿ ವಿವಾದಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಅಭಯ್ ಪಾಟೀಲ್ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುತ್ತಿದ್ದಾರೆ. 10 ತಿಂಗಳಲ್ಲಿ ಚುನಾವಣೆ ಬರುವುದಿದೆ. ಹೀಗಾಗಿ ಇಂತಹ ವಿಚಾರ ಮುಂದೆ ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್‍ಗೆ ಸಿದ್ದರಾಮಯ್ಯ ಚೆಕ್ – ಬಿಜೆಪಿಗೆ ಕುದುರುತ್ತಾ ಲಕ್?
ಬೆಳಗಾವಿ: ರಾಮದೇವ ಗಲ್ಲಿಯಲ್ಲಿ ಒಂದು ಪುರಾತನ ದೇವಾಲಯ ಇದೆ. ಆ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಿದ್ದಾರೆ. ಅದು ಮರಳಿ ದೇವಾಲಯ ಆಗಬೇಕು ಎಂಬುದು ಎಲ್ಲ ಹಿಂದೂಗಳ ಭಾವನೆಯಾಗಿದೆ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇಡೀ ದೇಶಾದ್ಯಂತ ಮಸೀದಿ-ದೇವಸ್ಥಾನಗಳ ವಿವಾದ ಬುಗಿಲೆದ್ದಿರುವ ಮಧ್ಯದಲ್ಲಿ ಶಾಸಕ ಅಭಯ್ ಪಾಟೀಲ್ ನಗರದಲ್ಲಿ ಪಬ್ಲಿಕ್‌ಟಿವಿ ಜೊತೆ ಮಾತನಾಡಿ, ಬೆಳಗಾವಿ ರಾಮದೇವ ಗಲ್ಲಿಯ ಹನುಮನ ಮಂದಿರದ ಪಕ್ಕದಲ್ಲಿಯೇ ಗುಡಿ ಇದೆ. ಇದರ ಬಗ್ಗೆ ಪೂರ್ಣವಾಗಿ ಪರಿಶೀಲನೆ ಮಾಡುತ್ತಿದ್ದೇನೆ. ಇನ್ನು ಕೆಲವೊಂದು ಮಾಹಿತಿಗಳು ಎರಡ್ಮೂರು ದಿನಗಳಲ್ಲಿ ಸಿಗಲಿದೆ. ಯಾವಾಗ ಅದನ್ನು ಕೆಡವಿ ಮಸೀದಿ ಮಾಡಿದ್ರು? ಅಲ್ಲಿ ಯಾವ ಗುಡಿ ಇತ್ತು? ಎನ್ನುವುದು ತಿಳಿಯಲಿದೆ. ಅಲ್ಲಿನ ಹಿರಿಯರು ಇದು ಪುರಾತನ ಮಂದಿರ ಎಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ದೇವಸ್ಥಾನ ಸುಮಾರು ಐನೂರು ವರ್ಷದ ಹಿಂದಿನದು ಇರಬಹುದು. ಗರ್ಭಗುಡಿಗಳಿಗೆ ಬಾಗಿಲುಗಳಿವೆ. ಒಳಗೆ ಬಹಳಷ್ಟು ಚಿತ್ರಗಳನ್ನು ಕೆತ್ತಿ ತೆಗೆಯುವ ಕೆಲಸ ಆಗಿದೆ. ಹೊರಗಿನ ಒಂದು ಸೈಡ್ ನೋಡಿದರೆ ಅದು ಯಾವ ರೀತಿಯ ಕಟ್ಟಡವಾಗಿದೆ ಎಂದು ಗೊತ್ತಾಗುತ್ತದೆ. ಮಸೀದಿಯಲ್ಲಿ ಕಲ್ಲಿನ ಬಾಗಿಲುಗಳು, ಒಳಗೆ ದೊಡ್ಡ ಕಂಬಗಳಿವೆ. ಹಲಸಿ ಸೇರಿ ಬೇರೆ ದೇವಸ್ಥಾನಗಳಲ್ಲಿ ಇರುವ ಹಾಗೇ ಮಸೀದಿ ಒಳಗಡೆ ಕಂಬಗಳು ಇದ್ದಂತೆ ಮೇಲ್ನೋಟಕ್ಕೆ ಇಲ್ಲಿಯೂ ಕಾಣಿಸುತ್ತವೆ. ಹೀಗಾಗಿ ಜಿಲ್ಲಾಡಳಿತ ತ್ವರಿತವಾಗಿ ಪರಿಶೀಲನೆ ನಡೆಸಿ ಇತಿಹಾಸದಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಎರಡು ವರ್ಷಗಳ ನಂತರ ಭಾರತ- ಬಾಂಗ್ಲಾ ರೈಲು ಸಂಚಾರ ಪುನಾರಂಭ
ಶಾಸಕನಾಗಿ ನಾನೇ ಒಳಗೆ ಹೋಗಿ ಪರಿಶೀಲನೆ ಮಾಡುತ್ತಿಲ್ಲ. ನಮ್ಮ ಗಮನಕ್ಕೆ ಬಂದಿರುವುದನ್ನು ತಿಳಿಸಿದ್ದೇನೆ. ಸರ್ವೇ ಮಾಡಿರಿ, ಇಲ್ಲವಾದರೆ ಇದನ್ನು ಜಿಲ್ಲಾಡಳಿತ ಸಾಬೀತು ಮಾಡಬೇಕು. ಮೇಲ್ನೋಟಕ್ಕೆ ನೂರಕ್ಕೆ ನೂರರಷ್ಟು ಇದು ಮಂದಿರವಾಗಿದೆ. ಸರ್ವೇ ಆದ ನಂತರ ಸತ್ಯಾಂಶ ತಿಳಿಯಲಿದೆ. ಬೆಳಗಾವಿಯಲ್ಲಿ ಅನೇಕ ಪೂಜಾಕೇಂದ್ರಗಳು, ಶ್ರದ್ಧಾ ಕೇಂದ್ರಗಳಿವೆ, ಅವುಗಳನ್ನು ಸರ್ವೇ ಮಾಡಿ ಎಂದು ನಾವು ಹೇಳುತ್ತಿಲ್ಲ. ಅದೇ ರೀತಿ ಜನರು ಇನ್ನು ಎರಡು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಸ್ವತಃ ನಾನೇ ಗಮನಿಸಿದ ನಂತರ ಅವುಗಳನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಸರ್ವೇ ಆದ ನಂತರ ನೂರಕ್ಕೆ ನೂರು ಅದು ದೇವಸ್ಥಾನ ಎನ್ನುವುದು ಖಚಿತವಾಗುತ್ತದೆ. ಅದಾದ ಬಳಿಕ ಮರಳಿ ದೇವಸ್ಥಾನ ಪುನರ್ ಸ್ಥಾಪನೆ ಆಗಬೇಕು. ಪಕ್ಕದಲ್ಲಿಯೇ ಆಂಜನೇಯ ದೇವಸ್ಥಾನವಿದೆ. ಅದು ಯಾವ ದೇವಸ್ಥಾನ ಎಂಬ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇವೆ. ಅಲ್ಲಿನ ಜನರು ಹೇಳಿದಂತೆ ನಾನು ಹೊರಗೆ ಹೋಗಿ ನೋಡಿ ಬಂದಿದ್ದೇನೆ. 80-90 ವರ್ಷದವರು ಹೇಳುತ್ತಿರುವುದು ನೂರಕ್ಕೆ ನೂರು ನಿಜವಾಗಿದೆ. ನಾವು ಮಂದಿರ ಇತ್ತು ಎಂದು ಹೇಳಿದ್ದೇವೆ. ಅದನ್ನು ಜಿಲ್ಲಾಡಳಿತ ಸರ್ವೇ ಮಾಡಿ ಹೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಲ ವಿವಾದ ಬಗೆಹರಿಸಲು ಪಾಕಿಸ್ತಾನದ ನಿಯೋಗ ಭಾರತಕ್ಕೆ ಭೇಟಿ
ಮಸೀದಿ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ವಿಷಯ ತಿಳಿಸುತ್ತೇನೆ. ಒಂದು ವಾರದಲ್ಲಿ ಏನೂ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಿಳಿಸುತ್ತೇವೆ. ಆಗಲೂ ಆಗದಿದ್ದರೆ ಸಮಾಜದ ಎಲ್ಲ ಬಾಂಧವರು, ಪಕ್ಷದ ಪ್ರಮುಖರ ಜೊತೆಗೆ ಚರ್ಚಿಸಿ ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದರು.