Tag: Mandeep Singh

  • ಅಪ್ಪ ಈ ಗೆಲುವು ನಿನಗಾಗಿ – ತಂದೆಗೆ ಭಾವನಾತ್ಮಕ ಸಂದೇಶ ಬರೆದ ಮನ್‍ದೀಪ್

    ಅಪ್ಪ ಈ ಗೆಲುವು ನಿನಗಾಗಿ – ತಂದೆಗೆ ಭಾವನಾತ್ಮಕ ಸಂದೇಶ ಬರೆದ ಮನ್‍ದೀಪ್

    – ತಂದೆ ಸಾವಿನ ದುಃಖದಲ್ಲಿಯೂ ಬ್ಯಾಟ್ ಬೀಸಿದ್ದ ಆಟಗಾರ

    ನವದೆಹಲಿ: ಶನಿವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೈದರಾಬಾದ್ ತಂಡವನ್ನು ಮಣಿಸಿತ್ತು. ಈ ಗೆಲುವನ್ನು ಮನ್‍ದೀಪ್ ಅವರು ವಿಧಿವಶರಾದ ತಂದೆಗೆ ಅರ್ಪಿಸಿದ್ದಾರೆ.

    ಶನಿವಾರ ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 43ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಡಿದ ಪಂಜಾಬ್ ತಂಡ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 126 ರನ್ ಸಿಡಿಸಿದ್ದರು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆದಿತ್ತು. ಆದರೆ ಕೊನೆಯಲ್ಲಿ ಪಂಜಾಬ್ ಬೌಲರ್ ಗಳು ಮಾಡಿದ ಮ್ಯಾಜಿಕ್‍ನಿಂದ ಆಲೌಟ್ ಆಗಿತ್ತು. ಈ ಮೂಲಕ ಪಂಜಾಬ್ 12 ರನ್‍ಗಳಿಂದ ಗೆದ್ದು ಬೀಗಿತ್ತು.

    ಶನಿವಾರದ ಈ ಗೆಲುವಿನ ಮೂಲಕ ರಾಹುಲ್ ಪಡೆ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮ ಮಾಡಿಕೊಂಡಿತ್ತು. ಬ್ಯಾಟಿಂಗ್‍ನಲ್ಲಿ ವಿಫಲವಾದರೂ ಸೂಪರ್ ಬೌಲಿಂಗ್ ಮಾಡಿ ಗೆದ್ದ ಪಂದ್ಯವನ್ನು ಪಂಜಾಬ್ ತಂಡ ಶುಕ್ರವಾರ ಮೃತರಾದ ಮನ್‍ದೀಪ್ ಸಿಂಗ್ ಅವರ ತಂದೆಯವರಿಗೆ ಅರ್ಪಣೆ ಮಾಡಿದೆ. ಈ ಪಂದ್ಯದ ನಂತರ ಟ್ವೀಟ್ ಮಾಡಿರುವ ಮನ್‍ದೀಪ್ ಅಪ್ಪ ಈ ಗೆಲುವು ನಿನಗಾಗಿ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ತಂದೆಯ ಸಾವಿನ ಸುದ್ದಿಯ ನಂತರವೂ ಪಂದ್ಯವಾಡಿದ್ದ ಮನ್‍ದೀಪ್ ಸಿಂಗ್ ಅವರ ಮನೋಸ್ಥಿತಿಗೆ ಭಾರತೀಯರು ಫಿದಾ ಅಗಿದ್ದರು. ಕಳೆದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಮನ್‍ದೀಪ್ ಅವರು, 14 ಬಾಲಿಗೆ 17 ರನ್ ಹೊಡೆದಿದ್ದರು. ಕಳೆದ ಕೆಲ ದಿನಗಳಿಂದ ಮನ್‍ದೀಪ್ ತಂದೆ ಸರ್ದಾರ್ ಹರ್ದೇವ್ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಲಾಗಿತ್ತು.

    ಆದರೆ ಇತ್ತೀಚೆಗೆ ಅವರ ಆರೋಗ್ಯದ ಸ್ಥಿತಿ ತೀರ ಗಂಭೀರವಾದ ಕಾರಣ ಅವರನ್ನು ಚಂಡೀಗಢದ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಹರ್ದೇವ್ ಸಿಂಗ್ ಅವರು ನಿವೃತ್ತ ಜಿಲ್ಲಾ ಕ್ರೀಡಾ ಅಧಿಕಾರಿಯಾಗಿದ್ದರು.

  • ಕ್ರಿಕೆಟಿಗ ಮನ್‍ದೀಪ್ ಸಿಂಗ್ ತಂದೆ ವಿಧಿವಶ

    ಕ್ರಿಕೆಟಿಗ ಮನ್‍ದೀಪ್ ಸಿಂಗ್ ತಂದೆ ವಿಧಿವಶ

    ಚಂಡೀಗಢ: ಪಂಜಾಬ್ ರಾಜ್ಯದ ಕ್ರಿಕೆಟರ್ ಮತ್ತು ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕಾಗಿ ಆಡುತ್ತಿರುವ ಬ್ಯಾಟ್ಸ್ ಮ್ಯಾನ್ ಮನ್‍ದೀಪ್ ಸಿಂಗ್ ಅವರ ತಂದೆ ಸರ್ದಾರ್ ಹರ್ದೇವ್ ಸಿಂಗ್ ಅವರು ಇಂದು ವಿಧಿವಶರಾಗಿದ್ದಾರೆ.

    ಕಳೆದ ಕೆಲ ದಿನಗಳಿಂದ ಸರ್ದಾರ್ ಹರ್ದೇವ್ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯದ ಸ್ಥಿತಿ ತೀರ ಗಂಭೀರವಾದ ಕಾರಣ ಅವರನ್ನು ಚಂಡೀಗಢದ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

    ಹರ್ದೇವ್ ಸಿಂಗ್ ಅವರು ನಿವೃತ್ತ ಜಿಲ್ಲಾ ಕ್ರೀಡಾ ಅಧಿಕಾರಿಯಾಗಿದ್ದರು. ಮಗ ಮನ್‍ದೀಪ್ ಸಿಂಗ್ ಅವರು ಪ್ರಸ್ತುತ ಐಪಿಎಲ್ ಆಡಲು ಯುಎಇಗೆ ಹೋಗಿದ್ದಾರೆ. ಅವರು ಈ ಬಾರಿಯ ಐಪಿಎಲ್‍ನಲ್ಲಿ ಕೆಎಲ್ ರಾಹುಲ್ ನೇತೃತ್ವದ ತನ್ನ ರಾಜ್ಯ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್‍ಗಾಗಿ ಆಡುತ್ತಿದ್ದಾರೆ. ಸದ್ಯ ಅವರು ಈ ಆವೃತ್ತಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಪ್ಲೇಯಿಂಗ್ ಇಲೆವೆನ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

  • 8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    ಬೆಂಗಳೂರು: ತನ್ನ ವೇಗವನ್ನು ಮೀರಿಸುವಂತೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ತಂಡದ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿದ್ದಾರೆ.

    ವಿರಾಟ್ ಕೊಹ್ಲಿ ಸದಾ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದಿಂದಲೇ ಗುರುತಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ತಂಡದ ಆಟಗಾರರಿಗೂ ಇದೇ ರೀತಿ ತಮ್ಮ ಈ ಆಕ್ರಮಣಕಾರಿ ಪ್ರವೃತ್ತಿಯನ್ನು ಹುರಿದುಂಬಿಸುತ್ತಾರೆ. ಸದ್ಯ ಕೊಹ್ಲಿ ತಮ್ಮ ತಂಡದ ಯುವ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೊಹ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೇವಲ 8.90 ಸೆಕೆಂಡ್ ನಲ್ಲಿ 3 ರನ್ ಓಡಿದ್ದಾರೆ. ಮೊದಲ ರನ್ 3.9 ಸೆಕೆಂಡ್, 2ನೇ ರನ್ 2.39 ಸೆಕೆಂಡ್ ಹಾಗೂ ಮೂರನೇ ರನ್ 2.61 ಸೆಕೆಂಡ್ ನಲ್ಲಿ ಓಡಿ ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಮೂಲಕ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿರುವ ಕೊಹ್ಲಿ, ನೀವು ನನಗಿಂತಲೂ ವೇಗವಾಗಿ ಓಡುತ್ತಿರಾ? ಇಲ್ಲಿ ನನ್ನ ವೇಗದ 3 ರನ್ ಗಳ ವಿಡಿಯೋ ನೀಡಿದ್ದೇನೆ. ಪ್ಯಾಡ್ ಧರಿಸಿ ನಿಮ್ಮ ವೇಗದ 3 ರನ್ ವಿಡಿಯೋ ಕಳುಹಿಸಿ. ನೀವು ನನ್ನ 8.90 ಸೆಕೆಂಡ್ ವೇಗವನ್ನು ಮೀರಿಸುತ್ತೀರಾ ನೋಡೋಣ ಎಂದು ಬರೆದುಕೊಂಡಿದ್ದಾರೆ.

    ವಿಶ್ವ ಕ್ರಿಕೆಟ್‍ನ ಶ್ರೇಷ್ಠ ಬ್ಯಾಟ್ಸ್ ಮನ್‍ಗಳಾದ ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ರಂತಹ ಆಟಗಾರರನ್ನು ಆರ್‌ಸಿಬಿ ಹೊಂದಿದ್ದರೂ ಈ ಬಾರಿಯ ಐಪಿಎಲ್ ನಲ್ಲಿ ತಂಡ ಕೇವಲ 2 ಗೆಲುವುಗಳನ್ನು ಮಾತ್ರ ಪಡೆದುಕೊಂಡಿದೆ. ಆದ್ರೆ, ವಯಕ್ತಿಕವಾಗಿ ಆರ್‌ಸಿಬಿ  ನಾಯಕ ತಂಡದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂಬುವುದು ಅವರು ಮಾಡಿರುವ ಟ್ವೀಟ್ ನಿಂದ ಬಹಿರಂಗಗೊಂಡಿದೆ.  ಇದನ್ನು ಓದಿ: ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

  • ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

    ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

    ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮಂದೀಪ್ ಸಿಂಗ್ ತಮ್ಮದೇ ಬ್ಯಾಟಿಂಗ್ ಸ್ಟೈಲ್‍ನನ್ನು ತಮಾಷೆಯನ್ನಾಗಿ ಮಾಡಿ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಮಂದೀಪ್ 17 ಎಸೆತಗಳಲ್ಲಿ 32 ರನ್‍ಗಳು ಗಳಿಸಿದ್ದರು. ಈ ಪಂದ್ಯದಲ್ಲಿ ಮಂದೀಪ್ ಬೇರೆ ಬೇರೆ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರು ಮಂದೀಪ್ ರಿವರ್ಸ್ ಸ್ವೀಪ್‍ನಲ್ಲಿ ಆಟವಾಡುತ್ತಿದ್ದಾಗ ಅವರ ಫೋಟೋವನ್ನು ತೆಗೆದಿದ್ದಾರೆ.

    ಬಾಲಿವುಡ್‍ನಲ್ಲಿ ಬಿಡುಗಡೆಯಾಗಿದ್ದ, ಲಗಾನ್ ಚಿತ್ರದಲ್ಲಿ ನಟ ರಾಜೇಶ್ ವಿವೇಕ್ ಆಟವಾಡಿದ ಶೈಲಿಯಲ್ಲಿ ಮಂದೀಪ್ ಬ್ಯಾಟಿಂಗ್ ಶೈಲಿ ಹೋಲುತ್ತಿತ್ತು. ಮಂದೀಪ್ ತಮ್ಮ ಫೋಟೋ ಹಾಗೂ ಲಗಾನ್ ಚಿತ್ರದ ರಾಜೇಶ್ ವಿವೇಕ್ ಅವರ ಫೋಟೋವನ್ನು ಒಂದೇ ಫೋಟೋವನ್ನಾಗಿ ಮಾಡಿ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ಮಂದೀಪ್ ಟ್ವಿಟ್ಟರಿನಲ್ಲಿ ಹಾಕಿದ ಫೋಟೋಗೆ ಸಾಕಷ್ಟು ಜನ ಕಮೆಂಟ್ಸ್ ಮಾಡಿದ್ದಾರೆ. ಈ ಫೋಟೋಗೆ 2500ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 113 ಮಂದಿ ರೀ-ಟ್ವೀಟ್ ಮಾಡಿದ್ದಾರೆ. ಇನ್ನೂ ಮಂದೀಪ್ ಇಂದು ಕೆಕೆಆರ್ ವಿರುದ್ಧ ನಡೆಯುವ ಪಂದ್ಯದಲ್ಲಿ ಇದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಸದ್ಯ ಬೆಂಗಳೂರು ತಂಡ ಇವರೆಗೂ 6 ಪಂದ್ಯವನ್ನಾಡಿ 2 ಪಂದ್ಯದಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ.