Tag: Manasare

  • ಆರೋಗ್ಯದಲ್ಲಿ ಚೇತರಿಕೆ, ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಆರೋಗ್ಯದಲ್ಲಿ ಚೇತರಿಕೆ, ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್‌ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ದಿಗಂತ್ ಅವರ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ನಿನ್ನೆ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಇಂದು ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ಇದೀಗ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಲಾಗಿದೆ.

    ಕುಟುಂಬದ ಜತೆ ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್ ಮಾಡಿದ ಪರಿಣಾಮ ಬೆಂಗಳೂರಿನ ಮಣಿಪಾಲ್ ಆಸ್ವತ್ರೆಗೆ ದಾಖಲಿಸಿ, ನಿನ್ನೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಇದೀಗ ನಟನ ಆರೋಗ್ಯ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ನಟ ದಿಗಂತ್ ಅವರ ದಿಸ್ಚಾರ್ಜ್ ಮಾಡಿದ್ದಾರೆ. ಇದನ್ನೂ ಓದಿ:ಪತಿ ದಿಗಂತ್ ನೆನೆದು ಭಾವುಕರಾದ ನಟಿ ಐಂದ್ರಿತಾ ರೇ : ಈಗ ಹೇಗಿದ್ದಾರೆ ನಟ ದಿಗಂತ್?

    ಗೋವಾದ ಕಡಲ ತೀರದಲ್ಲಿ ಸೊಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ಸ್ಪೈಲನ್‌  ಕಾರ್ಡ್‌ಗೆ ಗಾಯ ಮಾಡಿಕೊಂಡಿದ್ರು. ಬಳಿಕ ಏರ್‌ಲಿಫ್ಟ್ ಮಾಡಿ ದಿಗಂತ್‌ರನ್ನ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು. ಆರೋಗ್ಯದಲ್ಲಿ ಸ್ಥಿರವಿರುವ ಕಾರಣ ನಟ ದಿಗಂತ್ ಅವರನ್ನು ಮನೆಯಲ್ಲಿಯೇ ಮೂರು ತಿಂಗಳು ಬೆಡ್ ರೆಸ್ಟ್‌ ಮಾಡಲು ಡಾ.ವಿಧ್ಯಾಧರ್ ತಿಳಿಸಿದ್ದಾರೆ.

    Live Tv

  • ನಟ ದಿಗಂತ್ ಬಾಳಲ್ಲಿ ಇದು 2ನೇ ದುರಂತ..!

    ನಟ ದಿಗಂತ್ ಬಾಳಲ್ಲಿ ಇದು 2ನೇ ದುರಂತ..!

    ಸ್ಯಾಂಡಲ್‌ವುಡ್‌ಗೆ `ಮಿಸ್ ಕ್ಯಾಲಿಫೋರ್ನಿಯ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ದಿಗಂತ್‌ಗೆ ಆರೋಗ್ಯದ ವಿಚಾರದಲ್ಲಿ ಲಕ್ ಕೈಕೊಟ್ಟಂತಿದೆ. ಈ ನಟನ ಬದುಕಲ್ಲಿ ಈಗಾಗಲೇ ಕರಾಳ ಘಟನೆಯೊಂದು ನಡೆದಿದ್ದು, ಇದೀಗ ಇದಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ.

    ಪಂಚರಂಗಿ, ಮನಸಾರೆ, ಲೈಫು ಇಷ್ಟೇನೆ, ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದ ನಟನ ಬಾಳಲ್ಲಿ ಈ ಎರಡು ಕರಾಳ ಘಟನೆ ನಡೆದಿದೆ. ಈ ಹಿಂದೆ ಚಿತ್ರೀಕರಣವೊಂದರಲ್ಲಿ ಬಲಗಣ್ಣಿಗೆ ಪೆಟ್ಟು ಬಿದ್ದಿತ್ತು. ಈಗ ಸ್ಪೈನಲ್ ಮೈನರ್ ಇಂಜುರಿ ಆಗಿದೆ. ಆರೋಗ್ಯದ ವಿಚಾರದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ದಿಗಂತ್ ಸುದ್ದಿಯಾಗುತ್ತಲೇ ಇರುತ್ತಾರೆ.‌ ಇದನ್ನೂ ಓದಿ: ದಿಗಂತ್‌ಗೆ ಆಗಿರೋದು ಸಣ್ಣ ಗಾಯ, ಗಾಬರಿಪಡುವ ಅಗತ್ಯವಿಲ್ಲ: ಯೋಗರಾಜ್ ಭಟ್

    ಸ್ಯಾಂಡಲ್‌ವುಡ್ ನಟ ದಿಗಂತ್ ಕನ್ನಡ ಚಿತ್ರರಂಗದಲ್ಲಿ ಪೀಕ್‌ನಲ್ಲಿರುವಾಗ `ಟಿಕೆಟ್ ಟು ಬಾಲಿವುಡ್’ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಬಲಕಣ್ಣಿಗೆ ಬಲವಾಗಿ ಪೆಟ್ಟು ಬಿದ್ದು ಸಂಕಷ್ಟ ದಿಗಂತ್ ಅನುಭವಿಸಿದ್ದರು. ೨೦೧೬ರಲ್ಲಿ ಈ ಅವಘಡ ಸಂಭವಿಸಿ ಬಲಕಣ್ಣಿನ ತೊಂದರೆಗೆ ನಟ ದಿಗಂತ್ ಒಳಗಾಗಿದ್ದರು. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿಯೇ ನಾಯಕಿಯ ಹೀಲ್ಡ್ ಚಪ್ಪಲಿ ಎಸೆಯುವ ಸೀನ್‌ನಲ್ಲಿ ದಿಗಂತ್ ಕಣ್ಣಿಗೆ ಏಟಾಗಿತ್ತು.

    ಈಗ ಮತ್ತೊಮ್ಮೆ ಗೋವಾದಲ್ಲಿ ಬೀಚ್ ಬದಿಯಲ್ಲಿ ಸೊಮಾರ್ ಸಾಲ್ಟ್ ಮಾಡುವಾಗ ಬೆನ್ನು ಹಾಗೂ ಕತ್ತಿಗೆ ಏಟು ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಇನ್ನು ನೆಚ್ಚಿನ ನಟನ ಆರೋಗ್ಯದಲ್ಲಿ ಚೇತರಿಕೆಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

    Live Tv

  • ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನ ಮನಸಾರೆ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಅವರು ತನ್ನ ದೊಡ್ಡ ಜವಾಬ್ದಾರಿಯೊಂದನ್ನು ನಿಭಾಯಿಸಲು ದಿಗಂತ್ ಗೆ ಹಸ್ತಾಂತರಿಸಿದ್ದೇನೆ ಅಂತ ಹೇಳಿದ್ದಾರೆ.

    ದಿಗಂತ್- ಐಂದ್ರಿತಾ ಮದುವೆಯ ಬಗ್ಗೆ ಟ್ವೀಟ್ ಮಾಡಿದ ತುಪ್ಪದ ಬೆಡಗಿ, ನಾನು ಯಾವತ್ತೂ ನಿನ್ನ ಹಿಂದೆ ಇರುತ್ತೇನೆ ಬೇಬಿ. ಇಂದು ನೀನು ನಿನ್ನ ಜೀವನದ ಒಂದು ವಿಶೇಷ ಘಟ್ಟಕ್ಕೆ ಕಾಲಿಡುತ್ತಿದ್ದಿಯಾ. ಇದಕ್ಕೆ ನಾನು ತುಂಬು ಹೃದಯದಿಂದ ಶುಭ ಕೋರುತ್ತಿದ್ದೇನೆ ಅಂತ ತಿಳಿಸಿದ್ದಾರೆ.

    ಅಲ್ಲದೇ ನೀನೊಬ್ಬಳು ಉತ್ತಮ ಮಗಳು, ನಟಿ ಹಾಗೂ ಇಂದಿನಿಂದ ಅತ್ಯುತ್ತಮ ಪತ್ನಿಯಾಗಲಿದ್ದಿ. ಒಟ್ಟಿನಲ್ಲಿ ಇಂದಿನವರೆಗೆ ನಾನು ನಿನ್ನ ಬಾಡಿಗಾರ್ಡ್ ಆಗಿದ್ದೆ. ಆದ್ರೆ ಇಂದು ನನ್ನ ಜವಾಬ್ದಾರಿಯನ್ನು ದಿಗಂತ್ ಗೆ ಹಸ್ತಾಂತರಿಸುತ್ತಿದ್ದೇನೆ ಅಂತ ಬರೆದುಕೊಂಡಿದ್ದಾರೆ.

    ಸ್ಯಾಂಡಲ್‍ವುಡ್‍ನ ಹಾಟ್ ಪೇರ್‍ಗಳ ಸಾಲಿನಲ್ಲಿ ಮೊದಲಿಗೆ ಕೇಳಿ ಬರುವ ಹೆಸರು ದೂದ್‍ಪೇಡಾ ನಟ ದಿಗಂತ್ ಹಾಗೂ ಬೆಂಗಾಲಿ ಚೆಲುವೆ ಐಂದ್ರಿತಾ ರೇ. `ಮನಸಾರೆ’ ಅವರು ಇಷ್ಟಪಟ್ಟು ಲವ್ ಮಾಡಲು ಆರಂಭಿಸಿದ ಬರೋಬ್ಬರಿ 8 ವರ್ಷದ ಬಳಿಕ ಮದುವೆಯಾಗುತ್ತಿದ್ದಾರೆ.

    ನಂದಿಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್‍ನಲ್ಲಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿದೆ. ಐಂದ್ರಿತಾ ಅವರ ಮನೆಯಂಗಳದಲ್ಲೇ ಬೆಳೆದಿರುವ ಅರಿಶಿಣದಿಂದ ಮದ್ವೆ ಶಾಸ್ತ್ರ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಎರಡೂ ಕುಟುಂಬಗಳ ಸದಸ್ಯರು ಮತ್ತು ಸ್ಟಾರ್‍ಪೇರ್‍ನ ಆಪ್ತರಷ್ಟೇ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಮಧುಮಗಳು ಐಂದ್ರಿತಾ ಮಿಂಚಿದರೆ, ನೀಲಿ ಶಾಲು, ಬಿಳಿಪಂಚೆಯಲ್ಲಿ ದಿಗಂತ್ ಕಂಗೊಳಿಸಿದ್ದರು.

    ಇಂದು ಸಂಜೆ ನಂದಿಬೆಟ್ಟದ ತಪ್ಪಲಿನಲ್ಲಿ ಐಂದ್ರಿತಾ, ದಿಗಂತ್ ಜೋಡಿ ಸಪ್ತಪದಿ ತುಳಿಯಲಿದೆ. ಕುಟುಂಬದವರು ಮತ್ತು ಚಿತ್ರರಂಗದ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಕೊಟ್ಟಿದ್ದಾರೆ. ಶೇರ್‍ಚಾಟ್ ಸಂಸ್ಥೆ ಐಂದ್ರಿತಾ, ದಿಗಂತ್ ಜೋಡಿಯ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv