Tag: malnutrition

  • ರಾಯಚೂರು ಜಿಲ್ಲೆಯನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ

    ರಾಯಚೂರು ಜಿಲ್ಲೆಯನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ

    ರಾಯಚೂರು: ಅಪೌಷ್ಟಿಕತೆಯಿಂದ ತಾಂಡವವಾಡುತ್ತಿದ್ದ ಜಿಲ್ಲೆ ಈಗ ಪೌಷ್ಟಿಕತೆ ವಿಚಾರದಲ್ಲಿ ಪ್ರಗತಿ ಕಾಣುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

     

    ನೀತಿ ಆಯೋಗದ ಸಭೆಯಲ್ಲಿ ರಾಯಚೂರು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ ಮೋದಿ ಹಾಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್‌ರನ್ನೂ ಶ್ಲಾಘಿಸಿದ್ದಾರೆ. 70% ಇದ್ದ ಪೌಷ್ಟಿಕತೆ ಈಗ 97% ರಷ್ಟು ತಲುಪಿದೆ.  ಮಹತ್ವಾಕಾಂಕ್ಷೆ ಯೋಜನೆಯಡಿ ಒಳ್ಳೆ ಕೆಲಸಗಳನ್ನು ಮಾಡುವಂತೆ ಪ್ರಧಾನಿ ಮೋದಿ ಕರೆ ನೀಡಿದರು. ಇದನ್ನೂ ಓದಿ: ಬಂಡೀಪುರದಲ್ಲಿ ಹುಲಿ ಗಣತಿ ಆರಂಭ: ಲೆಕ್ಕ ಹೇಗೆ ಹಾಕುತ್ತಾರೆ? ಇಲ್ಲಿದೆ ಪೂರ್ಣ ಮಾಹಿತಿ

    ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಡಳಿತವನ್ನು ಶ್ಲಾಘಿಸಿದ್ದಾರೆ. ರಾಯಚೂರು ಜಿಲ್ಲೆ ಅಪೌಷ್ಟಿಕತೆ ವಿಚಾರದಲ್ಲಿ ಗಂಭೀರ ಸಮಸ್ಯೆಯನ್ನ ಎದುರಿಸುತ್ತಿದ್ದು , 5 ವರ್ಷ ಒಳಗಿನ ಮಕ್ಕಳ ಸಾವಿನ ಸಂಖ್ಯೆ ಈಗಲೂ ಹೆಚ್ಚಿದೆ. ಹಿಂದಿಗಿಂತಲೂ ಪೌಷ್ಠಿಕತೆಯಲ್ಲಿ ಜಿಲ್ಲೆ ಈಗ ಅಭಿವೃದ್ಧಿ ಸಾಧಿಸಿರುವ ಹಿನ್ನೆಲೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಚಾರ- 19 ಯೂಟ್ಯೂಬ್ ಚಾನೆಲ್ ಬಂದ್

  • ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಗೆದ್ದ 1 ವರ್ಷದ ಹೆಣ್ಣು ಮಗು

    ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಗೆದ್ದ 1 ವರ್ಷದ ಹೆಣ್ಣು ಮಗು

    ಚಿಕ್ಕಬಳ್ಳಾಪುರ: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಂದು ವರ್ಷದ ಹೆಣ್ಣು ಮಗು ಕೊರೊನಾದಿಂದ ಗುಣಮುಖವಾಗಿದೆ.

    ಮಹಾರಾಷ್ಟ್ರದಿಂದ ಒಂದು ವರ್ಷದ ಮಗು ಸಮೇತ ದಂಪತಿ ಚಿಕ್ಕಬಳ್ಳಾಪುರ ಜಿಲ್ಲೆಗ ಆಗಮಿಸಿದ್ದರು. ಮೇ 25ರಂದು ಒಂದು ವರ್ಷದ ಹೆಣ್ಣು ಮಗುವಿಗೆ ಕೊರೊನಾ ದೃಢವಾಗಿತ್ತು. ಅಂದೇ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದಲ್ಲದೇ ಈ ಮಗುವಿನ ತಂದೆ ತಾಯಿ ಸಹ ಕೊರೊನಾಗೆ ತುತ್ತಾಗಿದ್ದರು. ಅವರು ಸಹ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಒಂದಡೆ ಕೊರೊನಾ ಪಾಸಿಟಿವ್ ಮತ್ತು ಅದರ ಜೊತೆಗೆ (ಎಸ್‍ಎಎಮ್) ತೀವ್ರ ತರವಾದ ಅಪೌಷ್ಟಿಕತೆಯಿಂದ ಸಹ ಮಗು ಬಳಲುತ್ತಿತ್ತು. ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ಮಗು ದಾಖಲಾಗುವ 7.4 ಕೆಜಿ ಇದ್ದ ಮಗು ಡಿಸ್ಚಾರ್ಜ್ ವೇಳೆ 8.7 ಕೆಜಿ ತೂಕವಿದ್ದು, ತೂಕದಲ್ಲಿ ಸಹ ಏರಿಕೆ ಆಗಿದೆ. ಅಪೌಷ್ಟಿಕತೆ ನಡುವೆಯೂ ಕೊರೊನಾ ಗೆದ್ದು ಮಗು ಗುಣಮುಖವಾಗಿದೆ. ತಂದೆ ತಾಯಿ ಜೊತೆ ಮಗು ಸಹ ಗುಣಮುಖವಾಗಿ ಸದ್ಯ ಕ್ಷೇಮವಾಗಿ ಮನೆ ಸೇರುವಂತಾಗಿದೆ.

  • ಕೋಲಾರದ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಠಿಕತೆ

    ಕೋಲಾರದ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಠಿಕತೆ

    ಕೋಲಾರ: ಇದು ರಾಜ್ಯದಲ್ಲೇ ಹಿಂದುಳಿದ ಹಾಗೂ ಬರಪೀಡಿತ ಜಿಲ್ಲೆ, ಇಲ್ಲಿ ಹನಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹುಟ್ಟುವ ಮಕ್ಕಳು ಕೂಡಾ ಅಪೌಷ್ಠಕತೆಯ ಶಾಪಕ್ಕೆ ತುತ್ತಾಗುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರು ವಿಷವಾಗಿ ಹೋಗಿದೆ. ಇದರಿಂದ ಇಲ್ಲಿ ಹುಟ್ಟೋ ಮಕ್ಕಳು ಕೂಡಾ ಅಪೌಷ್ಠಿಕತೆಗೆ ತುತ್ತಾಗುತ್ತಿದ್ದಾರೆ.

    ಈವರೆಗೆ 7000 ಮಕ್ಕಳಲ್ಲಿ ಅಪೌಷ್ಠಿಕತೆ ಕಂಡು ಬಂದಿದ್ದು, ಅವರಲ್ಲಿ 130 ಜನ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದು ಎಲ್ಲಾ ವರ್ಗದ ಮಕ್ಕಳಲ್ಲೂ ಕಾಣಿಸಿಕೊಂಡಿದ್ದು, ಹೃದಯ ಸಂಬಂಧಿ ಸಮಸ್ಯೆ, ಪೌಷ್ಠಿಕ ಆಹಾರದ ಕೊರತೆ, ಶಾರೀರಿಕ, ಮಾನಸಿಕ ತೊಂದರೆ ಜೊತೆಗೆ ತಾಯಂದಿರು ಸರಿಯಾಗಿ ಎದೆಹಾಲು ಉಣಿಸದಿರೋದೇ ಅಪೌಷ್ಟಿಕತೆಗೆ ಕಾರಣವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೆಪ್ಟಂಬರ್ ತಿಂಗಳನ್ನು ವಿಶೇಷವಾಗಿ ಅಪೌಷ್ಠಿಕ ಮಕ್ಕಳ ಪೋಷಣಾ ಮಾಸ ಎಂದು ಆಚರಿಸುತ್ತಿದೆ. ಈ ಮೂಲಕ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.

    ಜಿಲ್ಲೆಯಲ್ಲಿ ಒಟ್ಟು 2 ಸಾವಿರದ 61 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 6 ವರ್ಷದ ಒಳಗಿನ 64 ಸಾವಿರದ 344 ಮಕ್ಕಳಿದ್ದಾರೆ. ಈ ಮಕ್ಕಳ ಮೇಲೆ ತೂಕ ಮತ್ತು ಬೆಳವಣಿಗೆ ಆಧಾರದಲ್ಲಿ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಸಮೀಕ್ಷೆ ನಡೆಸಿದೆ. ಈ ಮಕ್ಕಳಲ್ಲಿ ತೀವ್ರ ಕಡಿಮೆ ತೂಕವಿರುವವರನ್ನು ಗುರುತಿಸಿ, 14 ದಿನಗಳ ಕಾಲ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಿಕೊಂಡು ಆಹಾರದ ಜೊತೆಗೆ ಚಿಕಿತ್ಸೆ ನೀಡಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv