Tag: Manchester

  • ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

    ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

    ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಯುವ ನಾಯಕ ಶುಭಮನ್‌ ಗಿಲ್ (Shubman Gill) ‌ಮತ್ತೊಂದು ಶತಕ ಸಿಡಿಸುವ ಮೂಲಕ ಡಾನ್‌ ಬ್ರಾಡ್ಮನ್ (Don Bradman), ಸುನೀಲ್‌ ಗವಾಸ್ಕರ್‌, ರನ್‌ ಮಿಷನ್‌ ಕೊಹ್ಲಿ (Virat Kohli) ಅವರಂತಹ ದಿಗ್ಗಜರ ದಾಖಲೆಗಳನ್ನ ಸರಿಗಟ್ಟಿದ್ದಾರೆ.

    ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟದ ಹೊತ್ತಿಗೆ ಒಟ್ಟು 238 ಎಸೆತಗಳನ್ನು ಎದುರಿಸಿದ ಗಿಲ್‌ 12 ಬೌಂಡರಿ ಸಹಿತ 103 ರನ್‌ ಚಚ್ಚಿದರು. ಇದರಿಂದ ಹಲವು ದಾಖಲೆಗಳನ್ನ ನುಚ್ಚುನೂರು ಮಾಡಿ, ದಿಗ್ಗಜರ ಎಲೈಟ್‌ ಲಿಸ್ಟ್‌ ಸೇರಿಕೊಂಡಿದ್ದಾರೆ. ಇದನ್ನೂ ಓದಿ: Asia Cup T20 | ಏಷ್ಯಾ ಕಪ್‌ ಟೂರ್ನಿಗೆ ದಿನಾಂಕ ಪ್ರಕಟ; ಭಾರತ – ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್!

    2ನೇ ಭಾರತೀಯನೆಂಬ ಹೆಗ್ಗಳಿಕೆ
    ಟೆಸ್ಟ್‌ ಕ್ರಿಕೆಟ್‌ನಲ್ಲಿ 9ನೇ ಶತಕ ಸಿಡಿಸಿರುವ ಶುಭಮನ್‌ ಗಿಲ್‌ ವೃತ್ತಿಜೀವನದ 18ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದಾರೆ. ಈ ಮೂಲಕ 35 ವರ್ಷಗಳ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

    ಡಾನ್‌, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌
    ಟೀಂ ಇಂಡಿಯಾದ 37ನೇ ಟೆಸ್ಟ್ ಕ್ಯಾಪ್ಟನ್‌ ಆಗಿರುವ ಶುಭಮನ್‌ ಗಿಲ್‌ ಚೊಚ್ಚಲ ಸರಣಿಯಲ್ಲೇ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇಂದು ಸಿಡಿಸಿದ ಶತಕದೊಂದಿಗೆ ಈ ಸರಣಿಯಲ್ಲಿ ಒಟ್ಟು 4 ಶತಕ, ಒಂದು ದ್ವಿಶತಕವನ್ನ ದಾಖಲಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿದ ಆರೋಪ – RCB ಸ್ಟಾರ್‌ ಯಶ್‌ ದಯಾಳ್‌ ವಿರುದ್ಧ ಪೋಕ್ಸೊ ಕೇಸ್‌

    ಇದರೊಂದಿಗೆ ಟೆಸ್ಟ್‌ ಸರಣಿಯೊಂದರಲ್ಲಿ ನಾಯಕನಾಗಿ ಅತಿಹೆಚ್ಚು ಶತಕ ಸಿಡಿಸಿದ ಅಗ್ರ ಬ್ಯಾಟರ್‌ಗಳ ಎಲೈಟ್‌ ಲಿಸ್ಟ್‌ ಸೇರಿಕೊಂಡಿದ್ದಾರೆ. 1947-48ರಲ್ಲಿ ಡಾನ್‌ ಬ್ರಾಡ್ಮನ್ ಮೊದಲ ಬಾರಿಗೆ 4 ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಆ ಬಳಿಕ 1978-79ರಲ್ಲಿ ಟೀಂ ಇಂಡಿಯಾದ ಸುನೀಲ್‌ ಗವಾಸ್ಕರ್‌ ಈ ಸಾಧನೆ ಮಾಡಿದ್ದರು. ಇದಾದ 46 ವರ್ಷಗಳ ಬಳಿಕ ಶುಭಮನ್‌ ಗಿಲ್‌ ಸರಣಿಯೊಂದರಲ್ಲಿ 4‌ ಶತಕದ ಸಾಧನೆ ಮಾಡಿದ್ದಾರೆ.

    ಶತಕ ಸಿಡಿಸಿದ 3ನೇ ಭಾರತೀಯ
    ಅಲ್ಲದೇ ಟೆಸ್ಟ್‌ ಕ್ರಿಕೆಟ್‌ನ ಸರಣಿಯೊಂದರಲ್ಲಿ 4 ಶತಕ ಸಿಡಿಸಿದ ಟೀಂ ಇಂಡಿಯಾದ 3ನೇ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

  • Ind vs Eng 4th Test | ಇಂದಿನಿಂದ ಪಂದ್ಯ ಶುರು – ಸರಣಿ ಗೆಲ್ಲುವ ತವಕದಲ್ಲಿ ಇಂಗ್ಲೆಂಡ್‌, ತಿರುಗೇಟು ನೀಡಲು ಭಾರತ ಸಜ್ಜು

    Ind vs Eng 4th Test | ಇಂದಿನಿಂದ ಪಂದ್ಯ ಶುರು – ಸರಣಿ ಗೆಲ್ಲುವ ತವಕದಲ್ಲಿ ಇಂಗ್ಲೆಂಡ್‌, ತಿರುಗೇಟು ನೀಡಲು ಭಾರತ ಸಜ್ಜು

    ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಭಾರತ (Eng vs Ind) ನಡುವಿನ 4ನೇ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಮ್ಯಾಂಚೆಸ್ಟರ್‌ (Manchester) ಕ್ರೀಡಾಂಗಣ ಸಜ್ಜಾಗಿದ್ದು, ಉಭಯ ತಂಡಗಳು ಹಲವು ಬದಲಾವಣೆ ಮಾಡಿಕೊಂಡಿವೆ.

    ಹೌದು. ಇದೀಗ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ (Anderson–Tendulkar Trophy) ಆತಿಥೇಯ ಇಂಗ್ಲೆಂಡ್ ತಂಡವು 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ ಸರಣಿ ಗೆಲ್ಲಲು ಇನ್ನೊಂದು ಗೆಲುವಿನ ಅಗತ್ಯವಿದೆ. ಆದ್ರೆ ಭಾರತ ಸರಣಿ ಗೆಲ್ಲಲು ಇನ್ನುಳಿದ ಎರಡೂ ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. 4ನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ. ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    ಬೌಲಿಂಗ್‌ ಪಡೆಗೆ ಬುಮ್ರಾ ಸಾರಥ್ಯ
    ಮ್ಯಾಂಚೆಸ್ಟರ್‌ ಪಂದ್ಯಕ್ಕೆ ಟೀಂ ಇಂಡಿಯಾದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. 3ನೇ ಟೆಸ್ಟ್ (Test Cricket) ಪಂದ್ಯದ ಬಳಿಕ ನಡೆದ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್‌ ಅವರ ಕೈಗೆ ಗಾಯವಾಗಿದ್ದು, ಹೀಗಾಗಿ ಮ್ಯಾಂಚೆಸ್ಟರ್​ ಟೆಸ್ಟ್ ಪಂದ್ಯದಲ್ಲೂ ಅವರು ಕಾಣಿಸಿಕೊಳ್ಳುವುದಿಲ್ಲ. ಇನ್ನೂ ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದ ವೇಗಿ ಆಕಾಶ್ ದೀಪ್ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾರ್ಡ್ಸ್​ ಟೆಸ್ಟ್ ಪಂದ್ಯದ 4ನೇ ದಿನದಾಟದಂದು ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 8 ಓವರ್​ಗಳನ್ನು ಮಾತ್ರ ಎಸೆದಿದ್ದರು ಎಂದು ಟೀಮ್ ಇಂಡಿಯಾ ನಾಯಕ ಶುಭ​ಮನ್ ಗಿಲ್ ತಿಳಿಸಿದ್ದಾರೆ. ಹೀಗಾಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಅವರು ಟೀಂ ಇಂಡಿಯಾ ಬೌಲಿಂಗ್‌ ಪಡೆಯನ್ನ ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೇ ಟೀಮ್ ಇಂಡಿಯಾದ ಯುವ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಜಿಮ್​ನಲ್ಲಿನ ತರಬೇತಿ ವೇಳೆ ಅವರ ಮೊಣಕಾಲಿಗೆ ಗಾಯವಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರು ಹೊರಬಿದ್ದಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಿತೀಶ್ ಕುಮಾರ್ ಬದಲಿಗೆ ಅನ್ಶುಲ್‌ ಕಾಂಬೋಜ್‌ ಅವರನ್ನು ಕಣಕ್ಕಿಳಿಸಲಿದೆ ಭಾರತ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಗೆ ಮತ್ತೆ ಶಾಕ್‌, ಹಿಂದೆ ಸರಿದ ಟೀಂ ಇಂಡಿಯಾ – ಇಂದಿನ ಪಂದ್ಯವೇ ರದ್ದು

