Tag: Man of the Match

  • ಕನ್ನಡದ ‘ಮ್ಯಾನ್ ಆಫ್ ದ ಮ್ಯಾಚ್’ ಚಿತ್ರ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

    ಕನ್ನಡದ ‘ಮ್ಯಾನ್ ಆಫ್ ದ ಮ್ಯಾಚ್’ ಚಿತ್ರ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

    ರಾಮಾ ರಾಮಾ ರೇ ಖ್ಯಾತಿಯ ಡಿ ಸತ್ಯಪ್ರಕಾಶ್ ನಿರ್ದೇಶನದ  ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ಗೆ ಆಯ್ಕೆಯಾಗಿದೆ. ಫೆಸ್ಟಿವಲ್ಲಿನ ಹದಿನಾಲ್ಕನೇ ಆವೃತ್ತಿ, ಜೂನ್ 13ರಿಂದ 19ನೇ ತಾರಿಕಿನ ತನಕ ನಡೆಯಲಿದ್ದು, 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಾಣಲಿವೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಚಲನಚಿತ್ರವನ್ನು ನೋಡಿದ ವಿಮರ್ಶಕ, ಲಾರೆನ್ಸ್ ವೈಟ್ನರ್, ನಿರ್ದೇಶಕರನ್ನ  ಅಭಿನಂದಿಸಿ ಟ್ವೀಟ್ ಮಾಡಿ ‘ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‍ಗಾಗಿ ನೋಡಿದ ಒಂದು ಅದ್ಭುತವಾದ ಭಾರತೀಯ ವ್ಯಂಗ್ಯಭರಿತ ಚಿತ್ರ.  … ನಾನು ಅದಕ್ಕೆ 10/10 ನೀಡಿದ್ದೇನೆ’ ಎಂದು ಹೇಳಿದ್ದಾರೆ. ರಾಮಾ ರಾಮಾ ರೇ ಮತ್ತು ಒಂದಲ್ಲಾ ಎರಡಲ್ಲಾ ಸಿನಿಮಾಗಳ ನಂತರ ಮೂರನೇ ಚಿತ್ರ,  ಮ್ಯಾನ್ ಆಫ್ ದಿ ಮ್ಯಾಚ್. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಆಡಿಷನ್‌ಗೆ ಕರೆದ ನಿರ್ದೇಶಕ, ಆಡಿಷನ್‌ಗೆ ಹಾಜರಾಗುವ ಕಲಾವಿದರ ನಡುವೆ ಘರ್ಷಣೆಯನ್ನು ಸೃಷ್ಟಿಸುವ ಮೂಲಕ ಚಲನಚಿತ್ರವನ್ನು ಮಾಡುತ್ತಾರೆ. ದೊಡ್ಡ ಪಾತ್ರವರ್ಗ ಹೊಂದಿರುವ ಮತ್ತು ಪ್ರಸ್ತುತ ಸಾಮಾಜಿಕ ಸಂಘರ್ಷಗಳನ್ನು ಹಾಸ್ಯಮಯ ಮತ್ತು ವಿಡಂಬನಾತ್ಮಕ ರೀತಿಯಲ್ಲಿ ಸ್ಪರ್ಶಿಸುವ ಚಿತ್ರವಾಗಿದೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ನಟರಾಜ್ ಎಸ್ ಭಟ್ ಮತ್ತು ಧರ್ಮಣ್ಣ ಕಡೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಇಬ್ಬರೂ ರಾಮಾ ರಾಮಾ ರೇ ನಂತರ ಮತ್ತೆ ಒಟ್ಟಿಗೆ ಬರುತ್ತಿದ್ದಾರೆ. ಅಥರ್ವ ಪ್ರಕಾಶ್ ಮತ್ತು ಮಯೂರಿ ನಟರಾಜ್ ಅವರಂತಹ ಹೊಸಬರೊಂದಿಗೆ, ವೀಣಾ ಮತ್ತು ಸುಂದರ್ ಕೂಡ ಈ ಚಿತ್ರದಲ್ಲಿ ತಮ್ಮ ನಿಜ ಜೀವನದ ಪಾತ್ರವನ್ನು ನಿರ್ವಹಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸುವುದರ ಜೊತೆಗೆ, ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ

  • ಚಹಲ್‍ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡ್ಬೇಕಿತ್ತು: ಬೆನ್ ಸ್ಟೋಕ್ಸ್

    ಚಹಲ್‍ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡ್ಬೇಕಿತ್ತು: ಬೆನ್ ಸ್ಟೋಕ್ಸ್

    ನವದೆಹಲಿ: ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ  ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡಬೇಕಿತ್ತು ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

    ಸೋಮವಾರ ನಡೆದ ಐಪಿಎಲ್-2020ಯ 28ನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 87 ರನ್‍ಗಳಿಂದ ಗೆದ್ದು ಬೀಗಿದೆ. ಎಬಿಡಿ ವಿಲಿಯರ್ಸ್ ಅವರು ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದರೆ, ಬೆಂಗಳೂರು ತಂಡದ ಬೌಲರ್ ಗಳು ಬೌಲಿಂಗ್‍ನಲ್ಲಿ ಮ್ಯಾಜಿಕ್ ಮಾಡಿ ತಂಡ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    ಸೋಮವಾರದ ಆರ್‌ಸಿಬಿ  ಮತ್ತು ಕೆಕೆಆರ್ ಮ್ಯಾಚ್ ಮುಗಿದ ನಂತರ ಟ್ವೀಟ್ ಮಾಡಿರುವ ಬೆನ್ ಸ್ಟೋಕ್ಸ್, ಬ್ಯಾಟ್ಸ್ ಮ್ಯಾನ್‍ಗಳ ಗೇಮಿನಲ್ಲಿ ಇಂದು ಯಜೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಿತ್ತು. ಏಕೆಂದರೆ ಶಾರ್ಜಾದಂತ ಮೈದಾನದಲ್ಲಿ ಆತ ಉತ್ತಮವಾಗಿ ಬೌಲ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ನಿನ್ನೆಯ ಪಂದ್ಯದಲ್ಲಿ 33 ಬಾಲಿಗೆ 73 ರನ್ ಹೊಡೆದ ಎಬಿಡಿ ವಿಲಿಯರ್ಸ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಲಾಗಿದೆ.

    ಐಪಿಎಲ್‍ನಲ್ಲಿ ಕಳೆದ ಕೆಲ ಆವೃತ್ತಿಗಳಿಂದ ಆರ್‌ಸಿಬಿ ತಂಡದಲ್ಲಿ ಬೌಲಿಂಗ್ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈ ಆವೃತ್ತಿಯಲ್ಲಿ ಬೆಂಗಳೂರು ಬೌಲರ್ಸ್ ಗಳು ಮ್ಯಾಚಿಕ್ ಮೇಲೆ ಮ್ಯಾಜಿಕ್ ಮಾಡುತ್ತಿದ್ದಾರೆ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಯುಜ್ವೇಂದ್ರ ಚಹಲ್, ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 12 ರನ್ ನೀಡಿ ಒಂದು ವಿಕೆಟ್ ಕಿತ್ತು ಮಿಂಚಿದ್ದಾರೆ.

    ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಎಬಿಡಿಯವರ ಸ್ಫೋಟಕ ಆಟದಿಂದ ಆರ್‌ಸಿಬಿ ತಂಡ ಕೆಕೆಆರ್ ತಂಡಕ್ಕೆ 195 ರನ್‍ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡಕ್ಕೆ ಬೆಂಗಳೂರು ಬೌಲರ್ ಗಳು ಆರಂಭಿಕ ಆಘಾತ ನೀಡಿದರು. ಚಹಲ್ ಮತ್ತು ಸುಂದರ್ ಅವರ ಸ್ಪಿನ್ ದಾಳಿಗೆ ಕೆಕೆಆರ್ ಬ್ಯಾಟ್ಸ್ ಮ್ಯಾನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು. ಜೊತೆಗೆ ನಿಗದಿ 20 ಓವರಿನಲ್ಲಿ ಕೇವಲ 112 ರನ್ ಸಿಡಿಸಿ 87 ರನ್‍ಗಳಿಂದ ಕೋಲ್ಕತ್ತಾ ಸೋತಿತು.

  • ಮ್ಯಾಚ್ ವಿನ್ನರ್ ಮಿಥಾಲಿರಾಜ್ ನಗದು ಬಹುಮಾನದ ಮೊತ್ತಕ್ಕೆ ಭಾರೀ ಆಕ್ಷೇಪ!

    ಮ್ಯಾಚ್ ವಿನ್ನರ್ ಮಿಥಾಲಿರಾಜ್ ನಗದು ಬಹುಮಾನದ ಮೊತ್ತಕ್ಕೆ ಭಾರೀ ಆಕ್ಷೇಪ!

    ನವದೆಹಲಿ: ಏಷ್ಯಾಕಪ್ ಕ್ರಿಕೆಟ್ ನಲ್ಲಿ ಮಿಥಾಲಿ ರಾಜ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ನೀಡಿದ ನಗದು ಬಹುಮಾನದ ಮೊತ್ತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ಷೇಪ ಕೇಳಿಬಂದಿದೆ.

    ಏಷ್ಯಾ ಕಪ್‍ನ ಟಿ 20 ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಟೀಂ ಇಂಡಿಯಾ 142 ರನ್‍ಗಳ ಭರ್ಜರಿ ಗೆಲುವನ್ನು ಸಾಧಿಸಿತ್ತು. ಈ ಪಂದ್ಯದಲ್ಲಿ ಮಿಥಾಲಿ ರಾಜ್ 97 ರನ್ (13ಬೌಂಡರಿ, 1 ಸಿಕ್ಸರ್) ಸಿಡಿಸಿ ತಂಡದ ಗೆಲುವಿನ ಪ್ರಮುಖ ಪಾತ್ರವಹಿಸಿದ್ದಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು. 250 ಯು ಎಸ್ ಡಾಲರ್ (ಸುಮಾರು 16,781.25 ರೂ.) ನಗದು ಬಹುಮಾನವನ್ನು ಮಿಥಾಲಿ ರಾಜ್ ಅವರಿಗೆ ನೀಡಿ ಗೌರವಿಸಲಾಗಿತ್ತು.

    ಸಾಮಾನ್ಯವಾಗಿ ಈ ಸಾಧನೆಯನ್ನು ಮಾಡಿದ ಪುರುಷ ಕ್ರಿಕೆಟರ್ ಗಳಿಗೆ ಸುಮಾರು 2000 ಯು ಎಸ್ ಡಾಲರ್ (ಸುಮಾರು 1.34 ಲಕ್ಷ ರೂ.) ನಗದು ಬಹುಮಾನವನ್ನು ನೀಡಲಾಗುತ್ತದೆ. ಆದರೆ ಮಹಿಳಾ ಕ್ರಿಕೆಟ್ ಪಟುಗಳಿಗೆ ನಗದು ಬಹುಮಾನದ ಮೊತ್ತ ಕಡಿಮೆ ಯಾಕೆ ಎಂದು ಜನ ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ತಮ್ಮ ಪ್ರಶ್ನೆ ಮಾಡಿರುವ ಅಭಿಮಾನಿಗಳು ಮಹಿಳಾ ಕ್ರಿಕೆಟರ್ ಗಳು ಪರಿಶ್ರಮ ಪಟ್ಟರೂ ಉತ್ತಮ ಸಂಭಾವನೆ ಸಿಗುತ್ತಿಲ್ಲ. ರಣಜಿ ಆಟಗಾರರೂ ಕೂಡ ಇದಕ್ಕಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ. ಇದು ಬಿಪಿಎಲ್ ವ್ಯಕ್ತಿಯೊಬ್ಬನ ಮಾಸಿಕ ವೇತನಕ್ಕೆ ಸಮನಾಗಿದೆ. ಅಧಿಕಾರಿಗಳ ಈ ನಡೆ ಆಟಗಾರ್ತಿಯರಿಗೆ ಮಾಡಿದ ಅಪಮಾನ ಎಂದು ಕಮೆಂಟ್ ಮಾಡಿದ್ದಾರೆ.

  • 1 ವಿಕೆಟ್ ಪಡೆದು ಮಿಂಚಿದ ರಶೀದ್ ಖಾನ್‍ಗೆ ಪಂದ್ಯಶ್ರೇಷ್ಠ ಗೌರವ!

    1 ವಿಕೆಟ್ ಪಡೆದು ಮಿಂಚಿದ ರಶೀದ್ ಖಾನ್‍ಗೆ ಪಂದ್ಯಶ್ರೇಷ್ಠ ಗೌರವ!

    ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಬೌಲರ್ ರಶೀದ್ ಖಾನ್ 1 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದಾರೆ.

    ಪಂದ್ಯದಲ್ಲಿ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿದ್ದರು. 4 ಓವರ್ ನಲ್ಲಿ 13 ರನ್ ನೀಡಿದ್ದರು. ಇವರ ಬಾಲಿಗೆ ರನ್ ಗಳಿಸಲು ಮುಂಬೈ ಆಟಗಾರರು ಪರದಾಡಿದ್ದರು. 24 ಎಸೆತಗಳ ಪೈಕಿ 18 ಬಾಲಿಗೆ ಯಾವುದೇ ರನ್ ಬಂದಿರಲಲ್ಲ. ರಶೀದ್ ಖಾನ್ 2 ಬೌಂಡರಿ ಮತ್ತು ಒಂದು ವೈಡ್ ಮಾತ್ರ ನೀಡಿದ್ದರು. ಪಂದ್ಯದಲ್ಲಿ ರಶೀದ್ ಖಾನ್ 3.25 ಎಕಾನಮಿಯಲ್ಲಿ ಬೌಲಿಂಗ್ ಮಾಡಿ ರನ್ನಿಗೆ ಕಡಿವಾಣ ಹಾಕಿದ್ದರು.

    ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್‍ಗಳಿಸಿತ್ತು. 148 ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಪಂದ್ಯ ಗೆದ್ದಿತ್ತು. ಕೊನೆಯ ಓವರ್ ನಲ್ಲಿ 11 ರನ್ ಬೇಕಿತ್ತು. ಕಟ್ಟಿಂಗ್ ಎಸೆದ ಮೊದಲ ಎಸೆತವನ್ನು ಹೂಡ ಸಿಕ್ಸರ್ ಗೆ ಅಟ್ಟಿದ್ದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಂದ ಕಾರಣ ಹೈದರಾಬಾದ್ ತಂಡ ಜಯಗಳಿಸಿತು.

    ಹೈದರಾಬಾದ್ ಪರ ಸಂದೀಪ್ ಶರ್ಮಾ, ಸ್ಟ್ಯಾನ್‍ಲೇಕ್, ಕೌಲ್ ತಲಾ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಶಕೀಬ್ ಉಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.