Tag: Mallikharjun Kharge

  • ವಿವಾದದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಮಿತ್ ಶಾ ಹೆಲಿಕಾಪ್ಟರ್ ತಪಾಸಣೆ

    ವಿವಾದದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಮಿತ್ ಶಾ ಹೆಲಿಕಾಪ್ಟರ್ ತಪಾಸಣೆ

    ನವದೆಹಲಿ: ಮಹಾರಾಷ್ಟ್ರದ (Maharashtra) ಹಿಂಗೋಲಿ ಜಿಲ್ಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲಿಸಿದ್ದಾರೆ.

    ಚುನಾವಣೆಯ ನಡುವೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ರಾಜಕೀಯ ನಾಯಕರ ಬ್ಯಾಗ್‌ಗಳ ಸರಣಿ ಪರೀಕ್ಷೆಯಲ್ಲಿ ಶಾ ಅವರ ಬ್ಯಾಗ್ ಕೂಡ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್‌ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತು ವಶ – 8 ಮಂದಿ ಇರಾನ್ ಪ್ರಜೆಗಳು ಅರೆಸ್ಟ್‌

    ಈ ಬಗ್ಗೆ ಶಾ ಅವರು ಎಕ್ಸ್ ಪೋಸ್ಟ್‌ನಲ್ಲಿ, ತಮ್ಮ ಬ್ಯಾಗ್‌ಗಳನ್ನು ಪರಿಶೀಲಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಂದು, ಮಹಾರಾಷ್ಟ್ರದ ಹಿಂಗೋಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಚುನಾವಣಾ ಆಯೋಗದ ಅಧಿಕಾರಿಗಳು ನನ್ನ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ್ದಾರೆ. ಬಿಜೆಪಿ ನ್ಯಾಯಯುತ ಚುನಾವಣೆ ಮತ್ತು ಆರೋಗ್ಯಕರ ಚುನಾವಣಾ ವ್ಯವಸ್ಥೆಯನ್ನು ನಂಬುತ್ತದೆ ಹಾಗೂ ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ. ನಾವೆಲ್ಲರೂ ಆರೋಗ್ಯಕರ ಚುನಾವಣಾ ವ್ಯವಸ್ಥೆಗೆ ಕೊಡುಗೆ ನೀಡಬೇಕು ಮತ್ತು ಭಾರತವನ್ನು ವಿಶ್ವದ ಪ್ರಬಲ ಪ್ರಜಾಪ್ರಭುತ್ವವಾಗಿ ಇರಿಸುವಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ – 1,600ಕ್ಕೆ ತಲುಪಿದ AQI

    ಕಳೆದ ಐದು ದಿನಗಳಲ್ಲಿ ಚುನಾವಣಾ ಆಧಿಕಾರಿಗಳು, ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವಾರು ರಾಜಕಾರಣಿಗಳ ಬ್ಯಾಗ್‌ಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಪಾರ್ಟಿಯಲ್ಲಿ ಎಣ್ಣೆ, ಬಾಡೂಟ – ಕ್ಷಮೆಯಾಚಿಸಿದ ಇಂಗ್ಲೆಂಡ್‌

    ನ.20ರಂದು ಚುನಾವಣೆಗೆ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದ ಠಾಕ್ರೆ ಅವರ ಬ್ಯಾಗ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿದ ನಂತರ ರಾಜಕೀಯ ಗದ್ದಲ ಭುಗಿಲೆದ್ದಿತು. ಬಿಜೆಪಿ, ಇತರ ನಾಯಕರ ಚೀಲಗಳನ್ನು ಚುನಾವಣಾ ಆಯೋಗವು ಪರಿಶಿಲಿಸುವುದಿಲ್ಲ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದದ ಮಧ್ಯೆ ಶಿವಸೇನಾ ನಾಯಕ ಸಂಜಯ್ ರಾವುತ್ ಶಿಂಧೆ, ಫಡ್ನವಿಸ್, ಅಜಿತ್ ಪವಾರ್, ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಶಾ ಅವರ ಲಗೇಜ್‌ಗಳನ್ನು ಇದೇ ರೀತಿಯಲ್ಲಿ ಪರಿಶೀಲಿಸಲಾಗಿದೆಯೇ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್‌ – ಮೂವರು ಆರೋಪಿಗಳು ಅಂದರ್