Tag: Manasagangothri

  • ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ ನಿವೃತ ಅಧಿಕಾರಿ ಸಾವು – ಹಿಟ್ ಅಂಡ್ ರನ್ ರೂಪದಲ್ಲಿ ಕೊಲೆ ಶಂಕೆ

    ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ ನಿವೃತ ಅಧಿಕಾರಿ ಸಾವು – ಹಿಟ್ ಅಂಡ್ ರನ್ ರೂಪದಲ್ಲಿ ಕೊಲೆ ಶಂಕೆ

    ಮೈಸೂರು: ಅಪಘಾತದಲ್ಲಿ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ (Intelligence Bureau) ನಿವೃತ್ತ ಅಧಿಕಾರಿ ಮೃತಪಟ್ಟಿರುವ ಘಟನೆ ಮೈಸೂರಿನ ಮಾನಸಗಂಗೋತ್ರಿ (Manasagangothri) ಕ್ಯಾಂಪಸ್‍ನಲ್ಲಿ ನಡೆದಿದೆ.

    ಆರ್.ಎಸ್. ಕುಲಕರ್ಣಿ (83) ಅಪಘಾತದಲ್ಲಿ ಮೃತಪಟ್ಟ ಇಂಟೆಲಿಜೆನ್ಸ್ ಬ್ಯೂರೋದ ನಿವೃತ್ತ ಅಧಿಕಾರಿ. ಮಾನಸ ಗಂಗೋತ್ರಿ ಕ್ಯಾಂಪಸ್‍ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಕುಲಕರ್ಣಿ ಅವರಿಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಅಪಘಾತ ಮಾಡಿ ಕೊಲೆ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಇದನ್ನೂ ಓದಿ: ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ

    ತೀವ್ರ ಗಾಯಗೊಂಡಿದ್ದ ಕುಲಕರ್ಣಿ ಅವರನ್ನು ತಕ್ಷಣ ಆಸ್ಪತ್ರೆಗೆ (Hospital) ದಾಖಲಿಸಿದರೂ ಬದುಕುಳಿದಿಲ್ಲ. ಕುಲಕರ್ಣಿಯವರು ಸೇವೆಯಿಂದ ನಿವೃತ್ತರಾಗಿ 23 ವರ್ಷವಾಗಿತ್ತು. ಮೇಲ್ನೋಟಕ್ಕೆ ಇದೊಂದು ಹಿಟ್ ಅಂಡ್ ರನ್ ಪ್ರಕರಣವಾಗಿದ್ದು, ನಂಬರ್ ಪ್ಲೇಟ್ ಇಲ್ಲದ ಕಾರು ಇವರಿಗೆ ಡಿಕ್ಕಿಯಾಗಿದೆ. ಜಯಲಕ್ಷ್ಮೀ ಪುರಂ ಪೊಲೀಸ್ (Police) ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

  • ಲೇಡಿಸ್ ಹಾಸ್ಟೆಲ್‍ಗೆ ಬಂತು ನಾಗರ- ಹಾವು ಕಂಡು ಹುಡುಗಿಯರೆಲ್ಲಾ ಶಾಕ್

    ಲೇಡಿಸ್ ಹಾಸ್ಟೆಲ್‍ಗೆ ಬಂತು ನಾಗರ- ಹಾವು ಕಂಡು ಹುಡುಗಿಯರೆಲ್ಲಾ ಶಾಕ್

    ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿನ ವಿದ್ಯಾರ್ಥಿನಿಯರ ವಸತಿ ನಿಲಯದ ಕೊಠಡಿಯಲ್ಲಿ ಹಾವು ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.

    ಮಾನಸಗಂಗೋತ್ರಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ಮಲಗಿದ್ದ ಮಂಚದ ಕೆಳಗೆ ದೊಡ್ಡದಾದ ನಾಗರಹಾವು ಬುಸುಗುಡುತ್ತಿತ್ತು. ಏನಿದು ಬುಸುಗುಡುವ ಸದ್ದು ಬರ್ತಿದೆ ಅಂತಾ ವಿದ್ಯಾರ್ಥಿನಿಯರು ಮಂಚದ ಕೆಳಗೆ ಇಣುಕಿ ನೋಡಿದಾಗ ಹಾವು ಮಲಗಿರುವುದು ಕಂಡಿದೆ. ತಕ್ಷಣ ಕೊಠಡಿಯಿಂದ ಓಡಿ ಹೊರ ಬಂದು ವಿದ್ಯಾರ್ಥಿನಿಯರು ಕಿರುಚಾಡಿದ್ದಾರೆ.

    ವಾರ್ಡನ್ ತಕ್ಷಣ ಉರಗ ತಜ್ಞ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಉರಗ ತಜ್ನ ರಮೇಶ್ ಅವರು ಹಾವು ಹಿಡಿದು ವಿದ್ಯಾರ್ಥಿನಿಯರ ಆತಂಕವನ್ನ ದೂರ ಮಾಡಿದ್ದಾರೆ. ವಸತಿ ನಿಲಯದ ಸುತ್ತಾ ಗಿಡಗಂಟೆಗಳು ಬೆಳೆದಿದ್ದು ಶುಚಿತ್ವ ಕಾಪಾಡಿಕೊಳ್ಳದಿರುವುದೇ ಈ ರೀತಿ ಹಾವುಗಳು ವಸತಿ ನಿಲಯದ ಕೊಠಡಿಗೆ ಸೇರುವುದಕ್ಕೆ ಕಾರಣವಾಗಿದೆ.

    ಹಾವಿನಿಂದ ಯಾವ ವಿದ್ಯಾರ್ಥಿನಿಯರಿಗೂ ತೊಂದರೆ ಆಗಿಲ್ಲ.