Tag: Mammootty

  • ಎರಡೇ ಸೀನ್‌ನಲ್ಲಿ ನಟಿಸಲು 2 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡಿದ್ರಾ? ನಟ ಮಮ್ಮುಟ್ಟಿ

    ಎರಡೇ ಸೀನ್‌ನಲ್ಲಿ ನಟಿಸಲು 2 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡಿದ್ರಾ? ನಟ ಮಮ್ಮುಟ್ಟಿ

    ನ್ನಡದ ಐರಾವತ ಬೆಡಗಿ ಊರ್ವಶಿ ರೌಟೇಲಾ(Urvashi Rautela) ಅವರು ಕೆಲ ದಿನಗಳ ಹಿಂದೆ ಸಂಭಾವನೆ ವಿಚಾರವಾಗಿ ಸುದ್ದಿಯಾಗಿದ್ರು. ಕೇವಲ ಮೂರೇ ನಿಮಿಷ ನಟಿಸಲು 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು. ಈಗ ಮಾಲಿವುಡ್‌ನ (Mollywood) ಎವರ್‌ಗ್ರೀನ್ ನಟ ಮಮ್ಮುಟ್ಟಿ (Mammootty) ಕೇವಲ ಎರಡೇ 2 ದೃಶ್ಯದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನೇ ಡಿಮ್ಯಾಂಡ್ ಮಾಡಿದ್ದಾರೆ.

    ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ (Mammootty) 71 ವರ್ಷವಾಗಿದ್ರು ಕನ್ನಡದ ನಟ ಶಿವಣ್ಣ ಅವರಂತೆಯೇ ಯಂಗ್ & ಚಾರ್ಮಿಂಗ್ ಆಗಿದ್ದಾರೆ. ಮಲಯಾಳಂ ಮಾತ್ರವಲ್ಲ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಾ ಸಾಲು ಸಾಲು ಸಿನಿಮಾಗಳಲ್ಲಿ ಮಮ್ಮುಟ್ಟಿಗೆ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಹೊಸ ಸಿನಿಮಾವೊಂದಕ್ಕೆ ನಟಿಸಲು ನಟನ ಸಂಭಾವನೆ ವಿಚಾರವೊಂದು ಮಾಲಿವುಡ್‌ನಲ್ಲಿ ಟಾಕ್ ಆಗ್ತಿದೆ. ಇದನ್ನೂ ಓದಿ:ಕಾಲ್‌ಶೀಟ್‌ ಕದನಕ್ಕೆ ಬ್ರೇಕ್‌ ಬೀಳುವ ಮುಂಚೆಯೇ ‘K46’ ಸಿನಿಮಾಗೆ ಸಜ್ಜಾದ ಕಿಚ್ಚ ಸುದೀಪ್

    ಇದೀಗ ಮತ್ತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ದೇಶಕ ಮಹಿ ವಿ ರಾಘವ್ ಯಾತ್ರಾ 2 ಸಿನಿಮಾ ಶುರು ಮಾಡಿದ್ದಾರೆ. ವೈಎಸ್‌ಆರ್ ನಿಧನದ ನಂತರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಪಯಣ ಮತ್ತು ಅಧಿಕಾರಕ್ಕೆ ಬರಲು ಕಾರಣವಾದ ಪಾದಯಾತ್ರೆಯ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಜಗನ್ ಪಾತ್ರದಲ್ಲಿ ತಮಿಳು ನಟ ಜೀವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಯಾತ್ರಾ (Yatra) ಬಯೋಪಿಕ್ ಸಿನಿಮಾದ ಮುಂದುವರಿದ ಭಾಗದಂತಿರುವ ಯಾತ್ರಾ 2 (Yatra 2) ಸಿನಿಮಾದಲ್ಲಿ ವೈಎಸ್‌ಆರ್‌ಗೆ ಸಂಬಂಧಿಸಿದ ದೃಶ್ಯಗಳೂ ಇವೆ. ಹಾಗಾಗಿ, ಯಾತ್ರಾದಲ್ಲಿ ವೈಎಸ್‌ಆರ್ ಪಾತ್ರ ಮಾಡಿದ್ದ ಮಮ್ಮುಟ್ಟಿ ಇಲ್ಲಿಯೂ ನಟಿಸಬೇಕಿದೆ. ಆದರೆ ಅದಕ್ಕಾಗಿ ಅವರು ಕೇಳಿರುವ ಸಂಭಾವನೆ ಮಾತ್ರ ಎಲ್ಲರಿಗೂ ಶಾಕ್ ನೀಡಿದೆ.

