Tag: Mamatha Banerjee

  • ದೀದಿಗೆ 10 ಲಕ್ಷ ‘ಜೈ ಶ್ರೀರಾಮ್’ ಕಾರ್ಡ್

    ದೀದಿಗೆ 10 ಲಕ್ಷ ‘ಜೈ ಶ್ರೀರಾಮ್’ ಕಾರ್ಡ್

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಪೋಸ್ಟ್ ಕಾರ್ಡುಗಳನ್ನು ಕಳುಹಿಸಲಾಗುವುದು ಎಂದು ಬಿಜೆಪಿ ನಾಯಕ ಅರ್ಜುನ್ ಸಿಂಗ್ ದೀದಿಗೆ ತಿರುಗೇಟು ನೀಡಿದ್ದಾರೆ.

    ತೃಣಮೂಲ ಕಾಂಗ್ರೆಸ್ಸಿನ ಶಾಸಕರಾಗಿದ್ದ ಅರ್ಜುನ್ ಸಿಂಗ್ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಯಾಗಿದ್ದರು. ಕೋಲ್ಕತ್ತಾದಲ್ಲಿ ಕೆಲ ದಿನಗಳ ಹಿಂದೆ ಟಿಎಂಸಿಯ ಸಭೆಯ ವೇಳೆ `ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ಘಟನೆ ಖಂಡಿಸಿ ದೀದಿ ನಿವಾಸಕ್ಕೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಅಂಚೆ ಕಾರ್ಡುಗಳನ್ನು ಬಿಜೆಪಿ ನಾಯಕರು ಕಳುಹಿಸಲಿದ್ದಾರೆ ಎನ್ನಲಾಗಿದೆ.

    ಅರ್ಜುನ್ ಸಿಂಗ್ ಹಾಗೂ ಬಿಜೆಪಿ ಮುಖಂಡ ಮುಕುಲ್ ರಾಯ್ ಮಗ ಸುಬ್ರಂಗ್ಶು ರಾಯ್ ಟಿಎಂಸಿ ತೊರೆದು ಬಿಜೆಪಿಗೆ ಸೇರಿದ ಬಳಿಕ ಈ ಪ್ರದೇಶದಲ್ಲಿ ತುಂಬಾ ತೊಂದರೆ ನೀಡುತ್ತಿದ್ದಾರೆ ಎಂದು ಟಿಎಂಸಿ ಮುಖಂಡ ಜ್ಯೋತಿಪ್ರಿಯಾ ಮಲಿಕ್ ಆರೋಪಿಸಿದ್ದಾರೆ. ಮಲ್ಲಿಕ್ ಮತ್ತಿತರು ಸಭೆ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಪರಿಸ್ಥಿತಿ ಕೈ ಮೀರಿದ್ದು, ಪೊಲೀಸರು ಲಾಠಿ ಚಾರ್ಚ್ ನಡೆಸಿರುವುದಾಗಿ ತಿಳಿದುಬಂದಿದೆ.

    ಬಂಗಾಳದಲ್ಲಿ ಇಂತಹ ಸಂಸ್ಕೃತಿಯನ್ನು ನೋಡಿರಲಿಲ್ಲ, ಇದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ಮಲಿಕ್ ಹೇಳಿದ್ದು, ಪ್ರತಿಭಟನಾಕಾರರು ತಮ್ಮ ಕಾರಿನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಲಿಕ್ ಆರೋಪಿಸಿದರು.

  • ರಸಗುಲ್ಲಾ, ಗಿಫ್ಟ್ಸ್ ಕೊಡುತ್ತೇವೆ ಆದ್ರೆ ನಿಮಗೆ ಮತ ಕೊಡಲ್ಲ: ಮೋದಿಗೆ ದೀದಿ ಟಾಂಗ್

    ರಸಗುಲ್ಲಾ, ಗಿಫ್ಟ್ಸ್ ಕೊಡುತ್ತೇವೆ ಆದ್ರೆ ನಿಮಗೆ ಮತ ಕೊಡಲ್ಲ: ಮೋದಿಗೆ ದೀದಿ ಟಾಂಗ್

    ಕೋಲ್ಕತ್ತಾ: ನಾವು ರಸಗುಲ್ಲಾ, ಗಿಫ್ಟ್ಸ್ ಕೊಡುತ್ತೇವೆ. ಆದ್ರೆ ನಿಮಗೆ ಮತ ಮಾತ್ರ ನೀಡಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಡೆಸಿದ ರಾಜಕಿಯೇತರ ಸಂದರ್ಶನದ ವೇಳೆ ಮೋದಿ ಅವರು ತಮ್ಮ ಬಗ್ಗೆ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ನಾವು ಅತಿಥಿಗಳಿಗೆ ರಸಗುಲ್ಲಾ, ಉಡುಗೊರೆಗಳನ್ನು ನೀಡಿ ಸ್ವಾಗತಿಸುತ್ತೇವೆ. ಆದ್ರೆ ಮತ ಮಾತ್ರ ನೀಡಲ್ಲ ಎಂದು ಪರೋಕ್ಷವಾಗಿ ಮೋದಿ ಅವರಿಗೆ ಟಾಂಗ್ ಕೊಟ್ಟರು.

    ವಿಶೇಷ ಸಂದರ್ಭಗಳಲ್ಲಿ ಅತಿಥಿಗಳನ್ನು ವಿಶೇಷ ಉಡುಗೊರೆ ಕೊಟ್ಟು ಸ್ವಾಗತಿಸುವುದು ಬಂಗಾಳೀಯರ ಸಂಸ್ಕೃತಿ. ಆದರೆ ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನದಲ್ಲಿ ಮೋದಿ ರಾಜಕೀಯ ಹೊರತು ಪಡಿಸಿ ಮಮತಾ ಬ್ಯಾನರ್ಜಿ ಜೊತೆ ಇರುವ ಉತ್ತಮ ಸಂಬಂಧವನ್ನು ತಿಳಿಸಿದ್ದರು. “ಪ್ರತಿ ವರ್ಷವೂ ದೀದಿ ವೈಯಕ್ತಿಕವಾಗಿ ಆಯ್ಕೆ ಮಾಡಿ ನನಗೆ ಕುರ್ತಾ ಉಡುಗೊರೆ ಜೊತೆ ಸಿಹಿ ತಿನಿಸುಗಳು ಇಷ್ಟ ಎಂದು ಪ್ರತಿ ವರ್ಷವೂ ಬೆಂಗಾಲಿ ತಿಂಡಿಯನ್ನು ಕಳುಹಿಸಿಕೊಡುತ್ತಾರೆ”. ಬಾಂಗ್ಲಾದೇಶದ ಪ್ರಧಾನಿ ಅವರು ಢಾಕಾದಿಂದ ಆಯ್ದ ಕೆಲವು ತಿಂಡಿಗಳನ್ನು ನನಗೆ ಕಳುಹಿಸುತ್ತಿರುವ ವಿಚಾರ ತಿಳಿದು ಮಮತಾ ಬ್ಯಾನರ್ಜಿ ಸಹ ನನಗೆ ತಿಂಡಿಗಳನ್ನು ಕಳುಹಿಸಲು ಮುಂದಾದರು ಎಂದು ವಿವರವನ್ನು ಹಂಚಿಕೊಂಡಿದ್ದರು.

    ಮೋದಿ ಮತ್ತು ಮಮತಾ ಅವರು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪರಸ್ಪರ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು “ಸ್ಪೀಡ್ ಬ್ರೇಕರ್ ದೀದಿ” ಎಂದು ವ್ಯಂಗ್ಯವಾಡಿದ್ದಕ್ಕೆ ಮಮತಾ “ಎಕ್ಸ್ಪಿರಿ ಬಾಬು” ಎಂದು ಹೇಳಿ ತಿರುಗೇಟು ನೀಡಿದ್ದರು.

  • ಮಮತಾ ಬ್ಯಾನರ್ಜಿ ಪ್ರತಿ ವರ್ಷ ಕುರ್ತಾ ಉಡುಗೊರೆ ನೀಡ್ತಾರೆ: ಮೋದಿ

    ಮಮತಾ ಬ್ಯಾನರ್ಜಿ ಪ್ರತಿ ವರ್ಷ ಕುರ್ತಾ ಉಡುಗೊರೆ ನೀಡ್ತಾರೆ: ಮೋದಿ

    ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷವೂ ನನಗೆ ಕುರ್ತಾ ಉಡುಗೊರೆ ನೀಡುತ್ತಾರೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

    ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನದಲ್ಲಿ ಮೋದಿ ರಾಜಕೀಯ ಹೊರತು ಪಡಿಸಿ ಮಮತಾ ಬ್ಯಾನರ್ಜಿ ಜೊತೆ ಇರುವ ಉತ್ತಮ ಸಂಬಂಧವನ್ನು ತಿಳಿಸಿದರು. “ಪ್ರತಿ ವರ್ಷವೂ ದಿದಿ ವೈಯಕ್ತಿಕವಾಗಿ ಆಯ್ಕೆ ಮಾಡಿ ನನಗೆ ಕುರ್ತಾ ಉಡುಗೊರೆಯಾಗಿ ನೀಡುತ್ತಾರೆ. ಮತ್ತು ನನಗೆ ಸಿಹಿ ತಿನಿಸುಗಳು ಇಷ್ಟ ಎಂದು ಪ್ರತಿ ವರ್ಷವೂ ಬೆಂಗಾಲಿ ತಿಂಡಿಯನ್ನು ಕಳುಹಿಸಿಕೊಡುತ್ತಾರೆ” ಎಂದು ಮೋದಿ ತಿಳಿಸಿದರು.

    ಬಾಂಗ್ಲಾದೇಶದ ಪ್ರಧಾನಿ ಅವರು ಢಾಕಾದಿಂದ ಆಯ್ದ ಕೆಲವು ತಿಂಡಿಗಳನ್ನು ನನಗೆ ಕಳುಹಿಸುತ್ತಿರುವ ವಿಚಾರ ತಿಳಿದು ಮಮತಾ ಬ್ಯಾನರ್ಜಿ ಸಹ ನನಗೆ ತಿಂಡಿಗಳನ್ನು ಕಳುಹಿಸಲು ಮುಂದಾದರು ಎಂದು ವಿವರವನ್ನು ಹಂಚಿಕೊಂಡರು.

    ಮೋದಿ ಮತ್ತು ಮಮತಾ ಅವರು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪರಸ್ಪರ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು “ಸ್ಪೀಡ್ ಬ್ರೇಕರ್ ದೀದಿ” ಎಂದು ವ್ಯಂಗ್ಯವಾಡಿದ್ದಕ್ಕೆ ಮಮತಾ “ಎಕ್ಸ್ಪಿರಿ ಬಾಬು” ಎಂದು ಹೇಳಿ ತಿರುಗೇಟು ನೀಡಿದ್ದರು.

  • ಬಿಜೆಪಿಯ ಬೂತ್ ಕಛೇರಿಯಲ್ಲಿ ವ್ಯಕ್ತಿಯ ಶವ ಪತ್ತೆ

    ಬಿಜೆಪಿಯ ಬೂತ್ ಕಛೇರಿಯಲ್ಲಿ ವ್ಯಕ್ತಿಯ ಶವ ಪತ್ತೆ

    ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿಯ ಬಿಜೆಪಿ ಬೂತ್ ಕಛೇರಿಯಲ್ಲಿ 42 ವರ್ಷದ ವ್ಯಕ್ತಿಯ ಶವವೊಂದು ನೇಣುಬಿಗಿದ ಸ್ಥಿತಿಯಲ್ಲಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.

    ಈ ಘಟನೆ ನಗರದ ಪುರಸಭಾ ವಾರ್ಡ್ ಸಂಖ್ಯೆ 36ರಲ್ಲಿ ನಡೆದಿದೆ ಮೃತಪಟ್ಟವರುನ್ನು ನಿತ್ಯಾ ಮಂಡಲ್ ಎಂದು ಗುರುತಿಸಿದ್ದು ಈತ ಕೂಲಿ ಕಾರ್ಮಿಕ ಎನ್ನಲಾಗಿದೆ. ಸ್ಥಳೀಯರು ಬೆಳಗಿನ ಜಾವ ಬಿಜೆಪಿ ಬೂತ್ ಕಛೇರಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿದ್ದ ಶವ ನೋಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಪಶ್ಮಿಮ ಬಂಗಾಳ 42 ಲೋಕಸಭಾ ಸ್ಥಾನಗಳನ್ನು ಹೊಂದುವ ಮೂಲಕ 3ನೇ ಅತಿ ದೊಡ್ಡ ರಾಜ್ಯವಾಗಿದೆ. ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಿದ್ದರೆ, ಮಹಾರಾಷ್ಟ್ರದಲ್ಲಿ 48 ಕ್ಷೇತ್ರಗಳಿವೆ.

    2014ರ ಚುನಾವಣೆಯಲ್ಲಿ ಬಿಜೆಪಿ ಶೇ.17 ರಷ್ಟು ಮತವನ್ನು ಪಡೆಯುವ ಮೂಲಕ ಮತಗಳಿಕೆ ಪ್ರಮಾಣದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಚುನಾವಣೆಯಲ್ಲಿ 2 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.

