Tag: man

  • ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

    ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

    – ಹೃದಯಾಘಾತಕ್ಕೆ 35 ವರ್ಷದ ವ್ಯಕ್ತಿ ಸಾವು

    ಬಳ್ಳಾರಿ: ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಂಡೂರು (Sandur) ತಾಲೂಕಿನ ಕಾಳಿಂಗೇರಿಯಲ್ಲಿ ನಡೆದಿದೆ.

    ಕಾಳಂಗೇರಿಯ ದೀಕ್ಷಾ (12) ಮೃತ ಬಾಲಕಿ. 6ನೇ ತರಗತಿಯಲ್ಲಿ ಓದುತ್ತಿದ್ದ ದೀಕ್ಷಾ ಎಂದಿನಂತೆ ಸಿದ್ಧಳಾಗಿ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ತೆರಳುವಾಗ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕಿ ದೀಕ್ಷಾಳನ್ನ ಕೂಡಲೇ ಕುಟುಂಬಸ್ಥರು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ದೀಕ್ಷಾ ಮೃತಪಟ್ಟಿದ್ದಾಳೆ. ದೀಕ್ಷಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರೀ ಮಳೆ- ದಕ್ಷಿಣ ಕನ್ನಡದ ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಇನ್ನೂ ಹೃದಯಾಘಾತದಿಂದ 35 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದಲ್ಲಿ ನಡೆದಿದೆ. 35 ವರ್ಷದ ರಾಜೇಶ್ ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ. ರಾಜೇಶ್ ಸೋಮವಾರ ಸಂಜೆ ತಾರಾನಗರ ಗ್ರಾಮದ ಮನೆಲ್ಲಿರುವಾಗ ಎದೆ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

    ಹಾರ್ಟ್ ಅಟ್ಯಾಕ್ ಲಕ್ಷಣಗಳು ಇದ್ದ ಹಿನ್ನೆಲೆ, ಕೂಡಲೇ ಬಳ್ಳಾರಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಗಿದೆ. ತಾರಾನಗರದಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡುತ್ತಿರುವಾಗಲೇ ರಾಜೇಶ್ ಸಾವನ್ನಪ್ಪಿದ್ದಾನೆ. ಜಿಂದಾಲ್ ಕಾರ್ಖಾನೆಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್‌ಗೆ ಇನ್ನೂ ವಿವಾಹವೂ ಆಗಿರಲಿಲ್ಲ. ಘಟನೆ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದು ಶಕ್ತಿ ಪ್ರದರ್ಶನಕ್ಕೆ ಸಜ್ಜು – 1 ಬಸ್ಸಿಗೆ 6 ಸಾವಿರ ಕೊಡುತ್ತಿದ್ದಾರೆ ಕೈ ನಾಯಕರು

  • ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

    ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ನಡುವೆ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳದ ಪುಳಿಕುಕ್ಕು ಬಳಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

    ರವಿಕುಮಾರ್ ಅವರು ನದಿ ಮಧ್ಯೆ ಪೊದೆ ಹಿಡಿದುಕೊಂಡು ನಿಂತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ವಿಚಾರವನ್ನು ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಕಡಬ ಎಸ್‍ಐ ಅಭಿನಂದನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ನೇಣಿಗೆ ಶರಣು

    ಕಡಬ ಪೊಲೀಸ್, ಅಗ್ನಿಶಾಮಕ ದಳ, ಶೌರ್ಯ ತಂಡದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕಡಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಡಬ ಆಸ್ಪತ್ರೆಗೆ ತಹಶಿಲ್ದಾರ್ ಪ್ರಭಾಕರ್ ಖಜೂರೆ ಭೇಟಿ ನೀಡಿದ್ದಾರೆ.

  • ಮಹಿಳೆಯನ್ನು ಉಸಿರುಗಟ್ಟಿಸಿ, ಕಾರಿನ ಹಿಂಬದಿ ಎಳೆದೊಯ್ದು ರೇಪ್‌ ಮಾಡಿದ!

    ಮಹಿಳೆಯನ್ನು ಉಸಿರುಗಟ್ಟಿಸಿ, ಕಾರಿನ ಹಿಂಬದಿ ಎಳೆದೊಯ್ದು ರೇಪ್‌ ಮಾಡಿದ!

    ನ್ಯೂಯಾರ್ಕ್:‌ ಮುಸುಕುಧಾರಿ ವ್ಯಕ್ತಿಯೊಬ್ಬ ಮಹಿಳೆಯನ್ನು ಉಸಿರುಗಟ್ಟಿಸಿ ಬಳಿಕ ಕಾರಿನ ಹಿಂದೆ ಎಳೆದುಕೊಂಡು ಹೋಗಿ ನ್ಯೂಯಾರ್ಕ್ ರಸ್ತೆಯಲ್ಲಿ ಅತ್ಯಾಚಾರವೆಸಗಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ವ್ಯಕ್ತಿಯ ಬಗ್ಗೆ ಇನ್ನೂ ಗುರುತು ಪತ್ತೆಯಾಗಿಲ್ಲ. 45 ವರ್ಷದ ಸಂತ್ರಸ್ತೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯ ಮೇಲೆ ಈ ಕೃತ್ಯ ನಡೆದಿದೆ. ಈ ಘಟನೆಯ ಸಂಪೂರ್ಣ ವೀಡಿಯೋ ಸಿಸಿಟಿವಿ (CCTV Video) ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮಹಿಳೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬಿಳಿ ಬಟ್ಟೆಯಿಂದ ಮುಖವನ್ನು ಕವರ್‌ ಮಾಡಿಕೊಂಡ ವ್ಯಕ್ತಿಯೊಬ್ಬ ಮಹಿಳೆಯ ಮುಂದೆ ಬಂದು ನಿಲ್ಲುತ್ತಾನೆ. ಈ ವೇಳೆ ಇಬ್ಬರ ನಡುವೆ ಸಣ್ಣ ಸಂಭಾಷಣೆಯೊಂದು ನಡೆಯುತ್ತದೆ. ಅದಾದ ಬಳಿಕ ಮಹಿಳೆ ಅಲ್ಲಿಂದ ಮುಂದಕ್ಕೆ ಚಲಿಸುತ್ತಾರೆ. ಈ ವೇಳೆ ವ್ಯಕ್ತಿ ಹಿಂದಿನಿಂದ ಬಂದು ಆಕೆಯನ್ನು ಉಸಿರುಗಟ್ಟುವಂತೆ ಹಿಡಿದುಕೊಳ್ಳುತ್ತಾನೆ. ಅಲ್ಲದೇ ಆಕೆಯನ್ನು ಎಳೆದುಕೊಂಡು ಕಾರಿನ ಹಿಂಬದಿಗೆ ಹೋಗಿ ಅತ್ಯಾಚಾರವೆಸಗುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿಯರ ಅಶ್ಲೀಲ ಫೋಟೋ ಶೇರ್ ಮಾಡಿದ ಯುವಕ ಅರೆಸ್ಟ್

    ಸದ್ಯ ಮಹಿಳೆಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗದೆ. ಯುಎಸ್ ಮಾಧ್ಯಮದ ವರದಿಯ ಪ್ರಕಾರ, ಸದ್ಯ ಮಹಿಳೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ.

    ಇತ್ತ ನ್ಯೂಯಾರ್ಕ್ ಪೊಲೀಸರು ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈಗಾಗಲೇ ದಾಳಿಕೋರನ ವಿವರಣೆಯನ್ನು ಬಿಡುಗಡೆ ಮಾಡಿದ್ದಾರೆ. ಕಪ್ಪು ಸ್ವೆಟ್ ಶರ್ಟ್, ಬಿಳಿ ಪ್ಯಾಂಟ್ ಮತ್ತು ಕಪ್ಪು-ಕೆಂಪು-ಬಿಳಿ ಸ್ನೀಕರ್ಸ್ (ಶೂ) ಧರಿಸಿರುವ ವ್ಯಕ್ತಿಯನ್ನು 5 ಅಡಿ 9 ಇಂಚು ಎತ್ತರ ಎಂದು ಅವರು ವಿವರಿಸಿದ್ದಾರೆ.

  • ಮೂಕಿಯಾಗಿರೋ ಪತ್ನಿ- ಶಿವನಿಗೆ ತನ್ನ ನಾಲಿಗೆಯನ್ನೇ ಅರ್ಪಿಸಿದ ಪತಿ!

    ಮೂಕಿಯಾಗಿರೋ ಪತ್ನಿ- ಶಿವನಿಗೆ ತನ್ನ ನಾಲಿಗೆಯನ್ನೇ ಅರ್ಪಿಸಿದ ಪತಿ!