    ವೈಎಸ್‌ಆರ್ ಪಾತ್ರದಲ್ಲಿ ಚಿತ್ರತಂಡ ಮಮ್ಮುಟ್ಟಿಗೆ ಆಫರ್ ಮಾಡಿದ್ದಾರೆ. ಸಿನಿಮಾದಲ್ಲಿ ಕೇವಲ ಎರಡೇ ಎರಡು ದೃಶ್ಯಕ್ಕೆ ನಟ 10 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನೇ ಕೇಳಿದ್ದಾರಂತೆ. ನಟನ ಸಂಭಾವನೆ ಮೊತ್ತ ಕೇಳಿ ನಿರ್ಮಾಪಕರು ಶಾಕ್ ಆಗಿದ್ದಾರಂತೆ. ಸಂಭಾವನೆ ಕೊಂಚ ಕಮ್ಮಿ ಮಾಡಿಕೊಳ್ಳುವಂತೆ ಮಮ್ಮುಟ್ಟಿಗೆ ಚಿತ್ರತಂಡ ಮನವಿ ಮಾಡಿದ್ದಾರಂತೆ. ಚಿತ್ರತಂಡದ ಮನವಿಗೆ ಮಮ್ಮುಟ್ಟಿ ಓಕೆ ಎಂದ್ರಾ? ಯಾತ್ರಾ 2 ಸಿನಿಮಾದ ಭಾಗವಾಗುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದ ಮಮ್ಮುಟ್ಟಿ: 14 ವರ್ಷಗಳ ಕಾಯುವಿಕೆ ಅಂತ್ಯ

    ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದ ಮಮ್ಮುಟ್ಟಿ: 14 ವರ್ಷಗಳ ಕಾಯುವಿಕೆ ಅಂತ್ಯ

    ಕೇರಳ (Kerala) ಸರ್ಕಾರ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಮಮ್ಮುಟ್ಟಿ ಅತ್ಯುತ್ತಮ ನಟನಾಗಿ ಹೊರ ಹೊಮ್ಮಿದ್ದಾರೆ. ‘ನನ್ಪಕಲ್ ನೆರತ್ತು ಮಯಕ್ಕಂ’ ಸಿನಿಮಾದ ನಟನೆಗಾಗಿ ಈ ಪ್ರಶಸ್ತಿ ಸಂದಿದೆ. ಅತ್ಯುತ್ತಮ ನಟ (Best Actor) ಪ್ರಶಸ್ತಿ ಪಡೆದ ಗೆಳೆಯ ಮಮ್ಮುಟ್ಟಿಗೆ ಮತ್ತೋರ್ವ ಖ್ಯಾತ ನಟ ಮೋಹನ್ ಲಾಲ್ (Mohanlal) ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಭ್ರಮವನ್ನು ಅವರು ಹಂಚಿಕೊಂಡಿದ್ದಾರೆ.

    ಮಮ್ಮುಟ್ಟಿಗೆ ಪ್ರಶಸ್ತಿ (Award) ಹೊಸದೇನೂ ಅಲ್ಲ. ಈಗಾಗಲೇ ಆರು ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅನೇಕ ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ಆದರೆ, ಕಳೆದ ಹದಿನಾಲ್ಕು ವರ್ಷದಿಂದ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅವರು ಪಡೆದುಕೊಂಡಿರಲಿಲ್ಲ. ಈ ಬಾರಿ ರೇಸ್ ನಲ್ಲಿ ಮೋಹನ್ ಲಾಲ್ ಕೂಡ ಇದ್ದರು. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

    ಸಿನಿಮಾಗಳ ವಿಶೇಷಯದಲ್ಲಿ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ (Mammootty) ಪಕ್ಕಾ ಸ್ಪರ್ಧಾಳುಗಳು. ಅನೇಕ ಬಾರಿ ಇವರ ಸಿನಿಮಾಗಳು ಪೈಪೋಟಿಗೆ ಇಳಿದಿವೆ. ಆದರೆ, ವೈಯಕ್ತಿಕ ಜೀವನದಲ್ಲಿ ಇಬ್ಬರೂ ಒಳ್ಳೆಯ ಸ್ನೇಹಿತರು. ಈ ಕಾರಣದಿಂದಾಗಿಯೇ ಮಮ್ಮುಟ್ಟಿಗೆ ಮೋಹನ್ ಲಾಲ್ ಅಭಿನಂದಿಸಿದ್ದಾರೆ.

