Tag: Management

  • ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರದಿಂದ 10 ನಿರ್ದೇಶನಗಳು

    ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರದಿಂದ 10 ನಿರ್ದೇಶನಗಳು

    ನವದೆಹಲಿ: ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್ ಅನ್ನು ಜೂನ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಪ್ರಮುಖ ಹತ್ತು ನಿರ್ದೇಶನಗಳನ್ನು ತಿಳಿಸಿದೆ.

    ಲಾಕ್‍ಡೌನ್ 5.0ನಲ್ಲಿ ಪ್ರಮುಖವಾಗಿ ಮಾಲ್ ಹಾಗೂ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಈಗಾಗಲೇ ಕಂಪನಿ, ಕೈಗಾರಿಕೋದ್ಯಮ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ವಿಧಿಸಿದೆ. ಇದನ್ನೂ ಓದಿ: ಜೂ.30ರವರೆಗೆ ಲಾಕ್‍ಡೌನ್ ವಿಸ್ತರಣೆ- ಜೂನ್ 8ರಿಂದ ಮಾಲ್, ದೇವಸ್ಥಾನ ಓಪನ್

    ಕೋವಿಡ್-19 ನಿಯಂತ್ರಣಕ್ಕೆ ನಿರ್ದೇಶನಗಳು:
    1. ಮಾಸ್ಕ್: ಸಾರ್ವಜನಿಕ ಸ್ಥಳದಲ್ಲಿ, ಕಚೇರಿಯ ಒಳಗೆ, ಪ್ರಯಾಣದ ವೇಳೆ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು.
    2. ಸಾಮಾಜಿಕ ಅಂತರ: ಒಬ್ಬೊರಿಂದ ಮತ್ತೊಬ್ಬರ ಮಧ್ಯೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
    3. ಸಭೆ-ಸಮಾರಂಭ: ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಸಭೆ ಸಮಾರಂಭ ನಡೆಸುವಂತಿಲ್ಲ. ಮದುವೆಯಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅತ್ಯಕ್ರಿಯೆ, ಅಂತಿಮನ ನಮನದ ವೇಳೆ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ.
    4. ದಂಡ: ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ವಿಧಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತಾಧಿಕಾರಿಗಳ ಸೂಚನೆಯಂತೆ ದಂಡ ವಿಧಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    5. ನಿಷೇಧ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಕುಡಿಯುವುದು, ಪಾನ್, ಗುಟ್ಕಾ, ತಂಬಾಕು ತಿನ್ನುವುದು, ಸಿಗರೇಟ್ ಸೇದುವುದು ನಿಷೇಧ.
    6. ವರ್ಕ್ ಫ್ರಂ ಹೋಮ್: ಕಂಪನಿಗಳು, ಸಂಸ್ಥೆಗಳು ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್ ಅನುಸರಿಸಬೇಕು.
    7. ಮುಂಜಾಗ್ರತಾ ಕ್ರಮ: ಕೆಲಸ ಅಥವಾ ವ್ಯವಹಾರದ ಸಮಯದಲ್ಲಿ ಅಧಿಕಾರಿಗಳು, ಕೆಲಸದ ಸ್ಥಳ, ಅಂಗಡಿ, ಮಾರುಕಟ್ಟೆ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.
    8. ಸ್ಕ್ರೀನಿಂಗ್: ಕಂಪನಿ, ವ್ಯವಹಾರದ ಸ್ಥಳಗಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇರಲೇಬೇಕು. ಜೊತೆಗೆ ಸಿಬ್ಬಂದಿ ಒಳಗೆ ಹಾಗೂ ಹೊರಗೆ ಹೋಗುವ ಜಾಗದಲ್ಲಿ ಸ್ಯಾನಿಟೈಜರ್ ಇರಿಸಬೇಕು.
    9. ಸ್ಯಾನಿಟೈಜೇಷನ್: ಕಚೇರಿಯ ಡೋರ್ ಹ್ಯಾಂಡಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಗಾಗ ಸ್ಯಾನಿಟೈಜೇಷನ್ ಮಾಡಬೇಕು.
    10. ಕೆಲಸ ವೇಳೆ ಸಾಮಾಜಿಕ ಅಂತರ: ಕಚೇರಿಯಲ್ಲಿ ಕೆಲಸ ಮಾಡುವಾಗ ಸಿಬ್ಬಂದಿಯ ಮಧ್ಯೆ ಅಂತರ ಇರಬೇಕು. ಜೊತೆಗೆ ಶಿಫ್ಟ್ ಗಳ ಮಧ್ಯೆ ಸ್ವಚ್ಛತೆ, ಸ್ಯಾನಿಟೈಜೇಷನ್ ಮಾಡಲು ಅನುಕೂಲವಾಗುವಂತೆ ಸಮಯದ ಅಂತರವಿರಬೇಕು.

  • ಆರ್‌ಸಿಬಿ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ: ಕುಂಬ್ಳೆ

    ಆರ್‌ಸಿಬಿ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ: ಕುಂಬ್ಳೆ

    ಬೆಂಗಳೂರು: 2019 ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ನೀರಸ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದೊಂದಿಗೆ ಟೂರ್ನಿಯಿಂದ ಹೊರ ನಡೆದು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಆದರೆ ತಂಡ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ ಎಂದು ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ತಂಡ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದರೂ ಕೂಡ ಟೂರ್ನಿಯ ಆರಂಭಿಕ 6 ಪಂದ್ಯಗಳಲ್ಲಿ ಸೋತಿತ್ತು. ತಂಡದ ಹರಾಜು ಪ್ರಕ್ರಿಯೆ ವೇಳೆಯೇ ಟೀಂ ಮ್ಯಾನೇಜ್‍ಮೆಂಟ್ ಎಡವಿದ್ದು, ಕೆಲ ಉತ್ತಮ ಆಟಗಾರರನ್ನು ಹೊರತು ಪಡಿಸಿ ಹೊಸ ಆಟಗಾರರನ್ನು ಖರೀದಿ ಮಾಡಿತ್ತು. ಅಲ್ಲದೇ ತಂಡದಲ್ಲಿ ಇರುವ ಉತ್ತಮ ಆಟಗಾರರಿಗೆ ಸರಿಯಾದ ಅವಕಾಶಗಳು ಕೂಡ ಲಭ್ಯವಾಗಿಲ್ಲ. ಒಟ್ಟಾರೆ ತಂಡ ನಿರ್ಧಾರ ಮಾಡುವುದರಲ್ಲಿ ಎಡವಿದ್ದೇ ಪ್ಲೇಆಫ್ ತಲುಪಲು ಕೂಡ ಅಸಾಧ್ಯವಾಯಿತು ಎಂದು ಕುಂಬ್ಳೆ ತಿಳಿಸಿದ್ದಾರೆ.

    ವಿದೇಶಿ ಆಟಗಾರರ ಆಯ್ಕೆಯಲ್ಲಿ ಕೇವಲ 3 ಆಟಗಾರರನ್ನು ಮಾತ್ರ ಆರ್‍ಬಿಸಿ ಆಯ್ಕೆ ಮಾಡಿಕೊಂಡಿತ್ತು. ಅಲ್ಲದೇ ಬ್ಯಾಟಿಂಗ್‍ನಲ್ಲಿ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆಯೇ ಹೆಚ್ಚಿನ ಒತ್ತಡ ಇತ್ತು. ಅವರು ವಿಫಲರಾದ ಸಂದರ್ಭದಲ್ಲಿ ತಂಡದ ಫಲಿತಾಂಶವೇ ಬೇರೆಯಾಗುತಿತ್ತು. ಬೌಲಿಂಗ್ ನಲ್ಲಿ ಅನುಭವಿ ಬೌಲರ್ ಉಮೇಶ್ ಯಾದವ್ ಅವರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದು ಹಾಗೂ ಯುವ ಆಟಗಾರರಾದ ಶಿವಂ ದುವೆ, ಅಕ್ಷ್‍ದೀಪ್‍ನಾಥ್ ನಿರೀಕ್ಷಿತ ಪ್ರದರ್ಶನ ನೀಡಿಲಿಲ್ಲ ಎಂದು 2009 ರಲ್ಲಿ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದ ಕುಂಬ್ಳೆ ಹೇಳಿದ್ದಾರೆ.

    ಇದೇ ವೇಳೆ ಆರ್ ಸಿಬಿ ತಂಡದಲ್ಲಿರುವ ಉತ್ತಮ ಅಂಶಗಳನ್ನು ಗುರುತಿಸಿರುವ ಕುಂಬ್ಳೆ, ನವದೀಪ್ ಶೈನಿ ಈ ಟೂರ್ನಿಯಲ್ಲಿ ಭರವಸೆಯ ಪ್ರದರ್ಶನ ನೀಡಿದ್ದಾರೆ. ಅವರ ಬೌಲಿಂಗ್ ಪ್ರದರ್ಶನ ಉತ್ತಮವಾಗಿತ್ತು. ಅಲ್ಲದೇ ಹೆಟ್ಮೇಯರ್, ಗುರ್ಕೀರಾತ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಸ್ಥಾನದಲ್ಲಿ ಪಾರ್ಥಿವ್ ಪಟೇಲ್ ನಿರ್ಣಯ ಇನ್ನಿಂಗ್ಸ್ ಗಳನ್ನು ಕಟ್ಟಿದ್ದರು. ಅಲ್ಲದೇ ಡೇಲ್ ಸ್ಟೈನ್ ಗಾಯಗೊಂಡಿದ್ದು ತಂಡಕ್ಕೆ ಹೊಡೆತ ನೀಡಿತು ಎಂದಿದ್ದಾರೆ.