Tag: Manaluru

  • ಪೋಷಕರ ಮುಂದೆಯೇ ಸಮುದ್ರಪಾಲಾದ ಕಂದಮ್ಮ

    ಪೋಷಕರ ಮುಂದೆಯೇ ಸಮುದ್ರಪಾಲಾದ ಕಂದಮ್ಮ

    ಮಂಗಳೂರು: ನಗರದ ಬನಶಂಕರಿಯ ದಂಪತಿ ಇಬ್ಬರು ಮಕ್ಕಳೊಂದಿಗೆ ಮಂಗಳೂರಿನ ಉಳ್ಳಾಲದ ಸೋಮೇಶ್ವರ ಕಡಲ ತೀರಕ್ಕೆ ತೆರಳಿದ್ದು ಈ ವೇಳೆ ಮಗು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ನಡೆದಿದೆ.

    4 ವರ್ಷದ ಮೈತ್ರಿ ಕೇದ್ಕಾರ್ ಸಮುದ್ರ ಪಾಲಾದ ಮಗು ಎಂದು ತಿಳಿದು ಬಂದಿದೆ. ಚಿಂತಾಮಣಿ ಮತ್ತು ಶ್ರದ್ಧಾ ದಂಪತಿ ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಲ್ಲಿ ಮಕ್ಕಳೊಂದಿಗೆ  ಆಟವಾಡುತ್ತಿದ್ದರು. ಈ ವೇಳೆ ರಕ್ಕಸ ಅಲೆಗಳ ಹೊಡೆತಕ್ಕೆ ದಂಪತಿ ಸೇರಿದಂತೆ 4 ವರ್ಷದ ಮೈತ್ರಿ ಮತ್ತು 6 ವರ್ಷದ ಗಾರ್ಗಿ ಮುಳುಗಿದ್ದಾರೆ.

    ಈ ವೇಳೆ ಈಜು ರಕ್ಷಕ ಮೋಹನ್ ಎಂಬವರು ಚಿಂತಾಮಣಿ-ಶ್ರದ್ಧಾ ಹಾಗೂ ಗಾರ್ಗಿಯನ್ನು ರಕ್ಷಿಸಿದ್ದಾರೆ. ಆದರೆ ಮೈತ್ರಿ ರಕ್ಕಸದ ಅಲೆಗಳ ಮುಂದೆ ಮರೆಯಾಗಿದ್ದಾಳೆ. ಸದ್ಯ ಎಲ್ಲರಿಗೂ ಕೇದ್ರಾರ್ಗೆ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಆದರೆ ಮೈತ್ರಿ ಮಾತ್ರ ಸಮುದ್ರಪಾಲಾಗಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv