Tag: Manchanabele Dam

  • Ramanagara| 20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಗೆ ಹರಿದ ನೀರು

    Ramanagara| 20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಗೆ ಹರಿದ ನೀರು

    – ನೀರೆತ್ತುವ ಯಂತ್ರಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ

    ರಾಮನಗರ: ದಶಕಗಳಿಂದ ದುರಸ್ತಿಗೊಳ್ಳದೇ ನೀರಿನಿಂದ ವಂಚಿತವಾಗಿದ್ದ ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ 20 ವರ್ಷಗಳ ಬಳಿಕ ನೀರು ಹರಿದಿದೆ.

    ಮಂಚನಬೆಲೆ ಜಲಾಶಯದ (Manchanabele Dam) ಎಡದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಚಾಲನೆ ನೀಡಿದ್ದಾರೆ. ನೀರನ್ನು ಲಿಫ್ಟ್ ಮಾಡುವ ಯಂತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಾಲೆಗೆ ನೀರು ಹರಿಬಿಟ್ಟಿದ್ದಾರೆ. ಮಂಚನಬೆಲೆ ಜಲಾಶಯದಿಂದ ರಾಮನಗರ ತಾಲೂಕಿನ ಕಸಬಾ ಹೋಬಳಿ ಕೃಷಿ ಪ್ರದೇಶಗಳಿಗೆ ನೀರು ಹರಿಸಲಾಗುತ್ತಿದ್ದು, ಸುಮಾರು 1500 ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿಗೆ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ. ಇದನ್ನೂ ಓದಿ:  ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಸದ್ಯ ಮಂಚನಬೆಲೆ ಜಲಾಶಯದಲ್ಲಿ 1.06 ಟಿಎಂಸಿ ನೀರು ಸಂಗ್ರಹವಾಗಿದ್ದು, ಅದರಲ್ಲಿ ಕೃಷಿಗೆ 51ಕ್ಯೂಸೆಕ್ ನೀರು ಬಳಕೆಗೆ ಚಿಂತನೆ ಮಾಡಲಾಗಿದೆ. ಬೇಸಿಗೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಾಲೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ವೇಳೆ ಶಾಸಕ ಇಕ್ಬಾಲ್ ಹುಸೇನ್‌ಗೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ. ನಾಲೆಗೆ ನೀರು ಹರಿಸಿದ್ದರಿಂದ ರೈತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್‌ಗೆ ಮತ್ತೊಂದು ಸಂಕಷ್ಟ – 2014 ರ ಇಲವಾಲ ಪೊಲೀಸ್ ದರೋಡೆ ಕೇಸ್ ಮತ್ತೆ ಮುನ್ನೆಲೆಗೆ