    8 ವರ್ಷಗಳ ಬಳಿಕ ಸ್ಪಿನ್ನರ್‌ ಕಣಕ್ಕಿಳಿಸಲಿದೆ ಆಂಗ್ಲ ಪಡೆ
    ಇನ್ನೂ ಸರಣಿ ಗೆಲ್ಲುವ ತವಕದಲ್ಲಿರುವ ಇಂಗ್ಲೆಂಡ್‌ ತಂಡ ಪ್ಲೇಯಿಂಗ್‌ 11 ಬಳಗವನ್ನ ಪ್ರಕಟಿಸಿದ್ದು, ಒಂದೇ ಒಂದು ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ಸ್ಪಿನ್ನರ್ ಶೋಯೆಬ್ ಬಶೀರ್ ಬದಲಿಗೆ ಲಿಯಾಮ್ ಡಾಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಡಾಸನ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರೆ. ಇದನ್ನೂ ಓದಿ:BCCI ಅಕೌಂಟ್‌ನಲ್ಲಿದೆ 30,000 ಕೋಟಿ ಹಣ – IPLನಿಂದಲೇ ಅತೀ ಹೆಚ್ಚು ಗಳಿಕೆ! 

    ಬಶೀರ್‌ಗೆ ಏನಾಗಿತ್ತು?
    ಶೋಯೆಬ್ ಬಶೀರ್ ಅವರು ಲಾರ್ಡ್ಸ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಎಡಗೈ ಬೆರಳಿಗೆ ಗಾಯ ಮಾಡಿಕೊಂಡರು. ಭಾರತದ ಎಡಗೈ ಬ್ಯಾಟರ್ ರವೀಂದ್ರ ಜಡೇಜಾ ಅವರ ಬಲವಾದ ಹೊಡೆತ ತಡೆಯಲು ಹೋಗಿ ಬೆರಳು ಮುರಿತಕ್ಕೆ ಒಳಗಾಯಿತು. ಹೀಗಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬಂತು. ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಬಶೀರ್ 3ನೇ ಟೆಸ್ಟ್ ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದು ಇಂಗ್ಲೆಂಡ್‌ಗೆ 22 ರನ್‌ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

  • ಮ್ಯಾಂಚೆಸ್ಟರ್ ನಿಂದ ದುಬೈಗೆ ಹಾರಲಿರುವ ಕೊಹ್ಲಿ

    ಮ್ಯಾಂಚೆಸ್ಟರ್ ನಿಂದ ದುಬೈಗೆ ಹಾರಲಿರುವ ಕೊಹ್ಲಿ

    ಇಂಗ್ಲೆಂಡ್: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14ನೇ ಅವೃತ್ತಿಯ ಟೂರ್ನಿಗಾಗಿ ನಾಯಕ ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್‍ನಿಂದ ದುಬೈಗೆ ಹಾರಲಿದ್ದಾರೆ.

    ನಾಯಕ ವಿರಾಟ್ ಕೊಹ್ಲಿಗಾಗಿ ಆರ್‍ಸಿಬಿಯ ಫ್ರಾಂಚೈಸಿ ಪ್ರತ್ಯೆಕ ವಿಮಾನವೊಂದನ್ನು ನಿಯೋಜನೆ ಮಾಡಿದೆ. ಕೊಹ್ಲಿಯ ಜೊತೆ ಮತ್ತೊಬ್ಬ ಆಟಗಾರ ಸಿರಾಜ್ ಕೂಡ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ. ದುಬೈ ತಲುಪಿದ ಬಳಿಕ ಆಟಗಾರರು ಆರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಲಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?

    ಕಳೆದ ಏಪ್ರಿಲ್ 9 ರಂದು 14ನೇ ಅವೃತ್ತಿಯ ಐಪಿಎಲ್ ಪಂದ್ಯಗಳು ಆರಂಭಗೊಂಡಿದ್ದವು. ಕೊರೊನಾ ಕಾರಣದಿಂದಾಗಿ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳನ್ನು ಬಿಸಿಸಿಐ ಅರ್ಧಕ್ಕೆ ಮೊಟಕುಗೊಳಿಸಿತ್ತು. ಉಳಿದ ಅರ್ಧ ಪಂದ್ಯಗಳನ್ನು ಬಿಸಿಸಿಐ ಯುಎಇ ನಲ್ಲಿ ನಡೆಸುವುದಾಗಿ ತಿಳಿಸಿತ್ತು. ಅದರಂತೆ ಇದೀಗ ಸೆಪ್ಟೆಂಬರ್ 19ರಿಂದ ಮತ್ತೆ ಟೂರ್ನಿಗೆ ಚಾಲನೆ ಸಿಗಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    ಮೊದಲಾರ್ಧ ನಡೆದ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿ ಅಭಿಮಾನಿಗಳಲ್ಲಿ ಈ ಸಲ ಕಪ್ ನಮ್ಮದೆ ಎಂಬ ಭರವಸೆಯನ್ನು ಮೂಡಿಸಿತ್ತು. ಈಗ ಮತ್ತೆ ಐಪಿಎಲ್ ಪಂದ್ಯಾವಳಿಗಳು ಶುರುವಾಗಲಿದ್ದು, ನಾಯಕ ವಿರಾಟ್ ಕೊಹ್ಲಿ ಸಾರಥ್ಯದ ಬೆಂಗಳೂರು ತಂಡ ಅಭಿಮಾನಿಗಳಲ್ಲಿ ಕಾತರತೆಯನ್ನು ಹೆಚ್ಚಿಸಿದೆ.

  • ಐಸಿಸಿ ನಿಯಮ ಉಲ್ಲಂಘನೆ – ಚೆಂಡಿಗೆ ಎಂಜಲು ಸವರಿದ ಇಂಗ್ಲೆಂಡ್ ಕ್ರಿಕೆಟಿಗ

    ಐಸಿಸಿ ನಿಯಮ ಉಲ್ಲಂಘನೆ – ಚೆಂಡಿಗೆ ಎಂಜಲು ಸವರಿದ ಇಂಗ್ಲೆಂಡ್ ಕ್ರಿಕೆಟಿಗ

    ಮ್ಯಾಂಚೆಸ್ಟರ್: ಚೀನಿ ವೈರಸ್‌ ಕಷ್ಟದ ನಡುವೆಯೂ ಇಂಗ್ಲೆಂಡ್‍ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದೆ. ಆದರೆ ಇಂಗ್ಲೆಂಡ್ ಕ್ರಿಕೆಟಿಗ ಡೊಮಿನಿಕ್ ಸಿಬ್ಲಿ ಪಂದ್ಯದ ನಡುವೆ ಚೆಂಡಿಗೆ ಸಲೈವಾ (ಎಂಜಲು) ಉಜ್ಜಿದ್ದಾರೆ. ಈ ಮೂಲಕ ಐಸಿಸಿ ಜಾರಿ ಮಾಡಿದ್ದ ಹೊಸ ನಿಯಮವನ್ನು ಉಲ್ಲಂಘಿಸಿದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

    ಕ್ರಿಕೆಟ್‍ನಲ್ಲಿ ಬೌಲರ್ ಕೈಗೆ ಚೆಂಡು ನೀಡುವ ಮುನ್ನ ಆಟಗಾರ ಚೆಂಡಿಗೆ ಎಂಜುಲು ಉಜ್ಜಿ ಚೆಂಡಿನ ಶೈನ್ ಕಾಪಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಇತ್ತೀಚೆಗೆ ಐಸಿಸಿ ಇದಕ್ಕೆ ನಿರ್ಬಂಧ ಹೇರಿದ್ದು, ಆಟಗಾರ 2 ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ತಂಡಕ್ಕೆ 5 ರನ್ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿತ್ತು.

    ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವೆ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಫೀಲ್ಡರ್ ಡೊಮಿನಿಕ್ ಸಿಬ್ಲಿ ಹಲವು ದಿನಗಳ ಅಭ್ಯಾಸದಂತೆ ಚೆಂಡು ಕೈಗೆ ಬರುತ್ತಿದಂತೆ ಎಂಜಲು ಉಜ್ಜಿ ನಿಯಮ ಉಲ್ಲಂಘಿಸಿದ್ದಾರೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನ 42ನೇ ಓವರಿನಲ್ಲಿ ಘಟನೆ ನಡೆದಿದ್ದು, ಆಫ್ ಸ್ಪಿನ್ನರ್ ಡೊಮ್ ಬೆಸ್ ಬೌಲಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಡೊಮಿನಿಕ್ ಸಿಬ್ಲಿ ಚೆಂಡಿಗೆ ಎಂಜಲು ಸವರಿಸಿದ್ದರು. ಕೂಡಲೇ ತಮ್ಮ ತಪ್ಪನ್ನು ಅರಿತ ಸಿಬ್ಲೆ ಫೀಲ್ಡ್ ಅಂಪೈರ್ ಗೆ ಮಾಹಿತಿ ನೀಡಿದ್ದರು. ತಕ್ಷಣ ಅಂಪೈರ್ ಚೆಂಡನ್ನು ಸ್ಯಾನಿಟೈಸ್ ಮಾಡಿ ಪಂದ್ಯವನ್ನು ಪುನರ್ ಆರಂಭಿಸಿದ್ದರು.

    ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಪಂದ್ಯಗಳ ಟೂರ್ನಿಯನ್ನು ಸಂಪೂರ್ಣವಾಗಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಿರ್ವಹಿಸಲಾಗುತ್ತಿದೆ. ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತ ಇಂಗ್ಲೆಂಡ್ ಬ್ಯಾಟಿಂಗ್ ಆರಂಭ ಮಾಡುವ ಅವಕಾಶ ಪಡೆದು 9 ವಿಕೆಟ್‌ ಕಳೆದುಕೊಂಡು 469 ರನ್‌ ಗಳಿಸಿದ್ದಾಗ ಡಿಕ್ಲೇರ್‌ ಮಾಡಿಕೊಂಡಿತ್ತು. ಬಳಿಕ ಮೊದಲ ಇನ್ನಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಭಾನುವಾರ 287 ರನ್‍ಗಳಿಗೆ ಆಲೌಟ್ ಆಗಿತ್ತು. 182 ರನ್ ಮುನ್ನಡೆ ಪಡೆದ ಇಂಗ್ಲೆಂಡ್ ಭಾನುವಾರ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ 219 ರನ್‍ಗಳಿಗೆ ಮುನ್ನಡೆಯನ್ನು ಹೆಚ್ಚಿಸಿದೆ. ಉಳಿದಂತೆ ಸೌತಾಪ್ಟಂನ್‍ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ವೆಸ್ಟ್ ಇಂಡೀಸ್ ತಂಡ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.

  • ಭಾರತ, ನ್ಯೂಜಿಲೆಂಡ್ ನಡುವೆ ಸೆಮಿಫೈನಲ್- ಪಂದ್ಯಕ್ಕೆ ಎದುರಾಗಿದೆ ಮಳೆ ಭೀತಿ

    ಭಾರತ, ನ್ಯೂಜಿಲೆಂಡ್ ನಡುವೆ ಸೆಮಿಫೈನಲ್- ಪಂದ್ಯಕ್ಕೆ ಎದುರಾಗಿದೆ ಮಳೆ ಭೀತಿ

    ಮ್ಯಾಂಚೆಸ್ಟರ್: ಇಂದಿನಿಂದ ವಿಶ್ವಕಪ್‍ನ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇಂದು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಪಂದ್ಯ ಆಡಲಿದೆ.

    ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ನೋಡಲು ಎರಡೂ ತಂಡದ ಅಭಿಮಾನಿಗಳು ಸೇರಿದಂತೆ ಇಡೀ ವಿಶ್ವವೇ ಕಾದು ಕುಳಿತಿದೆ. ಇತ್ತ ಎರಡೂ ತಂಡಗಳು ಬಲಿಷ್ಠವಾಗಿದ್ದು, ರನ್‍ಗಳ ಸುರಿಮಳೆ ಸುರಿಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇಂದಿನ ಪಂದ್ಯಕ್ಕೆ ಮಳೆರಾಯನ ಭೀತಿ ಎದುರಾಗಿದೆ.

    ಶನಿವಾರ ನಡೆದ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು. ಇತ್ತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 10 ರನ್‍ಗಳಿಂದ ಗೆದ್ದುಕೊಂಡಿತ್ತು. ಹೀಗಾಗಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿ ಇರುವ ಭಾರತ ಇಂದು ನಾಲ್ಕನೇಯ ಸ್ಥಾನದಲ್ಲಿ ಇರುವ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ವರ್ಸಸ್ ಕಿವೀಸ್ ಪಂದ್ಯ ಮಳೆಯಿಂದ ರದ್ದಾದ್ರೆ ಏನಾಗುತ್ತೆ?

    ಲಿಂಗ್ ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ಒಂದು ಎಸೆತ ಕಾಣದೇ ರದ್ದಾಗಿತ್ತು. ಹೀಗಾಗಿ 2 ತಂಡಗಳಿಗೆ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಗಿತ್ತು.

    ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಲೀಗ್ ಹಂತದ ಎಲ್ಲ ಪಂದ್ಯಗಳು ಶನಿವಾರಕ್ಕೆ ಮುಕ್ತಾಯವಾಗಿದ್ದು, ಭಾರತ 9 ಪಂದ್ಯಗಳಿಂದ 15 ಅಂಕ ಸಂಪಾದಿಸಿದರೆ, ಆಸ್ಟ್ರೇಲಿಯಾ 14 ಅಂಕ, ಇಂಗ್ಲೆಂಡ್ 12 ಅಂಕ, ನ್ಯೂಜಿಲೆಂಡ್ 11 ಅಂಕ ಗಳಿಸಿದೆ.

  • ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ – ಜಯಗಳಿಸುತ್ತಾ ಭಾರತ?

    ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ – ಜಯಗಳಿಸುತ್ತಾ ಭಾರತ?

    ಮ್ಯಾಂಚೆಸ್ಟರ್: ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ವೇಸ್ಟ್ ಇಂಡೀಸ್ ವಿರುದ್ಧ ಆಡುತ್ತಿರುವ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

    ಮ್ಯಾಂಚೆಸ್ಟರ್‌ನ ಒಲ್ಡ್ ಟ್ರಾಫಾರ್ಡ್ ಮೈದಾನದಲ್ಲಿ ಮಹತ್ವದ ಪಂದ್ಯ ನಡೆಯುತ್ತಿದ್ದು, ವೆಸ್ಟ್‍ಇಂಡೀಸ್ ಭಾರೀ ಮೊತ್ತ ಸವಾಲು ನೀಡಲು ಟೀಂ ಇಂಡಿಯಾ ಮುಂದಾಗಿದೆ.

    ಕಳೆದ 4 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ವೆಸ್ಟ್ ವಿಂಡೀಸ್ ವಿರುದ್ಧವೂ ಜಯ ಗಳಿಸುವ ನೆಚ್ಚಿನ ತಂಡವೆನಿಸಿದೆ. ಆದರೆ ಕಳೆದ ಶನಿವಾರ ಅಫಘಾನಿಸ್ತಾನ ವಿರುದ್ಧದ ನಡೆದ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದು, ಭಾರತ ತಂಡಕ್ಕೆ ಎಚ್ಚರಿಕೆ ನೀಡಿದೆ.

    ತಂಡದಲ್ಲಿ ಯಾರಿದ್ದಾರೆ?:
    ಈ ಬಾರಿಯೂ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಆರಂಭಿಕ ಬ್ಯಾಟ್ಸಮನ್‍ಗಳಾಗಿ ಮೈದಾನಕ್ಕೆ ಇಳಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಆಲ್‍ರೌಂಡರ್ ಗಳಾದ ವಿಜಯ್ ಶಂಕರ್, ಕೇದಾರ್ ಜಾಧವ್, ವಿಕೆಟ್ ಕೀಪರ್ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಬೌಲರ್ ಗಳಾದ ಮೊಹಮ್ಮದ ಶಮಿ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಹಾಗೂ ಜಸ್ಪ್ರೀತ್ ಬುಮ್ರಾ ಇದ್ದಾರೆ.

    ವಿಶ್ವಕಪ್ ಕದನದಲ್ಲಿ 1992 ರ ಬಳಿಕ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಗೆಲುವನ್ನೇ ಸಾಧಿಸಿಲ್ಲ. 1996, 2011, 2015 ರಲ್ಲಿ ಸೆಣಸಾಟವಾಡಿದರೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಎರಡು ತಂಡಗಳು ಸ್ಫೋಟಕ ಆಟಗಾರರೇ ಇದ್ದು ಬೌಂಡರಿ, ಸಿಕ್ಸರ್ ಸಿಡಿಯುವ ಸಾಧ್ಯತೆಯಿದೆ. ಸ್ಫೋಟಕ ಬ್ಯಾಟ್ಸ್‍ಮನ್ ವಿಂಡೀಸ್ ದೈತ್ಯ ಕ್ರಿಸ್ ಗೇಲ್‍ಗೆ ಈ ವಿಶ್ವಕಪ್ ಕೊನೆಯದಾಗಿದೆ.

    ವೇಗಿ ಭುವನೇಶ್ವರ್ ಇನ್ನು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲೂ ಮೊಹಮದ್ ಶಮಿ ಕಣಕ್ಕಿಳಿದಿದ್ದಾರೆ. ಕಳೆದ ಪಂದ್ಯದಲ್ಲೂ ಶಮಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ವಿಂಡೀಸ್ ಬೌಲಿಂಗ್ ಬಲಿಷ್ಠವಾಗಿದ್ದು, ಟೀಂ ಇಂಡಿಯಾ ಬ್ಯಾಟ್ಸ್‍ಮನ್‍ಗಳು ರಣತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳಲ್ಲಿ 4 ರಲ್ಲಿ ಸೋಲುಂಡಿರುವ ವಿಂಡೀಸ್ ಬಹುತೇಕ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಇತ್ತ ಸೆಮಿಫೈನಲ್ ಹೊಸ್ತಿಲಲ್ಲಿರುವ ಕೊಹ್ಲಿ ಸೈನ್ಯ, ಇಂದಿನ ಪಂದ್ಯದಲ್ಲಿ ಗೆದ್ದು ತನ್ನ ಸ್ಥಾನಗಟ್ಟಿಮಾಡಿಕೊಳ್ಳಲು ತಂತ್ರ ರೂಪಿಸಿದೆ.

    ಭಾರತದ ವಿರುದ್ಧ ಪಂದ್ಯ ಗೆದ್ದು ಮುಂದಿನ ಮೂರು ಮ್ಯಾಚ್ ಫಲಿತಾಂಶ ತಮ್ಮತ್ತ ಮಾಡಿಕೊಳ್ಳುವ ಮೂಲಕ ಸೆಮಿಫೈನಲ್ ಜೀವಂತವಾಗಿರಿಸಿಕೊಳ್ಳಲು ವಿಂಡೀಸ್ ಪ್ಲಾನ್ ಮಾಡಿಕೊಂಡಿದೆ. ವಿಂಡೀಸ್ ಇಂದಿನ ಪಂದ್ಯವನ್ನ ಗೆಲ್ಲಲೇಬೇಕೆಂಬ ಒತ್ತಡದಲ್ಲಿದೆ.

  • ಇಂಡೋ-ವಿಂಡೀಸ್ ನಡುವೆ ಕದನ-ಮ್ಯಾಂಚೇಸ್ಟರ್ ನಲ್ಲಿ ಸಿದ್ಧ ರಣಾಂಗಣ

    ಇಂಡೋ-ವಿಂಡೀಸ್ ನಡುವೆ ಕದನ-ಮ್ಯಾಂಚೇಸ್ಟರ್ ನಲ್ಲಿ ಸಿದ್ಧ ರಣಾಂಗಣ

    ಮ್ಯಾಂಚೆಸ್ಟರ್: ವಿಶ್ವಕಪ್ ಮಹಾಯುದ್ಧದಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಬ್ಲೂ ಬಾಯ್ಸ್ ಗೆ ಇಂದು ವೆಸ್ಟ್ ಇಂಡೀಸ್ ಎದುರಾಗಲಿದೆ. ಮ್ಯಾಂಚೇಸ್ಟರ್ ನಲ್ಲಿ ಪಂದ್ಯ ನಡೆಯಲಿದ್ದು ಭಾರೀ ಜಿದ್ದಾಜಿದ್ದಿ ನಿರೀಕ್ಷಿಸಲಾಗಿದೆ.

    ವಿಶ್ವಕಪ್ ಕದನದಲ್ಲಿ 1992 ರ ಬಳಿಕ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಗೆಲುವನ್ನೇ ಸಾಧಿಸಿಲ್ಲ. 1996, 2011, 2015 ರಲ್ಲಿ ಸೆಣಸಾಟವಾಡಿದರೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.. ಎರಡು ತಂಡಗಳು ಸ್ಫೋಟಕ ಆಟಗಾರರೇ ಇದ್ದು ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಯಲಿದೆ. ಸ್ಫೋಟಕ ಬ್ಯಾಟ್ಸ್‍ಮನ್ ವಿಂಡೀಸ್ ದೈತ್ಯ ಕ್ರಿಸ್ ಗೇಲ್‍ಗೆ ಈ ವಿಶ್ವಕಪ್ ಕೊನೆಯದಾಗಿದ್ದು, ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.

    ಉಭಯ ತಂಡಗಳು ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ವೇಗಿ ಭುವನೇಶ್ವರ್ ಇನ್ನು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲೂ ಮೊಹಮದ್ ಶಮಿ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲೂ ಶಮಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ವಿಂಡೀಸ್ ಬೌಲಿಂಗ್ ಬಲಿಷ್ಠವಾಗಿದ್ದು, ಟೀಂ ಇಂಡಿಯಾ ಬ್ಯಾಟ್ಸ್‍ಮನ್‍ಗಳು ರಣತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳಲ್ಲಿ 4 ರಲ್ಲಿ ಸೋಲುಂಡಿರುವ ವಿಂಡೀಸ್ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಇತ್ತ ಸೆಮಿಫೈನಲ್ ಹೊಸ್ತಿಲಲ್ಲಿರುವ ಕೊಹ್ಲಿ ಸೈನ್ಯ, ಇಂದಿನ ಪಂದ್ಯದಲ್ಲಿ ಗೆದ್ದು ತನ್ನ ಸ್ಥಾನಗಟ್ಟಿಮಾಡಿಕೊಳ್ಳಲು ತಂತ್ರ ರೂಪಿಸಿದೆ.

    ಭಾರತದ ವಿರುದ್ಧ ಪಂದ್ಯ ಗೆದ್ದು ಮುಂದಿನ ಮೂರು ಮ್ಯಾಚ್ ಫಲಿತಾಂಶ ತಮ್ಮತ್ತ ಮಾಡಿಕೊಳ್ಳುವ ಮೂಲಕ ಸೆಮಿಫೈನಲ್ ಜೀವಂತವಾಗಿರಿಸಿಕೊಳ್ಳಲು ವಿಂಡೀಸ್ ಪ್ಲಾನ್ ಮಾಡಿಕೊಂಡಿದೆ. ವಿಂಡೀಸ್ ಇಂದಿನ ಪಂದ್ಯವನ್ನ ಗೆಲ್ಲಲೇಬೇಕೆಂಬ ಒತ್ತಡದಲ್ಲಿದೆ. ಇತ್ತ ಸತತ ಗೆಲುವು ದಾಖಲಿಸುತ್ತಾ ಬಂದಿರೋ ಟೀಂ ಇಂಡಿಯ ಜಯದ ಪತಾಕೆ ಹಾರಿಸಲು ಬುಧವಾರ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದೆ.

    ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಹೀಗಾಗಿ ಅಭಿಮಾನಿಗಳಿಗೆ ಪಂದ್ಯದ ರಸದೂಟ ಸವಿಯಬಹುದಾಗಿದೆ. ಇಂದಿನ ಪಂದ್ಯದಲ್ಲಿ ಬ್ಯಾಟ್‍ನದ್ದೇ ಸದ್ದು ಜೋರಾಗಲಿದೆ. ಬಿಗ್‍ಫೈಟ್‍ಗೆ ಪಂದ್ಯ ಸಾಕ್ಷಿಯಾಗಲಿದೆ.

  • ಧೋನಿ ಫೋಟೋ ಶೇರ್ ಮಾಡಿ ರೋಮಾಂಚನಕಾರಿ ಅನುಭವ ಹಂಚಿಕೊಂಡ ವಿರಾಟ್ ಕೊಹ್ಲಿ

    ಧೋನಿ ಫೋಟೋ ಶೇರ್ ಮಾಡಿ ರೋಮಾಂಚನಕಾರಿ ಅನುಭವ ಹಂಚಿಕೊಂಡ ವಿರಾಟ್ ಕೊಹ್ಲಿ

    ಲಂಡನ್: ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಗೆಲುವು ಪಡೆದು ಬೀಗುತ್ತಿರುವ ಟೀಂ ಇಂಡಿಯಾ, ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈ ವಶ ಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

    ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿ ಸೇರಿದಂತೆ ತಂಡದ ಆಟಗಾರರಿರುವ ಫೋಟೋ ಶೇರ್ ಮಾಡಿ ತಮ್ಮ ರೋಮಾಂಚನಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಕೊಹ್ಲಿ, ತಂಡದ ಇತರೇ ಸದಸ್ಯರೊಂದಿಗೆ ದೇಶವನ್ನು ಪ್ರತಿನಿಧಿಸಲು ನಡೆಯುವುದು ಹೆಮ್ಮೆ ಎನಿಸುತ್ತದೆ. ಈ ವೇಳೆ ಅಭಿಮಾನಿಗಳ ಬೆಂಬಲ ರೋಮಾಂಚನಕಾರಿಯಾಗಿರುತ್ತದೆ. ಅದನ್ನು ಪದಗಳಲ್ಲಿ ವಿವರಿಸುವುದು ಕಷ್ಟಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಟೀಂ ಇಂಡಿಯಾ ಸತತ 6 ನೇ ಟಿ20 ಸರಣಿಯ ಗೆಲುವಿನ ವಿಶ್ವಾಸದಲ್ಲಿದ್ದು, ಕಳೆದ ಸೆಪ್ಟೆಂಬರ್ ತಿಂಗಳಿಂದ ಆಡಿರುವ ಎಲ್ಲಾ ಸರಣಿಗಳನ್ನು ಗೆದ್ದು ಬೀಗಿದೆ. ಅಂದರೆ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು 2-1 ಬಳಿಕ ನಡೆದ ಶ್ರೀಲಂಕಾ ವಿರುದ್ಧ ಸರಣಿ(3-0), ದಕ್ಷಿಣ ಆಫ್ರಿಕಾ (2-1), ನಿದಾಸ್ ತ್ರಿಕೋನಸರಣಿ ಮತ್ತು ಐರ್ಲೆಂಡ್ ವಿರುದ್ಧದ ಸರಣಿಯನ್ನು (2-0) ಯಿಂದ ಗೆದ್ದುಕೊಂಡಿತ್ತು.

    ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವು ಸಾಧಿಸಿದರೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದೊಂದಿಗೆ 2ನೇ ಸ್ಥಾನ ಹಂಚಿಕೊಳ್ಳಲಿದೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಆಸೀಸ್ 3-0 ಅಂತರದಿಂದ ಸೋಲುಂಡರೆ ಟೀಂ ಇಂಡಿಯಾ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಏರಲಿದೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಸದ್ಯ ಪಾಕ್ ಮೊದಲ ಸ್ಥಾನ ಪಡೆದಿದೆ.