Tag: Mamata Raut

  • ‘ತಾರಿಣಿ’ಗೆ ಅಯೋಧ್ಯ ಚಿತ್ರೋತ್ಸವ ಪ್ರಶಸ್ತಿ

    ‘ತಾರಿಣಿ’ಗೆ ಅಯೋಧ್ಯ ಚಿತ್ರೋತ್ಸವ ಪ್ರಶಸ್ತಿ

    ಯೋಧ್ಯದಲ್ಲಿ ನಡೆಯುವ ಪ್ರತಿಷ್ಟಿತ ಅಯೋಧ್ಯ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ‘ತಾರಿಣಿ’ (Tarini) ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈಗಾಗಲೇ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಬಂಡವಾಳವನ್ನೂ ಹೂಡಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿದ್ದಾರೆ.

    ಈ ಕಥೆ ಗರ್ಭಿಣಿ ಹೆಂಗಸಿನ ಕಥೆಯಾಧಾರಿತ ಚಿತ್ರವಾಗಿರುವುದರಿಂದ ನಾಯಕಿ ಮಮತಾ ರಾಹುತ್ ಗರ್ಭಿಣಿ ಪಾತ್ರಕ್ಕೆ ನೈಜ ಗರ್ಭಿಣಿಯಾಗೇ ಮನೋಜ್ಞವಾಗಿ ಅಭಿನಯಿಸಿದ್ದಾರೆ.   ಆಗಷ್ಟೇ ಹುಟ್ಟಿದ ಮಮತಾ ರಾಹುತ್ ಮಗುವಿನ ದೃಶ್ಯಗಳೂ ‘ತಾರಿಣಿ’ ಚಿತ್ರದಲ್ಲಿರುವುದು ವಿಶೇಷ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್‌ ಅವಾರ್ಡ್ಸ್, ಗ್ಲೋಬಲ್ ತಾಜ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮೋಕ್ಖೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಇಂಡೋಗ್ಮಾ ಫಿಲ್ಮ್ ಫೆಸ್ಟಿವಲ್, ಮುಂಬೈ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್, ಬಾಲಿವುಡ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ ಆಂಧ್ರಪ್ರದೇಶದಲ್ಲಿ ನಡೆಯುವ ವಿಂಧ್ಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ರಾಜಸ್ಥಾನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಈ ಚಿತ್ರ ಆಯ್ಕೆಯಾಗಿ ಮುಂದಿನ ವಾರ ಪ್ರದರ್ಶನಕ್ಕೆ ರೆಡಿಯಾಗಿದೆ. ಫ್ರಾನ್ಸ್ ನ ಗೋಲ್ಡ್ ಫ್ಲಾಷ್ ಇಂಟರ್‌ನ್ಯಾಷನಲ್ ಫೆಸ್ಟಿವಲ್ ನಲ್ಲಿ ಅಫಿಷಿಯಲ್ ಸೆಲೆಕ್ಷನ್ ಆಗಿದೆ. ಉಳಿದಂತೆ ಇನ್ನೂ ಹಲವಾರು ಚಿತ್ರೋತ್ಸವಗಳಿಗೆ ತಾರಿಣಿ ಚಿತ್ರವನ್ನು ಕಳುಹಿಸಲಾಗಿದೆ ಎಲ್ಲಾ ಕಡೆಯಲ್ಲೂ ಪ್ರದರ್ಶನಗೊಂಡು ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗೊಂದು ತಿಂಗಳಿಂದಲೂ ನಮ್ಮ ಕರ್ನಾಟಕದಲ್ಲಿ ‘ಹೆಣ್ಣು ಭ್ರೂಣ ಹತ್ಯೆ’ ಕುರಿತಾದ ವಿಷಯಗಳು ಎಲ್ಲಾಕಡೆ ಪ್ರಚಲಿತವಾಗಿ ಕರುಳ ಬಳ್ಳಿಗೆ ಕೊಳ್ಳಿ ಇಡುವ ಕೆಲಸಗಳು ನಿರಂತರವಾಗಿ ನಡೆದು ಈಗ ಅದು ಬಹಿರಂಗವಾಗಿದ್ದು ಎಲ್ಲರಿಗು ಕೋಪ ಮತ್ತು ಕಣ್ಣೀರು ಬರಿಸುವ ಸುದ್ದಿಯಾಗಿ ಹೊರಹೊಮ್ಮಿತ್ತು. ನಾವು ಇದೇ ವಿಷಯವನ್ನು ಕೇಂದ್ರೀಕರಿಸಿ ಸರ್ಕಾರದ ಮತ್ತು ಸ್ವಸ್ತ ನಾಗರೀಕ ಸಮಾಜದ ಪ್ರತಿನಿಧಿಯಾಗಿ ಭವಿಷ್ಯದ ಹಿತಚಿಂತನೆಯಿಂದ ಈ ಕಥೆಯನ್ನು ಸಿದ್ದಪಡಿಸಿದ್ದೇವೆ,  ಖಂಡಿತ ಇದೊಂದು ಉತ್ತಮ ಚಿತ್ರವಾಗಿ ಎಲ್ಲರ ಗಮನಸೆಳೆದು ಯಶಸ್ವಿಯಾಗುತ್ತದೆ. ಇಂತಹ ವಿಭಿನ್ನ ಪ್ರಯತ್ನಕ್ಕೆ ಕನ್ನಡಿಗರು ಯಾವತ್ತೂ ಕೈಜೋಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ ಚಿತ್ರತಂಡ.

    ನಾಯಕನಾಗಿ ರೋಹಿತ್ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅಭಿನಯಿಸಿದ್ದಾರೆ. ಮುಖ್ಯಪಾತ್ರದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮಿಳಾ ಸುಬ್ರಹ್ಮಣ್ಯ, ಸನ್ನಿ, ಶೀಬಾ, ದೀಪಿಕಾ  ಗೌಡ, ಕವಿತ ಕಂಬಾರ್, ಮಟಿಲ್ಢಾ ಡಿಸೋಜಾ,ತೇಜಸ್ವಿನಿ, ಅರ್ಚನ ಗಾಯಕ್ವಾಡ್, ಮಂಜು ನಂಜನಗೂಡು, ರಘು ಸಮರ್ಥ್, ಪ್ರಿನ್ಸ್ ಜಿತಿನ್ ಕೋಟ್ಯಾನ್, ಬೇಬಿ ರಿಧಿ, ಬೇಬಿ ನಿಶಿತಾ,ಚೈತ್ರ, ಶ್ವೇತ ಮುಂತಾದವರು ಅಭಿನಯಿಸಿದ್ದಾರೆ.  ಈ ಚಿತ್ರಕ್ಕೆಅನಂತ್ ಆರ್ಯನ್ ಸಂಗೀತ ಸಂಯೋಜಿದರೆ, ದೀಪಕ್ ಸಂಕಲನ, ಕಲೆ  ಬಸವರಾಜ್ ಆಚಾರ್ಯ, ಡಿ.ಐ ಕೆಲಸವನ್ನು ನಿಖಿಲ್ ಕಾರಿಯಪ್ಪ ನಿರ್ವಹಿಸಿದ್ದಾರೆ.

  • ನಟಿ ಮಮತಾ ರಾವುತ್ ಬ್ಯಾಚುಲರ್ ಪಾರ್ಟಿ

    ನಟಿ ಮಮತಾ ರಾವುತ್ ಬ್ಯಾಚುಲರ್ ಪಾರ್ಟಿ

    ಕ್ಷಿಣ ಭಾರತದ ಕನ್ನಡದ ನಟಿ ಮಮತಾ ರಾವುತ್ ಮೇ 11ರಂದು ವೈದ್ಯ ಡಾ.ಸುರೇಶ್ ಜತೆ ಸಪ್ತಪದಿ ತುಳಿಯಲಿದ್ದಾರೆ. ಅದಕ್ಕೂ ಮುನ್ನ ಸ್ನೇಹಿತೆಯರ ಜೊತೆ ಖಾಸಗಿ ರೆಸಾರ್ಟ್ ನಲ್ಲಿ ಅವರು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಈ ಬ್ಯಾಚುಲರ್ ಪಾರ್ಟಿಯಲ್ಲಿ ಬಾಲ್ಯದ ಗೆಳೆತಿಯರು, ಸಿನಿಮಾ ರಂಗದ ಫ್ರೆಂಡ್ಸ್ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಮೊನ್ನೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದಿದದ್ದು ಕುಟುಂಬದ ನಿಶ್ಚಿಯದಂತೆ ಮೇ 10 ಮತ್ತು 11 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ. ‘ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಡಾ.ಸುರೇಶ್ ಕೋಟಿಯಾನ್ ಕುಟುಂಬ ಮತ್ತು ನಮ್ಮ ಕುಟುಂಬ ಸೇರಿ ಈ ಮದುವೆಯನ್ನು ನಿಶ್ಚಿಯ ಮಾಡಿದೆ. ಕುಟುಂಬದ ನಿರ್ಧಾರದಂತೆ ನಾವಿಬ್ಬರೂ ಹೊಸ ಬದುಕಿಗೆ ಕಾಲಿಡುತ್ತಿದ್ದೇವೆ. ಒಳ್ಳೆಯ ಹುಡುಗ, ಸಮಾಜದ ಬಗ್ಗೆ ಅವರಿಗೆ ಕಾಳಜಿ ಇದೆ. ಇವೆಲ್ಲ ಕಾರಣಕ್ಕೆ ಸುರೇಶ್ ನನಗೆ ಇಷ್ಟವಾದರು’ ಎಂದರು. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಡಾ. ಸುರೇಶ್ ಮಂಗಳೂರು ಮೂಲದವರು. ಕರ್ನಾಟಕ ಹೆಲ್ತ್ ಡಿಪಾರ್ಟಮೆಂಟ್ ನಲ್ಲಿ ಅವರು ಮನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಪಿಎಚ್ಡಿ ಮಾಡಿರುವ ಸುರೇಶ್, ಎರಡೆರಡು ಸಂಶೋಧನಾ ಪ್ರಬಂಧ ಮಂಡಿಸಿರುವುದು ವಿಶೇಷ. ಈ ಜೋಡಿಯ ವಿವಾಹವು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿನಿಮಾ ರಂಗದ ಅನೇಕ ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

    ಮಮತಾ ಸಹ ನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಕಾಮಿಡಿ ಪಾತ್ರಗಳಲ್ಲಿ ಮಿಂಚಿದರು. ಆನಂತರ ನಾಯಕಿಯಾಗಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಮತ್ತು ತಮಿಳಿನಲ್ಲೂ ಇವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

  • ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

    ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

    ಗೂಳಿಹಟ್ಟಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಮಮತಾ ರಾವುತ್ ಮೇ 11 ರಂದು ಡಾ.ಸುರೇಶ್ ಕೋಟಿಯಾನ್ ಜತೆ ಸಪ್ತಪದಿ ತುಳಿಯಲಿದ್ದಾರೆ. ನಿನ್ನೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದಿದದ್ದು ಕುಟುಂಬದ ನಿಶ್ಚಿಯದಂತೆ ಮೇ 10 ಮತ್ತು 11 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ ಮಮತಾ, ‘ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಡಾ.ಸುರೇಶ್ ಕೋಟಿಯಾನ್ ಕುಟುಂಬ ಮತ್ತು ನಮ್ಮ ಕುಟುಂಬ ಸೇರಿ ಈ ಮದುವೆಯನ್ನು ನಿಶ್ಚಿಯ ಮಾಡಿದೆ. ಕುಟುಂಬದ ನಿರ್ಧಾರದಂತೆ ನಾವಿಬ್ಬರೂ ಹೊಸ ಬದುಕಿಗೆ ಕಾಲಿಡುತ್ತಿದ್ದೇವೆ. ಒಳ್ಳೆಯ ಹುಡುಗ, ಸಮಾಜದ ಬಗ್ಗೆ ಅವರಿಗೆ ಕಾಳಜಿ ಇದೆ. ಇವೆಲ್ಲ ಕಾರಣಕ್ಕೆ ಸುರೇಶ್ ನನಗೆ ಇಷ್ಟವಾದರು’ ಎಂದರು. ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿ

    ಡಾ. ಸುರೇಶ್ ಮಂಗಳೂರು ಮೂಲದವರು. ಕರ್ನಾಟಕ ಹೆಲ್ತ್ ಡಿಪಾರ್ಟಮೆಂಟ್ ನಲ್ಲಿ ಅವರು ಮನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಪಿಎಚ್ಡಿ ಮಾಡಿರುವ ಸುರೇಶ್, ಎರಡೆರಡು ಸಂಶೋಧನಾ ಪ್ರಬಂಧ ಮಂಡಿಸಿರುವುದು ವಿಶೇಷ. ಈ ಜೋಡಿಯ ವಿವಾಹವು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿನಿಮಾ ರಂಗದ ಅನೇಕ ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    ಮಮತಾ ಸಹ ನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಕಾಮಿಡಿ ಪಾತ್ರಗಳಲ್ಲಿ ಮಿಂಚಿದರು. ಆನಂತರ ನಾಯಕಿಯಾಗಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಮತ್ತು ತಮಿಳಿನಲ್ಲೂ ಇವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.