Tag: Manasa Varanasi

  • ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

    ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

    ನವದೆಹಲಿ: ಹಲವು ಸ್ಪರ್ಧಿಗಳಲ್ಲಿ ಕೋವಿಡ್-‌19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ʻವಿಶ್ವ ಸುಂದರಿ 2021ʼ ಫೈನಲ್‌ ಸ್ಪರ್ಧೆಯನ್ನು ಮುಂದೂಡಲಾಗಿದೆ.

    ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮಾನಸಾ ವಾರಣಾಸಿ ಅವರಿಗೂ ಕೊರೊನಾ ಸೋಂಕು ತಗುಲಿರುವುದನ್ನು ಮಿಸ್‌ ಇಂಡಿಯಾ ಸಂಸ್ಥೆ ಖಚಿತಪಡಿಸಿದೆ. ಇದನ್ನೂ ಓದಿ: ಅರೆ ನಗ್ನ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ

     

     

    View this post on Instagram

     

    A post shared by Miss World (@missworld)

    ಗುರುವಾರ ವಿಶ್ವ ಸುಂದರಿ ಸ್ಪರ್ಧೆ ನಡೆಯಬೇಕಿತ್ತು. ಆದರೆ 17 ಸ್ಪರ್ಧಿಗಳು ಮತ್ತು ಸಹಾಯಕ ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಸ್ಪರ್ಧೆಯನ್ನು ಮುಂದೂಡಲಾಗಿದೆ. ಸೋಂಕಿತ ಸ್ಪರ್ಧಿಗಳು ಸದ್ಯ ಪೋರ್ಟೊ ರಿಕೊದಲ್ಲಿ ಐಸೊಲೇಷನ್‌ ಆಗಿದ್ದಾರೆ.

    ಸ್ಪರ್ಧಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಿಸ್‌ ವರ್ಲ್ಡ್‌ ಫೈನಲ್ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ 90 ದಿನಗಳ ಒಳಗಾಗಿ ಸ್ಪರ್ಧೆಯನ್ನು ಪೋರ್ಟೊ ರಿಕೊದಲ್ಲೇ ಮರು ನಿಗದಿಪಡಿಸಲಾಗುವುದು ಎಂದು ಮಿಸ್‌ ವರ್ಲ್ಡ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸ್ಟೈಲಿಶ್ ಲುಕ್‍ನಲ್ಲಿ ಶುಭಾ ಪೂಂಜಾ ಫುಲ್ ಮಿಂಚಿಂಗ್

    ಸ್ಪರ್ಧಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವ ಸುಂದರಿ ಫೈನಲ್‌ ಸ್ಪರ್ಧೆಯನ್ನು ಮುಂದೂಡಲಾಗಿದೆ. ಭಾರತದ ಸ್ಪರ್ಧಿ ಮಾನಸಾ ವಾರಣಾಸಿ ಅವರಿಗೂ ಸೋಂಕು ತಗುಲಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ. ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವದಿಂದ ಸಿದ್ಧತೆ ನಡೆಸಿದ್ದ ಆಕೆಗೆ ಫೈನಲ್‌ ಸ್ಪರ್ಧೆಯಲ್ಲಿ ಅವಕಾಶ ಕೈತಪ್ಪುವ ಆತಂಕ ಎದುರಾಗಿತ್ತು. ಆದರೆ ಸ್ಪರ್ಧಿಗಳ ಆರೋಗ್ಯ ಹಿತದೃಷ್ಟಿಯಿಂದ ಸ್ಪರ್ಧೆ ಮುಂದೂಡಲಾಗಿದೆ. ಅದಕ್ಕಾಗಿ ಮಿಸ್‌ ವರ್ಲ್ಡ್‌ ಲಿಮಿಟೆಡ್‌ ಸಿಇಒ ಜೂಲಿಯಾ ಮಾರ್ಲೆ ಅವರಿಗೆ ಅಭಿನಂದನೆ. ಕೊರೊನಾ ಸೋಂಕಿತರೆಲ್ಲರೂ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ಮಿಸ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

  • ಮಿಸ್ ಇಂಡಿಯಾ 2020 ಆದ ಹೈದರಾಬಾದ್ ಸುಂದರಿ

    ಮಿಸ್ ಇಂಡಿಯಾ 2020 ಆದ ಹೈದರಾಬಾದ್ ಸುಂದರಿ

    ಹೈದರಾಬಾದ್: ಫೆಮಿನಾ ಮಿಸ್ ಇಂಡಿಯಾ 2020 ಆಗಿ ಹೈದರಾಬಾದ್ ಮೂಲದ ಮಾನಸ ವಾರಾಣಸಿ ಆಯ್ಕೆಯಾಗುವ ಮೂಲಕವಾಗಿ ಕೀರಿಟವನ್ನು ಮುಡಿಗೇರಿಸಿಕೊಂಡಿದ್ದಾರೆ.

    ಮಿಸ್ ಇಂಡಿಯಾ 2020ರ ಪಟ್ಟಕ್ಕಾಗಿ ಹಲವು ಸುಂದರಿಯರು ಪೈಪೋಟಿ ನಡೆಸಿದ್ದರು. ಮಾನಸ(23) ವಾರಾಣಸಿ ಅವರಿಗೆ ಮಿಸ್ ಇಂಡಿಯಾ ಕಿರೀಟ ಸಿಕ್ಕಿದೆ. 2021ರ ಡಿಸೆಂಬರ್‍ನಲ್ಲಿ ನಡೆಯಲಿರುವ ಮಿಸ್ ವಲ್ರ್ಡ್ ಸ್ಪರ್ಧೆಯಲ್ಲಿ ಮಾನಸ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

    ಮಾನಸ ಮೂಲತಃ ತೆಲಂಗಾಣದವರಾಗಿದ್ದಾರೆ. ಫ್ಯಾಷನ್ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆದಿರುವ ಈ ಸುಂದರಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‍ನಲ್ಲಿ ಪದವಿಯನ್ನು ಪಡೆದಿದ್ದಾರೆ. ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದಾರೆ. ಸಂಗೀತ ಮತ್ತು ನೃತ್ಯದಲ್ಲಿ ಮಾನಸ ಅವರಿಗೆ ಅಪಾರ ಆಸಕ್ತಿ ಇದೆ. ಯೋಗಪಟು, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಮಾನಸ ಬಿಡುವಿನ ಸಮಯದಲ್ಲಿ ಬಟ್ಟೆಯ ಮೇಲೆ ಕಸೂತಿಹಾಕುತ್ತಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚೆಂದುಳ್ಳಿ ಚೆಲುವಿಗೆ ಟ್ರಾವೆಲಿಂಗ್ ಎಂದರೆ ಬಲು ಇಷ್ಟವಾಗಿದೆ. ಕರ್ನಾಟಕದ ಹಲವು ಭಾಗಗಳನ್ನು ಸುತ್ತಾಡಿದ್ದಾರೆ.

    ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಮಾಸನ ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದಾರೆ. ಹೀಗೆಂದು ಮನಸ ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 2000ನೇ ಇಸವಿಯಲ್ಲಿ ಪ್ರಿಯಾಂಕಾ ಕೂಡ ಇದೇ ರೀತಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸದ್ಯ ಮಿಸ್ ಇಂಡಿಯಾ ಆಗಿರುವ ಮಾನಸ ವಾರಾಣಸಿ ಮುಂದಿನ ದಿನಗಳಲ್ಲಿ ಬಣ್ಣದ ಲೋಕಕ್ಕೆ ಕಾಲಿಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.