  • ತಾಕತ್ತಿದ್ದರೆ ನನ್ನ ಜೊತೆ ಸಂಸ್ಕೃತ ಶ್ಲೋಕ ಪಠಣೆ ಮಾಡಿ: ಮೋದಿ, ಶಾಗೆ ದೀದಿ ಸವಾಲ್

    ತಾಕತ್ತಿದ್ದರೆ ನನ್ನ ಜೊತೆ ಸಂಸ್ಕೃತ ಶ್ಲೋಕ ಪಠಣೆ ಮಾಡಿ: ಮೋದಿ, ಶಾಗೆ ದೀದಿ ಸವಾಲ್

    ಕೋಲ್ಕತ್ತಾ: ತಾಕತ್ತಿದ್ದರೆ ನನ್ನ ಜತೆಗೆ ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಕ್ ಸವಾಲು ಹಾಕಿದ್ದಾರೆ.

    ಅಂತಾರಾಷ್ಟ್ರೀಯ ಮಾರ್ವಾಡಿ ಫೆಡರೇಶನ್ ಆಯೋಜಿಸಿದ್ದ ಹೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ, ನಾವು ಹಲವಾರು ವರ್ಷಗಳಿಂದ ದುರ್ಗಾಪೂಜೆ ಮಾಡುತ್ತಿದ್ದೇವೆ. ನವರಾತ್ರಿ, ಛತ್ ಪೂಜಾ ಮತ್ತು ಗಣಪತಿ ವಂದನಾದಂತಹ ಧಾರ್ಮಿಕ ಆಚರಣೆಗಳನ್ನು ನಾವು ಎತ್ತಿ ಹಿಡಿದಿದ್ದೇವೆ. ಆದ್ರೆ ದಿಲ್ಲಿಯಲ್ಲಿ ಕುಳಿತ ಕೆಲವರು ನಮ್ಮತ್ತ ಕೈ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಪೂಜೆ ಮಾಡುವುದು ಅಪರಾಧವೆನ್ನುವ ಪರಿಸ್ಥಿತಿ ಬಂದಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ದುರ್ಗಾ ಮೂರ್ತಿಗಳ ವಿಸರ್ಜನೆ ಹಾಗೂ ಶಾಲೆಗಳಲ್ಲಿ ಸರಸ್ವತಿ ಪೂಜೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಆದರಿಂದ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರಿಗೆ ಈ ಸವಾಲು ಹಾಕಿದ್ದಾರೆ. ಬರೀ ಹಣೆಯ ಮೇಲೆ ತಿಲಕ ಇಡುವುದೇ ಧಾರ್ಮಿಕ ಶೃದ್ಧೆಯ ಸಂಕೇತವಲ್ಲ. ನನ್ನ ಜೊತೆ ಸಂಸ್ಕೃತ ಶ್ಲೋಕಗಳ ಪಠಣದ ಸ್ಪರ್ಧೆಗೆ ಬನ್ನಿ ಎಂದು ನಾನು ಅಮಿತ್‍ಬಾಬು ಮತ್ತು ನರೇಂದ್ರಬಾಬು ಅವರಿಗೆ ಆಹ್ವಾನ ನೀಡುತ್ತಿದ್ದೇನೆ. ಸಂಸ್ಕೃತ ಶ್ಲೋಕಗಳ ಬಗ್ಗೆ ಯಾರಿಗೆ ಆಳವಾದ ಜ್ಞಾನವಿದೆ ಅಂತ ನೋಡೇ ಬಿಡೋಣ ಎಂದು ದೀದಿ ಸವಾಲು ಎಸೆದಿದ್ದಾರೆ.

    ನಮ್ಮ ಆಡಳಿತದಲ್ಲಿ ಸರ್ಕಾರಿ ದೇವಾಲಯಗಳು ನವೀಕರಣವಾಗಿದೆ. ದಕ್ಷೀಣೇಶ್ವರದಲ್ಲಿ ಸ್ಕೈವಾಕ್ ನಿರ್ಮಾಣವಾಗಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಎಷ್ಟು ದೇವಾಲಯಗಳು ನಿರ್ಮಾಣವಾಗಿದೆ? ಅವರಿಗೆ ಇಂದು ರಾಮ ಮಂದಿರವನ್ನು ಕಟ್ಟಿಸಲು ಆಗಲಿಲ್ಲ. ಕೇವಲ ಚುನಾವಣಾ ಭರವಸೆಗಳನ್ನು ಮಾತ್ರ ನೀಡುತ್ತಾರೆ ಎಂದರು.

    ಇತ್ತಿಚಿಗೆ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ನಾಯಕರನ್ನು ಪ್ರೀತಿಸುವ ಬದಲು, ಅವರನ್ನು ನೋಡಿ ಹೆದರುತ್ತಿದ್ದಾರೆ. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ರೇಡ್ ಮಾಡುತ್ತಿದ್ದಾರೆ. ಇದರಿಂದ ಉದ್ಯಮಿಗಳು ಹೆದರುತ್ತಿದ್ದಾರೆ. ಕೆಲವು ನಾಯಕರು ತಾವು ಕೊಟ್ಟ ಭರವಸೆಯನ್ನು ಉಳಿಕೊಳ್ಳಲಿಲ್ಲ. ಆದರೇ ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

  • ಪ.ಬಂಗಾಳದಲ್ಲಿ ಬಿಜೆಪಿಯ ರಥಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

    ಪ.ಬಂಗಾಳದಲ್ಲಿ ಬಿಜೆಪಿಯ ರಥಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

    – ಪರೋಕ್ಷವಾಗಿ ದಿದಿಗೆ ಕುಟುಕಿದ ಚಾಣಾಕ್ಯ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ರಥಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಥಯಾತ್ರೆಯನ್ನು ಮಾಡಿಯೇ ತೀರುತ್ತೇವೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಶುಕ್ರವಾರದ ಬಿಜೆಪಿ ರಥಯಾತ್ರೆಗೆ ಕೋಲ್ಕತ್ತ ಹೈಕೋರ್ಟ್ ಅನುಮತಿ ನಿರಾಕರಿಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಖಂಡಿತವಾಗಿಯೂ ರಥಯಾತ್ರೆ ನಡೆಸಲಿದೆ. ಈ ನಮ್ಮ ರಥಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬದಲಾವಣೆ ತರುವಲ್ಲಿ ಬಿಜೆಪಿ ಸಿದ್ಧವಾಗಿದೆ. ರಥಯಾತ್ರೆಯನ್ನು ವಾಪಸ್ ಪಡೆದಿಲ್ಲ. ಆದರೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಬಂಗಾಳದಲ್ಲಿ ಭಯೋತ್ಪಾದನೆಯ ಆಳ್ವಿಕೆ ಸೃಷ್ಟಿಯಾಗಿದೆ. ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವವನ್ನು ಚಲಾಯಿಸುತ್ತಿದ್ದಾರೆ. ಎನ್ನುವ ಮೂಲಕ ದೀದಿಗೆ ತಿರುಗೇಟು ನೀಡಿದ್ದಾರೆ.

    ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದೇಕೆ?
    ಪಶ್ಚಿಮ ಬಂಗಾಳದ ಕೂಚ್‍ಬೆಹರ್ ಕೋಮುಗಲಭೆಯ ಪ್ರದೇಶವಾಗಿದೆ. ಒಂದು ವೇಳೆ ಬಿಜೆಪಿ ಈ ಪ್ರದೇಶದಲ್ಲಿ ರಥಯಾತ್ರೆ ಕೈಗೊಂಡರೆ, ಕೋಮುಗಲಭೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಯಾತ್ರೆಗೆ ತಡೆ ಕೋರುವಂತೆ ಕೋಲ್ಕತ್ತ ಹೈಕೋರ್ಟ್ ಮೊರೆ ಹೋಗಿತ್ತು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಕೋಮುಗಲಭೆ ಉಂಟಾಗುವ ಭೀತಿಯಿಂದ ಶುಕ್ರವಾರ ನಡೆಯಬೇಕಿದ್ದ ಬಿಜೆಪಿ ರಥಯಾತ್ರೆಗೆ ಅನುಮತಿಯನ್ನು ನಿರಾಕರಿಸಿತ್ತು.

    ಮುಂಬರುವ ಲೋಕಸಭಾ ಚುನಾವಣೆಗಾಗಿ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಥಯಾತ್ರೆ ನಡೆಸಲು ತೀರ್ಮಾನಿಸಿತ್ತು. ಒಟ್ಟು 42 ಕ್ಷೇತ್ರಗಳ ಪೈಕಿ 2014ರ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಈ ಬಾರಿ ಕನಿಷ್ಟ 22 ರಲ್ಲಿ ಜಯಗಳಿಸುವ ಗುರಿಯನ್ನು ಅಮಿತ್ ಶಾ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv