Tag: malyalam

  • Turbo: ಮಮ್ಮುಟ್ಟಿಗೆ ವಿಲನ್ ಆದ ರಾಜ್ ಬಿ ಶೆಟ್ಟಿ

    Turbo: ಮಮ್ಮುಟ್ಟಿಗೆ ವಿಲನ್ ಆದ ರಾಜ್ ಬಿ ಶೆಟ್ಟಿ

    ‘ಗರುಡ ಗಮನ ವೃಷಭ ವಾಹನ’, ಟೋಬಿ (Toby) ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ ರಾಜ್ ಬಿ ಶೆಟ್ಟಿ ಮಲಯಾಳಂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ಟರ್ಬೊ’ (Turbo) ಸಿನಿಮಾದಲ್ಲಿ ಸ್ಟಾರ್ ಹೀರೋ ಮಮ್ಮುಟ್ಟಿಗೆ (Mammootty) ರಾಜ್ ಬಿ ಶೆಟ್ಟಿ (Raj B Shetty) ವಿಲನ್ ಆಗಿ ಅಬ್ಬರಿಸಿದ್ದಾರೆ. ಇದನ್ನೂ ಓದಿ:ಅಪ್ಪ ಮಗಳ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್

    ಈಗಾಗಲೇ ಈ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಮಾಲಿವುಡ್ ಸ್ಟಾರ್ ಮಮ್ಮುಟ್ಟಿ ಮುಂದೆ ವಿಲನ್ ಆಗಿ ನಟಿಸಿದ್ದಾರೆ. ‘ವೆಟ್ರಿವೇಲ್ ಶಣ್ಮುಗಸುಂದರಂ’ ಎಂಬ ಪಾತ್ರಕ್ಕೆ ರಾಜ್ ಜೀವ ತುಂಬಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಖಡಕ್ ಆಗಿ ನಟಿಸಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಝಲಕ್ ನೋಡಿಯೇ ಅಭಿಮಾನಿಗಳಿಗೆ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

     

    View this post on Instagram

     

    A post shared by Mammootty Kampany (@mammoottykampany)

    ಈ ಚಿತ್ರದಲ್ಲಿ ನಟಿಸಿ, ನಿರ್ಮಾಣಕ್ಕೂ ಮಮ್ಮುಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರವನ್ನು ವೈಶಾಕ್ ನಿರ್ದೇಶನ ಮಾಡಿದ್ದಾರೆ. ಟರ್ಬೊ ಸಿನಿಮಾದಲ್ಲಿ ಸುನೀಲ್, ಕಬೀರ್ ಸಿಂಗ್, ಅಂಜನ ಜಯಪ್ರಕಾಶ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇದೇ ಮೇ 23ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಕೇಂದ್ರದ ಸಾಧನೆ ಹಾಡಿಹೊಗಳಿದ ರಶ್ಮಿಕಾ ಮಂದಣ್ಣಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

    ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣದ ಸಂಸ್ಥೆಯಾದ ‘ಲೈಟರ್ ಬುದ್ಧ ಫಿಲಂಸ್’ ಹಂಚಿಕೆ ಮಾಡುತ್ತಿದೆ.

  • ‘ಮಂಜ್ಞುಮ್ಮೆಲ್ ಬಾಯ್ಸ್’ ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಭೇಷ್‌ ಎಂದ ತಲೈವಾ

    ‘ಮಂಜ್ಞುಮ್ಮೆಲ್ ಬಾಯ್ಸ್’ ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಭೇಷ್‌ ಎಂದ ತಲೈವಾ

    ಮಾಲಿವುಡ್‌ನಲ್ಲಿ (Mollywood) ಇದೀಗ ಹೊಸಬರ ತಂಡವೊಂದು ಭಾರೀ ಸದ್ದು ಮಾಡುತ್ತಿದೆ. ‘ಮಂಜ್ಞುಮ್ಮೆಲ್ ಬಾಯ್ಸ್’ (Manjummel Boys) ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದಷ್ಟೇ ಅಲ್ಲ, ಈ ಸಿನಿಮಾ ನೋಡಿ, ಚಿತ್ರತಂಡವನ್ನು ಮನೆಗೆ ಕರೆಸಿ ರಜನಿಕಾಂತ್ (Rajanikanth) ಸತ್ಕರಿಸಿದ್ದಾರೆ. ತಂಡದ ಶ್ರಮಕ್ಕೆ ತಲೈವಾ ಭೇಷ್ ಎಂದಿದ್ದಾರೆ.

    ‘ಮಂಜ್ಞುಮ್ಮೆಲ್ ಬಾಯ್ಸ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಕಮಲ್ ಹಾಸನ್ ನಂತರ ರಜನಿಕಾಂತ್ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿ ಚಿತ್ರತಂಡವನ್ನು ರಜನಿಕಾಂತ್ ಸತ್ಕರಿಸಿದ್ದಾರೆ. ನಟರಾದ ಗಣಪತಿ, ಚಂದು ಸಲೀಂಕುಮಾರ್, ದೀಪಕ್ ಪರಂಬೋಲ್, ನಟ ಅರುಣ್ ಜೊತೆ ಡೈರೆಕ್ಟರ್ ಚಿದಂಬರಂ ಅವರು ರಜನಿಕಾಂತ್‌ರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:‘ಕಲ್ಪನಾ 2’ ಚಿತ್ರದ ಖಳನಟ ಪ್ರಕಾಶ್ ಹೆಗ್ಗೋಡು ನಿಧನ

    ರಜನಿಕಾಂತ್ (Rajanikanth) ಅವರಿಗೆ ಯಾವುದೇ ಸಿನಿಮಾ ಅವರಿಗೆ ಇಷ್ಟವಾದಲ್ಲಿ ಆ ಚಿತ್ರತಂಡವನ್ನು ಮನೆಗೆ ಕರೆಸಿ ಉಪಚರಿಸುತ್ತಾರೆ. ಚಿತ್ರತಂಡಕ್ಕೆ ಮೆಚ್ಚುಗೆ ತಿಳಿಸುತ್ತಾರೆ. ಈ ಹಿಂದೆ ಕೂಡ ‘ಕಾಂತಾರ’ (Kantara) ಚಿತ್ರದ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರನ್ನು ಸತ್ಕರಿಸಿದ್ದರು. ‘ಕಾಂತಾರ’ ಚಿತ್ರವನ್ನು ತಲೈವಾ ಹಾಡಿ ಹೊಗಳಿದ್ದರು. ಅದಷ್ಟೇ ಅಲ್ಲ, ಚಿನ್ನದ ಚೈನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

    ‘ಮಂಜ್ಞುಮ್ಮೆಲ್ ಬಾಯ್ಸ್’ ಚಿತ್ರ ನಿರ್ದೇಶಕನಿಗೆ ಧನುಷ್‌ಗೆ ನಿರ್ದೇಶನ ಮಾಡುವ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.  ಈ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.