Tag: mandekolu

  • ಬೆಳ್ಳಂಬೆಳಗ್ಗೆ ಸಂಬಂಧಿಕರ ಮನೆಯಿಂದ ಹೊರಟವ ಸುಟ್ಟು ಕರಕಲಾದ!

    ಬೆಳ್ಳಂಬೆಳಗ್ಗೆ ಸಂಬಂಧಿಕರ ಮನೆಯಿಂದ ಹೊರಟವ ಸುಟ್ಟು ಕರಕಲಾದ!

    ಮಂಗಳೂರು: ರಸ್ತೆಯಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದು ಸವಾರನೊಬ್ಬ ಬೈಕ್ ಸಮೇತ ಸುಟ್ಟು ಕರಕಲಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಡ್ಪಿನಂಗಡಿ ಬಳಿ ನಡೆದಿದೆ.

    ಮೃತ ದುರ್ದೈವಿಯನ್ನು ಉಮೇಶ್ ಎಂದು ಗುರುತಿಸಲಾಗಿದೆ. ಇವರು ಸುಳ್ಯದ ಮಂಡೆಕೋಲು ನಿವಾಸಿಯಾಗಿದ್ದಾರೆ. ಉಮೇಶ್ ಅವರು ಬಳ್ಪದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಇಂದು ಬೆಳಗ್ಗೆ ಹಾಲು ಕರೆಯಲು ಇದೆ ಎಂದು ಅಲ್ಲಿಂದ ಮುಂಜಾನೆ 4.30ರ ಸುಮಾರಿಗೆ ಹೊರಟಿದ್ದಾರೆ. ಹೀಗೆ ಹೊರಟ ಉಮೇಶ್ ಅವರು ಕಂಬದಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಗಮನಿಸದ ಕಾರಣ ಈ ಅವಘಡ ಸಂಭವಿಸಿದೆ.

    ವಿದ್ಯುತ್ ತಂತಿಯ ಮೇಲೆಯೇ ಬೈಕ್ ಚಲಾಯಿಸಿದ ಪರಿಣಾಮ ಬೈಕಿಗೆ ವಿದ್ಯುತ್ ಪ್ರವಹಿಸಿ ಸವಾರ ಸಜೀವ ದಹನವಾಗಿದ್ದಾರೆ. ಈ ಘಟನೆ ಬೆಳ್ಳಂಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಸುಳ್ಯ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.