    ರಾಯ್ಪುರ: ಮೂಢನಂಬಿಕೆಗೆ ಮಾರು ಹೋದ 33 ವರ್ಷದ ಯುವಕನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿದ ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆ ಛತ್ತೀಸ್‌ಗಢದ ದುರ್ಗ್ (Chhattisgarh’s Durg) ಜಿಲ್ಲೆಯಲ್ಲಿ ನಡೆದಿದೆ.

    ಅಂಜೋರಾ ಪೊಲೀಸ್ ಚೌಕಿ ವ್ಯಾಪ್ತಿಯ ತಾನಾಡು ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕ, ಸಹೋದರನ ಬರ್ಬರ ಹತ್ಯೆ – ಯುವತಿ ತಂದೆಯಿಂದಲೇ ಡಬಲ್ ಮರ್ಡರ್!

    ಮಾಹಿತಿಗಳ ಪ್ರಕಾರ, ರಾಜೇಶ್ವರ್ ನಿಶಾದ್ ಗ್ರಾಮದ ಕೆರೆಗೆ ತೆರಳಿ ಕೆಲ ಮಂತ್ರಗಳನ್ನು ಪಠಿಸಿ ಬಳಿಕ ಚಾಕುವಿನಿಂದ ನಾಲಿಗೆಯನ್ನು ಕೊಯ್ದು ದಡದಲ್ಲಿರುವ ಕಲ್ಲಿನ ಮೇಲೆ ಇಟ್ಟಿದ್ದಾನೆ. ಇತ್ತ ದೇವಸ್ಥಾನದಲ್ಲಿ ರಕ್ತಸ್ರಾವವಾಗುತ್ತಿದ್ದುದನ್ನು ಕಂಡ ಗ್ರಾಮಸ್ಥರು ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ.

    ಗ್ರಾಮಸ್ಥರ ಪ್ರಕಾರ, ನಿಶಾದ್ ಅವರ ಪತ್ನಿ ಮೂಕಿಯಾಗಿದ್ದಾರೆ. ಹೀಗಾಗಿ ನನ್ನ ಕೆಲವೊಂದು ಆಸೆಗಳನ್ನು ಪೂರೈಸಲು ಶಿವನಿಗೆ ತನ್ನ ನಾಲಿಗೆಯನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

    ನಿಶಾದ್ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಘಟನೆಯು ಮೂಢನಂಬಿಕೆಯ ಪ್ರಕರಣವೆಂದು ತೋರುತ್ತದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

  • 7 ವರ್ಷದ ಮಗುವಿಗೆ ಕಚ್ಚಿದ್ದಕ್ಕೆ ಸಾಕು ನಾಯಿಯನ್ನೇ ಕೊಂದು ತಿಂದ!

    7 ವರ್ಷದ ಮಗುವಿಗೆ ಕಚ್ಚಿದ್ದಕ್ಕೆ ಸಾಕು ನಾಯಿಯನ್ನೇ ಕೊಂದು ತಿಂದ!

    – ರೊಚ್ಚಿಗೆದ್ದ ಪ್ರಾಣಿಪ್ರಿಯರು

    ಬ್ಯಾಂಕಾಕ್:‌ 7 ವರ್ಷದ ಕಂದಮ್ಮನಿಗೆ ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಸಾಕು ನಾಯಿಯನ್ನೇ ಕೊಂದು ತಿಂದ ವಿಚಿತ್ರ ಘಟನೆಯೊಂದು ಥೈಲಾಂಡ್‌ನಲ್ಲಿ (Thailand), ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ವ್ಯಕ್ತಿಯನ್ನು 42 ವರ್ಷದ ಸಾಂಗ್‌ವುಟ್ ಚುಥಾಂಗ್ ಎಂದು ಗುತಿಸಲಾಗಿದೆ. ಈ ಘಟನೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿಸಿಟಿವಿ ದೃಶ್ಯದಲ್ಲೇನಿದೆ..?: ಸಾಂಗ್‌ವುಟ್ ತನ್ನ 10 ವರ್ಷದ ಸಾಕು ನಾಯಿಯ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಎಳೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಮರಕ್ಕೆ ನೇತು ಹಾಕುವ ಮೂಲಕ ನರಳಿ ನರಳಿ ಸಾಯುವಂತೆ ಮಾಡಿದ್ದಾನೆ. ಶ್ವಾನ ಸತ್ತ ಬಳಿಕ ಅದರ ದೇಹವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸಾಂಗ್‌ವುಟ್ ಈ ಕೃತ್ಯವನ್ನು ತನ್ನ 7 ವರ್ಷದ ಸೋದರಳಿಯನ ಮುಂದೆಯೇ ಎಸಗಿದ್ದಾನೆ.

    ಸದ್ಯ ಪ್ರಕರಣ ಸಂಬಂಧ ಸಾಂಗ್‌ವುಟ್‌ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಳಿಕ ತನಿಖೆಯ ವೇಳೆ ಶ್ವಾನವನ್ನು ಕೊಂದ ಬಗ್ಗೆ ಬಾಯಿಬಿಟ್ಟಿದ್ದಾನೆ. ಆದರೆ ಹತ್ಯೆ ಮಾಡಿ ಬಳಿಕ ಏನು ಮಾಡಿದ್ದಾನೆ ಎಂಬುದನ್ನು ಪೊಲೀಸರ ಮುಂದೆ ಹೇಳಲು ನಿರಾಕರಿಸಿದ್ದಾನೆ. ಹೆಚ್ಚಿನ ತನಿಖೆ ನಡೆಸಿದಾಗ ಸಾಂಗ್‌ವುಟ್ ಸತ್ಯ‌ ಕಕ್ಕಿದ್ದಾನೆ. ನಾಯಿಯನ್ನು ತಿಂದು ಅದರ ಮಾಂಸವನ್ನು ರೋಜ್ ಎಂಬ ಸ್ನೇಹಿತನೊಂದಿಗೆ ಹಂಚಿಕೊಂಡಿರುವುದಾಗಿ ತಿಳಿಸಿದ್ದಾನೆ. ಇತ್ತ ಪ್ರಕರಣ ಸಂಬಂಧ ಸಾಂಗ್‌ವುಟ್‌ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್‌ನಲ್ಲಿ ನಾಯಿ ಮಾಂಸ ಪತ್ತೆಯಾಗಿದೆ.  ಇದನ್ನೂ ಓದಿ: ಮದ್ಯ ಕುಡಿಸಿ ವಿದ್ಯಾರ್ಥಿಯೊಂದಿಗೆ ಸೆಕ್ಸ್‌ – ಪಾಠ ಹೇಳಿಕೊಡಲು ಹೋದ ಶಿಕ್ಷಕಿ ಹೀಗೆ ಮಾಡೋದಾ?

    ಥಾಯ್ ಪೊಲೀಸರು ಸಾಂಗ್‌ವುಟ್‌ನ ಸ್ನೇಹಿತ ರೋಜ್‌ನನ್ನು ಸಹ ಬಂಧಿಸಿದ್ದಾರೆ. ಅವರಿಬ್ಬರಿಗೂ ಥಾಯ್ಲೆಂಡ್‌ನ ಕ್ರಿಮಿನಲ್ ಕಾನೂನಿನ ಸೆಕ್ಷನ್ 340 (ಅಪರಾಧಕ್ಕೆ ಸಹಾಯ ಮಾಡಲು ವಾಹನವನ್ನು ಬಳಸುವುದು) ಮತ್ತು ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳ ಶವಗಳನ್ನು ತ್ಯಜಿಸುವುದು) ಜೊತೆಗೆ ಸೆಕ್ಷನ್ 20 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಪ್ರಾಣಿಪ್ರಿಯರು ಸಾಂಗ್‌ವುಟ್‌ ವಿರುದ್ಧ ರೊಚ್ಚಿಗೆದ್ದಿದ್ದಾರೆ.

  • ಐಸ್‌ಕ್ರೀಂ ಮಾರುತ್ತಲೇ ಹಸ್ತಮೈಥುನ‌ ಮಾಡಿಕೊಂಡು ಸಿಕ್ಕಿಬಿದ್ದ!

    ಐಸ್‌ಕ್ರೀಂ ಮಾರುತ್ತಲೇ ಹಸ್ತಮೈಥುನ‌ ಮಾಡಿಕೊಂಡು ಸಿಕ್ಕಿಬಿದ್ದ!

    ಹೈದರಾಬಾದ್:‌ ವ್ಯಾಪಾರಿಯೊಬ್ಬ ಐಸ್‌ಕ್ರೀಂ ಮಾರುತ್ತಲೇ ಹಸ್ತಮೈಥುನ‌ ಮಾಡಿಕೊಂಡು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದ್ದು, ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವಾರಂಗಲ್ ಜಿಲ್ಲೆಯ ನೆಕ್ಕೊಂಡದಲ್ಲಿ ರಾಜಸ್ಥಾನ ಮೂಲದ ಕಲುರಾಮ್ ಕುರ್ಬಿಯಾ, ತಳ್ಳುವ ಗಾಡಿಯಲ್ಲಿ ಐಸ್‌ಕ್ರೀಂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದನು.

    ಒಂದು ದಿನ ಕುರ್ಬಿಯಾ ಐಸ್‌ಕ್ರೀಂ ಮಾರಾಟ ಮಾಡಲು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ ಹಸ್ತಮೈಥುನ ಮಾಡಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಕೂಡಲೇ ವ್ಯಕ್ತಿಯನ್ನು ಬಂಧಿಸಿದ್ದಾರೆ.

    ಇತ್ತ ವೈರಲ್‌ ಆದ ವೀಡಿಯೋ ನೋಡಿ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಆಹಾರ ನಿರೀಕ್ಷಕರು ಮಾದರಿಗಳನ್ನು ಸಂಗ್ರಹಿಸಿದರು. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯಗಳಿಗಾಗಿ ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ ಕುರ್ಬಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

    ವೀಡಿಯೋದಲ್ಲಿ ಕಂಡುಬರುವ ಕೃತ್ಯದ ನಿಖರ ಸ್ವರೂಪವನ್ನು ಪೊಲೀಸರು ನಿರ್ದಿಷ್ಟಪಡಿಸಿಲ್ಲ. ಆದರೆ ಇದು ಅನುಚಿತ ವರ್ತನೆಯನ್ನು ಒಳಗೊಂಡಿದೆ ಎಂದು ಹೇಳಿದರು.

  • ಗೇಟ್‌ ಮುಚ್ಚದ ನೆರೆಮನೆ ವ್ಯಕ್ತಿಯ ಕಿವಿ ಕಚ್ಚಿ ನುಂಗಿದ ಮಹಿಳೆ!

    ಗೇಟ್‌ ಮುಚ್ಚದ ನೆರೆಮನೆ ವ್ಯಕ್ತಿಯ ಕಿವಿ ಕಚ್ಚಿ ನುಂಗಿದ ಮಹಿಳೆ!

    ನವದೆಹಲಿ: ಮನೆಯ ಗೇಟ್‌ ಹಾಕದ್ದಕ್ಕೆ ರೊಚ್ಚಿಗೆದ್ದ ಮಹಿಳೆಯೊಬ್ಬಳು ನೆರೆಮನೆಯವನ ಕಿವಿ ಕಚ್ಚಿ (Agra Woman Bites Neighbour’s Ear) ಬಳಿಕ ಪೀಸ್‌ ನುಂಗಿದ ಪ್ರಸಂಗವೊಂದು ಆಗ್ರಾದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಕಿವಿ ಕಳೆದುಕೊಂಡ ವ್ಯಕ್ತಿಯನ್ನು ರಾಮ್‌ವೀರ್ ಬಘೇಲ್ ಎಂದು ಗುರುತಿಸಲಾಗಿದ್ದು, ಇವರು ಸೈಕಲ್‌ ರಿಕ್ಷಾ ಓಡಿಸುತ್ತಿದ್ದಾರೆ. ರಾಖಿ, ಆರೋಪಿ ಮಹಿಳೆ. ವ್ಯಕ್ತಿಯ ಕುಟುಂಬ ಹಾಗೂ ಮಹಿಳೆಯ ಕುಟುಂಬ ನ್ಯೂ ಆಗ್ರಾ ಪ್ರದೇಶದ ವಸತಿಗೃಹದಲ್ಲಿ ಬಾಡಿಗೆಗೆ ವಾಸವಾಗಿದೆ. ರಾಖಿಯು ಇತರ ಬಾಡಿಗೆದಾರರೊಂದಿಗೆ ಪ್ರತಿದಿನವೂ ಜಗಳ ಮಾಡುತ್ತಿದ್ದಳು ಎಂದು ರಾಮ್‌ವೀರ್ ಆರೋಪಿಸಿದ್ದಾರೆ.

    ನಡೆದಿದ್ದೇನು..?: ಮಾರ್ಚ್ 4 ರಂದು ಬಾಡಿಗೆದಾರರ ಮಗನಿಗೆ ಪರೀಕ್ಷೆ ಇದೆ ಎಂದು ಹೇಳಿದರು. ಹೀಗಾಗಿ ಬೆಳಗ್ಗೆ 6 ಗಂಟೆಗೆ ಮಗುವನ್ನು ಬಿಡಲು ಹೊರಟರು. ಆದರೆ ತರಾತುರಿಯಲ್ಲಿ ಹೊರಟಿದ್ದರಿಂದ ಅವರು ಗೇಟ್ ಮುಚ್ಚಲು ಮರೆತರು. ಹೀಗಾಗಿ ರಾಖಿ ರಾಮ್‌ವೀರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾಳೆ. ಇದನ್ನೂ ಓದಿ: 26ನೇ ವಯಸ್ಸಿಗೆ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ

    ಈ ವೇಳೆ ರಾಮ್‌ ವೀರ್‌ ಮಹಿಳೆಗೆ ತಿಳಿಹೇಳಲು ಪ್ರಯತ್ನಿಸಿದ್ದಾರೆ. ಇದರಿಂದ ಆಕೆ ಮತ್ತಷ್ಟು ಕೋಪಗೊಂಡಳು. ಇದೇ ಸಂದರ್ಭದಲ್ಲಿ ರಾಖಿ ಪತಿ ಸಂಜೀವ್ ಎಂಟ್ರಿ ಕೊಟ್ಟಿದ್ದಾನೆ. ಅಲ್ಲದೇ ಆತ ರಾಮ್‌ವೀರ್‌ನನ್ನು ಹಿಡಿದುಕೊಂಡನು. ಸಂಜೀವ್‌ ಹಿಡಿದುಕೊಳ್ಳುತ್ತಿದ್ದಂತೆಯೇ ಸಿಟ್ಟಲಿದ್ದ ರಾಖಿ, ರಾಮ್‌ವೀರ್‌ ಕಿವಿಯನ್ನು ಜೋರಾಗಿ ಕಚ್ಚಿದ್ದಾಳೆ. ಪರಿಣಾಮ ಕಿವಿಯ ತುಂಡು ಆಕೆಯ ಬಾಯಲ್ಲಿತ್ತು. ಈ ವೇಳೆ ಅದನ್ನು ಉಗುಳಲು ಹೇಳಿದ್ದಾರೆ. ಆದರೆ ಕೋಪದಿಂದಿದ್ದ ರಾಖಿ ಅದನ್ನು ನುಂಗಿಯೇ ಬಿಟ್ಟಿದ್ದಾಳೆ.

    ಸದ್ಯ ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್‌ 325 (ಸ್ವಯಂಪ್ರೇರಣೆಯಿಂದ ತೀವ್ರ ಗಾಯ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತು ಸಹಾಯಕ ಪೊಲೀಸ್ ಕಮಿಷನರ್ ಆರಿಬ್ ಅಹ್ಮದ್ ಪ್ರತಿಕ್ರಿಯಿಸಿ, ಆರೋಪಿ ಮಹಿಳೆಯ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಮತ್ತು ಪ್ರಸ್ತುತ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

  • ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಿಂಹದ ಬಾಯಿಗೆ ಸಿಕ್ಕ- ಮುಂದೇನಾಯ್ತು?

    ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಿಂಹದ ಬಾಯಿಗೆ ಸಿಕ್ಕ- ಮುಂದೇನಾಯ್ತು?

    ಭೋಪಾಲ್:‌ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಸಿಂಹಗಳಿರುವ ಆವರಣಕ್ಕೆ ಹೋಗಿ ದುರಂತಕ್ಕೀಡಾದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ (Sri Venkateswara Zoological Park) ನಲ್ಲಿ ಇಂದು ನಡೆದಿದೆ.

    ವ್ಯಕ್ತಿಯನ್ನು ಪ್ರಹ್ಲಾದ್ ಗುಜ್ಜರ್ (34) ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ಪುರಸಭೆಯ ನಿವಾಸಿ. ಈತ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಸೆಲ್ಫಿ (Selfie With Lion) ತೆಗೆದುಕೊಳ್ಳಲು ಸಿಂಹಗಳ ಆವರಣಕ್ಕೆ ನುಗ್ಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವ್ಯಕ್ತಿಯನ್ನು ತಿಂದಿಲ್ಲ: ನಿರ್ವಾಹಕರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಪ್ರವೇಶಿಸಬಹುದಾದ ಜಾಗದಿಂದ ಪ್ರವೇಶ ಕೊಟ್ಟಿದ್ದಾನೆ. ಝೂನಲ್ಲಿರುವ ಪ್ರಾಣಿ ಪಾಲಕರು ಗುಜ್ಜರ್‌ ನಿರ್ಬಂಧಿತ ಸ್ಥಳದಲ್ಲಿ ಪ್ರವೇಶಿಸುವುದನ್ನು ಗಮನಿಸಿ ಎಚ್ಚರಿಕೆ ನೀಡಿದರೂ ಆತ ಕ್ಯಾರೇ ಎಂದಿಲ್ಲ. 6 ಅಡಿ ಎತ್ತರದ ಬೇಲಿಯನ್ನು ದಾಟಿ ಸಿಂಹಗಳ ಆವರಣಕ್ಕೆ ಹಾರಿದ್ದಾನೆ. ಈ ವೇಳೆ ಸಿಂಹ (Lion Attack) ಆತನ ಮೇಲೆ ದಾಳಿ ಮಾಡಿದೆ. ದೇಹದ ಯಾವುದೇ ಭಾಗವನ್ನು ತಿನ್ನಲಿಲ್ಲ. ಆದರೆ ಗಂಭೀರ ಗಾಯಗೊಂಡ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೃಗಾಲಯದ ಕ್ಯೂರೇಟರ್ ಸಿ ಸೆಲ್ವಂ ತಿಳಿಸಿದ್ದಾರೆ. ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ಕೇರ್‌ಟೇಕರ್ ಸ್ಥಳಕ್ಕೆ ದೌಡಾಯಿಸುವ ಮುನ್ನವೇ ಗುಜ್ಜರ್‌ನನ್ನು ‘ಡೊಂಗಲ್‌ಪುರ’ ಎಂಬ ಸಿಂಹವು ಕೊಂದು ಹಾಕಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಘಟನೆಯ ಸಮಯದಲ್ಲಿ ಗುಜ್ಜರ್ ಮದ್ಯದ ಅಮಲಿನಲ್ಲಿದ್ನೋ ಎಂದು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ದಾಳಿಯ ಬಳಿಕ ಸಿಂಹದ ಆವರಣಕ್ಕೆ ಬೀಗ ಹಾಕಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

    ಘಟನೆಯ ಬಳಿಕ ವ್ಯಕ್ತಿಯ ಗುರುತು ಪತ್ತೆಗೆ ಸಿಂಹದ ಆವರಣ ಹುಡುಕಾಡಿದಾಗ ವ್ಯಕ್ತಿಯ ಪರ್ಸ್‌ ಪತ್ತೆಯಾಗಿದೆ. ಅದರಲ್ಲಿ ಆಧಾರ್ ಕಾರ್ಡ್‌ ಹಾಗೂ ಗುರುತಿನ ಚೀಟಿ ಪತ್ತೆಯಾಗಿದೆ. ಬಳಿಕ ಸಿಬ್ಬಂದಿ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ.

  • ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

    ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

    ಚಿಕ್ಕಮಗಳೂರು: ಎಣ್ಣೆ ಏಟಲ್ಲಿ ಕೆಲವೊಮ್ಮೆ ವ್ಯಕ್ತಿ ತಾನೇನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಬಿಡುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಯಾವ ಭಯವೂ ಇರುವುದಿಲ್ಲ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಗಾಢವಾಗಿ ನಿದ್ದೆ ಮಾಡಿದ ಪ್ರಸಂಗವೊಂದು ನಡೆದಿದೆ.

    ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಸಮೀಪದ ಹಳಸೆ ಗ್ರಾಮದ ಬಳಿ ನಡೆದಿದೆ. ಕುಡಿತ ಮತ್ತಿನಲ್ಲಿ ವ್ಯಕ್ತಿ ಮಧ್ಯರಾತ್ರಿ ಸಮಯದಲ್ಲಿ ರಸ್ತೆ ಮಧ್ಯೆಯೇ ಗಡದ್ದಾಗಿ ನಿದ್ದೆ ಮಾಡಿದ್ದಾಳೆ. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ವಾಹನ ಸಾವರರೊಬ್ಬರು ವ್ಯಕ್ತಿಯನ್ನು ಕಂಡು ಗಾಬರಿಗೊಂಡಿದ್ದಾರೆ.

    ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ವ್ಯಕ್ತಿ ಎದ್ದೇಳುವ ಲಕ್ಷಣ ಕಾಣುತ್ತಿಲ್ಲ. ಆ ಬಳಿಕ ಕೆಲ ಹೊತ್ತು ಎದ್ದು ಕುಳಿತು ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ಒಟ್ಟಾರೆಯಾಗಿ ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚೆಲ್ಲಾಟದಿಂದ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಇದನ್ನೂ ಓದಿ: ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

  • ಒಡೆದ ಕಾರಿನ ಹೆಡ್‌ಲೈಟ್‌ಗಳನ್ನು ತ್ರಿವರ್ಣ ಧ್ವಜದಿಂದ ಮುಚ್ಚಿದ- ಮುಂದೇನಾಯ್ತು..?

    ಒಡೆದ ಕಾರಿನ ಹೆಡ್‌ಲೈಟ್‌ಗಳನ್ನು ತ್ರಿವರ್ಣ ಧ್ವಜದಿಂದ ಮುಚ್ಚಿದ- ಮುಂದೇನಾಯ್ತು..?

    ಕೋಲ್ಕತ್ತಾ: ತನ್ನ ಕಾರಿನ ಹೆಡ್‌ಲೈಟ್‌ಗಳನ್ನು ಮುಚ್ಚಲು ತ್ರಿವರ್ಣ ಧ್ವಜವನ್ನು ಬಳಸಿದ್ದಕ್ಕಾಗಿ ಪಶ್ಚಿಮ ಬಂಗಾಳ (West Bengal) ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ವ್ಯಕ್ತಿಯ ಬಳಿ ಧ್ವಜವನ್ನು (Tri Color Flag) ತೆಗೆಯುವಂತೆ ಕೇಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜನವರಿ 3 ರಂದು ಹೌರಾ ಜಿಲ್ಲೆಯ ಉಲುಬೇರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಕಾರಿನ ಹೆಡ್‌ಲೈಟ್‌ಗಳು ಡ್ಯಾಮೇಜ್‌ (Car’s Broken Headlights) ಆಗಿತ್ತು. ಈ ಹಿನ್ನೆಲೆಯಲ್ಲಿ ಆತ ರಾಷ್ಟ್ರಧ್ವಜದಿಂದ ಅವುಗಳನ್ನು ಮುಚ್ಚಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಕಾರನ್ನು ತಡೆದಿದ್ದಾರೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ತೋರಿಸುವಂತೆ ಕೇಳಿದ್ದಾರೆ.

    ಬಳಿಕ ಹೆಡ್‌ಲೈಟ್‌ಗಳ ಮೇಲಿದ್ದ ರಾಷ್ಟ್ರಧ್ವಜವನ್ನು ತೆಗೆಯುವಂತೆ ಪೊಲೀಸರು ವ್ಯಕ್ತಿಗೆ ಗದರಿದ್ದಾರೆ. ಆದರೆ ಆತ ನಿರಾಕರಿಸಿದ್ದಾನೆ. ಈ ವೇಳೆ ಪೊಲೀಸರೇ ರಾಷ್ಟ್ರಧ್ವಜವನ್ನು ತೆಗೆದು ಮಡಚಿ ಸುರಕ್ಷಿತವಾಗಿ ಇರಿಸಿದರು. ತ್ರಿವರ್ಣ ಧ್ವಜವನ್ನು ಗೌರವಿಸದಿದ್ದಕ್ಕಾಗಿ ವ್ಯಕ್ತಿಗೆ ಪೊಲೀಸರು ಚೆನ್ನಾಗಿ ಥಳಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪುತ್ರನ ಹತ್ಯೆಗೈದ ಬೆಂಗ್ಳೂರು ಸಿಇಓ ಪ್ರಕರಣ- ತಂದೆಯಿಂದ ಮಗುವಿನ ಅಂತ್ಯಸಂಸ್ಕಾರ

    ಉಲುಬೇರಿಯಾ ಉಪವಿಭಾಗಾಧಿಕಾರಿ ಕಚೇರಿಯ ಹೊರಗೆ ಈ ಘರ್ಷಣೆ ನಡೆದಿದೆ. ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸುವುದು ಅಥವಾ ಅಗೌರವಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.