Tag: Mandana Karimi

  • ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ನಟಿ ಮಂದಾನಾ ಕರೀಮಿ ಮಾತನಾಡುತ್ತಾ, ತಾವು ಪತಿಯಿಂದ ದೂರವಾದ ನಂತರ ಸಾಂತ್ವಾನ ಹೇಳುವಂತೆ ನಟಿಸಿ ಖ್ಯಾತ ನಿರ್ದೇಶಕರೊಬ್ಬರು ತಮ್ಮನ್ನು ಬಳಸಿಕೊಂಡು, ಬೀಸಾಕಿದರು ಎಂದು ಹೇಳಿಕೆ ನೀಡಿದ್ದರು. ಮಂದಾನಾ ಮತ್ತು ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ತುಂಬಾ ಕ್ಲೋಸ್ ಆಗಿದ್ದು, ನಂತರ ದೂರ ದೂರವಾಗಿದ್ದರಿಂದ ಆ ನಿರ್ದೇಶಕ ಅನುರಾಗ್ ಕಶ್ಯಪ್ ಎಂದೇ ಬಿಂಬಿಸಲಾಯಿತು. ಸೋಷಿಯಲ್ ಮೀಡಿಯಾ ಸೇರಿದಂತೆ ಹಲವರು ಅನುರಾಗ್ ಕಶ್ಯಪ್ ಅವರತ್ತು ಬೊಟ್ಟು ಮಾಡಿ ತೋರಿಸಿದ್ದರು. ಇದೀಗ ಮಂದಾನಾ ಮಾತಿಗೆ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್

    ಲಾಕ್ ಅಪ್ ಶೋ ನಿಂದ ಎಲಿಮಿನೇಟ್ ಆಗಿ ಆಚೆ ಬಂದಿರುವ ಮಂದಾನಾ ಕರೀಮಿ ಈ ಕುರಿತಾಗಿ ಮಾತನಾಡಿದ್ದಾರೆ. ತಮಗೆ ಅನ್ಯಾಯ ಆಗಿದ್ದು ಹೇಗೆ? ಆ ನಿರ್ದೇಶಕ ಇವರೊಂದಿಗೆ ಹೇಗೆ ಸಂಬಂಧ ಹೊಂದಿದ. ಯಾಕೆ ದೂರವಾದ ಎನ್ನುವ ಎಲ್ಲ ಮಾಹಿತಿಯನ್ನೂ ಆಚೆ ಹಾಕಿದ್ದಾರೆ. ಈ ಮೂಲಕ ಮತ್ತೊಂದು ವಿವಾದಕ್ಕೂ ಅವರು ಕಾರಣವಾಗಿದ್ದಾರೆ.  ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    ಮಂದಾನಾ ಕರೀಮಿ ಅವರು ಗೌರವ್ ಗುಪ್ತಾ ಎನ್ನುವವರ ಜತೆ ಮದುವೆ ಆಗಿದ್ದರು. ಈ ಜೋಡಿ ತುಂಬಾ ದಿನಗಳ ಕಾಲ ಸತಿಪತಿಗಳಾಗಿ ಉಳಿಯಲಿಲ್ಲ. ಮಂದಾನಾ ನಿರ್ವಹಿಸುತ್ತಿದ್ದ ಪಾತ್ರಗಳು ಪತಿ ಇಷ್ಟವಾಗುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಮತ್ತು ವೈಯಕ್ತಿಕ ಹಲವು ಕಾರಣಗಳಿಂದಾಗಿ ಇಬ್ಬರೂ ದೂರವಾದರು. ಪತಿಯು ದೂರವಾದ ನಂತರ ಮಂದಾನಾ ಮಾನಸಿಕ ಖಿನ್ನತೆಗೂ ಒಳಗಾದರು. ಈ ಸಂದರ್ಭದಲ್ಲಿ ಅವರಿಗೆ ನೆರವಿಗೆ ಬಂದಿದ್ದು ಬಾಲಿವುಡ್ ನ ಖ್ಯಾತ ನಿರ್ದೇಶಕ. ಇದನ್ನೂ ಓದಿ:`ಅದ್ದೂರಿ ಲವರ್’ಗಾಗಿ `ಕಿಸ್’ ಹೀರೋ ವಿರಾಟ್ ಭರ್ಜರಿ ವರ್ಕೌಟ್

    ಲಾಕ್ ಅಪ್ ಶೋನಿಂದ ಆಚೆ ಬಂದ ನಂತರ ಮಂದಾನಾ ಅವರಿಗೆ ಆ ನಿರ್ದೇಶಕರು ಯಾರು? ಅನುರಾಗ್ ಕಶ್ಯಪ್ ಹೆಸರು ತಳುಕು ಹಾಕಿಕೊಂಡಿದೆ. ಅದು ನಿಜನಾ? ಎಂದು ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿದ್ದಾರೆ. ತಾವು ಯಾವತ್ತೂ ಅನುರಾಗ್ ಅವರ ಹೆಸರನ್ನು ಹೇಳಿಲ್ಲ. ಶೋನಲ್ಲೂ ಆ ನಿರ್ದೇಶಕರು ಯಾರು ಎಂದೂ ಹೇಳಿರಲಿಲ್ಲ. ಸುಖಾಸುಮ್ಮನೆ ಅವರು ಹೆಸರನ್ನು ಈ ವಿವಾದಕ್ಕೆ ತಳುಕು ಹಾಕುವುದು ಬೇಡ ಎಂದು ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್

    ತಮಗೆ ನಿರ್ದೇಶಕನೊಬ್ಬನಿಂದ ಅನ್ಯಾಯವಾಗಿದ್ದು ನಿಜ ಎಂದು ಒಪ್ಪಿಕೊಂಡಿರುವ ಅವರು, ಆ ನಿರ್ದೇಶಕ ಯಾರು ಎನ್ನುವುದನ್ನು ಹೇಳಲಾರೆ ಅಂದಿದ್ದಾರೆ. ಲಾಕ್ ಅಪ್ ಶೋನ ಫಾರ್ಮೆಟ್ ಹಾಗಿದ್ದರಿಂದ ಅನಿವಾರ್ಯವಾಗಿಯೇ ಈ ವಿಷಯವನ್ನು ಪ್ರಸ್ತಾಪ ಮಾಡಲಾಯಿತು. ನಾನು ಯಾವತ್ತೂ ಅನುರಾಗ್ ಕಶ್ಯಪ್ ಅವರ ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಉತ್ತರಿಸಿದ್ದಾರೆ ಮಂದಾನಾ.

  • ಜನಪ್ರಿಯ ಡೈರೆಕ್ಟರ್ ಜೊತೆಗೆ ಮಂದನಾ ಕರಿಮಿ ಅಫೇರ್ – ಪ್ರೆಗ್ನೆಂಟ್ ಆಗಿ ಮೋಸ ಹೋದದ್ದು ಕೇಳಿ ಕಂಗನಾ ಕಣ್ಣೀರು

    ಜನಪ್ರಿಯ ಡೈರೆಕ್ಟರ್ ಜೊತೆಗೆ ಮಂದನಾ ಕರಿಮಿ ಅಫೇರ್ – ಪ್ರೆಗ್ನೆಂಟ್ ಆಗಿ ಮೋಸ ಹೋದದ್ದು ಕೇಳಿ ಕಂಗನಾ ಕಣ್ಣೀರು

    ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ನಿರೂಪಕಿ ಆಗಿ ನಡೆಸಿಕೊಡುತ್ತಿರುವ ಲಾಕಪ್ ರಿಯಾಲಿಟಿ ಶೋ ಬಿಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಗ್‍ಬಾಸ್ ಮಾದರಿಯೇ ಇರುವ ಈ ರಿಯಾಲಿಟಿ ಶೋನಲ್ಲಿ ಅನೇಕ ವಿವಾದಾತ್ಮಕ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ರಿಯಾಲಿಟಿ ಶೋ ಮೂಲಕ ಸೆಲೆಬ್ರಿಟಿಗಳು ಇಷ್ಟು ದಿನ ಮುಚ್ಚಿಟ್ಟಿದ್ದ ಕೆಲವು ಸತ್ಯಗಳನ್ನು ಒಂದೊಂದೇ ಕ್ಯಾಮೆರಾ ಮುಂದೆ ಬಾಯ್ಬಿಡುತ್ತಿದ್ದಾರೆ.

    ಸದ್ಯ ಬಿಗ್‍ಬಾಸ್ ಸೀಸನ್-9ರಲ್ಲಿ ಭಾಗವಹಿಸಿ 2ನೇ ರನ್ನರ್ ಅಪ್ ಆಗಿದ್ದ ಮಾಡೆಲ್ ಕಮ್ ನಟಿ ಮಂದನಾ ಕರಿಮಿ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಕಂಗನಾ ಅವರ ಮುಂದೆ ರಿವೀಲ್ ಮಾಡಿದ್ದಾರೆ. ಇವರ ಕಥೆ ಕೇಳಿ ಸ್ವತಃ ಕಂಗನಾ ಅವರು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಇತರ ಸ್ಪರ್ಧಿಗಳು ಕೂಡ ಭಾವುಕರಾಗಿದ್ದಾರೆ.

    ಮಂದನಾ ಕರಿಮಿ ಅವರು ಉದ್ಯಮಿ ಗೌರವ್ ಗುಪ್ತಾ ಅವರನ್ನು ಮದುವೆಯಾಗಿ ಕೆಲವೇ ತಿಂಗಳು ಕಳೆಯುವುದರಲ್ಲಿ ಅವರ ಸಂಸಾರದಲ್ಲಿ ಬಿರುಕು ಮೂಡಿದ್ದು, ಈ ವೇಳೆ ಖ್ಯಾತ ನಿರ್ದೇಶಕನೊಂದಿಗೆ ಗುಟ್ಟಾಗಿ ಸಂಬಂಧಹೊಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ನಾನು ನನ್ನ ಖಾಸಗಿ ಜೀವನದಲ್ಲಿ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದ ವೇಳೆ ನಾನು ಗುಟ್ಟಾಗಿ ಒಂದು ಸಂಬಂಧ ಇಟ್ಟುಕೊಂಡಿದ್ದೆ. ನಾನು ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಓರ್ವ ಖ್ಯಾತ ನಿರ್ದೇಶಕನಾಗಿದ್ದ. ಆತ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ. ಅನೇಕ ಜನರಿಗೆ ಅವನು ಸ್ಫೂರ್ತಿ. ನಾವಿಬ್ಬರೂ ಪ್ರೆಗ್ನಿನ್ಸಿ ಪ್ಲಾನ್ ಮಾಡಿದ್ದೇವು. ಆದರೆ ಪ್ರೆಗ್ನೆಂಟ್ ಆದಾಗ.. ಎಂದು ಹೇಳುತ್ತಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಇದನ್ನು ನೋಡಿ ಕಂಗನಾ ಕೂಡ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಉಳಿದ ಸ್ಪರ್ಧಿಗಳು ಅಳುತ್ತಿದ್ದ ಮಂದನಾ ಕರಿಮಿ ಅವರಿಗೆ ಸಮಾಧಾನ ಹೇಳುತ್ತಾ ಬಹಳ ಎಮೋಷನಲ್ ಆಗಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಸದ್ಯ ಲಾಕಪ್ ರಿಯಾಲಿಟಿ ಶೋ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಇಷ್ಟು ಮಾತ್ರ ರಿವೀಲ್ ಆಗಿದ್ದು, ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಎಪಿಸೋಡ್ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.

  • ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ಬಿ‘ಟೌನ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಕಂಗನಾ ರಣಾವತ್ ನಡೆಸಿಕೊಡುವ ‘ಲಾಕ್ಆಪ್’ ಶೋ ಹೇಳಿಕೆಗಳು ಹೆಚ್ಚು ವಿವಾದಕ್ಕೆ ಗುರಿಯಾಗುತ್ತಿವೆ. ಇಲ್ಲಿರುವ ಸಿಲೆಬ್ರಿಟಿ ಸ್ಪರ್ಧಿಗಳ ಹೇಳಿಕೆಗಳು ಟ್ರೋಲ್‌ಗೆ ಗುರಿಯಾಗುತ್ತಿದ್ದು, ಎಲ್ಲರೂ ಬೋಲ್ಡ್ ಆಗಿ ಉತ್ತರ ಕೊಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಈ ಶೋನಲ್ಲಿ ಸದಾ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ ಮಂದನಾ ಕರೀಮಿ ಸರದಿ. ತನ್ನ ಮಾಜಿ ಪತಿ ಬಗ್ಗೆ ಬೋಲ್ಡ್ ಆಗಿ ಹೇಳಿಕೆ ನೀಡಿ ಮಂದನಾ ಇದೀಗ ಸುದ್ದಿಯಾಗಿದ್ದಾರೆ.

    Mandana Karimi Accuses Ex-Husband Gaurav Gupta Of Infidelity; Says, "In These 4 Years Of Separation, He Slept With Whoever I Knew" - Web Series Latest Update Online | Best Web Series India

    ಈ ಶೋನಲ್ಲಿ ಸ್ಪರ್ಧಿಗಳು ಸಖತ್ ಬೋಲ್ಡ್ ಆಗಿದ್ದು, ತಮ್ಮ ವೈಯಕ್ತಿಕ ವಿಷಯಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ನೇರವಾಗಿ ಮಾತನಾಡುತ್ತಾರೆ. ಈ ವಿವಾದದಲ್ಲಿ ಮೊದಲು ಪೂನಂ, ತನ್ನ ಮಾಜಿ ಪತಿ ತನಗೆ ನೀಡುತ್ತಿದ್ದ ಹಿಂಸೆ ಕುರಿತು ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ ಈಗ ನಟಿ ಮಂದನಾ ಕರೀಮಿ ತನ್ನ ಮಾಜಿ ಪತಿ ಗೌರವ್ ಗುಪ್ತಾ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ನಟಿ ಗೌರವ್‌ನಿಂದ ವಿಚ್ಛೇದನ ಪಡೆದು ದೂರವಾಗಿದ್ದರೂ, ಗೌರವ್ ಕುರಿತಾಗಿ ಮಾತನಾಡುವುದನ್ನು ಬಿಟ್ಟಿಲ್ಲ. ತಾವೇಕೆ ಅವರಿಂದ ಡಿವೋರ್ಸ್ ಪಡೆದೆ ಎಂದು ಹೇಳುತ್ತಾ, ‘ನನ್ನ ಪತಿ ಅನೇಕ ಹುಡುಗಿಯರ ಜೊತೆ ಮಲಗಿದ್ದರು. ಈ ಕಾರಣಕ್ಕಾಗಿ ದೂರವಾದೆ’ ಎಂದು ನೇರವಾಗಿ ಹೇಳಿದ್ದಾರೆ.

    Lock Upp: Mandana Karimi Says Ex-Hubby Gaurav Gupta Slept With Whoever She Knew Before Their Divorce

    ಲಾಕ್ಆಪ್ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಮಂದನಾ, ನಾನು ಮತ್ತು ನನ್ನ ಪತಿ ಬೇರೆಯಾಗಿ ನಾಲ್ಕು ವರ್ಷವಾಗಿವೆ. ಇದಕ್ಕೆ ಮುಖ್ಯ ಕಾರಣ ಅವರು ಅನೇಕ ಹುಡುಗಿಯರ ಜೊತೆ ಮಲಗಿಕೊಂಡಿದ್ದರು. ಗೌರವ್ ಯಾವ-ಯಾವ ಮಹಿಳೆ ಜೊತೆ ಮಲಗಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಕೆಜಿಎಫ್-2 ಬುಕಿಂಗ್ ಯಾವಾಗ ಪ್ರಾರಂಭ?

    Lock Upp: Mandana Karimi says her ex-husband Gaurav Gupta slept with whoever she knew

    ಪ್ರಾರಂಭವಾಗಿದ್ದು ಹೇಗೆ?
    ಅಜ್ಮಾ ಫಲ್ಲಾದ್, ನಿಮಗೆ ಬಾಯ್‌ಫ್ರೆಂಡ್‌ ಇದ್ದಾರಾ ಎಂದು ಮಂದನಾ ಅವರಿಗೆ ಕೇಳಿದ್ದಾರೆ. ಇದಕ್ಕೆ ನಾಚಿದ ಅವರು, ನೋ ಕಾಮೆಂಟ್ಸ್ ಎಂದು ಉತ್ತರಿಸಿದ್ದಾರೆ. ಈ ವೇಳೆ ಅವರು, ನಾನು, ಗೌರವ್ 2 ವರ್ಷಗಳ ಕಾಲ ಡೇಟಿಂಗ್ ಮಾಡಿ ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದೆವು. ಮದುವೆಯಾಗಿ 8 ತಿಂಗಳು ಜೊತೆಗೆ ಇದ್ದೆವು. ಆದರೆ ಈ ವೇಳೆ ಅವರ ನಿಜವಾದ ಮುಖ ನನಗೆ ತಿಳಿಯಿತು ನಂತರ ನಮ್ಮ ಸಂಬಂಧ ಹದಗೆಟ್ಟಿತು. ಪರಿಣಾಮ 2021ರಂದು ನಾವು ವಿಚ್ಛೇದನವನ್ನು ಪಡೆದುಕೊಂಡೆವು ಎಂದು ತಮ್ಮ ವೈಯಕ್ತಿಕ ವಿಷಯವನ್ನು ತಿಳಿಸಿದರು.