Tag: Mammootty

  • ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್

    ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್

    ಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿಯೇ ಅವರು ಸಾರ್ವಜನಿಕ ವಲಯದಲ್ಲಿ ಕಳೆದ ಏಳೆಂಟು ತಿಂಗಳುಗಳಿಂದ ಕಾಣಿಸಿಕೊಂಡಿರಲಿಲ್ಲ. 72 ವರ್ಷದ ಮೆಗಾಸ್ಟಾರ್ ಮಮ್ಮುಟ್ಟಿ ಈಗಲೂ ಅಪಾರ ಅಭಿಮಾನಿಗಳನ್ನ ಹೊಂದಿರುವ ಬಹುಬೇಡಿಕೆಯ ನಟ. ಏಕಾಏಕಿ ಅನಾರೋಗ್ಯಕ್ಕೆ ತುತ್ತಾದ ನಟನ ಅಭಿಮಾನಿಗಳು ಕಂಗಾಲಾಗಿದ್ದರು. ಇದೀಗ ಮಮ್ಮುಟ್ಟಿ ಗುಣಮುಖರಾಗಿದ್ದು, ಶೀಘ್ರ ಬಣ್ಣದ ಲೋಕಕ್ಕೆ ಮರಳುವ ಸುದ್ದಿ ಬಂದಿದೆ.

    ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಮ್ಮುಟ್ಟಿ ಇದೀಗ ಕೊನೆಯ ಹಂತದ ಚಿಕಿತ್ಸಾ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಇದೀಗ ಅವರು ತನ್ನೂರು, ತನ್ನ ಜನರ ಜೊತೆ ಬೆರೆಯಲು ವಾಪಸ್ಸಾಗಲಿದ್ದಾರಂತೆ. ಈ ಬಗ್ಗೆ ಮಮ್ಮುಟ್ಟಿ ಸಹೋದರ ಇಬ್ರಾಹಿಂ ಕುಟ್ಟಿ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ವೊಂದನ್ನ ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಅವರು `ನನ್ನ ಸಹೋದರ ಮಮ್ಮುಟ್ಟಿ ಬಹುನಿರೀಕ್ಷಿತ ಪುನರಾಗಮನಕ್ಕಾಗಿ ಕಾತುರದಿಂದ ಕಾದಿದ್ದಾರೆ’ ಎಂದು ಸಂದೇಶ ಕೊಟ್ಟಿದ್ದಾರೆ. ಕಪ್ಪು ಮೋಡಗಳು ಹಾಗೂ ಪ್ರಕ್ಷುಬ್ಧ ಸಮುದ್ರವನ್ನ ದಾಟಿದ ಬಳಿಕ ಒಬ್ಬರು ಆನಂದಿಸುವ ನೆಮ್ಮದಿ ಭಾವನೆಯನ್ನು ನಾನು ಈಗ ಆನಂದಿಸುತ್ತಿದ್ದೇನೆ. ಆ್ಯಂಕ್ಸೈಟಿ, ಆತಂಕ ಕಡಿಮೆಯಾಗಿದೆ. ಇದೀಗ ಪುನರಾಗಮನದ ಸಮಯ ಎಂದಿದ್ದಾರೆ. ಅಪರಿಚಿತರು, ಹಿತೈಷಿಗಳು ನನ್ನ ಸಹೋದರನ ಆರೋಗ್ಯದ ಕುರಿತು ವಿಚಾರಿಸುತ್ತಿದ್ರಿ ಎಂದು ಮಮ್ಮುಟ್ಟಿ ಸಹೋದರ ಸಂದೇಶ ಕೊಡುವ ಮೂಲಕ ಮಮ್ಮುಟ್ಟಿ ಅನಾರೋಗ್ಯ ಪರೀಕ್ಷೆ ಮುಗಿದಿದೆ ಅನ್ನೋದನ್ನ ಬಹಿರಂಗಪಡಿಸಿದ್ದಾರೆ.

    ಮಲಯಾಳಂ ಸೂಪರ್ ಸ್ಟಾರ್ ಪುನರಾಗಮನದ ಸಂದೇಶ ಬರುತ್ತಿದ್ದಂತೆ ಅವರ ಆಪ್ತಮಿತ್ರ ಮೋಹನ್‌ಲಾಲ್ ಫೋಟೋವೊಂದನ್ನ ಶೇರ್ ಮಾಡಿ ಸ್ವಾಗತ ಕೋರಿದ್ದಾರೆ. ಮಮ್ಮುಟ್ಟಿಗೆ ಮುತ್ತಿಡುವ ಚಿತ್ರದಲ್ಲಿನ ಭಾವನೆ ಎಲ್ಲವನ್ನೂ ಹೇಳುತ್ತಿದೆ. ಅನೇಕ ನಟ-ನಟಿಯರು ಮಮ್ಮುಟ್ಟಿಗೆ ವೆಲ್‌ಕಮ್ ಬ್ಯಾಕ್ ಎಂದು ಶುಭ ಕೋರಿದ್ದಾರೆ. ಇದೀಗ ಸಪ್ಟೆಂಬರ್ ತಿಂಗಳಲ್ಲೇ ಮಮ್ಮುಟ್ಟಿ ನಟನೆಗೆ ಮರಳುವ ಸಾಧ್ಯತೆ ಕೇಳಿಬರುತ್ತಿದ್ದು ಮಹೇಶ್ ನಾರಾಯಣನ್ ನಿರ್ದೇಶನದಲ್ಲಿ ಚಿತ್ರ ಈಗಾಗ್ಲೇ ಘೋಷಣೆಯಾಗಿತ್ತು. ಇದೇ ಚಿತ್ರಕ್ಕಾಗಿ ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಒಟ್ಟಿನಲ್ಲಿ ಮಲಯಾಳಂ ಮೆಗಾಸ್ಟಾರ್ ವಾಪಸ್ಸಾಗ್ತಿರೋ ಸುದ್ದಿ ಮಲಯಾಳಂ ಇಂಡಸ್ಟ್ರಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

  • ರಿಯಲ್ ಹೀರೋಗಳು ನೀವೇ – ‘ಆಪರೇಷನ್ ಸಿಂಧೂರ’ಕ್ಕೆ ಮಮ್ಮುಟ್ಟಿ ಮೆಚ್ಚುಗೆ

    ರಿಯಲ್ ಹೀರೋಗಳು ನೀವೇ – ‘ಆಪರೇಷನ್ ಸಿಂಧೂರ’ಕ್ಕೆ ಮಮ್ಮುಟ್ಟಿ ಮೆಚ್ಚುಗೆ

    ‘ಆಪರೇಷನ್ ಸಿಂಧೂರ’ (Operation Sindoora) ಕಾರ್ಯಾಚರಣೆಯಲ್ಲಿ ಉಗ್ರರ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಗ್ಗೆ ರಜನಿಕಾಂತ್, ಮೋಹನ್ ಲಾಲ್ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ನಟ ಮಮ್ಮುಟ್ಟಿ (Mammootty) ಕೂಡ ರಿಯಾಕ್ಟ್ ಮಾಡಿದ್ದಾರೆ. ನೀವು ನಮ್ಮ ರಿಯಲ್ ಹೀರೋಗಳು ಅಂತ ವೀರ ಯೋಧರನ್ನ ಕೊಂಡಾಡಿದ್ದಾರೆ. ಇದನ್ನೂ ಓದಿ:ಸಿಂಧೂರ ಕೇವಲ ಸಂಪ್ರದಾಯವಲ್ಲ, ಅದು ಸಂಕೇತ- ಭಾರತೀಯ ಸೇನೆ ಕೊಂಡಾಡಿದ ಮೋಹನ್ ಲಾಲ್

    ‘ನಿಜವಾದ ವೀರ ಯೋಧರಿಗೆ ನಮ್ಮ ನಮನಗಳು… ಈ ರಾಷ್ಟ್ರ ಕರೆದಾಗ ಭಾರತೀಯ ಸೇನೆಯು ತಕ್ಕ ಉತ್ತರ ನೀಡುತ್ತದೆ ಅನ್ನೋದು ಆಪರೇಷನ್ ಸಿಂಧೂರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಜೀವಗಳನ್ನು ಉಳಿಸಿದ್ದಕ್ಕಾಗಿ ಮತ್ತು ಭರವಸೆಯನ್ನು ಮರುಸ್ಥಾಪಿಸಿದ್ದಕ್ಕಾಗಿ ಧನ್ಯವಾದಗಳು. ನೀವು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಜೈ ಹಿಂದ್!’ ಎಂದು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಮಮ್ಮುಟ್ಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಯೋಧರ ಹೋರಾಟ ಶುರುವಾಗಿದೆ: ‘ಆಪರೇಷನ್ ಸಿಂಧೂರ’ಗೆ ಜೈ ಎಂದ ತಲೈವಾ

    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.

  • ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ಮೋಹನ್ ಲಾಲ್ ಪೂಜೆ- ಶುರುವಾಯ್ತು ಪರ ವಿರೋಧದ ಚರ್ಚೆ

    ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ಮೋಹನ್ ಲಾಲ್ ಪೂಜೆ- ಶುರುವಾಯ್ತು ಪರ ವಿರೋಧದ ಚರ್ಚೆ

    ಮಾಲಿವುಡ್ (Mollywood) ನಟ ಮೋಹನ್ ಲಾಲ್ (Mohan Lal) ಅವರು ಮಮ್ಮುಟ್ಟಿಗಾಗಿ (Mammootty) ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ವಿಚಾರ ಮತ್ತೆ ಭುಗಿಲೆದ್ದಿದೆ. ಈ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ:ನನ್ನ ಮೇಲೆ ಕಲ್ಲೆಸೆದಿಲ್ಲ: ಸೋನು ನಿಗಮ್ ಸ್ಪಷ್ಟನೆ

    ಮೋಹನ್ ಲಾಲ್ ಅವರು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಮ್ಮುಟ್ಟಿಗಾಗಿ ಪೂಜೆ ಸಲ್ಲಿಸಿರುವ ವಿಚಾರ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ. ಇತ್ತೀಚೆಗೆ ಶಬರಿಮಲೆಯಲ್ಲಿ ಮಮ್ಮುಟ್ಟಿರವರ ಮೂಲ ಹೆಸರು ‘ಮುಹಮ್ಮದ್ ಕುಟ್ಟಿ’ ಹೆಸರಿನಲ್ಲಿ ಮೋಹನ್ ಲಾಲ್ ಪೂಜೆ ಮಾಡಿಸಿದ್ದಾರೆ ಎನ್ನಲಾದ ರಶೀದಿವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಧಾರ್ಮಿಕ ನಂಬಿಕೆಗಳ ಜಿದ್ದಾಜಿದ್ದಿ ಶುರುವಾಗಿದೆ.

    ಮಮ್ಮುಟ್ಟಿ ಅವರು ಮೋಹನ್ ಲಾಲ್ ಪರವಾಗಿ ಪೂಜೆ ಸಲ್ಲಿಸಲು ಕೇಳಿದರೆ, ಮಮ್ಮುಟ್ಟಿ ಕ್ಷಮೆಯಾಚಿಸಬೇಕು. ಅಲ್ಲಾನಿಗೆ ಮಾತ್ರ ಪ್ರಾರ್ಥಿಸಬೇಕು ಎಂದೆಲ್ಲಾ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ.

    ವಿವಾದ ಭುಗಿಲೆದ್ದ ಬೆನ್ನಲ್ಲೇ ಮೋಹನ್ ಲಾಲ್ ಪ್ರತಿಕ್ರಿಯಿಸಿ, ಮಮ್ಮುಟ್ಟಿ ನನ್ನ ಸಹೋದರನಂತೆ, ಅವರಿಗಾಗಿ ಪ್ರಾರ್ಥನೆ ಮಾಡೋದ್ರರಲ್ಲಿ ತಪ್ಪೇನಿದೆ? ಎಂದು ಕಾರ್ಯಕ್ರಮವೊಂದರಲ್ಲಿ ಪ್ರಶ್ನಿಸಿದ್ದಾರೆ.

    ಅಂದಹಾಗೆ, ಕೆಲದಿನಗಳ ಹಿಂದೆ ಮಮ್ಮುಟ್ಟಿ ಆರೋಗ್ಯ ಸರಿಯಿಲ್ಲ. ಅವರಿಗೆ ಕ್ಯಾನ್ಸರ್‌ ಇದೆ. ಹಾಗಾಗಿ ಸ್ನೇಹಿತನಿಗಾಗಿ ಮೋಹನ್ ಲಾಲ್ ಪೂಜೆ ಸಲ್ಲಿಸಿದ್ದಾರೆ ಎಂದೆಲ್ಲಾ ವದಂತಿ ಹಬ್ಬಿತ್ತು. ಆ ನಂತರ ನಟನ ಪಿ.ಆರ್ ಟೀಮ್ ಪ್ರತಿಕ್ರಿಯಿಸಿ, ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ. ಇದು ಸುಳ್ಳು ಸುದ್ದಿ. ರಂಜಾನ್ ಉಪವಾಸದ ಕಾರಣದಿಂದ ಅವರು ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಬ್ಬ ಮುಗಿಯುತ್ತಿದ್ದಂತೆ ನಟ ಶೂಟಿಂಗ್‌ಗೆ ಪಾಲ್ಗೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಬಳಿಕ ಮಮ್ಮುಟ್ಟಿ ಅನಾರೋಗ್ಯದ ಸುದ್ದಿಗೆ ಬ್ರೇಕ್ ಬಿದ್ದಿತ್ತು.

  • ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ: ಸುಳ್ಳು ವದಂತಿಗೆ ತೆರೆ ಎಳೆದ ಪಿ.ಆರ್‌ ಟೀಮ್

    ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ: ಸುಳ್ಳು ವದಂತಿಗೆ ತೆರೆ ಎಳೆದ ಪಿ.ಆರ್‌ ಟೀಮ್

    ಲಯಾಳಂ ಸ್ಟಾರ್ (Mollywood) ಮಮ್ಮುಟ್ಟಿಗೆ (Mammootty) ಕ್ಯಾನ್ಸರ್ ಆಗಿದೆ ಎಂಬ ಸುಳ್ಳು ವದಂತಿ ಹಬ್ಬಿದ ಬೆನ್ನಲ್ಲೇ ಪಿ.ಆರ್ ಟೀಮ್ ನಟನ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದೆ. ಆ ರೀತಿ ಏನು ಇಲ್ಲ, ಅವರು ಆರೋಗ್ಯವಾಗಿದ್ದಾರೆ ಎಂದು ವದಂತಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ

    ಇದು ಸುಳ್ಳು. ರಂಜಾನ್ ಉಪವಾಸದ ಕಾರಣದಿಂದ ಅವರು ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ರಂಜಾನ್ ಮುಗಿಯುತ್ತಿದ್ದಂತೆ ಅವರು ಶೂಟಿಂಗ್‌ಗೆ ಮರಳುತ್ತಾರೆ ಎಂದು ಪಿಆರ್ ಟೀಮ್ ಹೇಳಿದೆ. ಸುಳ್ಳು ವದಂತಿಗೆ ಕಿವಿಗೊಡಬೇಡಿ ಎಂದು ಮಮ್ಮುಟ್ಟಿ ತಂಡ ಸ್ಪಷ್ಟನೆ ನೀಡಿದೆ.

    ಅಂದಹಾಗೆ, 73 ವರ್ಷದ ನಟ ಮಮ್ಮುಟ್ಟಿಗೆ ಕ್ಯಾನ್ಸರ್ ಆಗಿದೆ, ಹೀಗಾಗಿ ಅವರು ಸಿನಿಮಾ ಶೂಟಿಂಗ್‌ನಿಂದ ದೂರ ಇದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ನಟನ ಫ್ಯಾನ್ಸ್ ಗಾಬರಿಯಾಗಿದ್ದರು. ಆದರೀಗ ಅವರು ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ತಿಳಿದು ಫ್ಯಾನ್ಸ್ ನಿರಾಳವಾಗಿದ್ದಾರೆ.

  • ಮತ್ತೆ ಒಂದಾದ ಮಮ್ಮುಟ್ಟಿ, ನಯನತಾರಾ ಜೋಡಿ

    ಮತ್ತೆ ಒಂದಾದ ಮಮ್ಮುಟ್ಟಿ, ನಯನತಾರಾ ಜೋಡಿ

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಹಲವು ವರ್ಷಗಳ ನಂತರ ಹೊಸ ಚಿತ್ರಕ್ಕಾಗಿ ಮಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಮಮ್ಮುಟ್ಟಿ ಹೊಸ ಸಿನಿಮಾಗೆ ನಯನತಾರಾ ನಾಯಕಿಯಾಗಿ ನಟಿಸುವ ಸುದ್ದಿಯೊಂದು ಭಾರೀ ಚರ್ಚೆಯಾಗುತ್ತಿದೆ.

    ಶಾರುಖ್ ಖಾನ್‌ಗೆ ನಾಯಕಿಯಾಗಿ ‘ಜವಾನ್’ (Jawan) ಸಿನಿಮಾದಲ್ಲಿ ನಟಿಸಿದ ಮೇಲೆ ನಯನತಾರಾ ಬೇಡಿಕೆ ಹೆಚ್ಚಾಗಿದೆ. ಇದೀಗ ಜವಾನ್‌ ನಂತರ ಮಲಯಾಳಂನಲ್ಲಿ ನಟಿಸಲು ಆಫರ್‌ ಅರಸಿ ಬಂದಿದೆ. ಮಮ್ಮುಟ್ಟಿಗೆ ನಯನತಾರಾ ನಾಯಕಿಯಾಗಲು ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂಬ ಸುದ್ದಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ನಯನತಾರಾ ಮತ್ತು ಮಮ್ಮುಟ್ಟಿ (Mammootty) ಈ ಜೋಡಿಯನ್ನು ಜೊತೆಯಾಗಿ ಸಿನಿಮಾದಲ್ಲಿ ತೋರಿಸಬೇಕು ಎಂದು ಹಿರಿಯ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಪ್ಲ್ಯಾನ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಒಂದು ಹಂತದ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

    2005ರಲ್ಲಿ ‘ರಪ್ಪಕಲ್’ (Rappakal) ಎಂಬ ಸಿನಿಮಾದಲ್ಲಿ ನಯನತಾರಾ ಮತ್ತು ಮಮ್ಮುಟ್ಟಿ ಜೋಡಿಯಾಗಿ ನಟಿಸಿದ್ದರು. ಭಾಸ್ಕರ್‌ ದಿ ರಾಸ್ಕಲ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

  • ಮಮ್ಮುಟ್ಟಿ ಜೊತೆ ರಾಜ್ ಬಿ ಶೆಟ್ಟಿ: ಗಮನ ಸೆಳೆದ ‘ಟರ್ಬೋ’ ಟ್ರೈಲರ್

    ಮಮ್ಮುಟ್ಟಿ ಜೊತೆ ರಾಜ್ ಬಿ ಶೆಟ್ಟಿ: ಗಮನ ಸೆಳೆದ ‘ಟರ್ಬೋ’ ಟ್ರೈಲರ್

    ನ್ನಡದ ಖ್ಯಾತ ನಟ – ನಿರ್ದೇಶಕ ರಾಜ್ ಬಿ ಶೆಟ್ಟಿ (Raj B. Shetty) ಗರುಡ ಗಮನ ವೃಷಭ ವಾಹನದಂತಹ ಮಾಸ್ ಚಿತ್ರ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಕ್ಲಾಸ್ ಚಿತ್ರಗಳನ್ನು ಕನ್ನಡದಲ್ಲಿ ಒಂದರ ಇನ್ನೊಂದರಂತೆ ನೀಡುವ ಮೂಲಕ ದೇಶದಾದ್ಯಂತ ಜನರನ್ನು ಬೆರಗುಗೊಳಿಸಿ ಇದೀಗ ಮಲಯಾಳಂ ನಲ್ಲಿ ನಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

    ಭಾರತದ ಕೆಲವೇ ಉತ್ತಮ ನಟರಲ್ಲಿ ಒಬ್ಬರಾದ ಮಮ್ಮುಟ್ಟಿ ಅವರು ಸ್ವತಃ ನಿರ್ಮಿಸಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಟರ್ಬೋ’ (Turbo) ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುದು ಎಲ್ಲರ ಕುತೂಹಲವನ್ನು ಹುಟ್ಟುವಾಕುವಂತೆ  ಮಾಡಿದ್ದಾರೆ. ನೆನ್ನೆ ದುಬೈನಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಮಲಯಾಳಂ ನಲ್ಲಿ ಪುಲಿಮುರುಗನ್, ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಖ್ಯಾತ ಬರಹಗಾರರಾಂತ ಮಿಥುನ್ ಮ್ಯಾನುವಲ್ ಥಾಮಸ್ ಅವರು ಬರೆದಿದ್ದಾರೆ.

     

    ಮಮ್ಮುಟ್ಟಿಯವರ ಒಡೆತನದ ‘ಮಮ್ಮುಟ್ಟಿ ಕಂಪನಿ’ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ಇರಲಿದೆ. ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ‘ ಲೈಟರ್ ಬುದ್ಧ ಫಿಲಂಸ್’ ಹಂಚಿಕೆ ಮಾಡುತ್ತಿದೆ.

  • 14 ವರ್ಷಗಳ ನಂತರ ಒಂದಾದ ಮಮ್ಮುಟ್ಟಿ, ಪೃಥ್ವಿರಾಜ್ ಸುಕುಮಾರನ್

    14 ವರ್ಷಗಳ ನಂತರ ಒಂದಾದ ಮಮ್ಮುಟ್ಟಿ, ಪೃಥ್ವಿರಾಜ್ ಸುಕುಮಾರನ್

    ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಮತ್ತು ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಇದೀಗ 14 ವರ್ಷಗಳ ನಂತರ ಒಂದಾಗಿದ್ದಾರೆ. ಹೊಸ ಸಿನಿಮಾಗಾಗಿ ಇಬ್ಬರೂ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಧನುಷ್-ಐಶ್ವರ್ಯ ರಜನಿಕಾಂತ್ ಡಿವೋರ್ಸ್: ಕೋರ್ಟ್ ನೋಟಿಸ್

    2010ರಲ್ಲಿ ‘ಪೋಕರಿ ರಾಜ’ (Pokkiri Raja) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಸಹೋದರರಾಗಿ ಕಾಣಿಸಿಕೊಂಡಿದ್ದರು. ಈಗ ಹಲವು ವರ್ಷಗಳ ಬಳಿಕ ಥ್ರಿಲರ್ ಸಿನಿಮಾಗಾಗಿ ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಜೊತೆಯಾಗಿದ್ದಾರೆ.

    ಈ ಸಿನಿಮಾಗೆ ಹೊಸ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದು, ಆಂಟೊ ಜೋಸೆಫ್ ನಿರ್ಮಾಣ ಮಾಡಲಿದ್ದಾರೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ಮಾಲಿವುಡ್‌ ಮಂದಿ ಮೊದಲೇ ಕಥೆ ಹೇಳೋದರಲ್ಲಿ ಮುಂದು. ಹೊಡಿ ಬಡಿ ಕಡಿ ಅನ್ನೋದಕ್ಕಿಂತ ಕಂಟೆಂಟ್‌ ಇರುವ ಕಥೆ ಕೊಡ್ತಾರೆ. ಕಥೆ ತಕ್ಕಂತೆ ಫೈಟ್‌ ಸೀನ್‌ಗಳಿರುತ್ತದೆ. ಹಾಗಾಗಿ ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಕಾಂಬಿನೇಷನ್‌ನಲ್ಲಿ ಹೊಸ ಬಗೆಯ ಕಥೆಯನ್ನು ತೋರಿಸೋದಕ್ಕೆ ಚಿತ್ರತಂಡ ಸಜ್ಜಾಗಿದೆ. ಇಬ್ಬರು ಸ್ಟಾರ್‌ಗಳ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಮಾ.8 ರಿಂದ ವಿಶಿಷ್ಟ ಸಾಕ್ಷ್ಯಚಿತ್ರ ‘ಒಣವಿಲ್ಲು, ದ ಡಿವೈನ್ ಬೋವ್’

    ಮಾ.8 ರಿಂದ ವಿಶಿಷ್ಟ ಸಾಕ್ಷ್ಯಚಿತ್ರ ‘ಒಣವಿಲ್ಲು, ದ ಡಿವೈನ್ ಬೋವ್’

    ಲಯಾಳಂ ಭಾಷೆಯ ಕುತೂಹಲಕಾರಿ ಸಾಕ್ಷ್ಯಚಿತ್ರ ‘ಓಣವಿಲ್ಲು, ದ ಡಿವೈನ್ ಬೋವ್’ (ದೇವ ಧನುಸ್ಸು) ಮಾರ್ಚ್‌ 8ರಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ಪ್ರದರ್ಶನ ಕಾಣುತ್ತಿದೆ. ತಿರುವನಂತಪುರ ಮೂಲದ ಚಿತ್ರನಿರ್ದೇಶಕ ಆನಂದ್ ಬನಾರಸ್ ಮತ್ತು ಶರತ್‌ ಚಂದ್ರ ಮೋಹನ್ ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದು, ಅಭಿನವ್ ಕಾಲ್ರಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಸ್ಟೀಫನ್ ಒರ್ಲಾಂಡೊ ಇದಕ್ಕೆ ಸಂಗೀತ ನೀಡಿದ್ದಾರೆ. ‘ಓಣವಿಲ್ಲು’ ಸಮರ್ಪಣೆಯ ಸಾಂಪ್ರದಾಯಿಕ ಆಚರಣೆಯ ಮಹತ್ವ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆಯ ಮೇಲೆ ಈ ಸಾಕ್ಷ್ಯಚಿತ್ರ ಗಮನಸೆಳೆಯುತ್ತದೆ.

    ಏನಿದು ಒಣವಿಲ್ಲು?

    ‘ಓಣವಿಲ್ಲು’ ಎಂಬುದು ಒಂದು ದೈವೀಕ ಧನುಸ್ಸಾಗಿದ್ದು, ಅದರ ಮೇಲೆ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಗಳ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಇದನ್ನು ಕೇರಳದ ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ತಿರುಓಣಂ ಹಬ್ಬದ ಸಮಯದಲ್ಲಿ ಸಮರ್ಪಿಸಲಾಗುತ್ತದೆ. ‘ಓಣವಿಲ್ಲು’ವನ್ನು ಎಲ್ಲರೂ ಮಾಡುವಂತಿಲ್ಲ. ಒಣವಿಲ್ಲು ರಚಿಸುವ ಹಕ್ಕು ಇರುವುದು ಕರಮಾನ ಮೆಲಾರನ್ನೂರ್ ವಿಲಾಯಿಲ್ ವೀಡು ಕುಟುಂಬಕ್ಕೆ ಮಾತ್ರ! ಈ ಸಾಕ್ಷ್ಯಚಿತ್ರದಲ್ಲಿ ಈ ಕುಟುಂಬದ ಬಗ್ಗೆಯೂ ಸಾಕಷ್ಟು ಬೆಳಕು ಚೆಲ್ಲಲಾಗಿದೆ.

    ಮಮ್ಮುಟ್ಟಿ ಧ್ವನಿ

    ಹಲವು ತಲೆಮಾರುಗಳಿಂದ ನಡೆದುಬಂದಿರುವ ಈ ವಿಶಿಷ್ಟ ಸಾಂಪ್ರದಾಯಿಕ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರದ ವಿಶೇಷತೆ ಏನೆಂದರೆ, ಮಲಯಾಳಂನ ಜನಪ್ರಯ ಹಿರಿಯ ನಟ ಮಮ್ಮೂಟ್ಟಿ ಮತ್ತು ಯುವನಟ ಉನ್ನಿ ಮುಕುಂದನ್‌ ಅವರ ಧ್ವನಿ. ಓಣವಿಲ್ಲು ಆಚರಣೆಯ ಕುರಿತಾದ ಹಲವು ಸಂಗತಿಗಳನ್ನು ನೀವು ಇವರ ಧ್ವನಿಯಲ್ಲಿ ಕೇಳಬಹುದಾಗಿದೆ.  ಬಹುಮಹತ್ವದ ಆಚರಣೆ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಕುರಿತು ‘ಓಣವಿಲ್ಲು, ದ ಡಿವೈನ್ ಬೋವ್’ ಸಾಕ್ಷಚಿತ್ರ ಮಾಹಿತಿ ನೀಡುತ್ತೆ. ಕದಂಬ ಮತ್ತು ಮಹಾಗನಿ ಕಟ್ಟಿಗೆಯಲ್ಲಿ ಈ ಬಿಲ್ಲನ್ನು ರೂಪಿಸಲಾಗುತ್ತದೆ. ನಂತರ ಇದರ ಮೇಲೆ ಬಹುಸುಂದರವಾಗಿ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಯ ಚಿತ್ರಗಳನ್ನು ರಚಿಸಲಾಗುತ್ತದೆ. ಈ ಸಾಂಪ್ರದಾಯಿಕ ಕಲೆಯನ್ನು ದೈವೀಭಕ್ತಿಯಿಂದ ಕಾಪಾಡಿಕೊಂಡು ಬರುತ್ತಿರುವ ಕುಟುಂಬದವರ ಕುರಿತೂ ಈ ಸಾಕ್ಷ್ಯಚಿತ್ರ ಹಲವು ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ.

    ಹಿಂದೆ ತಿರುವಾಂಕೂರು ರಾಜ್ಯದ ರಾಷ್ಟ್ರಗೀತೆಯಾಗಿದ್ದ ‘ವಾಂಚಿ ಭೂಮಿ’ ಎಂಬ ಹಾಡೂ ಈ ಸಾಕ್ಷ್ಯದಲ್ಲಿರುವುದು ವಿಶೇಷ. ಈ ಹಾಡನ್ನು ಉಲ್ಲೂರು ಎಸ್ ಪರಮೇಶ್ವರ ಅಯ್ಯರ್ ರಚಿಸಿದ್ದಾರೆ. ಬಾಲಿವುಡ್‌ ಗಾಯಕ ತಾನಿಯಾ ದೇವ ಗುಪ್ತ ಹಾಡಿದ್ದಾರೆ. ಕೇರಳದ ಸಮೃದ್ಧ ಪರಂಪರೆಯ ಪರಿಚಯ, ಕಲೆ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಒಣವಿಲ್ಲು  ಎಂಬ ವಿಶಿಷ್ಟ ದೈವೀಕ ಧನುಸ್ಸು ಅರ್ಪಣೆ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರವನ್ನು ಮಾರ್ಚ್‌ 8ರಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.

  • ರಜನಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಮ್ಮುಟ್ಟಿ

    ರಜನಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಮ್ಮುಟ್ಟಿ

    ಜನಿಕಾಂತ್ (Rajinikanth) ನಟನೆಯ 171ನೇ ಸಿನಿಮಾ ಕುರಿತಂತೆ ಭಾರೀ ಭಾರೀ ಸುದ್ದಿಗಳು ಹೊರ ಬರುತ್ತಿವೆ. ಅದರಲ್ಲೂ ತಾರಾಗಣದ ಕುರಿತಂತೆ ರೋಚಕ ವಿಷಯಗಳು ಕೇಳುತ್ತಿವೆ. ಅವುಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ಥ್ರಿಲ್ ಅನುಭವಿಸುತ್ತಿದ್ದಾರೆ ರಜನಿ ಫ್ಯಾನ್ಸ್. ಇದೀಗ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದ್ದು ರಜನಿ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಕೂಡ ಪಾತ್ರ ಮಾಡಲಿದ್ದಾರೆ.

    ‘ಜೈಲರ್’ (Jailer) ಸಿನಿಮಾದ ಭರ್ಜರಿ ಸಕ್ಸಸ್ ನಂತರ ರಜನಿಕಾಂತ್ ಸಿನಿಮಾ ಆಯ್ಕೆಯಲ್ಲಿ ಮತ್ತಷ್ಟು ಚ್ಯುಸಿಯಾಗಿದ್ದಾರೆ. ಹೀಗಿರುವಾಗ ತಮ್ಮ 171ನೇ ಚಿತ್ರಕ್ಕೆ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಿದ್ದಾರೆ. ತಲೈವಾ ಮುಂದೆ ಅಬ್ಬರಿಸಲು ನಟ ರಾಘವ್ ಲಾರೆನ್ಸ್ ಕೂಡ ಸಜ್ಜಾಗಿದ್ದಾರೆ.

    ರಜನಿಕಾಂತ್ ಅವರ 171ನೇ ಚಿತ್ರದಲ್ಲಿ ವಿಲನ್‌ಗೂ ಕೂಡ ತೂಕವಾಗಿರುವಂತಹ ಪಾತ್ರವಿದ್ದು, ತಲೈವಾ ಮುಂದೆ ಅಬ್ಬರಿಸೋಕೆ ರಾಘವ್ ಸೂಕ್ತ ಎಂದೇನಿಸಿ ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಹಾಗಾಗಿ ರಾಘವ್ ವಿಶೇಷ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.

    ತಲೈವಾ ನಟಿಸಿದ್ದ ಚಂದ್ರಮುಖಿ ಸಿನಿಮಾದ ಮುಂದಿನ ಭಾಗ ಚಂದ್ರಮುಖಿ 2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ (Raghava Lawrence) ನಾಯಕನಾಗಿ ನಟಿಸಿದ್ದರು. ಮೊದಲ ಚಂದ್ರಮುಖಿ ಸಿನಿಮಾದಲ್ಲಿ ರಜನೀಕಾಂತ್ ನಿರ್ವಹಿಸಿದ್ದ ಪಾತ್ರವನ್ನೇ ರಾಘವ್ ನಿರ್ವಹಿಸಿದ್ದರು.

     

    ರಜನಿಕಾಂತ್ 171ನೇ ಸಿನಿಮಾ, ಲೋಕೇಶ್ ಕನಗರಾಜ್ ಅವರ 6ನೇ ಸಿನಿಮಾ ಆಗಲಿದೆ. ರಜನೀಕಾಂತ್‌ಗೆ ನಿರ್ದೇಶಿಸಲಿರುವ ಮೊದಲ ಸಿನಿಮಾ ಇದಾಗಿದ್ದು, ರಾಘವ್ ಲಾರೆನ್ಸ್-ತಲೈವಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಾರಂಭ ಆಗಲಿದೆ.

  • ಮಲಯಾಳಂ ಸ್ಟಾರ್ ಚಿತ್ರ ಒಪ್ಪಿಕೊಂಡ ರಾಜ್ ಬಿ ಶೆಟ್ಟಿ

    ಮಲಯಾಳಂ ಸ್ಟಾರ್ ಚಿತ್ರ ಒಪ್ಪಿಕೊಂಡ ರಾಜ್ ಬಿ ಶೆಟ್ಟಿ

    ರುಧೀರಂ ಸಿನಿಮಾ ಮೂಲಕ ಈಗಾಗಲೇ ಮಲಯಾಳಂ (Malayalam) ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಇದೀಗ ಮತ್ತೊಂದು ಮಲಯಾಳಂ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸ್ಟಾರ್ ನಟ ಮಮ್ಮಟ್ಟಿ  (Mammootty) ನಾಯಕನಾಗಿ ನಟಿಸುತ್ತಿರುವ ಟರ್ಬೋ (Turbo) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಸ್ವತಃ ಚಿತ್ರತಂಡವೇ ಈ ಮಾಹಿತಿಯನ್ನು ಹೊರ ಹಾಕಿದೆ.

    ಒಂದು ಕಡೆ ಎರಡೆರಡು ಮಲೆಯಾಳಂ ಸಿನಿಮಾದಲ್ಲಿ ರಾಜ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ಮಲಯಾಳಂ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ.

    ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ.

    ರಾಜ್ ಬಿ ಶೆಟ್ಟಿ (Raj B Shetty)ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ದುಲ್ಕರ್ ಮಾತನಾಡಿದ್ದು, ಉಳಿದಂತೆ ಯಾವ ವಿಚಾರವನ್ನೂ ಅವರು ಹಂಚಿಕೊಂಡಿಲ್ಲ. ಬಟ್, ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಬರುವುದು ಪಕ್ಕಾ ಎನ್ನುವುದನ್ನು ಖಚಿತ ಪಡಿಸಿದ್ದಾರೆ.

     

    ಸದ್ಯ ಶೆಟ್ಟರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಟೋಬಿ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು. ಅದರ ನಡುವೆ ರಮ್ಯಾಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಒಂದು ಸಿನಿಮಾ ಮಾಡಬೇಕಿದೆ. ಈ ಮಧ್ಯ ಯಾವಾಗ ನಿರ್ದೇಶನ ಮಾಡುತ್ತಾರೋ ಕಾದು ನೋಡಬೇಕು.