Tag: Manasi Sudhir

  • ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ: ಮಾನಸಿ ಸುಧೀರ್

    ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ: ಮಾನಸಿ ಸುಧೀರ್

    ಉಡುಪಿ: ಡಿಫ್ರೆಂಟ್ ಕಂಟೆಂಟ್ ಚಿತ್ರ ದೇಶಕ್ಕೆ ಇಷ್ಟ ಆಗಿದೆ. ಸಿಕ್ಕಿರುವಂತ ಪ್ರಶಸ್ತಿಗಳಿಗೆ ಈಗ ಕಿರೀಟ ಸಿಕ್ಕಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಶುಭಸುದ್ದಿ ಬಂದಿದೆ ಎಂದು ಉಡುಪಿಯಲ್ಲಿ ಕಾಂತಾರ ನಟಿ ಮಾನಸಿ ಸುಧೀರ್ ಹೇಳಿಕೆ ನೀಡಿದ್ದಾರೆ.

    ಕಾಂತಾರ (Kantara) ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ (70th National Award) ಬಂದಿರುವ ಸಂತೋಷವನ್ನು ಚಿತ್ರದ ನಾಯಕ `ಶಿವ’ನ ತಾಯಿ `ಕಮಲ’ ಪಾತ್ರಧಾರಿ ಮಾನಸಿ ಸುಧೀರ್ (Manasi Sudhir) ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಈ ಅವಾರ್ಡನ್ನು ಕನ್ನಡದ ಜನತೆ ಮತ್ತು ದೈವನರ್ತಕರಿಗೆ ಸಲ್ಲಿಸಿದ್ದಾರೆ. ಇಂದು ಬಹಳ ಖುಷಿ ಮತ್ತು ಹೆಮ್ಮೆಪಡುವ ದಿನ ಎಂದರು. ಇದನ್ನೂ ಓದಿ: ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌, ದೈವಕ್ಕೆ, ದೈವ ನರ್ತಕರಿಗೆ ಅರ್ಪಣೆ ಮಾಡುತ್ತೇನೆ- ರಿಷಬ್ ಶೆಟ್ಟಿ

    ಶೂಟಿಂಗ್ ದಿನಗಳನ್ನು ಮೆಲುಕುಹಾಕುತ್ತಾ ಮಾತನಾಡಿದ ಅವರು, 40 ದಿನ ಚಿತ್ರದ ಸೆಟ್ಟಿನಲ್ಲಿದ್ದೆ. ಆ ಎಲ್ಲಾ ಕ್ಷಣಗಳು ಕಣ್ಣ ಮುಂದೆ ಬಂತು. ರಿಷಬ್ ವಿಭಿನ್ನ ನಿರ್ದೇಶನ, ನಟನೆ ಮತ್ತು ಪ್ಯಾಟರ್ನ್ ಚಿತ್ರಗಳನ್ನು ಕೊಡುತ್ತಾರೆ. ರಿಷಬ್ ಶೆಟ್ಟಿ ಸಿನಿಮಾಗಳು ಮನೋರಂಜನೆಗೆ ಮೋಸಮಾಡಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಕಣ್ಣಾರೆ ನೋಡಿದ್ದೇನೆ. ಅದೊಂದು ವಿಶೇಷ ಆಕ್ಷನ್, ವಿಶೇಷ ಅನುಭವ. ಕಾಂತಾರದ ಕೊರಿಯೋಗ್ರಫಿ, ಫೈಟ್ ನಿಜಕ್ಕೂ ಅದ್ಭುತ. ಜನರಿಂದ ಸಿಕ್ಕ ಪ್ರತಿಕ್ರಿಯೆ ಮತ್ತು ಪ್ರೀತಿ ಬಹಳ ದೊಡ್ಡದು. ದೇಶ ವಿದೇಶದಿಂದಲೂ ಈ ಚಿತ್ರಕ್ಕೆ ಮೆಚ್ಚುಗೆ ಬಂದಿದೆ. ಚಿತ್ರ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂದರು.  ಇದನ್ನೂ ಓದಿ: ಯಶ್, ರಿಷಬ್ ಶೆಟ್ಟಿ ಒಟ್ಟಿಗೆ ನಟಿಸುತ್ತಾರಾ? ನಿರ್ಮಾಪಕ ಹೇಳಿದ್ದೇನು?

    ಕಾಂತಾರ ಫ್ರೀಕ್ವೆಲ್ ಕುತೂಹಲದ ಬಗ್ಗೆ ನಾನೇನು ಹೇಳುವುದಿಲ್ಲ. ಕುತೂಹಲ ಯಾವತ್ತೂ ಹಾಗೆ ಇರಬೇಕು. ಸಿನಿಮಾದ ಮಾರ್ಕೆಟಿಂಗ್ ಬಹಳ ಒಳ್ಳೆಯದು. ಕಾಂತಾರ ಪ್ರೀಕ್ವೆಲ್ ಬಗ್ಗೆ ಯಾವುದೇ ಮಾತುಕತೆ ಆಗಲಿಲ್ಲ. ನಾನು ಈವರೆಗೆ ಚಿತ್ರೀಕರಣದಲ್ಲಿ ಸದ್ಯ ಭಾಗಿ ಆಗಿಲ್ಲ. ಮೊದಲ ಅಧ್ಯಾಯದಲ್ಲಿ ನನ್ನ ಜೀವನ ಆಗಿದೆ. ಬಿಫೋರ್ ಕಾಂತರಾ ಆಫ್ಟರ್ ಕಾಂತಾರ ಎಂಬಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ನನಗೆ ಬಹಳಷ್ಟು ಅವಕಾಶಗಳು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ- ನ್ಯಾಷನಲ್‌ ಅವಾರ್ಡ್‌ ಬಂದಿದ್ದಕ್ಕೆ ಯಶ್‌ ಸಂತಸ

  • ಕಾಂತಾರ ಖ್ಯಾತಿಯ ನಟಿಯ  ‘ಜುಗಲ್ ಬಂದಿ’ ಟ್ರೇಲರ್ ರಿಲೀಸ್

    ಕಾಂತಾರ ಖ್ಯಾತಿಯ ನಟಿಯ ‘ಜುಗಲ್ ಬಂದಿ’ ಟ್ರೇಲರ್ ರಿಲೀಸ್

    ಹೊಸಬರ ವಿನೂತನ ಪ್ರಯತ್ನವಿರುವ ‘ಜುಗಲ್ ಬಂದಿ’ (Jugal Bandi) ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ದಿವಾಕರ ಡಿಂಡಿಮ (Diwakar Dindama) ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಹೆಜ್ಜೆ ಇಡಲಿದ್ದು, ಅದಕ್ಕೂ ಮುನ್ನ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ ಚಿತ್ರತಂಡ.

    ಡಿಂಡಿಮ ಪ್ರೊಡಕ್ಷನ್ಸ್ ನಡಿ ನಿರ್ಮಾಣವಾದ ಈ ಚಿತ್ರ ಹಲವು ಕಥೆಗಳ ಜುಗಲ್ ಬಂದಿ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆ ಒಳಗೊಂಡ ಟ್ರೇಲರ್ ತುಣುಕು ಕೂಡ ಅದರ ಝಲಕ್ ಕಟ್ಟಿಕೊಟ್ಟಿದೆ.  ಚಿತ್ರದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್ (Manasi Sudhir), ಅರ್ಚನಾ ಕೊಟ್ಟಿಗೆ (Archana Kottige), ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಒಳಗೊಂಡ ಮುಖ್ಯ ಭೂಮಿಕೆಯಿದೆ. ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ ಒಳಗೊಂಡ ತಾರಾಬಳಗ ‘ಜುಗಲ್ ಬಂದಿ’ ಸಿನಿಮಾದಲ್ಲಿದೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ದಿವಾಕರ ಡಿಂಡಿಮ ನಿರ್ದೇಶನದ ಜೊತೆಗೆ ಡಿಂಡಿಮ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯ ಬರೆದಿದ್ದಾರೆ.

  • ಗಣಪತಿ ಸ್ತುತಿ ಜೊತೆ ಮಕ್ಕಳಿಗೆ ಅಆಇಈ ಪಾಠ- ಉಡುಪಿಯ ಮಾನಸಿ ಸುಧಿರ್ ವಿಡಿಯೋಗೆ ಭಾರೀ ಮೆಚ್ಚುಗೆ

    ಗಣಪತಿ ಸ್ತುತಿ ಜೊತೆ ಮಕ್ಕಳಿಗೆ ಅಆಇಈ ಪಾಠ- ಉಡುಪಿಯ ಮಾನಸಿ ಸುಧಿರ್ ವಿಡಿಯೋಗೆ ಭಾರೀ ಮೆಚ್ಚುಗೆ

    ಉಡುಪಿ: ನಾಟಕೀಯ ಶೈಲಿಯ ಹಾಡುಗಳ ಮೂಲಕ ಫೇಸ್‍ಬುಕ್ ನಲ್ಲಿ ಫೇಮಸ್ ಆಗಿರುವ ಕಲಾವಿದೆ, ಭರತ ನಾಟ್ಯ ಶಿಕ್ಷಕಿ ಮಾನಸಿ ಸುಧಿರ್ ಗಣೇಶ ಚತುರ್ಥಿ ಸಂದರ್ಭ ಮತ್ತೆ ಸದ್ದು ಮಾಡಿದ್ದಾರೆ. ಹಾಡು ಮತ್ತು ನಟನೆ ಮಾಡಿರುವ ವಿಡಿಯೋ ಬಹಳ ಜನಮನ್ನಣೆ ಪಡೆದಿದೆ.

    ಗಣಪನ ಹಾಡಿನ ನಡುವೆ ಅಆಇಈ ಪಾಠವನ್ನು ಪುಟಾಣಿ ಮಕ್ಕಳಿಗೆ ಮಾಡಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ಅದ್ಭುತ ಹಾಡು ರಿಲೀಸ್ ಆಗಿದೆ. ಕಥನ ಶೈಲಿಯ ಈ ಹಾಡು ಈಗ ಸಖತ್ ವೈರಲ್ ಆಗಿದೆ. ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ಸಂಭ್ರಮವನ್ನು ವಿವರಿಸಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸನ್ನೂ ಗೆದ್ದಿದೆ. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಆರೇಳು ದಶಕಗಳ ಹಿಂದೆ ಬರೆದ ಈ ಶಿಶುಗೀತೆಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬಂದಿದೆ. ಹಬ್ಬದ ಖುಷಿಯ ಜೊತೆಗೆ ಕನ್ನಡ ಪ್ರೀತಿಯನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳುವ ಈ ಹಾಡು ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ.

    https://www.facebook.com/publictv/videos/620672505517760/

    ಕೋವಿಡ್ ಸಂದರ್ಭದಲ್ಲಿ ಆನ್‍ಲೈನ್ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿರುವುದರಿಂದ, ಈ ರೀತಿಯಲ್ಲೂ ಪಾಠ ಮಾಡಿ ಮಕ್ಕಳ ಮನ ಗೆಲ್ಲಬಹುದು ಅಂತ ಈ ವಿಡಿಯೋ ಸಾರಿ ಹೇಳುತ್ತಿದೆ.