Tag: man ki bath

  • ಹನಿಮೂನ್‍ಗೆ ಹೋಗದೆ ಬೀಚ್ ಕ್ಲೀನ್ ಮಾಡಿದ್ದ ಜೋಡಿಗೆ ಗಣರಾಜ್ಯೋತ್ಸವಕ್ಕೆ ಆಮಂತ್ರಣ

    ಹನಿಮೂನ್‍ಗೆ ಹೋಗದೆ ಬೀಚ್ ಕ್ಲೀನ್ ಮಾಡಿದ್ದ ಜೋಡಿಗೆ ಗಣರಾಜ್ಯೋತ್ಸವಕ್ಕೆ ಆಮಂತ್ರಣ

    ಉಡುಪಿ: ಮದುವೆಯಾಗಿ ಹನಿಮೂನ್‍ಗೆ ಹೋಗದೆ ತಮ್ಮ ಊರಿನ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛ ಮಾಡಿದ್ದ ಉಡುಪಿಯ ಜೋಡಿಗೆ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಬೈಂದೂರಿನ ಅನುದೀಪ್, ಮಿನೂಷಾ ದೆಹಲಿಗೆ ಹಾರಿದ್ದಾರೆ. ನಮ್ಮ ಪ್ರವಾಸಿ ತಾಣಗಳು ನಮ್ಮ ಸಂಪತ್ತು. ಕಡಲ ತೀರಗಳನ್ನು ಸುಂದರವಾಗಿ ಇಡೋಣ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮನ್ ಕಿ ಬಾತ್ ನಲ್ಲಿ ಕರೆ ಕೊಟ್ಟಿದ್ದರು. ಅನುದೀಪ್ ಮಿನೂಷಾ ಜೋಡಿಯ ಕೆಲಸವನ್ನು ಉಲ್ಲೇಖ ಮಾಡಿದ್ದರು.

    ಕೇಂದ್ರ ಸರ್ಕಾರದಿಂದ ಇಬ್ಬರಿಗೂ ಗಣರಾಜ್ಯೋತ್ಸವದ ಆಮಂತ್ರಣ (Republic Day Invitation) ಬಂದಿದೆ. ಉಡುಪಿ ಜಿಲ್ಲೆ ಜೋಡಿ ದೆಹಲಿ ತಲುಪಿದೆ. ನಾಳಿನ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಈ ಸಂತೋಷವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ಧಾಂತಕ್ಕೆ ಬದ್ಧರಾದವರು ಬೇರೆ ಪಕ್ಷಕ್ಕೆ ಒಗ್ಗಲ್ಲ: ಶೆಟ್ಟರ್ ಬಿಜೆಪಿಗೆ ಮರಳಿದ್ದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

    ಭಾರತ ಸರ್ಕಾರಕ್ಕೆ, ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಈ ಜೋಡಿ ಧನ್ಯವಾದ ಹೇಳಿದ್ದಾರೆ. 2020ರಲ್ಲಿ ಮದುವೆಯಾಗಿದ್ದ ಅನುದೀಪ್ ಮತ್ತು ಮಿನುಷಾ ಹೊರಗಡೆ ಓಡಾಡುವ ಅವಕಾಶವನ್ನು ಕಳೆದುಕೊಂಡಿದ್ದರು ಕರೋನ ಕಾಲದ ನಿರ್ಬಂಧ ಇರುವುದರಿಂದ ಎಲ್ಲೂ ಸಂಚಾರ ಮಾಡುವ ಅವಕಾಶಗಳು ಇರಲಿಲ್ಲ. ಹಾಗೆ ಸೋಮೇಶ್ವರ ಬೈಂದೂರು ಸುತ್ತಮುತ್ತ ಸುಮಾರು 700 ಮೀಟರ್ ನಷ್ಟು ಕಡಲ ತಡೆಯನ್ನ ಕ್ಲೀನ್ ಮಾಡಿದ್ದಾರೆ. ಈ ಜೋಡಿಹ ಕೆಲಸಕ್ಕೆ ಸುತ್ತಮುತ್ತಲಿನ ಯುವಕ ಯುವತಿಯರು ಕೈಜೋಡಿಸಿದ್ದರು. ಸುಮಾರು 500 ಕೆಜಿಯಷ್ಟು ಕಸ ಸಂಗ್ರಹ ಮಾಡಿದ್ದರು.

    ಪ್ರವಾಸಕ್ಕೆಂದು ಹೋಗುವ ಯಾರೂ ಪರಿಸರವನ್ನು ಕಲುಷಿತ ಮಾಡಬೇಡಿ. ತಿರುಗಾಟಕ್ಕೆ ಕೊಂಡು ಹೋದ ವಸ್ತುವನ್ನು ಎಲ್ಲೂ ಎಸೆಯಬೇಡಿ ಎಂದು ಈ ಜೋಡಿ ಕರೆ ನೀಡಿದೆ.

  • ಮನ್ ಕೀ ಬಾತ್ ಕೇಳುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಕಾರ್ಯಕರ್ತ

    ಮನ್ ಕೀ ಬಾತ್ ಕೇಳುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಕಾರ್ಯಕರ್ತ

    ಮಂಗಳೂರು: ಮದುವೆ ಮನೆ ಎಂದರೆ ಪರಸ್ಪರ ಮಾತು, ನಗು, ಮಕ್ಕಳ ಹರಟೆ ಎಲ್ಲವೂ ಇರುತ್ತೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮದುವೆ ಹಾಲ್ ನಲ್ಲಿ ಮಾತ್ರ ಮೋದಿ ಅವರ ಮನ್ ಕೀ ಬಾತ್ ಕೇಳಿಸುತಿತ್ತು.

    ಹೌದು. ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತ ಜಯರಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ 53ನೇ ಮನದ ಮಾತು ಕೇಳುತ್ತಲೇ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಭಾನುವಾರ ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಜಯರಾಮ ಹಸೆಮಣೆ ಏರಿದ್ದರು.

    ಮೋದಿಯ ಮನ್ ಕೀ ಬಾತ್ ದಿನವಾಗಿದ್ದರಿಂದ ಮದುವೆಗೆ ಆಗಮಿಸಿದ್ದ ಜನರಿಗೆ ಮೋದಿಯ ರೇಡಿಯೋ ಮಾತು ಕೇಳುವಂತೆ ವ್ಯವಸ್ಥೆ ಮಾಡಿದ್ದರು. 11.30ರ ವೇಳೆಗೆ ಧಾರಾ ಮುಹೂರ್ತದಲ್ಲಿ ಮದುವೆಯಾದ ಜಯರಾಮ, ಅತ್ತ ಮೋದಿ ಮಾತು ಕೇಳುತ್ತಲೇ ಹಸೆಮಣೆ ತುಳಿದಿದ್ದಾರೆ.

    ನವ ವಧುವರರು ಪ್ರಧಾನಿ `ಮನ್ ಕಿ ಬಾತ್’ ಆಲಿಸಲು ಮಂಟಪ ಬಿಟ್ಟು ರೇಡಿಯೋ ಬಳಿ ಬಂದು ಸೇರಿದ ಎಲ್ಲ ಬಂಧುಗಳೊಂದಿಗೆ ಕುಳಿತು ಮೋದಿಯ ಮನದ ಮಾತಿಗೆ ಸಾಕ್ಷಿಗಳಾದರು. ಮನದ ಮಾತು ಕೇಳಿಸುವುದಕ್ಕಾಗಿ ವಿಶೇಷವಾಗಿ ರೇಡಿಯೋ ಮತ್ತು ಸ್ಪೀಕರ್ ವ್ಯವಸ್ಥೆ ಮಾಡಿದ್ದರು. ಸೇರಿದ ನೂರಾರು ಬಂಧು ಮಿತ್ರರು ಒಂದೆಡೆ ಕೂತು ಮನದ ಮಾತನ್ನು ಆಲಿಸಿ ನವ ಜೋಡಿಯನ್ನು ಆಶೀರ್ವದಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ಭಾರತಕ್ಕೆ ವಿಐಪಿ ಅಲ್ಲ, Every Person Important: ಮೋದಿ

    ಹೊಸ ಭಾರತಕ್ಕೆ ವಿಐಪಿ ಅಲ್ಲ, Every Person Important: ಮೋದಿ

    ನವದೆಹಲಿ: ದೇಶದಲ್ಲಿ ಕೆಲವರನ್ನು ಗಣ್ಯ ವ್ಯಕ್ತಿಗಳೆಂದು ಗುರುತಿಸುವ ಬದಲು ಎಲ್ಲರನ್ನೂ ಗಣ್ಯರೆಂದು ಪರಿಗಣಿಸಬೇಕಿದೆ ಎಂದು ಮೋದಿ ಕೆಂಪು ದೀಪ ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.

    31ನೇ ವಾರದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹನಗಳ ಮೇಲೆ ಕೆಂಪು ದೀಪ ಬಳಕೆ ವಿಐಪಿ ಸಂಸ್ಕೃತಿ. ಕೆಂಪು ದೀಪಗಳ ಬಳಕೆ ನಿಷೇಧಿಸಿದ ನಂತರ ನನಗಿದು ಮನವರಿಕೆಯಾಯಿತು. ಕೆಂಪು ದೀಪ ಬಳಕೆ ನಿಷೇಧಿಸಿದ್ದಕ್ಕೆ ಜಬಲ್‍ಪುರ್ ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಅಭಿನಂದನೆ ಸಲ್ಲಿಸಿದ್ದಾರೆ ಅಂತಾ ಅವರು ಹೇಳಿದ್ರು.

    ಹವಾಮಾನ ವೈಪರೀತ್ಯ ಹಾಗೂ ಬೇಸಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ದೇಶದ ನಾಗರಿಕರಿಗೆ ಕಿವಿಮಾತು ಹೇಳಿದ್ರು. ಹವಾಮಾನ ವೈಪರೀತ್ಯ ದೇಶದ ಆರ್ಥಿಕಾಭಿವೃದ್ಧಿಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಜೆ ದಿನದಲ್ಲಿ ಹೊಸ ಆವಿಷ್ಕಾರಗಳನ್ನ ಕೈಗೊಳ್ಳಬೇಕು. ಮಕ್ಕಳು, ಯುವಜನತೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಗಾಳಿ, ನೀರಿನ ಮಾಲಿನ್ಯ ತಡೆಯುವುದು ಇಂದಿನ ಮೂಲಭೂತ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ತಾಪಮಾನ ಏರಿಕೆಯಿಂದ ಋತುಮಾನದಲ್ಲಿ ಬದಲಾವಣೆಗಳು ಆಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಮೇ-ಜೂನ್ ನಲ್ಲಿನ ಬಿಸಿಲು ತಾಪ ಇದೀಗ ಏಪ್ರಿಲ್-ಮೇನಲ್ಲೇ ಆಗುತ್ತಿದೆ. ಇದರಿಂದಾಗಿ ಅಂತರ್ಜಲ ಕುಸಿಯುತ್ತಿದ್ದು ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕೈಲಾದಷ್ಟು ನೀರು, ಆಹಾರ ವ್ಯವಸ್ಥೆ ಮಾಡಬೇಕು ಅಂತಾ ಅಂದ್ರು.

    ಬಡವರ ಬಳಿಗೆ ಹೋಗಿ ಅವರ ಸಂಕಷ್ಟ ಅರಿತು ನೆರವಾಗಬೇಕು. ಯುವಕರು ರೋಬೋಟ್ ನಂತೆ ವರ್ತಿಸಬಾರದು. ತಂತ್ರಜ್ಞಾನದಿಂದಾಗಿ ಮನೆಯೊಳಗಿದ್ದರೂ ದೂರವಾದಂತಿದ್ದಾರೆ. ದೇಶವನ್ನು ಸುತ್ತಬೇಕು. ವೈವಿಧ್ಯತೆಯನ್ನು ಅರಿಯಬೇಕು ಎಂದು ಸಲಹೆ ನೀಡಿದ ಅವರು, ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಕಲಿಯಿರಿ ಅಂತಾ ಹೇಳಿದ್ದಾರೆ. ಇದೇ ವೇಳೆ ಸಂತ ರಾಮಾನುಜ ಆಚಾರ್ಯರ ಜನ್ಮ ದಿನಾಚರಣೆಯನ್ನೂ ಪ್ರಧಾನಿ ಸ್ಮರಿಸಿದರು.