    ಅತ್ಯುತ್ತಮ ನಟ ಮಮ್ಮುಟ್ಟಿಗೆ ಸಿಕ್ಕರೆ, ಅತ್ಯುತ್ತಮ ಸಿನಿಮಾ ‘ನಾನ್ ತಾನ್ ಕೇಸ್ ಕೊಡು’ ಪಡೆದುಕೊಂಡಿದೆ. ಇದೇ ಸಿನಿಮಾದ ನಟ ಕುಂಚಾಕೊ ಬೋಬನ್ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ರೇಖಾ ಸಿನಿಮಾಗಾಗಿ ವಿನ್ಸಿ ಅಲೋಷಿಯಸ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ನಟ ಮಮ್ಮುಟ್ಟಿ ತಾಯಿ ಫಾತಿಮಾ ನಿಧನ

    ಖ್ಯಾತ ನಟ ಮಮ್ಮುಟ್ಟಿ ತಾಯಿ ಫಾತಿಮಾ ನಿಧನ

    ಲಯಾಳಂ (Malayalam) ಖ್ಯಾತ ನಟ ಮುಮ್ಮುಟ್ಟಿ (Mammootty) ಅವರ ತಾಯಿ ಫಾತಿಮಾ ಇಸ್ಮಾಯಿಲ್ (Fatima Ismail)  ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ಫಾತಿಮಾ ಅವರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ (Passed Away) ತ್ಯಜಿಸಿದ್ದಾರೆ.

    ಪುತ್ರ ಮಮ್ಮುಟ್ಟಿ ಮತ್ತು ಮೊಮ್ಮಗ ಹಾಗೂ ಖ್ಯಾತ ನಟ ದುಲ್ಕರ್ ಸಲ್ಮಾನ್ (Dulquer Salmaan) ಬೆಳೆಸುವುದರಲ್ಲಿ ಫಾತಿಮಾ ಅವರ ಪಾತ್ರ ದೊಡ್ಡದಿದೆ. ಇವರಿಗೆ ಇಬ್ರಾಹಿಂ ಕುಟ್ಟಿ, ಶಫಿನಾ, ಸೌದಾ, ಜಕರಿಯಾ ಹಾಗೂ ಅಮೀನಾ ಹೀಗೆ ಐದು ಜನ ಮಕ್ಕಳು. ಮಮ್ಮುಟ್ಟಿ ಹಿರಿಯ ಪುತ್ರನಾಗಿದ್ದಾರೆ. ಅಗಲಿದ ಫಾತಿಮಾ ಅವರಿಗೆ ಮಲಯಾಳಂ ಚಿತ್ರೋದ್ಯಮ ಕಂಬನಿ ಮಿಡಿದಿದೆ. ಇದನ್ನೂ ಓದಿ:ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

    ಕುಟುಂಬದ ಮಾಹಿತಿಯ ಪ್ರಕಾರ ಇಂದು ಸಂಜೆ ಐದು ಗಂಟೆಗೆ ಕೊಟ್ಟಾಯಂನ ಚೆಂಪುವಿನ ಜುಮಾ ಮಸೀದಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಮಮ್ಮುಟ್ಟಿ ಕೇವಲ ಮಲಯಾಳಂನಲ್ಲಿ ಮಾತ್ರವಲ್ಲ, ಕನ್ನಡವೂ ಸೇರಿದಂತೆ ಹಲವು ಸಿನಿಮಾ ರಂಗದಲ್ಲಿ ನಟಿಸಿದ್ದಾರೆ. ದುಲ್ಕರ್ ಬಾಲಿವುಡ್ ನಲ್ಲೂ ಮಿಂಚಿದ್ದಾರೆ.

  • ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್

    ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್

    ಚಂದನವನದ ಸೂಕ್ಷ್ಮ ಮನಸ್ಸಿನ ವ್ಯಕ್ತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಿನಿರಸಿಕರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಮೊದಲ ಸಿನಿಮಾದಲ್ಲೇ ಸಾಮಾಜಿಕ ಕಳಕಳಿ ಮೂಡಿಸಿ, ರಾಷ್ಟ್ರಮಟ್ಟದಲ್ಲಿ ಗೆದ್ದುಬಂದಿದ್ದರು. ಈ ನಟ ಹೆಚ್ಚು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿದ್ದರಿಂದ ಅವರ ಬಗ್ಗೆ ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ  ಅಭಿಮಾನಿಗಳು ಇದ್ದಾರೆ. ವಿಜಯ್ ಅವರು ದೈಹಿಕವಾಗಿ ಇಲ್ಲದಿದ್ದರೂ, ಅವರು ಮಾಡಿರುವ ಪಾತ್ರಗಳ ಬಗ್ಗೆ ಸಿನಿರಸಿಕರು ನೆನಪಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟಿ ಸಂಚಾರಿ ವಿಜಯ್ ಅವರ ‘ತಲೆತಂಡ’ ಸಿನಿಮಾವನ್ನು ನೆನೆದು, ಅವರನ್ನು ಹಾಡಿ ಹೊಗಲಿದ್ದಾರೆ.

    ಹೀರೋ ಎಂದರೆ ಕಮರ್ಷಿಯಲ್ ಸಿನಿಮಾಗಳನ್ನೆ ಹೆಚ್ಚು ಮಾಡಬೇಕು ಎನ್ನುವ ಕಾಸ್ಸೆಪ್ಟ್ ಇಟ್ಟುಕೊಳ್ಳದೆ ಸಮಾಜಕ್ಕೆ  ಸಂದೇಶ ಸಾರುವ ಪಾತ್ರಗಳನ್ನೆ ವಿಜಯ್ ಹೆಚ್ಚು ಮಾಡಿದ್ದಾರೆ. ಭಿನ್ನ ವ್ಯಕ್ತಿತ್ವ ಹೊಂದಿದ್ದ ಸಂಚಾರಿ ವಿಜಯ್ ಮೂಲತಃ ರಂಗಭೂಮಿ ಕಲಾವಿದ. ಶಿಸ್ತಿನ ಮಾತು, ನಡೆ, ನುಡಿಯಿಂದ ಚಿತ್ರರಂಗದಲ್ಲಿ ಭಿನ್ನ ಛಾಪು ಮೂಡಿಸಿದ ನಟ ಇವರು. ಈ ಹಿನ್ನೆಲೆ ಅವರು ಮಾಡಿದ್ದು ಕಡಿಮೆ ಸಿನಿಮಾವಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆ ವಿಜಯ್ ಕುರಿತು ಮಮ್ಮುಟ್ಟಿ ಮೆಚ್ಚುಗೆಯ ಮಾತುಗಳನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್‌ನಲ್ಲಿ ಅವರು ‘ತಲೆತಂಡ’ ಸಿನಿಮಾ ಪೋಸ್ಟರ್ ಪೋಸ್ಟ್ ಮಾಡಿದ್ದು, ನಾನು ಸಂಚಾರಿ ವಿಜಯ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ ಇದ್ದೆ. ಅವರು ಪ್ರಸ್ತುತ ನಮ್ಮ ಜೊತೆ ಇಲ್ಲ ಎಂಬುದನ್ನು ನಾನು ನಂಬುವುದಿಲ್ಲ. ನಾವಿಬ್ಬರು ಹೈದರಾಬಾದ್‍ನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೆವು. ಈ ವೇಳೆ ಅವರು ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದರು. ಅದನ್ನು ಕೇಳಿಸಿಕೊಂಡು ನಾನು ಧನ್ಯವಾಗಿದ್ದೆ. ಈ ವೇಳೆ ಅವರು ನನಗೆ ‘ತಲೆದಂಡ’ ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿ ಎಂದಿದ್ದರು. ಆದರೆ ಇದೇ ಅವರ ಕೊನೆ ಸಿನಿಮಾವಾಗುತ್ತೆ ಎಂದು ಯಾರಿಗೆ ಗೊತ್ತಿತ್ತು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಮ್ಮ ಮನೆಯ ಮುದ್ದು ಸದಸ್ಯನನ್ನು ಪರಿಚಯ ಮಾಡಿಸಿದ ಹರಿಪ್ರಿಯಾ

    ಚಿತ್ರಮಂದಿರದಲ್ಲಿ ವಿಜಯ್ ಅವರ ಸಿನಿಮಾ ನೋಡುವುದರ ಮೂಲಕ ಸವಿ ನೆನಪುಗಳನ್ನು ಸಂಭ್ರಮಿಸೋಣ. ಅವರ ಹಾರ್ಡ್ ವರ್ಕ್ ಹಾಗೂ ಪ್ರತಿಭೆಯನ್ನು ನಾವೆಷ್ಟು ಪ್ರೀತಿಸಿದ್ದೇವೆ ಎನ್ನುವುದನ್ನು ತಿಳಿಯಲು ಅವರು ಕಾಯುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

  • ಮಲಯಾಳಂ ನಟ ದುಲ್ಖರ್ ಸಲ್ಮಾನ್‍ಗೆ ಕೊರೊನಾ ಪಾಸಿಟಿವ್

    ಮಲಯಾಳಂ ನಟ ದುಲ್ಖರ್ ಸಲ್ಮಾನ್‍ಗೆ ಕೊರೊನಾ ಪಾಸಿಟಿವ್

    ತಿರುವನಂತಪುರಂ: ಮಾಲಿವುಡ್ ನಟ ದುಲ್ಖರ್ ಸಲ್ಮಾನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    Dulquer Salmaan

    ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ ಅವರಿಗೆ ಕೊರೊನಾ ಪಾಸಿಟಿವ್ ಬಂದ ಕೆಲವು ದಿನಗಳಲ್ಲಿ ಅವರ ಮಗ ದುಲ್ಖರ್ ಸಲ್ಮಾನ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ದುಲ್ಖರ್ ಸಲ್ಮಾನ್ ಅವರು ತಮಗೆ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ ಮತ್ತು ಮನೆಯಲ್ಲಿಯೇ ಐಸೋಲೇಶನ್‍ನಲ್ಲಿ ಇರುವುದಾಗಿ ತಿಳಿಸಿದ್ದಾರೆ.

    mammutty

    ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಾನು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿದ್ದೇನೆ ಮತ್ತು ಜ್ವರ, ಸೌಮ್ಯ ರೋಗ ಗುಣಲಕ್ಷಣಗಳನ್ನು ಹೊಂದಿದ್ದೇನೆ. ಆದರೆ ಚೆನ್ನಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಚಿತ್ರೀಕರಣದ ಸಮಯದಲ್ಲಿ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ದಯವಿಟ್ಟು ಕ್ವರಂಟೈನ್‍ನಲ್ಲಿರಿ ಮತ್ತು ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಶಾಲೆಯ ಮೇಲ್ಚಾವಣಿ ಕುಸಿತ – 10 ಮಂದಿ ಕಾರ್ಮಿಕರಿಗೆ ಗಾಯ

    70 ವರ್ಷ ವಯಸ್ಸಿನ ಮಮ್ಮುಟಿ ಅವರಿಗೆ ತಮ್ಮ ಮುಂದಿನ ಸಿನಿಮಾ ಸಿಬಿಐ 5 ಶೂಟಿಂಗ್ ವೇಳೆ ಕೊರೊನಾ ಪಾಸಿಟಿವ್ ಬಂದಿದೆ. ಈ ಕುರಿತಂತೆ ಅವರು ಸಹ ತಮ್ಮ ಟ್ವಿಟ್ಟರ್‌ನಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನನಗೆ ಕೊರೊನಾ ದೃಢಪಟ್ಟಿದೆ. ಸ್ವಲ್ಪ ಜ್ವರದ ಇದೆ. ಆದರೂ ಚೆನ್ನಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ನಾನು ಮನೆಯಲ್ಲಿಯೇ ಕ್ವಾರಂಟೈನ್‍ಗೊಂಡಿದ್ದೇನೆ. ನೀವೆಲ್ಲರೂ ಸುರಕ್ಷಿತವಾಗಿರಬೇಕೆಂದು ನಾನು ಬಯಸುತ್ತೇನೆ. ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿ ಮತ್ತು ನಿಮ್ಮ ಮೇಲೆ ಕಾಳಜಿ ವಹಿಸಿ ಎಂದು ಬರೆದುಕೊಂಡಿದ್ದಾರೆ.

    ಗುರುವಾರ ಭಾರತದಲ್ಲಿ 3,17,532 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಒಟ್ಟು ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 3,82,18,773 ಆಗಿದ್ದು, ಇದರಲ್ಲಿ 9,287 ಓಮಿಕ್ರಾನ್ ರೂಪಾಂತರದ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ. ಇದನ್ನೂ ಓದಿ: ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

  • ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

    ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

    ತಿರುವನಂತಪುರಂ: ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್ ಬಂದಿದೆ, ಈ ಹಿನ್ನೆಲೆಯಲ್ಲಿ ಸಿಬಿಐ 5ರ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.

    ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ (ಜನವರಿ 16) ಇಂದು ಕೋವಿಡ್ ಪಾಸಿಟಿವ್ ಬಂದಿದೆ. ಅವರು ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆಯೇ ಅಥವಾ ಕೇರಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ಅವರ ಆರೋಗ್ಯದ ಮಾಹಿತಿ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಡುತ್ತಿದ್ದರು. ಮಮ್ಮುಟ್ಟಿ ಅವರೆ ಟ್ವೀಟ್ ಮಾಡಿ ಆರೋಗ್ಯದ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನಾನು ನಿನ್ನೆ ಕೋವಿಡ್ ಪಾಸಿಟಿವ್ ಪರೀಕ್ಷೆ ಮಾಡಿದ್ದೇನೆ. ಸ್ವಲ್ಪ ಜ್ವರ ಇದೆ. ನಾನು ಚೆನ್ನಾಗಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ದೇಶನದಂತೆ ನಾನು ಮನೆಯಲ್ಲಿ ಸ್ವಯಂ ಪ್ರತ್ಯೇಕವಾಗಿದ್ದೇನೆ. ನೀವೆಲ್ಲರೂ ಸುರಕ್ಷಿತವಾಗಿರಬೇಕೆಂದು ನಾನು ಬಯಸುತ್ತೇನೆ. ಎಲ್ಲಾ ಸಮಯದಲ್ಲೂ ಮಾಸ್ಕ್ ಬಳಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮ

    ಮುಂಬರುವ ಅವರ ಸಿನಿಮಾಗೆ ತಾತ್ಕಾಲಿಕವಾಗಿ ಸಿಬಿಐ 5 ಎಂದು ಹೆಸರಿಸಲಾಗಿದೆ. ಸಿಬಿಐ 5ರ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಮಮ್ಮುಟ್ಟಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಾರೈಸಿದ್ದಾರೆ. ಇದನ್ನೂ ಓದಿ:  4.50 ಕೋಟಿ ರೂ. ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದ 6 ಮಂದಿ ವಶ

  • ಬಿಗ್‍ಬಿ ಕನ್ನಡಕ ಹುಡುಕಿದ 12 ತಾರೆಯರು

    ಬಿಗ್‍ಬಿ ಕನ್ನಡಕ ಹುಡುಕಿದ 12 ತಾರೆಯರು

    -ಕಿರುಚಿತ್ರದಲ್ಲಿ ಕೊರೊನಾ ಜಾಗೃತಿ
    -ಮನೆಯಿಂದ ಹೊರ ಬರದೇ ಸಿನ್ಮಾ ರೆಡಿ
    -ಮಹಾ ಸಂಗಮದಲ್ಲಿ ಶಿವಣ್ಣನ ಕನ್ನಡ ಕಹಳೆ

    ನವದೆಹಲಿ: ಬಹುತೇಕ ನಟ, ನಟಿಯರು ಲಾಕ್‍ಡೌನ್ ದಿನಗಳನ್ನು ವಿವಿಧ ಚಟುವಟಿಕೆಗಳಲ್ಲಿ ನಿರತರಾಗುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಕೆಲವರು ಲಾಕ್‍ಡೌನ್ ಆಗಿದೆ ಏನು ಮಾಡುವುದು, ಕೆಲಸವಿಲ್ಲದೆ ಕಾಲ ಕಳೆಯಬೇಕಿದೆ ಬೇಜಾರು ಎಂದು ಹೇಳಿಕೊಳ್ಳುತ್ತಿರುತ್ತಾರೆ. ಇದಕ್ಕೆ ಸೆಡ್ಡು ಹೊಡೆಯುವಂತೆ ಮಲ್ಟಿ ಸ್ಟಾರ್ ಗಳು ಸೇರಿ ಕಿರು ಚಿತ್ರ ರಚಿಸಿದ್ದು, ಇದರಲ್ಲಿ ಬಹುತೇಕ ಎಲ್ಲ ಮೆಗಾ ಸ್ಟಾರ್‍ಗಳು ನಟಿಸಿದ್ದಾರೆ.

    ಹೌದು ಲಾಕ್‍ಡೌನ್ ದಿನಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದ್ದು, ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲರೂ ಹೇಗೆ ಸಂಪರ್ಕದಲ್ಲಿರಬಹುದು, ಒಬ್ಬರೇ ಕೂತು ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಂದೇ ಕಡೆ ಸೇರದೆ ಹಲವು ಸ್ಟಾರ್ ನಟರು ತಮ್ಮ ತಮ್ಮ ಮನೆಗಳಿಂದಲೇ ಪಾತ್ರಗಳನ್ನು ನಿರ್ವಹಿಸಿದ್ದು, ಇದು ಸ್ವಲ್ಪವೂ ಗೊತ್ತಾಗುವುದಿಲ್ಲ. ಆ ರೀತಿಯಲ್ಲಿ ಶಾರ್ಟ್ ಫಿಲ್ಮ್ ರಚಿಸಲಾಗಿದೆ.

    ಕೇವಲ ಉತ್ತರ ಭಾರತದ ಬಾಲಿವುಡ್ ಕಲಾವಿದರು ಮಾತ್ರ ಈ ಸಿನಿಮಾದಲ್ಲಿ ಆ್ಯಕ್ಟ್ ಮಾಡಿಲ್ಲ ಬದಲಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಿ, ಸೇರಿದಂತೆ ಹಲವು ಭಾಷೆಗಳ ಸ್ಟಾರ್ ನಟರು ಅವರ ಮಾತೃ ಭಾಷೆಗಳಲ್ಲೇ ಮಾತನಾಡುವ ಮೂಲಕ ಚಿತ್ರಕ್ಕೆ ಕಳೆ ತುಂಬಿದ್ದಾರೆ. ಈ ಮೂಲಕ ಜಾಗೃತಿ ಜೊತೆಗೆ ಮನರಂಜನೆಯನ್ನೂ ನೀಡಿದ್ದು, ಈ ರೀತಿಯೂ ಸಿನಿಮಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಲೊಕೇಶನ್ ಹೊರತುಪಡಿಸಿದರೆ ಉಳೆದೆಲ್ಲ ನಟರ ನಟನೆ ಅದ್ಭುತವಾಗಿ ಮೂಡಿ ಬಂದಿದ್ದು, ಆರಂಭದಲ್ಲಿ ಅಮಿತಾಭ್ ಬಚ್ಚನ್ ಅವರು ಕನ್ನಡಕ ಹುಡುಕುವುದರಿಂದ ಸಿನಿಮಾ ಪ್ರಾರಂಭವಾಗುತ್ತದೆ. ಇದೇ ಎಳೆಯನ್ನು ಇಟ್ಟುಕೊಂಡು ಇತರ ಕಲಾವಿದರು ಸಹ ಅಮಿತಾಬ್ ಬಚ್ಚನ್ ಅವರ ಕನ್ನಡಕವನ್ನು ಹುಡುಕಲು ಮುಂದಾಗುತ್ತಾರೆ.

    ಇದು ಕೇವಲ ಕನ್ನಡಕ ಹುಡುಕುವ ಸಿನಿಮಾ ಅನ್ನಿಸಬಹುದು. ಆದರೆ ಲಾಕ್‍ಡೌನ್‍ನ ಇಂತಹ ಪರಿಸ್ಥಿತಿಯಲ್ಲಿ ಭರವಸೆ ಮೂಡಿಸಿದೆ. ಒಂದು ವೇಳೆ ಲಾಕ್‍ಡೌನ್ ಹೆಚ್ಚು ದಿನಗಳ ಕಾಲ ಮುಂದುವರಿದರೆ ಹೇಗೆ ಎಂಬ ಪ್ರಶ್ನೆ ಕಾಡಿದಾಗ ಕಲಾವಿದರು, ತಂತ್ರಜ್ಞರು ಈ ಸಿನಿಮಾ ನೆನೆಸಿಕೊಂಡು ತಮ್ಮದೇ ಶೈಲಿಯಲ್ಲಿ ಈ ರೀತಿಯ ಸಿನಿಮಾಗಳನ್ನು ಮಾಡಬಹುದಾಗಿದೆ. ಈ ಮೂಲಕ ಮನೆಯಲ್ಲೇ ಕುಳಿತು ಬೇಸರ ಏನಾದರೂ ಮಾಡಬೇಕು ಎಂದುಕೊಂಡವರಿಗೆ ಈ ಸಿನಿಮಾ ಒಂದು ಆಶಾಕಿರಣವಾಗಿದೆ.

    ಅಂದಹಾಗೆ ಈ ಚಿತ್ರಕ್ಕೆ ಫ್ಯಾಮಿಲಿ ಎಂದು ಹೆಸರಿಡಲಾಗಿದ್ದು, ಪ್ರಸೂನ್ ಪಾಂಡೆ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರ ವಹಿಸಿದರೆ, ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಬಾಲಿವುಡ್ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ದಿಲಿತ್ ದೋಸಂಜ್, ತಮಿಳಿನಿಂದ ರಜನಿಕಾಂತ್, ಮಲಯಾಳಂನಿಂದ ಮೋಹನ್‍ಲಾಲ್ ಹಾಗೂ ಮಮ್ಮೂಟಿ, ತೆಲುಗಿನಿಂದ ಚಿರಂಜೀವಿ, ಬೆಂಗಾಳಿಯಿಂದ ಪ್ರೊಸೆಂಜಿತ್ ಚಟರ್ಜಿ, ಮರಾಠಿಯಿಂದ ಸೋನಾಲಿ ಕುಲ್ಕರ್ಣಿಯವರು ನಟಿಸಿದ್ದಾರೆ.

    ಸಿನಿಮಾದ ಕೊನೆಯಲ್ಲಿ ಅಮಿತಾಬ್ ಮಾತನಾಡಿದ್ದು, ಸಿನಿಮಾ ಉದ್ಯಮ ಯಾವತ್ತೂ ಒಂದೇ, ನಾವೆಲ್ಲರೂ ಒಂದೇ ಕುಟುಂಬದವರು. ನಮ್ಮ ಕುಟುಂಬದ ಹಿಂದೆ ಇನ್ನೊಂದು ದೊಡ್ಡ ಪರಿವಾರವಿದೆ. ಅವರು ಯಾವಾಗಲೂ ನಮಗಾಗಿ ಕೆಲಸ ಮಾಡುತ್ತಿರುತ್ತಾರೆ ಅವರೇ ಸಿನಿಮಾ ಕೆಲಸಗಾರರು, ದಿನಗೂಲಿ ನೌಕರರು. ಲಾಕ್‍ಡೌನ್‍ನ ಈ ಸಮಯದಲ್ಲಿ ಕೆಲಸವಿಲ್ಲದೆ ಅವರು ಸಂಕಷ್ಟದಲ್ಲಿದ್ದಾರೆ. ನಾವೆಲ್ಲರೂ ಸೇರಿ ಅವರೊಂದಿಗೆ ನಿಲ್ಲಬೇಕಿದೆ. ಅವರಿಗೂ ಸಹಾಯ ಮಾಡಬೇಕಿದೆ ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ಯಾರೂ ಭಯಭೀತರಾಗಬೇಡಿ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕನ್ನಡಿಗರ ಮನಗೆದ್ದಿತು ರಿಷಬ್ ಶೆಟ್ಟಿ ಕ್ರಿಯೇಟಿವಿಟಿ!

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕನ್ನಡಿಗರ ಮನಗೆದ್ದಿತು ರಿಷಬ್ ಶೆಟ್ಟಿ ಕ್ರಿಯೇಟಿವಿಟಿ!

    ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ನಿಜಕ್ಕೂ ಜಾದೂ ಮಾಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಡೀ ಕರ್ನಾಟಕದ ಎಲ್ಲ ಭಾಗಗಳ ಜನರೂ ಈ ಚಿತ್ರವನ್ನು ಪ್ರೀತಿಯಿಂದ ವೀಕ್ಷಿಸುತ್ತಿದ್ದಾರೆ, ಮೆಚ್ಚಿಕೊಳ್ಳುತ್ತಿದ್ದಾರೆ. ಬಾಯಿಮಾತಲ್ಲೇ ಹರಡಿಕೊಂಡಿದ್ದ ಒಳ್ಳೆ ಮಾತುಗಳೆಲ್ಲವೂ ಈ ಚಿತ್ರದ ಗೆಲುವಾಗಿ ಮಾರ್ಪಾಡಾಗಿದೆ.

    ಒಂದು ಕಥೆಯನ್ನು ಒಂದು ಚೌಕಟ್ಟಿಗೆ ಸಿಗದಂತೆ ಮತ್ತು ಕಥೆಯ ಬಿಂದು ಚದುರದಂತೆ ಕಟ್ಟಿ ಕೊಡುವುದು ತ್ರಾಸದಾಯಕ ಕೆಲಸ. ಆದರೆ ಇದರಲ್ಲಿ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಗೆದ್ದಿದ್ದಾರೆ. ಆರಂಭದಲ್ಲಿ ಈ ಚಿತ್ರ ಕಲಾತ್ಮಕ ಎಂಬ ಸುದ್ದಿ ಹರಡಿತ್ತು. ಆ ನಂತರದಲ್ಲಿ ಮಕ್ಕಳ ಚಿತ್ರ ಎಂಬ ಸುದ್ದಿಯೂ ಅಲ್ಲಲ್ಲಿ ಹಬ್ಬಿಕೊಂಡಿತ್ತು. ಆದರೆ ರಿಷಬ್ ಮಾತ್ರ ಈ ಚಿತ್ರ ಅದ್ಯಾವುದೂ ಅಲ್ಲ, ಇದು ಪಕ್ಕಾ ಜ್ಯೂನಿಯರ್ ಕಿರಿಕ್ ಪಾರ್ಟಿ ಅಂತ ಸ್ಪಷ್ಟವಾಗಿಯೇ ಹೇಳಿದ್ದರು.

    ಚಿತ್ರ ನೋಡಿದ ಎಲ್ಲರಿಗೂ ಜ್ಯೂನಿಯರ್ ಕಿರಿಕ್ ಪಾರ್ಟಿಗಳ ಕೀಟಲೆ, ಅದರ ಜೊತೆಗೆ ತೆರೆದುಕೊಳ್ಳೋ ಮನ ಮಿಡಿಯುವ ಕಥೆಗಳೆಲ್ಲವೂ ಇಷ್ಟವಾಗಿವೆ. ಇದು ಕಾಸರಗೋಡು ಸೀಮೆಯಲ್ಲಿ ನಡೆಯೋ ಕಥೆಯಾದರೂ ಗುರುತು ಪರಿಚಯವಿಲ್ಲದ ಪ್ರದೇಶಗಳ ಮನಸುಗಳನ್ನೂ ಸೂರೆಗೊಂಡಿದೆ.

    ಮಕ್ಕಳ ಚಿತ್ರದ ಚೌಕಟ್ಟಿಗೂ ಸಿಗದೆ, ಗಡಿನಾಡಿನ ಸಮಸ್ಯೆಗಳ ಪರಿಧಿಯಲ್ಲಿಯೂ ನಿಲ್ಲದೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿರೋ ಈ ಚಿತ್ರ ಪಕ್ಕಾ ಎಂಟರ್ ಟೈನರ್ ಎಂಬುದರಲ್ಲಿ ಎರಡು ಮಾತಿಲ್ಲ. ನೀವು ಈವರೆಗೂ ಈ ಚಿತ್ರವನ್ನು ನೋಡಿಲ್ಲವಾದರೆ ಈ ವೀಕೆಂಡ್ ಅದಕ್ಕಾಗಿ ಮೀಸಲಾಗಲಿ. ಒಂದು ವೇಳೆ ಈ ಚಿತ್ರವನ್ನು ಮಿಸ್ ಮಾಡಿಕೊಂಡರೆ ಒಂದೊಳ್ಳೆ ಚಿತ್ರ ನೋಡೋ ಅವಕಾಶವನ್ನೂ ಕಳೆದುಕೊಂಡಂತಾಗುತ್ತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv